For Quick Alerts
ALLOW NOTIFICATIONS  
For Daily Alerts

ಬಾಯಿಯ ದುರ್ಗಂಧ ಹೋಗಲಾಡಿಸಲು ಟಾಪ್ ಸಲಹೆಗಳು

By Super
|

ಮೌಖಿಕ ಆರೈಕೆ, ಅಂದರೆ ಬಾಯಿಯ ಆರೋಗ್ಯ. ಮಾನವನ ಆರೋಗ್ಯದ ಅತೀ ಮುಖ್ಯ ಭಾಗ ನಮ್ಮ ಬಾಯಿಯ ಆರೋಗ್ಯ. ಆದರೆ ಇದು ಅತೀ ನಿರ್ಲಕ್ಷಿತ ಭಾಗವೂ ಹೌದು. ಈಗಲೂ ಹೆಚ್ಚಿನ ಜನ ಬಾಯಿಯ ಆರೋಗ್ಯದ ಪ್ರಾಮುಖ್ಯತೆಯನ್ನು ಸರಿಯಾಗಿ ಅರಿತಿಲ್ಲದಿರುವುದೇ ಈ ಉದಾಸೀನತೆಗೆ ಕಾರಣವಿರಬಹುದು.

ಪ್ರಾಮುಖ್ಯತೆ ತಿಳಿದ ಕೆಲವರಿಗೆ ಆರೈಕೆಯ ಸರಿಯಾದ ಮಾರ್ಗದ ಅರಿವಿರುವದಿಲ್ಲ. ಹಾಗಾಗಿ ಅವರು ಬಾಯಿಯ ಆರೋಗ್ಯವನ್ನು ರಕ್ಷಿಸುವಲ್ಲಿ ವಿಫಲರಾಗಬಹುದು. ಇದು ಬಹು ಸುಲಭದಲ್ಲಿ ತಿಳಿದು - ಪಾಲಿಸಬಹುದಾದ ವಿದ್ಯೆಯಾಗಿದ್ದರೂ ಸಾಮಾನ್ಯವಾಗಿ ಅನೇಕರು ತಮ್ಮ ಬಾಯಿಯ ಆರೋಗ್ಯ ಕಾಪಾಡುವಲ್ಲಿ ಎಡವುತ್ತಾರೆ. ನಿಮ್ಮ ತಪ್ಪು ತಿಳುವಳಿಕೆ ಹಾಗು ನಡವಳಿಕೆಗಳನ್ನು ತಿದ್ದಿ ನಿಮ್ಮ ಬಾಯಿಯ ಆರೋಗ್ಯ ರಕ್ಷಣೆಯಲ್ಲಿ ನಿಮಗೆ ಸಹಕಾರಿಯಾಗಲಿದೆ ಈ ಲೇಖನ. ಇಲ್ಲಿರುವ ಪ್ರತೀ ಸಾಲುಗಳು ನಿಮಗಾಗಿ, ನಿಮ್ಮ ಬಾಯಿಯ ಆರೈಕೆಗಾಗಿ. ಮುತ್ತಿನಂತಹ ಹಲ್ಲು ಹೆಚ್ಚಿಸುವುದು ಮುಖದ ಆಕರ್ಷಣೆ

ಹಲ್ಲುಜ್ಜಿದ ತಕ್ಷಣ ತಿಂಡಿ ತಿನ್ನುವುದು

ಹಲ್ಲುಜ್ಜಿದ ತಕ್ಷಣ ತಿಂಡಿ ತಿನ್ನುವುದು

ಪ್ರತೀ ಬಾರಿ ನೀವು ಹಲ್ಲುಜ್ಜಿದಾಗಲೂ, ನಿಮ್ಮ ಹಲ್ಲುಗಳ ಮೇಲಿರುವ ಎನಾಮಲ್ ಪದರವು ಕ್ರಮೇಣ ಸವೆಯುತ್ತಾ ಬರುತ್ತದೆ. ನೀವು ಹಲ್ಲುಜ್ಜಿ ಸುಮಾರು 60 ನಿಮಿಷಗಳ ಒಳಗೇ ಏನಾದರೂ ತಿನ್ನುವದರಿಂದ ನಿಮ್ಮ ಆಹಾರದಲ್ಲಿಯ ಆಮ್ಲೀಯ ಗುಣಗಳು ಎನಾಮಲ್ ಇರದ ಹಲ್ಲುಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತವೆ. ಹೀಗೆ ಮಾಡುವುದರಿಂದ ನಿಮ್ಮ ಹಲ್ಲುಗಳು ಬೇಗ ನಾಶವಾಗುವ ಸಾಧ್ಯತೆ ಇದೆ.

