For Quick Alerts
ALLOW NOTIFICATIONS  
For Daily Alerts

ಬಿಕಿನಿ ತೊಡುವ ಮಹಿಳೆಯರಿಗಾಗಿ ಹೆಚ್ಚುವರಿ ರೋಮದ ನಿವಾರಣೆಗೆ ಸೂಕ್ತ ವಿಧಾನ

By Super
|

ಇದುವರೆಗೆ ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿದ್ದ ಈಜುಡುಗೆ ಹಾಗೂ ತುಂಡುಡುಗೆಗಳು ಪೂರ್ವದೇಶಗಳಿಗೂ ಲಗ್ಗೆಯಿಟ್ಟಿವೆ. ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಬೆಡಗಿನ ಉಡುಗೆಯಾಗಿದ್ದ ಇವು ಈಗ ಮಧ್ಯಮವರ್ಗದವರಿಗೂ ಮೆಚ್ಚುಗೆಯಾಗುತ್ತಿದೆ. ಆರೋಗ್ಯದ ದೃಷ್ಟಿಯಿಂದ ಈಜು ಕಲಿಯಬೇಕಾದ ಮಕ್ಕಳು ಮತ್ತು ಯುವತಿಯರು ಬಿಕಿನಿ ತೊಡುವುದು ಅನಿವಾರ್ಯವಾಗಿದೆ. ಆದರೆ ಬಿಕಿನಿಯ ತಳಭಾಗದಿಂದ ಹೊರಕಾಣುವ ರೋಮವನ್ನು ಮರೆಮಾಚುವುದು ಅಥವಾ ನಿವಾರಿಸಿಕೊಳ್ಳುವುದು ಮಾತ್ರ ಅತ್ಯಗತ್ಯ.

ಮರೆ ಮಾಚಿದರೂ ಯಾವುದೋ ಘಳಿಗೆಯಲ್ಲಿ ಹೊರಬರುವ ಸಂಭವ ಇದ್ದೇ ಇದೆಯಾದುದರಿಂದ ಸೂಕ್ತ ವಿಧಾನ ಬಳಸಿ ನಿವಾರಿಸಿಕೊಳ್ಳುವುದು ಜಾಣತನ. ಈ ಸಮಸ್ಯೆಗೆ ಹಲವು ಪರಿಹಾರಗಳು ಲಭ್ಯವಿದ್ದರೂ ಕೆಳಗಿನ ಈ ಮೂರು ರೀತಿಯ ಪರಿಹಾರಗಳು ಹೆಚ್ಚು ಜನಪ್ರಿಯವಾಗಿವೆ.

Bikini area waxing – which option is better?

ಬಿಕಿನಿ ವ್ಯಾಕ್ಸ್:
ಈ ವಿಧಾನದಲ್ಲಿ ನೈಸರ್ಗಿಕವಾಗಿರುವ ರೋಮವನ್ನು ಹಾಗೇ ಬಿಟ್ಟು ಬಿಕಿನಿಯ ಅಥವಾ ಈಜುಡುಗೆಯ ಬದಿಗಳಿಂದ ಹೊರಬರುವ ರೋಮಗಳನ್ನು ಮಾತ್ರ ಒಪ್ಪ ಮಾಡಲಾಗುತ್ತದೆ. ಈ ವಿಧಾನ ಹೆಚ್ಚಿನ ನೋವಿಲ್ಲದ್ದಾಗಿದ್ದು ಮನೆಯಲ್ಲಿಯೇ ಸ್ವಂತವಾಗಿ ಅಥವಾ ನಿಕಟವರ್ತಿಯೊಬ್ಬರ ಸಹಾಯದೊಂದಿಗೆ ನಿರ್ವಹಿಸಬಹುದಾಗಿದೆ. ಸೌಂದರ್ಯ ಮಳಿಗೆಯಲ್ಲಿ (ಬ್ಯೂಟಿ ಪಾರ್ಲರ್) ಈ ವಿಷಯದಲ್ಲಿ ಪರಿಣತರಾದವರ ಮೂಲಕ ನಿರ್ವಹಿಸಿದರೆ ಅತಿ ಕಡಿಮೆ ನೋವನ್ನು ಅನುಭವಿಸಬಹುದು.'

