For Quick Alerts
ALLOW NOTIFICATIONS  
For Daily Alerts

ಕಿವಿ ನೋವಿಗೆ ಇಲ್ಲಿದೆ ತ್ವರಿತ ರೀತಿಯ 10 ಪರಿಹಾರ!

|

ಕಿವಿಯ ಮಧ್ಯಭಾಗದಲ್ಲಿ ದೀರ್ಘಕಾಲದ ನೋವು ಮತ್ತು ಉರಿಯೂತದೊಂದಿಗೆ ಸಂಯೋಜನೆಗೊಂಡು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಕಿವಿಯ ಸೋಂಕಾಗಿದೆ. ಸಣ್ಣ ಕಂಪಿಸುವ ಕಿವಿ ಮೂಳೆಗಳ ಖಾಲಿ ಸ್ಥಳ ಒಳಗೊಂಡಂತೆ ಕಿವಿ ತಮಟೆಯ ಹಿಂಭಾಗದಲ್ಲಿ ಕಿವಿಯ ಮಧ್ಯ ಭಾಗವನ್ನು ಇದು ಸಾಮಾನ್ಯವಾಗಿ ಹಾನಿ ಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಕಿವಿ ಸ್ವಚ್ಛಗೊಳಿಸಲು ಪರಿಣಾಮಕಾರಿ ಸಲಹೆಗಳು

ದೊಡ್ಡವರಿಗಿಂತ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಕಿವಿಯಲ್ಲಿರುವ ನೀರ ಪಸೆ ಅಥವಾ ಕಿವಿ ಕಾಲುವೆಯ ಮೇಲೆ ಉಂಟಾಗುವ ಸಣ್ಣ ಗಾಯ ಕಿವಿ ನೋವಿಗೆ ಕಾರಣ.. ದೀರ್ಘ ಕಾಲದ ಕಿವಿ ನೋವಿನ ಸಮಸ್ಯೆ ಕಿವಿಯಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ, ಅಂದರೆ ಕಿವಿ ಕೇಳಿಸದಿರುವಿಕೆ ಅಥವಾ ತೀವ್ರವಾದ ನೋವು.

ಕಿವಿ ನೋವನ್ನು ಉಲ್ಭಣಗೊಳ್ಳದಂತೆ ಮನೆ ಮದ್ದುಗಳ ಮೂಲಕ ಇದನ್ನು ನಿಯಂತ್ರಿಸಬಹುದು. ಆದರೂ ಸಮಸ್ಯೆ ಹಾಗೆಯೇ ಇದ್ದಲ್ಲಿ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಿವಿ ಚುಚ್ಚುವ ಮೊದಲು ಅನುಸರಿಸಬೇಕಾಗಿರುವ ಸಲಹೆ

ನೋವಿರುವ ಕಿವಿಗೆ ಬಿಸಿಯ ಸ್ಪರ್ಶ:

ನೋವಿರುವ ಕಿವಿಗೆ ಬಿಸಿಯ ಸ್ಪರ್ಶ:

ಬಿಸಿ ನೀರಿನ ಬಾಟಲ್ ಅಥವಾ ಬಿಸಿ ಪ್ಯಾಡನ್ನು ನೋವಿರುವ ಕಿವಿಯ ಮೇಲೆ ಒತ್ತಿ ಹಿಡಿಯಿರಿ. ಇದು ನೋವನ್ನು ನಿವಾರಿಸಿ ಕಿವಿ ನೋವನ್ನು ಶಮವನಗೊಳಿಸುತ್ತದೆ. ಬಿಸಿ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ಮುಳಗಿಸಿ ನೀರನ್ನು ಹಿಂಡಿ ಆ ಬಟ್ಟೆಯನ್ನು ಕಿವಿಯ ಮೇಲಿರಿಸಬಹುದು.

ಬೆಳ್ಳುಳ್ಳಿ ಎಣ್ಣೆ:

ಬೆಳ್ಳುಳ್ಳಿ ಎಣ್ಣೆ:

ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಬಿಂದುಗಳನ್ನು ನೊವಿರುವ ಕಿವಿಗೆ ಹಾಕಿ. ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಇದು ಕಡಿಮೆಗೊಳಿಸುತ್ತದೆ. ಈ ರೀತಿಯಲ್ಲೂ ಕಿವಿ ನೋವನ್ನು ಶಮನಗೊಳಿಸಬಹುದು.

