For Quick Alerts
ALLOW NOTIFICATIONS  
For Daily Alerts

ಆರಾಮ ನಿದ್ದೆಗೆ ಹತ್ತು ದಾರಿಗಳು

By poornima heggade
|

ನಿದ್ದೆ ಮಾಡುತ್ತಿರುವಾಗಲೂ ನೀವು ಏನನ್ನೋ ಸಾಧಿಸುತ್ತಿರುತ್ತೀರಿ. ನಿಷ್ಕ್ರೀಯತೆ ಜಗತ್ತಿನ ಅತ್ಯಂತ ಪ್ರಮುಖ ಮತ್ತು ಸುಂದರವಾದ ಅಂದಗಾಣಿಸುವ ಚಿಕಿತ್ಸೆಯಾಗಿದೆ. ರಾತ್ರೆಯ ಏಳು ಅಥವಾ ಎಂಟು ಗಂಟೆಗಳ ನಿದ್ದೆಯಿಂದ ನೀವು ತಾಜಾ ಆಗಿ ಕಾಣಿಸುವುದಲ್ಲದೇ ನಿಮ್ಮ ಕೂದಲು ಮುಖ ಮತ್ತು ದೇಹದ ಇನ್ನಿತರ ಭಾಗಗಳೂ ಒಮ್ಮೆ ಪುನಃ ಕ್ರಿಯಾಶೀಲವಾಗುತ್ತವೆ. ಇದಕ್ಕಾಗಿ ರಾತ್ರಿ ಸರಿಯಾಗಿ ನಿದ್ದೆ ಮಾಡಬೇಕು.

ನಾಮ್ಮ ನಿದ್ದೆಯ ವೇಳೆ ಮತ್ತು ಅವಧಿ ಒಂದೇ ರೀತಿಯಾಗಿದ್ದಷ್ಟೂ ಒಳ್ಳೆಯದು. ಇದಕ್ಕಾಗಿ ಸಂಶೊಧನೆಗಳು ಹೇಳುವಂತೆ ರಾತ್ರೆಯ 10 ರಿಂದ ಬೆಳಗ್ಗಿನ 7 ಗಂಟೆಗಳ ವರೆಗಿನ ಅವಧಿ ಸರಿಯಾಗಿರುತ್ತದೆ. ಈ ಅವಧಿಯ ಏಳು ಗಂಟೆಗಳ ನಿದ್ದೆ ಬಹಳ ಅಗತ್ಯ.

ವಾರದ ದಿನಗಳಲ್ಲಿ ಬಹಳ ಕೆಲಸ ಇರುತ್ತದೆ ಇದಕ್ಕಾಗಿ ವಾರಾಂತ್ಯದಲ್ಲಿ ಹೆಚ್ಚು ಹೊತ್ತು ಮಲಗಿ ಆ ನಿದ್ದೆಯನ್ನು ಸರಿದೂಗಿಸುತ್ತೇನೆ ಎಂದರೆ ಅದಾಗದು. ಇದು ಆದ ಹಾನಿಯನ್ನು ಮುಚ್ಚಿಹಾಕದು. ಇದರಂತೆ ಮಧ್ಯಾಹ್ನದ ನಿದ್ದೆಯೂ ಹೆಚ್ಚು ಪ್ರಯೋಜನಕಾರಿ ಅಲ್ಲ. ರಾತ್ರಿಯ ನಿದ್ದೆ ಸರಿಯಾಗಿದ್ದರಷ್ಟೇ ಎಲ್ಲವೂ ಸರಿಯಾಗಿರುತ್ತದೆ.

10 tips for beauty sleep

ಮನಸ್ಸಿನ ಗೊಂದಲಗಳನ್ನು ನಿವಾರಿಸಿಕೊಳ್ಳಿ: ಎಷ್ಟೇ ಪ್ರಮುಖವಾದ ನಿರ್ಧಾರಗಳೇ ಆಗಿರಲಿ ಅಥವಾ ಯಾವುದೇ ಯೋಚನೆಗಳೇ ಆಗಿರಲಿ ಒಂದು ರಾತ್ರಿಯ ಸಮಯವನ್ನಾದರೂ ನೀಡಿಯೇ ನೀಡುತ್ತವೆ. ಹಾಗಾಗಿ ರಾತ್ರಿಸ ಅವಧಿಯಲ್ಲಿ ಅಷ್ಟೆಲ್ಲಾ ಯೋಚಿಸುವ ಬದಲು ಆರಾಮವಾಗಿ ಮಲಗಿ ಮರುದಿನ ಆಲೋಚನೆ ಮಾಡಿದರೆ ಸಾಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಜೆಟ್‌ನಲ್ಲಿ ಬರುವ 9 ಸೌಂದರ್ಯ ಟಿಪ್ಸ್‌ಗಳು

