For Quick Alerts
ALLOW NOTIFICATIONS  
For Daily Alerts

ಲೈಂಗಿಕ ಕ್ರಿಯೆಯು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆಯೇ?

By Super
|

ಕೇವಲ ಮನಃಸಂತೋಷಕ್ಕಾಗಿ ನೀವು ಮಿಲನದಲ್ಲಿ ಪಾಲ್ಗೋಳ್ಳುತ್ತೀರಾ? ಆದರೆ ಅದಕ್ಕೆ ಸಂಬಂಧಪಟ್ಟ ಕೆಲವು ವಿಚಾರಗಳು ನಿಮಗೆ ಗೊತ್ತಿಲ್ಲ. ಮಿಲನವು ನಮಗೇ ಗೊತ್ತಿಲ್ಲದೆ ನಮ್ಮ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆಯೆಂದರೆ ನೀವು ನಂಬಲೇಬೇಕು! ಇದರ ಮೇಲೆ ನಡೆದಿರುವ ಅಧ್ಯಯನಗಳಿಂದ ದೃಢಪಟ್ಟಿರುವ ವಿಚಾರವೇನೆಂದರೆ,

ಲೈಂಗಿಕ ಕ್ರಿಯೆಯು ಕೂದಲು ಮತ್ತು ತ್ವಚೆಯ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆಯಂತೆ. ಬನ್ನಿ ಅದರಲ್ಲಿ ನಾವು ನಿಮಗಾಗಿ ಕೆಲವೊಂದು ಅಂಶಗಳನ್ನು ಆಯ್ದು ತಂದಿದ್ದೇವೆ. ಬನ್ನಿ ನಿಮ್ಮ ಸೌಂದರ್ಯದ ಮೇಲೆ ಮಿಲನವು ಬೀರುವ ಪರಿಣಾಮಗಳನ್ನು ತಿಳಿಯೋಣ. ಕೂದಲನ್ನು ಸುಂದರಗೊಳಿಸುವ ಆರು ಚಮತ್ಕಾರಿಕ ಉತ್ಪನ್ನಗಳು

ಸುಕ್ಕುಗಳನ್ನು ದೂರವಿಡುತ್ತದೆ

ಸುಕ್ಕುಗಳನ್ನು ದೂರವಿಡುತ್ತದೆ

ವಯಸ್ಸಾದಂತೆ ಮುಖದ ಮೇಲೆ ಕಾಣಿಸಿಕೊಂಡು ನಮ್ಮ ಸೌಂದರ್ಯವನ್ನು ಹಾಳು ಮಾಡುವ ಸುಕ್ಕುಗಳು ಯಾರಿಗೆ ತಾನೇ ಗೊತ್ತಿಲ್ಲ. ಇದು ಮೊದಲು ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಇಂದು ಯುವ ಜನರಲ್ಲೂ ಸಹ ಇದು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕಡಿಮೆ ನಿದ್ದೆ, ದೀರ್ಘವಾದ ಕೆಲಸದ ಸಮಯಗಳು, ಧೂಮಪಾನ, ಕುಡಿತ, ಇತ್ಯಾದಿಗಳಾಗಿವೆ. ಆದರೆ ಲೈಂಗಿಕ ಕ್ರಿಯೆಯು ಸುಕ್ಕುಗಳನ್ನು ದೂರವಿಡುತ್ತದೆ. ಏಕೆಂದರೆ ನಾವು ಮಿಲನದಲ್ಲಿ ಪಾಲ್ಗೊಂಡಾಗ ಮಾನವನ ಬೆಳವಣಿಗೆಯ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವುಗಳು ತ್ವಚೆಯನ್ನು ಇಳಿ ಬೀಳದಂತೆ ಕಾಪಾಡಿ, ಸುಕ್ಕುಗಳು ಬರದಂತೆ ತಡೆಯುತ್ತವೆ.

ತ್ವಚೆಗೆ ಹೊಳಪನ್ನು ನೀಡುತ್ತದೆ

ತ್ವಚೆಗೆ ಹೊಳಪನ್ನು ನೀಡುತ್ತದೆ

ಒಂದು ವೇಳೆ ನೀವು ಹೊಳೆಯುವ ತ್ವಚೆಯನ್ನು ನಿರೀಕ್ಷಿಸುತ್ತಿದ್ದಲ್ಲಿ, ಲೈಂಗಿಕ ಕ್ರಿಯೆಯು ನಿಮ್ಮ ನೆರವಿಗೆ ಬರುತ್ತದೆ. ಹೌದು ಮಿಲನದಲ್ಲಿ ತೊಡಗಿಸಿಕೊಳ್ಳುವುದರಿಂದ, ನೀವು ನಿಮ್ಮ ಕೆನ್ನೆಯ ಮೇಲಿರುವ ತ್ವಚೆಯಿಂದ ಟಾಕ್ಸಿನ್‍ಗಳನ್ನು ಹೊರ ಹಾಕಬಹುದು. ಇದನ್ನು ನೀವು ಗಮನಿಸಬೇಕಾದಲ್ಲಿ, ನಿಮ್ಮ ಮುಖವನ್ನು ಮಿಲನಕ್ಕೆ ಮೊದಲು ಮತ್ತು ನಂತರ ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಿ. ಮಿಲನದ ನಂತರ ನಿಮ್ಮ ತ್ವಚೆಯು ಸ್ವಾಭಾವಿಕವಾಗಿ ಹೊಳಪಿನಿಂದ ಕೂಡಿರುವುದನ್ನು ನೀವು ಗಮನಿಸಬಹುದು.

