Just In
- 2 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 2 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 3 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 5 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲ್ಬೆರಳುಗಳ ಉಗುರಿನ ಫಂಗಸ್ ನಿವಾರಿಸಲು 8 ಮನೆ ಮದ್ದುಗಳು
ಕಾಲ್ಬೆರಳುಗಳ ಉಗುರಿನಲ್ಲಿ ಬೆಳೆಯುವ ಶಿಲೀಂಧ್ರ ಅಥವಾ ಫಂಗಸ್ ಅನ್ನು ವೈಙ್ಞಾನಿಕವಾಗಿ ಒನಿಕೊಮೈಕೊಸಿಸ್ ಎಂದು ಕರೆಯುತ್ತಾರೆ. ಇದು ಕಾಲ್ಬೆರಳಿನ ಉಗುರಿನ ಕೆಳಗೆ ಇರುವ ಚರ್ಮದ ಮೇಲೆ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಸೇರಿಕೊಂಡಾಗ ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ಇದರಿಂದ ನಿಮ್ಮ ಉಗುರಿನ ಅಂದ ಕೆಡುತ್ತದೆ, ನೋವು ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಕಿರಿಕಿರಿಯು ಸಹ ಉಂಟಾಗುತ್ತದೆ. ಈ ಫಂಗಸ್ ತೀವ್ರ ಹಂತಕ್ಕೆ ಹೋದಾಗ ಉಗುರಿನ ಬಣ್ಣಗೆಡುವಿಕೆ ಕಂಡು ಬರುತ್ತದೆ. ಈ ಫಂಗಸ್ ಸಮಸ್ಯೆಯನ್ನು ಆರಂಭದಲ್ಲಿಯೇ ನಿವಾರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ಬೆಳೆದಷ್ಟು ಆಳಕ್ಕೆ ಹೋಗಿ ತಲುಪುವ ಅಪಾಯವಿರುತ್ತದೆ.
ಈ ಸಮಸ್ಯೆಯನ್ನು ನಿವಾರಿಸಲು ಹಲವಾರು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಈ ಔಷಧಗಳಲ್ಲಿ ಬಹುತೇಕವು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಇದರಿಂದ ಕರುಳಿಗೆ ಹಾನಿ ಮುಂತಾದ ಅಡ್ಡ ಪರಿಣಾಮಗಳು ಸಾಮಾನ್ಯವಾಗಿರುತ್ತವೆ. ಇದು ನಿಜಕ್ಕು ಅಪಾಯಕಾರಿ. ಅದಕ್ಕಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರು ಬದಲಿ ಔಷಧಗಳನ್ನು ಹುಡುಕುವುದು ಅನಿವಾರ್ಯವಾಗಿದೆ.
ಹಲವಾರು ವರ್ಷಗಳಿಂದ ಒನಿಕೊಮೈಕೊಸಿಸ್ ಅನ್ನು ನಿವಾರಿಸಲು ಹಲವಾರು ಮನೆಮದ್ದುಗಳು ಚಾಲ್ತಿಯಲ್ಲಿವೆ. ಇವುಗಳ ಮೇಲೆ ಅಷ್ಟೇನು ವೈಧ್ಯಕೀಯ ಪರೀಕ್ಷೆಗಳು ನಡೆದಿಲ್ಲವಾದರು, ಇದನ್ನು ಬಳಸಿದವರ ಅಭಿಪ್ರಾಯಗಳ ಸಂಗ್ರಹದಿಂದಾಗಿ ತಿಳಿದು ಬಂದಿರುವ ವಿಚಾರವೆಂದರೆ ಇಂತಹ ಮನೆಮದ್ದುಗಳು ಈ ಬಗೆಯ ಫಂಗಸ್ ಅನ್ನು ನಿವಾರಿಸುತ್ತವೆಯಂತೆ. ಈ ಮನೆಮದ್ದುಗಳು ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಮತ್ತು ನಮ್ಮ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತವೆ.