ನಿಮ್ಮ ಗ್ಯಾಜೆಟ್ ಗೂ ವಿರಾಮ ನೀಡಿ. ಟಿ.ವಿ ಯನ್ನು ಆದಷ್ಟು ರಾತ್ರಿ ಹತ್ತು ಗಂಟೆಗೆ ಆಫ್ ಮಾಡಿ. ಎಷ್ಟೇ ಅನ್ನಿಸಿದರೂ ಕರೆ ಅಥವಾ ಮೆಸೇಜ್ ಮಾಡಬೇಡಿ. ಇದೇ ರೀತಿ ಸೋಷಿಯಲ್ ನೆಟ್ ವರ್ಕಿಂಗ್ ಗೂ ಹತ್ತರ ನಂತರ ವಿದಾಯ ಹೇಳಿ. ನಿಮ್ಮ ಮನಸ್ಸು ಎಲ್ಲಾ ಬಂಧನಗಳನ್ನು ಕಳೆದುಕೊಂಡಂತೆ ಇರಲಿ. ರಾತ್ರಿ ಮದ್ಯಪಾನ, ಧೂಮಪಾನ, ಕೆಫೇನ್ ಅಥವಾ ನಿಕೋಟಿನ್ ಕೂಡ ಬೇಡ. ನಿದ್ದೆಗೂ ಮುನ್ನ ಒಂದು ಗಂಟೆಗೆ ಮುನ್ನ ಈ ಎಲ್ಲಾ ವಸ್ತುಗಳಿಗೆ ಬೇಡ.

ಬಿಸಿನೀರಿನ ಸ್ನಾನ ಅಥವಾ ಕಾಲನ್ನು ನೀರಿನಿಲ್ಲಿ ಮುಳುಗಿಸಿಡುವ ಅಭ್ಯಾಸ ಇದ್ದರೂ ಒಳ್ಳೆಯದು.

ಇದೆಲ್ಲಾ ಮಾಡಿಯೂ ನಿದ್ದೆ ಬಾರದೇ ಇದ್ದರೆ ದಿನದ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ. ಜಾಗಿಂಗ್, ಯೋಗ ಮುಂತಾದ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ.

ಯಾವಾಗಲೂ ಬೆನ್ನಿನ ಮೇಲೆಯೇ ಮಲಗಿ, ಒಂದು ಬದಿಗೆ ಮಲಗುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ನಿಮಗೆ ಆರಾಮವಾಗುವ ತಲೆದಿಂಬು ಮತ್ತು ಹೊದಿಕೆಯನ್ನು ಬಳಸಿ. ರೇಷ್ಮೆ ಬಟ್ಟೆಯನ್ನು ಬಳಸಿದರೆ ಬೆಚ್ಚಗಿರುತ್ತದೆ ಹಾಗಾಗಿ ನಿಮಗೆ ಇಷ್ಟವಾದರೆ ಅದನ್ನೇ ಬಳಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಕರ್ಷಕ ಕೂದಲು ಬರಿ 5 ನಿಮಿಷಗಳಲ್ಲಿ

ಆದಷ್ಟು ತಿಂಡಿಗಳನ್ನು ತಿನ್ನಿವುದಾದರೆ ಬೇಗನೆ ತಿನ್ನಿ ಮಲಗಲು ಹೋಗುವ ಮುನ್ನ ಧಾನ್ಯ ಅಥವಾ ಸಕ್ಕರೆಯನ್ನು ತಿನ್ನುವ ಅಭ್ಯಾಸ ಬೇಡ. ಇವು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಜಾಗೃತವಾಗಿಡುತ್ತವೆ ಹಾಗಾಗಿ ನಿಮ್ಮ ಸುಲಭದ ನಿದ್ದೆಯನ್ನು ಕಷ್ಟಕರವನ್ನಾಗಿಸುತ್ತದೆ.

ದೊಡ್ಡದಾದ ಸದ್ದಿನ ಅಲಾರಾಂ ಗಳನ್ನು ಕಡಿಮೆ ಬಳಸಿ. ಎಚ್ಚರವಾಗಲು ಏನಾದರೂ ಅಲಾರಾಂ ಬೇಕು ಎಂದಾದರೆ ನಿಧಾನ ದನಿಯ ಅಲಾರಾಂ ಗಳನ್ನು ಬಳಸಿ.

ನೀವು ಮಲಗುವ ಮುನ್ನ ಓದುವ ಅಭ್ಯಾಸವನ್ನು ಹೊಂದಿದ್ದರೆ ಅದು ಮುದ ನೀಡುವ ಓದಾಗಿರಲಿ. ಬಹಳ ವಿಚಿತ್ರ ಮತ್ತು ಕುತೂಹಲಕಾರಿ ಕಾದಂಬರಿಗಳನ್ನು ಓದಬೇಡಿ.

ಪೂರ್ತಿ ಕತ್ತಲಲ್ಲಿ ಮಲಗಿಕೊಳ್ಳುವುದು ಒಳ್ಳೆಯದು ಆದರೆ ನೀವು ನಗರದಲ್ಲಿ ಇರುವವರಾದರೆ ಇದು ಸಾಧ್ಯವಿಲ್ಲ. ಹಾಗಾಗಿ ಕರ್ಟನ್ ಗಳು ಬಳಸಿ ಇದರಿಂದಲೂ ಬಹಳ ಪರಿಣಾಮ ಇಲ್ಲದಿದ್ದಲ್ಲಿ ಮುಖಕ್ಕೆ ಹಾಕುವ ಮಾಸ್ಕ್ ಗಳು ಲಭ್ಯವಿವೆ.

English summary

10 tips for beauty sleep

Even while you're snoozing, you're getting plenty accomplished. Slumber is nature's most powerful beauty treatment. Not only do the optimal seven to nine hours a night leave you looking luminous,
Story first published: Monday, January 20, 2014, 14:03 [IST]
X
Desktop Bottom Promotion