For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಗೆ ಸೂಕ್ತ ಸಲಹೆಗಳು

By Vani Naik
|

ಕಡೆಗೂ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲ ಬಂದಿತು ಎಂದರೆ, ನಮ್ಮಲ್ಲಿ ಸಾಕಷ್ಟು ಜನರು ನೀರು ತುಂಬಿಕೊಂಡ ರಸ್ತೆಗಳಲ್ಲಿ ಅಡ್ಡಾಡುವುದು ಖಚಿತ. ಏಕೆಂದರೆ, ಮನೆಯಿಂದ ಹೊರಗೆ ಹೊರಟು ಮಾಡಬೇಕಾದ ಕೆಲಸಗಳು ಬಹಳಷ್ಟು ಇರುತ್ತವೆ. ಇದು ಇಂದಿನ ಜನ ಜೀವನದಲ್ಲಿ ಅನಿವಾರ್ಯವೂ ಆಗಿದೆ. ಇದರ ಪರಿಣಾಮವಾಗಿ ಪಾದಗಳು ಬಿರುಕು ಬಿಟ್ಟು ಶಿಲೀಂಧ್ರ ಸೋಂಕು (ಅಂದರೆ ಫಂಗಸ್ ಇಂಫೆಕ್ಷನ್)ಉಂಟಾಗುತ್ತದೆ.

ಹಾಗಾಗಿ, ಈ ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಯನ್ನು ಯಾವ ರೀತಿ ಮಾಡಬಹುದೆಂಬುದನ್ನು ಈ ಕೆಳಗೆ ಓದಿ... ನಿಮ್ಮ ಪಾದಗಳನ್ನು ಸ್ವಚ್ಥವಾಗಿಡಿ: ನಿಮ್ಮ ಪಾದಗಳಿಗೆ ಶಿಲೀಂಧ್ರ ಸೋಂಕು ತಗುಲಬಾರದೆಂದರೆ, ನೀವು ನಿಮ್ಮ ಪಾದಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು.

ಯೋನಿಯ ದುರ್ವಾಸನೆಯನ್ನು ನಿವಾರಿಸಲು ಪ್ರಯತ್ನಿಸಬಹುದಾದ 15 ಮನೆಮದ್ದುಗಳು

ಪಾದಗಳನ್ನು ಸ್ವಚ್ಚವಾಗಿ ತೊಳಿಯಿರಿ

ಪಾದಗಳನ್ನು ಸ್ವಚ್ಚವಾಗಿ ತೊಳಿಯಿರಿ

ಪ್ರತಿ ಬಾರಿಯೂ ನೀವು ನಿಮ್ಮ ಮನೆಗೆ ಮರಳಿ ಬಂದಾಗ ತಪ್ಪದೇ ನಿಮ್ಮ ಪಾದಗಳನ್ನು ಸಾಬೂನು ಹಾಗು ನೀರಿನಿಂದ ತೊಳೆದು, ಮುಖ್ಯವಾಗಿ ಬೆಟ್ಟುಗಳ ಸಂಧಿಯಲ್ಲಿ ಚೆನ್ನಾಗಿ ಒರೆಸಿ ಒಣದಾಗಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಮಾಯಿಸ್ಚರೈಜರ್ ಅನ್ನು ಲೇಪಿಸಬೇಕು.

ಕಾಲ್ಬೆರಳಿನ ಉಗುರುಗಳನ್ನು ಕತ್ತರಿಸಬೇಕು

ಕಾಲ್ಬೆರಳಿನ ಉಗುರುಗಳನ್ನು ಕತ್ತರಿಸಬೇಕು

ಉಗುರಿನ ಕೆಳಭಾಗದಲ್ಲಿ ಸಾಕಷ್ಚು ಕೊಳಕು ಶೇಕರಣೆ ಆಗುವುದರಿಂದ, ಮಳೆಗಾಲದಲ್ಲಿ ಕಾಲ್ಬೆರಳಿನ ಉದ್ದನೆಯ ಉಗುರುಗಳನ್ನು ಕತ್ತರಿಸಿ ಚಿಕ್ಕದಾಗಿಸಿಕೊಳ್ಳಬೇಕು. ಹೀಗೆ ಸಮಯಕ್ಕನುಗುಣವಾಗಿ ಮಾಡುವುದರಿಂದ, ನಿಮ್ಮ ಪಾದಗಳನ್ನು ಸ್ವಚ್ಥವಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ.