ತಿಂಡಿ ತಿಂದ ತಕ್ಷಣ ಹಲ್ಲುಜ್ಜುವುದು

ತಿಂಡಿ ತಿಂದ ತಕ್ಷಣ ಹಲ್ಲುಜ್ಜುವುದು

ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪೆಂದರೆ, ತಿಂಡಿತಿಂದ ತಕ್ಷಣ ಹಲ್ಲುಜ್ಜುವುದು ! ಹಲ್ಲುಜ್ಜಿದಾಗ ಹಲ್ಲುಗಳ ರಕ್ಷಾಕವಚವಾದ ಎನಾಮಲ್ ನಶಿಸುವುದರಿಂದ ಹಲ್ಲುಗಳ ಮೇಲೆ ಸೂಕ್ಷ್ಮಾಣುಗಳ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ.

ಸಿಹಿ ತಿಂದ ನಂತರ ಹಲ್ಲುಜ್ಜದಿರುವುದು

ಸಿಹಿ ತಿಂದ ನಂತರ ಹಲ್ಲುಜ್ಜದಿರುವುದು

ಸಕ್ಕರೆ ಸೇವನೆ ನಮ್ಮ ಹಲ್ಲುಗಳಿಗೆ ತುಂಬಾ ಅಪಾಯವನ್ನುಂಟು ಮಾಡುವಂತಹದ್ದು. ಇದು ನಮ್ಮ ದೇಹದಲ್ಲಿರುವ ಆಮ್ಲಗಳ ಜೊತೆ ಪ್ರತಿಕ್ರಿಯಿಸುವದಲ್ಲದೆ ನಮ್ಮ ಹಲ್ಲುಗಳ ಮೇಲೂ ಪ್ರತಿಕ್ರಿಯೆ ಬೀರುತ್ತದೆ. ಅವುಗಳನ್ನು ದುರ್ಬಲಗೊಳಿಸುವದಲ್ಲದೇ ಪ್ರತೀಬಾರಿ ಸಿಹಿ ಸೇವಿಸಿದಾಗಲೂ ಸೊಂಕು ಹರಡುವ ಸಾಧ್ಯತೆ ಇರುತ್ತದೆ.

ಬಾಯಿಯ ದುರ್ವಾಸನೆ ಹೋಗಲೆಂದು ಹಲ್ಲುಗಳನ್ನು ಬಲವಾಗಿ ಉಜ್ಜುವುದು

ಬಾಯಿಯ ದುರ್ವಾಸನೆ ಹೋಗಲೆಂದು ಹಲ್ಲುಗಳನ್ನು ಬಲವಾಗಿ ಉಜ್ಜುವುದು

ನಿಮ್ಮನ್ನು ಮುಜುಗರಕ್ಕೀಡು ಮಾಡುವ, ನಿಮಗೆ ಹೇಸಿಗೆ ಎನಿಸುವ ಬಾಯಿಯ ದುರ್ಗಂಧಕ್ಕೆ ಕಾರಣ ನಿಮ್ಮ ನಾಲಿಗೆಯೇ ಹೊರತು ಹಲ್ಲುಗಳಲ್ಲ. ಒಸಡು ಹಾಗು ಗಲ್ಲ(ಕೆನ್ನೆ)ಗಳ ಒಳಭಾಗಗಳ ಕಾಣಿಕೆಯೂ ಸ್ವಲ್ಪ ಮಟ್ಟಿಗೆ ಇದೆಯಾದರೂ ನಿಮ್ಮ ಹಲ್ಲುಗಳು ಮಾತ್ರ ಖಂಡಿತ ಆ ದುರ್ವಾಸನೆಗೆ ಕಾರಣವಲ್ಲ. ಆದ್ದರಿಂದ ಹಲ್ಲುಗಳ ಮೇಲಿನ ನಿಮ್ಮ ಬಲ ಪ್ರಯೋಗವನ್ನು ಇಂದಿನಿಂದಲೇ ನಿಲ್ಲಿಸಿರಿ. ನಾಲಿಗೆ, ಒಸಡು ಹಾಗು ಇತರ ಒಳಭಾಗಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಆಗ ನಿಮಗೇ ವ್ಯತ್ಯಾಸ ಕಂಡು ಬರುವುದು.

ಮಲಗುವ ಮುನ್ನ ಹಲ್ಲುಜ್ಜದಿರುವುದು

ಮಲಗುವ ಮುನ್ನ ಹಲ್ಲುಜ್ಜದಿರುವುದು

ಕೆಲವು ಜನ ಎಷ್ಟು ಸೋಮಾರಿಗಳು ಅಂದರೆ, ಮಲಗುವಾಗ ಹಲ್ಲು ಉಜ್ಜ ಬೇಕೆಂದು ತಿಳಿದಿದ್ದರೂ ಹಾಗೆ ಮಾಡದೇ ಮಲಗುತ್ತಾರೆ. ಇದರಿಂದ ಬಾಯಲ್ಲಿರುವ ಸೂಕ್ಷ್ಮಾಣುಗಳಿಗೆ ಮುಂದಿನ 6-8 ಗಂಟೆಗಳ ಕಾಲ ಆಡಲು ಮೈದಾನ ದೊರೆತಂತಾಗುತ್ತದೆ. ಅಷ್ಟು ಸಮಯದಲ್ಲಿ ಅವು ನಿಮ್ಮ ಹಲ್ಲುಗಳನ್ನು ತಮಗೆ ಬೇಕಾದಂತೆ ಬಳಸಿ ಕೊಂಡು ನಾಶಮಾಡಬಲ್ಲವು.