ತ್ವಚೆಗೆ ಯೌವನವನ್ನು ನೀಡುತ್ತದೆ

ತ್ವಚೆಗೆ ಯೌವನವನ್ನು ನೀಡುತ್ತದೆ

ಡಾ.ಡೇವಿಡ್ ವೀಕ್ಸ್ ಎಂಬ ಬ್ರಿಟೀಷ್ ಮನಃಶಾಸ್ತ್ರಜ್ಞರ ಪ್ರಕಾರ ನೀವು ಪ್ರತಿನಿತ್ಯ ಮಿಲನದಲ್ಲಿ ತೊಡಗಿಸಿಕೊಳ್ಳುತ್ತಿದ್ದಲ್ಲಿ, ನಿಮ್ಮ ಮುಖದಲ್ಲಿ ವಯಸ್ಸು, ನಿಮ್ಮ ಈಗಿನ ವಯಸ್ಸಿಗಿಂತ ಐದರಿಂದ ಏಳು ವರ್ಷ ಕಡಿಮೆ ಕಾಣಿಸುತ್ತದೆಯಂತೆ. ಮಿಲನದ ಸಮಯದಲ್ಲಿ ಹೊರತುಪಡಿಸಿ, ನಮ್ಮ ದೇಹವು ಮಗುವಿಗೆ ಜನ್ಮ ನೀಡುವ ಸಹ ಆಕ್ಸಿಟೊಸಿನನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ಸಮರ್ಥ ವಯಸ್ಸಾದಂತೆ ಕಾಣುವುದನ್ನು ತಡೆಯುವ ಹಾರ್ಮೋನ್ ಆಗಿರುತ್ತದೆ.

ಕೂದಲಿಗೆ ಹೊಳಪನ್ನು ನೀಡುತ್ತದೆ

ಕೂದಲಿಗೆ ಹೊಳಪನ್ನು ನೀಡುತ್ತದೆ

ಮಂಕಾದ ಕೂದಲು ನಿಮ್ಮ ಸಮಸ್ಯೆಯೇ? ಹಾಗಾದರೆ ನಿಮಗೆ ಮಿಲನವು ಒಂದು ಚಿಕಿತ್ಸೆ ಎಂದು ಹೇಳಬಹುದು! ಮಿಲನದಲ್ಲಿ ಪಾಲ್ಗೊಳ್ಳುವುದರಿಂದ ಹೆಂಗಸರ ದೇಹದಲ್ಲಿ ಎಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ. ಇದು ಕೂದಲಿನ ಮಂಕುತನವನ್ನು ದೂರವಿಡುತ್ತದೆ. ಜೊತೆಗೆ ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ. ಇದು ನಿಮ್ಮ ಕೂದಲು ಮತ್ತು ತ್ವಚೆ ಎರಡಕ್ಕೂ ಒಳ್ಳೆಯದು.

ಕೊಲ್ಲಾಜೆನನ್ನು ಹೆಚ್ಚಿಸುತ್ತದೆ

ಕೊಲ್ಲಾಜೆನನ್ನು ಹೆಚ್ಚಿಸುತ್ತದೆ

ಕೊಲ್ಲಾಜೆನ್ ನಮ್ಮ ತ್ವಚೆಯಲ್ಲಿ ಕಂಡು ಬರುತ್ತದೆ. ಇದು ನಮ್ಮ ತ್ವಚೆಯು ಹಿಗ್ಗಲು ಮತ್ತು ಯೌವನದಿಂದ ಕಾಣಲು ಸಹಕರಿಸುತ್ತದೆ. ವಯಸ್ಸಾದಂತೆಲ್ಲ, ಇದರ ಉತ್ಪಾದನೆಯು ನಮ್ಮ ದೇಹದಲ್ಲಿ ಕಡಿಮೆಯಾಗುತ್ತದೆ. ಕೊಲ್ಲಾಜೆನ್ ಉತ್ಪಾದನೆ ಹೆಚ್ಚಬೇಕಾದಲ್ಲಿ, ನಾವು ಮಿಲನದಲ್ಲಿ ಸ್ವಲ್ಪ ಹೆಚ್ಚಿಗೆ ಪಾಲ್ಗೊಳ್ಳಬೇಕು. ಕೊಲ್ಲಾಜೆನ್ ಅನ್ನು ತ್ವಚೆಯಲ್ಲಿ ಮತ್ತಷ್ಟು ಉತ್ಪಾದಿಸಲು ಮತ್ತೊಂದು ಮಾರ್ಗವಿದೆ, ಅದು ಸ್ಪರ್ಮ್ ಫೇಶಿಯಲ್. ಹೌದು ಅಧ್ಯಯನಗಳ ಪ್ರಕಾರ ವೀರ್ಯದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಅಧಿಕವಾಗಿರುತ್ತವೆ. ಇದನ್ನು ಮುಖದ ಮೇಲೆ ಲೇಪಿಸುವುದರಿಂದ ತ್ವಚೆ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು ಮತ್ತು ಅದರ ಮೃದುತ್ವವನ್ನು ಸಹ ಕಾಪಾಡಬಹುದು.

English summary

5 ways intercourse makes you more beautiful

There are various ways which make the skin glow, but nothing can be compared to making love. Here are how intercourse is good for your skin.
X
Desktop Bottom Promotion