ಸರಿಯಾದ ಪಾದರಕ್ಷೆಗಳನ್ನು ಬಳಸಿ

ಸರಿಯಾದ ಪಾದರಕ್ಷೆಗಳನ್ನು ಬಳಸಿ

ಈ ಋತುವಿನಲ್ಲಿ, ಕ್ಯಾನ್ವಾಸ್ ಶೂ ಅಥವಾ ಹಿಮ್ಮಡಿ ಎತ್ತರದ ಪಾದರಕ್ಷೆಗಳು ಯೊಗ್ಯವಲ್ಲ. ಕೆಲವೊಮ್ಮೆ, ತೊಯ್ದ ಪಾದರಕ್ಷೆಗಳನ್ನು ಬಳಸುವುದು ಅನಿವಾರ್ಯವಾಗಿಬಿಡುತ್ತದೆ. ಇದರಿಂದ ಸೋಂಕು ತಗಲುವ ಸಂಭವ ಹೆಚ್ಚುತ್ತದೆ. ಆದ್ದರಿಂದ ನೀರು ತಡೆಯುವ ವಸ್ತುವಿನಿಂದ ತಯಾರಿಸಿದ ಫ್ಲಿಪ್-ಫ್ಲಾಪ್ ಅಥವಾ ಓಪನ್-ಟೊ ಮಾದರಿಯ ಪಾದರಕ್ಷೆಗಳನ್ನು ಬಳಸುವುದು ಒಳ್ಳೆಯದು.

 ನಿಮ್ಮ ಪಾದರಕ್ಷೆಗಳನ್ನು ಸ್ವಚ್ಥವಾಗಿಟ್ಟುಕೊಳ್ಳಿ

ನಿಮ್ಮ ಪಾದರಕ್ಷೆಗಳನ್ನು ಸ್ವಚ್ಥವಾಗಿಟ್ಟುಕೊಳ್ಳಿ

ನಿಮ್ಮ ಪಾದಗಳನ್ನು ಸ್ವಚ್ಥವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ನಿಮ್ಮ ಪಾದರಕ್ಷೆಗಳನ್ನು ಸ್ವಚ್ಥವಾಗಿಟ್ಟುಕೊಳ್ಳುವುದೂ ಅಷ್ಚೇ ಮುಖ್ಯ. ನಿಮ್ಮ ಪಾದರಕ್ಷೆಗಳ ಮೇಲೆ ನೀರನ್ನು ಸುರಿದು ರಾತ್ರಿಯ ವೇಳೆ ಒಣಗಲು ಬಿಡಿ. ಇದರಿಂದ ಅದರಲ್ಲಿದ್ದ ಕೊಳಕೆಲ್ಲಾ ಹೋಗಿ, ನಿಮಗೆ ಸೋಂಕು ತಗಲುವ ಸಂಭವವನ್ನು ಕಡಿಮೆ ಮಾಡುತ್ತದೆ.

ಪೆಡಿಕ್ಯೂರ್

ಪೆಡಿಕ್ಯೂರ್

ಮಳೆಗಾಲದಲ್ಲಿ ತಿಂಗಳಿಗೆ ಒಮ್ಮೆಯಾದರೂ, ಪೆಡಿಕ್ಯೂರ್ ಮಾಡಿಸಿಕಳ್ಳುವುದು ಅತ್ಯವಶ್ಯಕ. (ಪೆಡಿಕ್ಯೂರ್ ಎಂದರೆ ಪಾದಗಳನ್ನು ಹಾಗು ಕಾಲ್ಬೆರಳುಗಳನ್ನು ಶುದ್ಧಮಾಡಿ ಸುಂದರವಾಗಿ ಕಾಣುವಂತೆ ಮಾಡುವ ಒಂದು ಚಿಕಿತ್ಸೆ.) ಈ ಮಳೆಗಾಲದಲ್ಲಿ ನಿಮ್ಮ ಪಾದಗಳು ಸಾಕಷ್ಟು ವೇದನೆಗೆ ಒಳಪಟ್ಟರೂ, ಅದಕ್ಕೆ ಆರೈಕೆ ಮಾಡಿದಷ್ಟೂ ನಿಮಗೆ ಒಳ್ಳೆಯದು. ಆರೈಕೆ ಮಾಡಿಕೊಳ್ಳುವಾಗ ಸ್ವಚ್ಥವಾದ ಉಪಕರಣಗಳನ್ನು ಬಳಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.

X
Desktop Bottom Promotion