ವಿನೆಗರ್
ಅದು ಆಪಲ್ ಸಿಡೆರ್ ವಿನೆಗರ್ ಆಗಿರಲಿ ಅಥವಾ ಬಿಳಿ ವಿನೆಗರ್ ಆಗಿರಲಿ ಯಾವುದಾದರು ಸರಿ ಕಾಲ್ಬೆರಳುಗಳ ಉಗುರಿನ ಫಂಗಸ್ ನಿವಾರಿಸಲು ವಿನೆಗರ್ ದಿವ್ಯೌಷಧಿಯಂತೆ ಕೆಲಸ ಮಾಡುತ್ತದೆ. ಶೇ.50 ಭಾಗ ವಿನೆಗರ್ ಮತ್ತು ಶೇ.50 ಭಾಗ ನೀರನ್ನು ಬೆರೆಸಿ ಫೂಟ್ ಬಾತ್ ಮಾಡುವುದರಿಂದ ಫಂಗಸ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ತಣ್ಣೀರು ಅಥವಾ ಬಿಸಿ ನೀರಿನ ಫೂಟ್ ಬಾತ್ ಚಿಕಿತ್ಸೆಯನ್ನು ನೀವು ಪ್ರಯತ್ನಿಸಬಹುದು. ಈ ಎರಡು ಬಗೆಯ ಬಾತ್ನಲ್ಲಿ ನೀವು ನಿಮ್ಮ ಕಾಲುಗಳನ್ನು ಅಂದಾಜು 30 ನಿಮಿಷಗಳಿಗಿಂತ ಮೇಲ್ಪಟ್ಟ ಅವಧಿಯವರೆಗು ನೆನೆಸಬೇಕಾಗುತ್ತದೆ.
ಸಾಧ್ಯವಾದಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಬಾರಿ ನಿಮ್ಮ ಕಾಲುಗಳಿಗೆ ಈ ಫೂಟ್ ಬಾತ್ ಚಿಕಿತ್ಸೆ ನೀಡಿ. ಇನ್ಫೆಕ್ಷನ್ ಆಗಿರುವ ಉಗುರಿನ ಭಾಗ ಒಣಗಿದ ನಂತರ ಅದನ್ನು ವಿಟಮಿನ್ ಇ ನಿಂದ ರಬ್ ಮಾಡಿ. ವಿಟಮಿನ್ ಇ ನಿಮ್ಮ ಉಗುರಿನ ಫಂಗಸ್ ನಿವಾರಿಸಲು ಸಹಾಯ ಮಾಡುತ್ತದೆ.
ವಿಕ್ಸ್ ವೇಪರ್ ರಬ್
ಇದು ಇನ್ಫೆಕ್ಷನ್ ನಿವಾರಿಸಲು ಇರುವ ಅತ್ಯಂತ ಸರಳ ಮತ್ತು ಸುಲಭ ಮಾರ್ಗ. ಆದರೂ ವಿಕ್ಸ್ ವೇಪರ್ ರಬ್ನ ಗಾಢವಾದ ವಾಸನೆಯು ಸ್ವಲ್ಪ ಕಿರಿಕಿರಿ ಉಂಟು ಮಾಡಬಹುದು. ಆದರೂ ಸಹ ಈ ಮನೆ ಮದ್ದು ನಿಮ್ಮ ಸಮಸ್ಯೆಗೆ ತಕ್ಕ ಮಟ್ಟಿಗಿನ ಉತ್ತಮ ಪರಿಹಾರವನ್ನು ನೀಡುತ್ತದೆ. ಇನ್ಫೆಕ್ಷನ್ಗೆ ಒಳಗಾದ ಉಗುರಿನ ಮೇಲೆ ವಿಕ್ಸ್ ಅನ್ನು ಉಜ್ಜಿ. ಗಾಳಿಗೆ ಒಣಗಲು ಬಿಡಿ, ಬೇಕಾದಲ್ಲಿ ಬ್ಯಾಂಡ್-ಏಡ್ ಸಹ ಬಳಸಿ. ಬೇಕಾದಲ್ಲಿ ಈ ಚಿಕಿತ್ಸೆಯನ್ನು ಬೆಳಗ್ಗೆ ಮತ್ತು ರಾತ್ರಿ ಎರಡೂ ಬಾರಿ ಬಳಸಿ.
