For Quick Alerts
ALLOW NOTIFICATIONS  
For Daily Alerts

ನಿಮಗೆ ಬೆಳ್ಳಗಿರುವ ಮತ್ತು ಹೊಳೆಯುವ ಹಲ್ಲುಗಳು ಬೇಕೇ?

By Vishwanath
|

ಅಗತ್ಯವಾದ ರಕ್ಷಣೆಯಿಂದ ನಿಮ್ಮ ಹಲ್ಲುಗಳ ಉತ್ತಮ ಅರೋಗ್ಯವನ್ನು ಕಾಪಾಡಿಕೊಂಡು ಅವುಗಳನ್ನು ಹೊಳೆಯುವ ಹಾಗೆ ಇರಿಸಿಕೊಳ್ಳುವುದು ಬಹಳ ಅಗತ್ಯ. ಹೀಗೆ ಕಾಪಾಡಿಕೊಳ್ಳಲು ಕೆಲವು ಸರಳರೀತಿಯಲ್ಲಿ ಮಾಡಬೇಕಾದ ಮತ್ತು ಮಾಡದಿರಬೇಕಾದ ಈ ಟಿಪ್ಪಣಿಗಳನ್ನು ಓದಿ:

ಸೆನ್ಸಿಟೀವ್ ಹಲ್ಲುಗಳ ರಕ್ಷಣೆ ಹೇಗೆ?

ನೀವು ಮಾಡದಿರಬೇಕಾದ್ದು:
ಅಡಿಗೆಸೋಡ ಉಪಯೋಗಿಸುವುದನ್ನು ಆದಷ್ಟು ತಪ್ಪಿಸಿ. ಅದು ನೀವು ತಿನ್ನುವ ಪದಾರ್ಥಗಳ ರುಚಿ ಹೆಚ್ಚಿಸಿದರೆ ಅದರಿಂದ ಆಗುವ ಪರಿಣಾಮವೇನೆಂದರೆ ನಿಮ್ಮ ಹಲ್ಲುಗಳಮೇಲಿರುವ ದಂತಕವಚವನ್ನು ತೆಗೆದುಹಾಕುವುದಲ್ಲದೆ ಹಲ್ಲುಗಳು ಹಳದಿಬಣ್ಣಕ್ಕೆ ತಿರುಗುತ್ತದೆ.

Do’s and dont’s for shiny white teeth

ಕಪ್ಪುಬಣ್ಣದ ವರ್ಣದ್ರವ್ಯವಿರುವ ಹಣ್ಣುಗಳನ್ನು ತಿನ್ನುವುದನ್ನು ಆದಷ್ಟೂ ತಪ್ಪಿಸಿ. ಸೋಯಾ ಸಾಸ್, ಮರಿನಾರ ಸಾಸ್, ಇತ್ಯಾದಿ ಆಹಾರಪದಾರ್ಥಗಳಲ್ಲಿ ಕಪ್ಪು ಬಣ್ಣದ ವರ್ಣದ್ರವ್ಯವಿದ್ದು ನಿಮ್ಮಹಲ್ಲುಗಳಮೇಲೆ ಕರೆ ಕಟ್ಟುವ ಸಾಧ್ಯತೆಗಳು ಇವೆ.

ಮಾರುಕಟ್ಟೆಯಲ್ಲಿ ದೊರೆಯುವ ಶಕ್ತಿ ಪಾನೀಯ (ಎನರ್ಜಿ ಡ್ರಿಂಕ್ಸ್) ಕುಡಿಯುವದನ್ನು ತಪ್ಪಿಸಿ. ಅಂತಹ ಪಾನೀಯಗಳಮೇಲೆ ಶಕ್ತಿ ಕೊಡುತ್ತದೆಯೆಂದು ಹೇಳಿದ್ದರೂ ಅದಕ್ಕಿಂತಾ ವಿಶೇಷವಾಗಿ ಅದರಲ್ಲಿರುವ ಆಮ್ಲಗಳು (ಆಸಿಡ್ಸ್) ನಿಮ್ಮ ಹಲ್ಲುಗಳನ್ನು ಕ್ರಮೇಣವಾಗಿ ಸವೆದುಹಾಕುತ್ತದೆ. ಹಾಗೂ ನಿಮ್ಮ ಹಲ್ಲುಗಳ ಮೇಲಿರುವ ಬಿಳಿಬಣ್ಣವು ಹೋಗಿಬಿಡುತ್ತದೆ.