ಬ್ರಜಿಲಿಯನ್ ವ್ಯಾಕ್ಸ್:
ಈ ವಿಧಾನದಲ್ಲಿ ಕಿಬ್ಬೊಟ್ಟೆಯಿಂದ ಹಿಡಿದು ಪ್ರಷ್ಠಗಳವರೆಗೆ ಬೆಳೆದಿರುವ ಎಲ್ಲಾ ರೋಮಗಳನ್ನು ತೆಗೆದುಹಾಕಲಾಗುತ್ತದೆ. ವ್ಯಾಕ್ಸಿಂಗ್ ಬಳಿಕ ಇಡಿಯ ಖಾಸಗಿಸ್ಥಳ ರೋಮರಹಿತವಾಗಿ ನುಣುಪಾಗಿರುವುದರಿಂದ ಇದಕ್ಕೆ ಹಾಲಿವುಡ್ ವ್ಯಾಕ್ಸಿಂಗ್ ಎಂಬ ಹೆಸರೂ ಇದೆ. ಈ ವಿಧಾನದಲ್ಲಿ ಅತ್ಯಂತ ನಾಜೂಕು, ಜಾಗರೂಕತೆ ಹಾಗೂ ಎಚ್ಚರಿಕೆಗಳನ್ನು ಪಾಲಿಸುವುದು ಅತ್ಯಗತ್ಯವಾದುದರಿಂದ ಕೇವಲ ನಿಪುಣರಾದ ಸೌಂದರ್ಯ ವೃತ್ತಿಪರರಲ್ಲಿ ಮಾತ್ರ ಮಾಡಿಸಿಕೊಳ್ಳಬೇಕು. ಅಲ್ಲದೇ ಈ ವಿಧಾನದಲ್ಲಿ ದೇಹದ ಅತ್ಯಂತ ಸಂವೇದನಾಶೀಲ ಸ್ಥಳಗಳಿಂದಲೂ ರೋಮವನ್ನು ಕೀಳಬೇಕಾದುದರಿಂದ ಹೆಚ್ಚಿನ ನೋವನ್ನು ಅನುಭವಿಸಲೂ ಮಾನಸಿಕವಾಗಿ ಸಿದ್ಧರಿರಬೇಕು. ಮುಖ್ಯವಾಗಿ ಈ ಸೇವೆಯನ್ನು ನೀಡುವ ಬ್ಯೂಟಿ ಪಾರ್ಲರ್ ನೈರ್ಮಲ್ಯ ಪಾಲನೆಗೆ ಹೆಚ್ಚಿನ ಕಾಳಜಿ ನೀಡುತ್ತಿದೆಯೋ ಎಂದು ಮೊದಲು ಗಮನಿಸಿ ಖಚಿತಪಡಿಸಿಕೊಂಡ ಬಳಿಕವೇ ಸೇವೆ ಪಡೆಯಲು ಸಿದ್ಧರಾಗಿ.

ಫ್ರೆಂಚ್ ವ್ಯಾಕ್ಸ್:
ಈ ವಿಧಾನ ಹೆಚ್ಚಿನ ಪಕ್ಷ ಬ್ರಜಿಲಿಯನ್ ವ್ಯಾಕ್ಸ್ ವಿಧಾನವನ್ನೇ ಹೋಲುತ್ತದಾದರೂ ಕಿಬ್ಬೊಟ್ಟೆಯ ಮೇಲ್ಬಾಗದಲ್ಲಿ ಒಂದು ಆಕಾರದಲ್ಲಿ ಸ್ವಲ್ಪ ರೋಮವನ್ನು ಹಾಗೇ ಬಿಡಲಾಗುತ್ತದೆ. ಇದರಿಂದ ನೈರ್ಮಲ್ಯ ಕಾಪಾಡುವುದರ ಜೊತೆಗೆ ಕಿಬ್ಬೊಟ್ಟೆಗೆ ವಿಶಿಷ್ಟ ಸೌಂದರ್ಯವೂ ಲಭಿಸಿದಂತಾಗುತ್ತದೆ. ಪ್ರತಿಬಾರಿಯ ವ್ಯಾಕ್ಸಿಂಗ್ ನಲ್ಲಿ ಈ ಆಕಾರವನ್ನು ಬದಲಿಸಿಕೊಂಡು ಪ್ರಿಯಕರನ ಮೆಚ್ಚುಗೆಯನ್ನೂ ಸಂಪಾದಿಸಬಹುದು. ಚೌಕ, ತ್ರಿಕೋನ, ಅರ್ಧಚಂದ್ರಾಕೃತಿ, ನಕ್ಷತ್ರ, ಪ್ರೀತಿಯ ಸಂಕೇತ ಮೊದಲಾದ ಆಕಾರಗಳು ಇತ್ತೀಚೆಗೆ ಹೆಚ್ಚಿನ ಗಮನ ಸೆಳೆಯುತ್ತಿವೆ. ಇಲ್ಲಿಯೂ ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡಿ.

ವ್ಯಾಕ್ಸಿಂಗ್ ವಿಧಾನದಲ್ಲಿ ಕೊಂಚ ನೋವು ಅನುಭವಿಸಬೇಕಾಗಿರುವುದು ಅನಿವಾರ್ಯವಾದುದರಿಂದ ಹೆಚ್ಚಿನ ಸಂವೇದನೆಯುಳ್ಳ ಮಹಿಳೆಯರು ಸಾಂಪ್ರಾದಾಯಿಕ ವಿಧಾನಗಳಿಗೆ ಒಗ್ಗಿಕೊಳ್ಳುವುದು ಒಳಿತು. ಇತ್ತೀಚೆಗೆ ಪ್ರಚಲಿತವಾಗಿರುವ ಲೇಸರ್ ಚಿಕಿತ್ಸೆ, ಶೇವಿಂಗ್ ಹಾಗೂ ರೋಮನಿವಾರಣಾ ಕ್ರೀಮುಗಳ ಮೂಲಕ ಈ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

English summary

Bikini area waxing – which option is better?

Women often wonder about removing hair from down there in order to keep their pubic area clean. Though there are various methods one can opt for, if you plan to wax it out, you may want to know which kind you’d prefer. Yes, there are different styles of waxing. Here’s a list and the difference between them.
Story first published: Saturday, July 12, 2014, 13:36 [IST]
X
Desktop Bottom Promotion