ಉಪ್ಪು ನೀರಿನಲ್ಲಿ ನೆನೆಸುವುದು
ಒಂದು ವೇಳೆ ನೀವು ಸಮುದ್ರ ತೀರಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದಲ್ಲಿ ಉಪ್ಪು ನೀರಿನ ಚಿಕಿತ್ಸೆ ಪ್ರಯತ್ನಿಸಬಹುದು. ಇದು ತುಂಬಾ ಸುಲಭವಾದ ಪರಿಹಾರ ನಿಮ್ಮ ಕಾಲುಗಳನ್ನು ಸಮುದ್ರದ ನೀರಿನಲ್ಲಿ ನೆನೆಸಿದರೆ ಸಾಕು. ಏಕೆಂದರೆ ಉಪ್ಪು ನೀರಿನಲ್ಲಿ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವಂತಹ ಅಂಶಗಳು ಪ್ರಾಕೃತಿಕವಾಗಿ ಲಭ್ಯವಿವೆ. ಒಂದು ವೇಳೆ ನಿಮ್ಮ ಮನೆಯ ಸಮೀಪ ಸಮುದ್ರವಿಲ್ಲದಿದ್ದಲ್ಲಿ, ಮನೆಯಲ್ಲಿಯೇ ಉಪ್ಪು ನೀರನ್ನು ತಯಾರಿಸಿಕೊಂಡು ಅದರಲ್ಲಿ ನಿಮ್ಮ ಕಾಲನ್ನು ನೆನೆಸಿ. ಇದು ಸಹ ಅಷ್ಟೇ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತದೆ. ಇದನ್ನು ಪ್ರಯತ್ನಿಸುವ ಮೊದಲು ನಿಮ್ಮ ಕಾಲಿನ ಉಗುರುಗಳನ್ನು ಮೊದಲು ಕತ್ತರಿಸಿ. ಇನ್ಫೆಕ್ಷನ್ ಆಗಿರುವ ಭಾಗಕ್ಕೆ ಈ ಉಪ್ಪು ನೀರು ಹೋಗಿ ತಾಗುತ್ತದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಒಂದು ಬೇಸಿನ್ ತೆಗೆದುಕೊಳ್ಳಿ, ಅದರಲ್ಲಿ ನಿಮ್ಮ ಇಡೀ ಪಾದವು ಮುಳುಗವಷ್ಟರ ಮಟ್ಟಿಗಿನ ಬೆಚ್ಚನೆಯ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಹೈಡ್ರೋಜೆನ್ ಪೆರಾಕ್ಸೈಡ್ ಬೆರೆಸಿ. ಈಗ ಇದರೊಳಗೆ ನಿಮ್ಮ ಪಾದಗಳನ್ನು ಇಟ್ಟು ಚೆನ್ನಾಗಿ ನೆನೆಸಿ. ನಂತರ ನಿಮ್ಮ ಕಾಲುಗಳನ್ನು ಹೊರಗೆ ತೆಗೆದು ಉಗುರುಗಳ ಮೇಲೆ ಸ್ವಲ್ಪ ಸಮುದ್ರದ ಉಪ್ಪನ್ನು ಹಾಕಿ. ಮೂರು ನಿಮಿಷ ಹಾಗೆಯೇ ಬಿಡಿ. ನಂತರ ಸಮುದ್ರದ ಉಪ್ಪನ್ನು ( ಒಂದು ಬಟ್ಟಲಿನಷ್ಟು) ಬೇಸಿನ್ಗೆ ಹಾಕಿ. ಮತ್ತೆ ನಿಮ್ಮ ಕಾಲುಗಳನ್ನು ಈ ನೀರಿನಲ್ಲಿ ಇಟ್ಟು ಅರ್ಧ ಗಂಟೆಯ ಕಾಲ ನೆನೆಸಿ. ನಂತರ ನಿಮ್ಮ ಕಾಲುಗಳನ್ನು ಹೊರಗೆ ತೆಗೆದು, ಟವೆಲ್ನಿಂದ ಒರೆಸಿ. ಕಾಲಿನ ಉಗುರು ಭಾಗಕ್ಕೆ ವಿನೆಗರ್( 1-2 ಹನಿ) ಅನ್ನು ಲೇಪಿಸಿ. ಈ ಚಿಕಿತ್ಸೆಯ ಸಮಯದಲ್ಲಿ ಶೂಗಳನ್ನು ಬಳಸಬೇಡಿ. ಅದರ ಬದಲಿಗೆ ಸ್ಯಾಂಡಲ್ಸ್ ಅಥವಾ ಫ್ಲಿಪ್ ಫ್ಲಾಪ್ಗಳನ್ನು ಬಳಸಿ. ಈ ಚಿಕಿತ್ಸೆಯನ್ನು ಪ್ರತಿನಿತ್ಯ ಪುನರಾವರ್ತಿಸಿ ಅಥವಾ ಈ ಸಮಸ್ಯೆಯಿಂದ ಸಂಪೂರ್ಣವಾಗಿ ಬಿಡುಗಡೆಯಾಗುವವರೆಗೆ ಬಳಸಿ.
ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾದಲ್ಲಿ ಅಲ್ಕಾಲೈನ್ ಪ್ರಮಾಣವು ಅಧಿಕವಾಗಿರುವುದರಿಂದ ಇದು pH ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಇದರಿಂದಾಗಿ ಫಂಗಸ್ ಅಥವಾ ಬ್ಯಾಕ್ಟೀರಿಯಾಗಳು ಬೆಳೆಯುವುದು ಕಷ್ಟವಾಗುತ್ತದೆ. ಇದಕ್ಕಾಗಿ ನೀವು ಬೇಕಿಂಗ್ ಸೋಡಾ ಮತ್ತು ಮೆದು ನೀರನ್ನು ಬೆರೆಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಬಹುದು, ಅದನ್ನು ಇನ್ಫೆಕ್ಷನ್ ಆಗಿರುವ ಭಾಗಕ್ಕೆ ಲೇಪಿಸಬಹುದು. ಇದರ ಜೊತೆಗೆ ಸ್ವಲ್ಪ ಬೇಕಿಂಗ್ ಸೋಡಾವನ್ನು ನಿಮ್ಮ ಶೂನಲ್ಲಿ ಉದುರಿಸಬಹುದು. ಹೀಗೆ ಮಾಡುವುದರಿಂದ ಪಾದಗಳಲ್ಲಿ ಫಂಗಸ್ ಬೆಳೆಯದಂತೆ ತಡೆಯಬಹುದು.
ಲೆಮನ್ಗ್ರಾಸ್ ಎಣ್ಣೆ
ಲೆಮನ್ಗ್ರಾಸ್ ಅಥವಾ ನಿಂಬೆ ಹುಲ್ಲು ಸಹ ಕಾಲಿನ ಉಗುರಿನ ಇನ್ಫೆಕ್ಷನ್ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಫಂಗಸ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಅಧಿಕವಾಗಿರುತ್ತವೆ. ಇದು ಕಾಲಿನ ಉಗುರಿನಲ್ಲಿರುವ ಫಂಗಸ್ ಮೇಲೆ ಆಕ್ರಮಣ ಮಾಡಿ ಹೆಚ್ಚಿನ ಇನ್ಫೆಕ್ಷನ್ ಆಗದಂತೆ ತಡೆಯುತ್ತದೆ. ಜೊತೆಗೆ ಇದು ಉಗುರನ್ನು ಅಂದಗೆಡದಂತೆ, ನಯವಾಗದಂತೆ ಮತ್ತು ತುಂಡಾಗದಂತೆ ತಡೆಯುತ್ತದೆ. ಫಂಗಸ್ ನಿವಾರಿಸಲು ಇರುವ ಇತರ ಎಣ್ಣೆಗಳ ಜೊತೆಗೆ ಇದನ್ನು ಸಹ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮಗೆ ಅಗತ್ಯವಾದಲ್ಲಿ ತೆಂಗಿನ ಎಣ್ಣೆ ಅಥವಾ ಗ್ರೇಪ್ ಸೀಡ್ ಎಣ್ಣೆಗಳನ್ನು ನೀವು ಅಂಗಡಿಯಿಂದ ಕೊಂಡು ಬಳಸಬಹುದು. ಈ ಎರಡೂ ಬಗೆಯ ಎಣ್ಣೆಗಳು ಲೆಮನ್ಗ್ರಾಸ್ ಎಣ್ಣೆಯ ಪ್ರಬಲ ಗುಣವನ್ನು ಕಡಿಮೆ ಮಾಡುತ್ತವೆ.