ಹೊಳೆಯುವ ಹಲ್ಲಿಗೆ ಇಲ್ಲಿವೆ 20 ಟಿಪ್ಸ್

ನೀವು ಮಾಡಬೇಕಾದ್ದು:
ನಿಮ್ಮ ಟೂತ್ ಬ್ರಶ್ಶನ್ನು ಪ್ರತಿ ಮೂರು ತಿಂಗಳ ನಂತರ ಬದಲಿಸುವುದು ಬಹಳ ಒಳ್ಳೆಯದು. ಅಥವಾ ಬ್ರಶ್ ಬಹಳಬೇಗ ಸವೆದುಹೋಗಿದ್ದರೂ ಸಹ ತಕ್ಷಣ ಬದಲಿಸಿ. ಒಳ್ಳೆಯ ಗುಣಮಟ್ಟದ ಬ್ರಶ್ಶನ್ನೇ ಖರೀದಿಸಿ.
ನಿಮ್ಮ ನಾಲಿಗೆಯ ಮೇಲಿನಭಾಗವನ್ನು ಶುದ್ಧವಾಗಿರಿಸಿಕೊಳ್ಳಿ. ನಿಮ್ಮ ನಾಲಿಗೆಯ ಮೇಲೆ ಶುದ್ದೀಕರಿಸುತ್ತಿದ್ದರೆ ನೀವು ಉಸಿರಾಡುವ ಗಾಳಿಯು ತಾಜಾವಾಗಿರುತ್ತದೆ ಹಾಗೂ ಕೆಟ್ಟ ಬ್ಯಾಕ್ಟೀರಿಯಾದಿಂದ ಹಲ್ಲಿನ ಬಣ್ಣ ಬದಲಾಗುವುದನ್ನು ಕಾಪಾಡಿಕೊಳ್ಳಬಹುದು.

ಪುರುಷರೇ ನಿಮ್ಮ ಪ್ರೋಸ್ಟೇಟ್ ಆರೋಗ್ಯದ ಬಗ್ಗೆ ಎಚ್ಚರ

ಹಣ್ಣುಗಳನ್ನು ತಿನ್ನುವುದರಿಂದ ಸಹ ನಿಮ್ಮ ಹಲ್ಲುಗಳನ್ನು ಬೆಳ್ಳಗಿರಿಸಿಕೊಳ್ಳಬಹುದು. ಹಣ್ಣುಗಳನ್ನು ತಿನ್ನುವುದರಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯಮಾಡಿ ಆರೋಗ್ಯಕರವಾಗಿರಿಸಿಕೊಳ್ಳಬಹುದು. ನೀವು ಕಿತ್ತಳೆ ಮತ್ತು ನಿಂಬೆಹಣ್ಣು ಮುಂತಾದ ಸಿಟ್ರಸ್ ಹಣ್ಣುಗಳನ್ನುತಿಂದ ನಂತರ ಪ್ರತಿಬಾರಿಯೂ ಹಲ್ಲುಗಳನ್ನು ಚೆನ್ನಾಗಿ ನೆನೆಸಿ ತೊಳೆದುಕೊಳ್ಳುವುದನ್ನು ಮರೆಯಬೇದಿ. ಯಾಕೆಂದರೆ ಆ ಹಣ್ಣುಗಳಲ್ಲಿ ಆಮ್ಲ (ಆಸಿಡ್) ಇರುವುದರಿಂದ ನಿಮ್ಮ ಹಲ್ಲುಗಳ ದಂತಕವಚವನ್ನು ಕೊರೆಯುವ ಸಂಭವ ಇರುತ್ತದೆ.

English summary

Do’s and dont’s for shiny white teeth

Taking right care for your teeth is essential not only to keep them in good health but also to keep them bright and shiny. And there are only few simple do's and dont's that can give you a bright smile.
X
Desktop Bottom Promotion