ಫ್ಲೋಸ್ಸಿಂಗ್ ಮಾಡುವುದರಿಂದ ತಪ್ಪಿಸಿಕೊಳ್ಳುವುದು

ಫ್ಲೋಸ್ಸಿಂಗ್ ಮಾಡುವುದರಿಂದ ತಪ್ಪಿಸಿಕೊಳ್ಳುವುದು

ಭಾರತೀಯರ ಬಾಯಿಯ ಆರೈಕೆಯಲ್ಲಿ ಅತ್ಯಂತ ನಿರ್ಲಕ್ಷೆಗೆ ಗುರಿಯಾಗಿರುವ ಸ್ವಚ್ಛತಾ ಕ್ರಮವೆಂದರೆ ಫ್ಲೋಸ್ಸಿಂಗ್. ಸಾಮಾನ್ಯವಾಗಿ ನಾವು ಇದು ನಮಗೆ ಅವಶ್ಯವೆ ಇಲ್ಲ ಎಂಬ ಧೋರಣೆಯಲ್ಲಿರುತ್ತೇವೆ. ಆದರೆ ಅಕಸ್ಮಿಕವಾಗಿ ನಮ್ಮ ಆಹಾರದ ಒಂದು ಚಿಕ್ಕ ಕಣ ಹಲ್ಲಿನ ಬಿರುಕಿನಲ್ಲಿ ಸೇರಿಕೊಂಡರೆ, ಅದನ್ನು ನಾವು ಹಾಗೇ ಬಿಟ್ಟಲ್ಲಿ ಅದು ಹುಳುಕಾಗಿ ಪರಿವರ್ತಿತವಾಗಿ ನಮ್ಮ ಹಲ್ಲನ್ನೇ ನಾಶಮಾಡಬಹುದು.

ಊಟದ ಬಳಿಕ ಮೌತ್ ವಾಷನ್ನು ಬಳಸುವುದು

ಊಟದ ಬಳಿಕ ಮೌತ್ ವಾಷನ್ನು ಬಳಸುವುದು

ಊಟದ ಬಳಿಕ ಉಂಟಾಗುವ ಬಾಯಿಯ ವಾಸನೆಯನ್ನು ದೂರಮಾಡಲು ಅನೇಕರು ಊಟವಾದ ತಕ್ಷಣ ಮೌತ್ ವಾಷನ್ನು ಬಳಸುತ್ತಾರೆ. ಇದನ್ನು ಊಟವಾದ ತಕ್ಷಣ ಬಳಸುವುದರಿಂದ ಇದರಲ್ಲಿನ ಆಮ್ಲೀಯ ಗುಣ ಹಲ್ಲುಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಮೌತ್ ವಾಷ್ ಬಳಕೆ ಹಾಗೂ ಊಟಕ್ಕೆ ಸುಮಾರು 45 ನಿಮಿಷಗಳ ಅಂತರವಿರುವುದು ಒಳ್ಳೆಯದು.

ಸರಿಯಾದ ಚಿಕಿತ್ಸೆಗೆ ಒಳಗಾಗದಿರುವುದು

ಸರಿಯಾದ ಚಿಕಿತ್ಸೆಗೆ ಒಳಗಾಗದಿರುವುದು

ಸುಮಾರು 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರನ್ನು ಕಾಣುವುದು ನಿಮ್ಮ ಬಾಯಿ ಹಾಗು ಹಲ್ಲುಗಳ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ನಮ್ಮ ಬಾಯಿಯಲ್ಲಿ ನಮಗೇ ಕಾಣದಂತಹ ಹಲವಾರು ಸಮಸ್ಯೆಗಳಿರುತ್ತದೆ, ಆದ್ದರಿಂದ ನಿಮ್ಮದೇ ಹಲ್ಲುಗಳ ಆರೋಗ್ಯಕ್ಕಾಗಿ ಒಂದಿಷ್ಟು ಹಣ ವ್ಯಯಿಸಿದರೆ ನಿಮ್ಮ ಜೇಬಿಗೆ ತೊಂದರೆಯೇನೂ ಆಗುವುದಿಲ್ಲ. ಇವು ನಿಮ್ಮದೇ ಹಲ್ಲುಗಳು, ಇವುಗಳ ರಕ್ಷಣೆ ಕೂಡ ನಿಮ್ಮದೇ ಹೊಣೆಯಾಗಿದೆ.

English summary

8 Common Oral Care Mistakes Indian Men Make

Oral care is an intricate part of human healthcare system which generally goes for a toss with great negligence, as people fail to recognize the importance of it. Some who do care a bit do not know the correct way of doing it.
X
Desktop Bottom Promotion