ತೆಂಗಿನ ಎಣ್ಣೆ ಅಥವಾ ಗ್ರೇಪ್ ಸೀಡ್ ಎಣ್ಣೆಯ ( 1 ಔನ್ಸ್) ಜೊತೆಗೆ ಲೆಮನ್ಗ್ರಾಸ್ ಎಣ್ಣೆಯನ್ನು (12 ಹನಿ) ಬೆರೆಸಿ. ಈ ಮಿಶ್ರಣವನ್ನು ಬಳಸುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಏಕೆಂದರೆ ನಿಮ್ಮ ಕೈಗಳಲ್ಲಿರುವ ಕೆಲವು ಅಂಶಗಳು ಈ ಮಿಶ್ರಣದ ಕಾರ್ಯದಲ್ಲಿ ತಡೆಯುಂಟು ಮಾಡಬಹುದು. ನಿಮಗೆ ಅಗತ್ಯವಿದ್ದಲ್ಲಿ ಲೆಮನ್ಗ್ರಾಸ್ ಟೀಯನ್ನು ಸಹ ನೀವು ದಿನಕ್ಕೆ ಮೂರು ಬಾರಿ ಸೇವಿಸಬಹುದು(1 ಕಪ್ನಂತೆ) . ಅದರ ಟೀ ಬ್ಯಾಗ್ಗಳನ್ನು ಫಂಗಸ್ ಇರುವ ಭಾಗದಲ್ಲಿ ಇಡಬಹುದು. ಇದು ಸಹ ಫಂಗಸ್ ಶೀಘ್ರವಾಗಿ ಗುಣವಾಗಲು ನೆರವಾಗುತ್ತದೆ.
ಅರಿಶಿಣ
ಅರಿಶಿಣದ ಎಣ್ಣೆ ಮತ್ತು ನೀರನ್ನು ಬೆರೆಸಿ ಒಂದು ದುರ್ಬಲವಾದ ಮಿಶ್ರಣವನ್ನು ಮಾಡಿಕೊಳ್ಳಬಹುದು. ಇದರ ಪ್ರಮಾಣವು 1:3 ಪ್ರಮಾಣದಲ್ಲಿರಲಿ, ಇದನ್ನು ಹತ್ತಿಯಿಂದ ತೆಗೆದುಕೊಂಡು ಫಂಗಸ್ ಆಗಿರುವ ಭಾಗಕ್ಕೆ ಲೇಪಿಸಿ. ಇದನ್ನು ಕಡ್ಡಾಯವಾಗಿ ದಿನಕ್ಕೆ ಮೂರು ಬಾರಿ ಪುನರಾವರ್ತಿಸಿದರೆ ನಿಮ್ಮ ಇನ್ಫೆಕ್ಷನ್ ಸಮಸ್ಯೆ ಶೀಘ್ರವಾಗಿ ದೂರವಾಗುತ್ತದೆ. ಇದರ ಜೊತೆಗೆ ಅರಿಶಿಣವನ್ನು ( 300 ಮಿ.ಗ್ರಾಂ) ನೇರವಾಗಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಸಹ ನಿಮ್ಮ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಬಹುದು.
ಬೇವಿನ ಎಣ್ಣೆ
ಬೇವಿನ ಎಣ್ಣೆಯಲ್ಲಿರುವ ಫಂಗಸ್ ನಿರೋಧಕ ಗುಣಗಳು ನಿಮ್ಮ ಉಗುರಿನಲ್ಲಿರುವ ಫಂಗಸ್ ಅನ್ನು ನಿವಾರಿಸಲು ಸಹಾಯ ಮಾಡುತ್ತವೆ. ಜೊತೆಗೆ ಇದು ನಿಮ್ಮ ಉಗುರುಗಳ ಅಂದವನ್ನು ಸಹ ಹೆಚ್ಚಿಸುತ್ತವೆ. ಈ ಬೇವಿನ ಎಣ್ಣೆಯಲ್ಲಿ ಅತ್ಯುತ್ತಮವಾದ ಮೊಯಿಶ್ಚರೈಸಿಂಗ್ ಮತ್ತು ಪೋಷಕಾಂಶ ಗುಣಗಳು ಇವೆ. ಈ ಎಣ್ಣೆಯನ್ನು ಬೆರಳುಗಳ ಮೇಲೆ ಮತ್ತು ಭಾದಿತ ಪ್ರದೇಶದಲ್ಲಿ ಮಸಾಜ್ ಮಾಡಬಹುದು. ಇದರಲ್ಲಿ ಸಲ್ಫುರಸ್ ಅಂಶಗಳು ಸ್ವಲ್ಪ ವಾಸನೆಯನ್ನು ಉಂಟು ಮಾಡುತ್ತವೆ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ತನ್ನಲ್ಲಿ ಅತ್ಯುತ್ತಮವಾದ ಉಪಶಮನಕಾರಿ ಗುಣಗಳನ್ನು ಹೊಂದಿದೆ ಎಂಬುದು ಎಲ್ಲರಿಗು ತಿಳಿದ ವಿಚಾರವೇ. ಇದರಲ್ಲಿ ಲಾರಿಕ್ ಆಮ್ಲವೆನ್ನುವ ಅಪರೂಪದ ಸ್ಯಾಚುರೇಟೇಡ್ ಕೊಬ್ಬುಗಳು ಯಥೇಚ್ಛ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಈ ಸ್ಯಾಚುರೇಟೇಡ್ ಕೊಬ್ಬುಗಳು ತಮ್ಮೊಳಗೆ ಮಧ್ಯಮ ಪ್ರಮಾಣದ ಟ್ರೈಗ್ಲಿಸೆರೈಡ್ಗಳ ಸರಪಣಿಯನ್ನು ಹೊಂದಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ಬಾವು ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿರೋಧಕ ಮತ್ತು ವೈರಸ್ ನಿರೋಧಕ ಗುಣಗಳು ಸಹ ಇವೆ.
ತೆಂಗಿನ ಎಣ್ಣೆಯು ತ್ವಚೆಯ ಲೋಪ ದೋಷಗಳನ್ನು ಸರಿಪಡಿಸಲು ಮತ್ತು ಫ್ರೀ ರಾಡಿಕಲ್ಗಳ ಮೇಲೆ ಹೋರಾಡಲು ನೆರವಾಗುತ್ತದೆ. ಇದಲ್ಲದೆ ತೆಂಗಿನಕಾಯಿ ಎಣ್ಣೆಯು ಕಾಲ್ಬೆರಳಿನ ಶಿಲೀಂಧ್ರವನ್ನು ನಿವಾರಿಸಲು ಮತ್ತು ಅದರಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ. ಒಮ್ಮೆ ನೀವು ಶಿಲೀಂಧ್ರದಿಂದ ಮುಕ್ತರಾದಲ್ಲಿ ಮುಂದೆ ಶಿಲೀಂಧ್ರವು ನಿಮ್ಮ ಕಾಲು ಬೆರಳುಗಳಿಗೆ ಸೋಕದಂತೆ ಕಾಪಾಡಲು ಬೇಕಾದಂತಹ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ನಿಮಗೆ ಎಂದಿಗು ಶಿಲೀಂಧ್ರದ ಸಮಸ್ಯೆ ಕಾಡುವುದಿಲ್ಲ.