ಟೀ ಟ್ರೀ ಎಣ್ಣೆ:

ಟೀ ಟ್ರೀ ಎಣ್ಣೆ:

ಟೀ ಟ್ರೀ ಎಣ್ಣೆಯ ಮೂರು ಬಿಂದುಗಳು, 2 ಸ್ಪೂನ್‌ನಷ್ಟು ಆಲೀವ್ ಆಯಿಲ್, 1 ಸ್ಪೂನ್ ಏಪಲ್ ಸೀಡರ್ ವಿನೇಗರ್ ಮತ್ತು 1 ಸ್ಪೂನ್‌ನಷ್ಟು ಕೊಲೈಡಲ್ ಸಿಲ್ವರ್ ಅನ್ನು ತೆಗೆದುಕೊಂಡು ಮಿಶ್ರ ಮಾಡಿಕೊಳ್ಳಿ. ನಿಮ್ಮ ತಲೆಯ ಕೆಳಗೆ ಒಂದು ಬಟ್ಟೆ ಹಾಸಿಕೊಂಡು ನೋವಿರುವ ಕಿವಿಯ ಬದಿಯಲ್ಲಿ ಮಲಗಿಕೊಳ್ಳಿ. ಡ್ರಾಪರ್ ಅನ್ನು ಬಳಸಿಕೊಂಡು ಈ ಮಿಶ್ರಣವನ್ನು ಕಿವಿಗೆ ಹಾಕಿಕೊಳ್ಳಿ. 5 ನಿಮಿಷ ಹಾಗೆಯೇ ಮಲಗಿರಿ ನಂತರ ಸರಿಯಾಗಿ ಕುಳಿತುಕೊಳ್ಳಿ. ನಂತರ ಮತ್ತೊಂದು ಬದಿಗೆ ಹೊರಳಿ ಮಲಗಿ. ಹೀಗೆ ಮಾಡುವುದರಿಂದ ಈ ಮಿಶ್ರಣ ನಿಮ್ಮ ಕಿವಿಯನ್ನು ಸರಿಯಾಗಿ ತಲುಪುತ್ತದೆ. 2 ದಿನಗಳಿಗೆ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿ.

ಈರುಳ್ಳಿ ರಸ:

ಈರುಳ್ಳಿ ರಸ:

ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ. ಮೈಕ್ರೋವೇವ್‌ನಲ್ಲಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಳ್ಳಿ. ಅದು ತಣ್ಣಗಾದ ನಂತರ, ರಸವನ್ನು ಹಿಂಡಿ ತೆಗೆಯಿರಿ. ನೋವಿರುವ ಕಿವಿಗೆ 2-3 ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಿವಿಗೆ ಸರಿಯಾಗಿ ಮದ್ದು ತಲುಪುತ್ತದೆ.

ಪರ್ಯಾಯವಾಗಿ, ಈರುಳ್ಳಿಯನ್ನು 1/2 ಗಂಟೆಗಳ ಕಾಲ ಹುರಿದುಕೊಳ್ಳಿ. ನಂತರ ಎರಡು ಸಮಾನ ಭಾಗಗಳನ್ನಾಗಿ ಮಾಡಿಕೊಳ್ಳಿ. ಒಂದು ಭಾಗವನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಕೊಳ್ಳಿ ನೋವಿರುವ ಕಿವಿಯ ಮೇಲ್ಭಾಗಕ್ಕೆ ಇದನ್ನು ಹಿಡಿದುಕೊಳ್ಳಿ. 10 ನಿಮಿಷಗಳ ನಂತರ ಇದೇ ವಿಧಾನವನ್ನು ಪುನರಾವರ್ತಿಸಿ.

ಬೇಸಿಲ್ ಎಲೆಗಳು:

ಬೇಸಿಲ್ ಎಲೆಗಳು:

4-5 ಬೇಸಿಲ್ ಎಲೆಗಳನ್ನು ತೆಗೆದುಕೊಂಡು ರಸ ಹಿಂಡಿಕೊಳ್ಳಿ. ಈ ರಸವನ್ನು ನೋವಿರುವ ಕಿವಿಯ ಸುತ್ತಲೂ ಲೇಪಿಸಿಕೊಳ್ಳಿ. ಕಿವಿಯ ಕಾಲುವೆಗೆ ರಸ ತಲುಪದಂತೆ ಜಾಗರೂಕರಾಗಿರಿ. ತೆಂಗಿನಣ್ಣೆಯ ಮಿಶ್ರಣದೊಂದಿಗೆ ಸಹ ಈ ರಸವನ್ನು ಕಿವಿ ನೋವಿಗೆ ನೀವು ಬಳಸಬಹುದು. ಪ್ರತೀ ದಿನ ಎರಡು ಬಾರಿ ಹೀಗೆ ಮಾಡಿ.

ಉಪ್ಪು:

ಉಪ್ಪು:

ಮನೆಯಲ್ಲಿ ಶೀಘ್ರವಾಗಿ ದೊರಕುವ ಸಾಮಾಗ್ರಿಯಾಗಿದೆ ಉಪ್ಪು. ಒಂದು ಕಪ್‌ನಷ್ಟು ಉಪ್ಪು ತೆಗೆದುಕೊಂಡು ಅದನ್ನು ಮೈಕ್ರೋವೇವ್‌ನಲ್ಲಿ 3-5 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ದಪ್ಪನೆಯ ಕಾಲುಚೀಲದಲ್ಲಿ ಬಿಸಿ ಮಾಡಿದ ಉಪ್ಪನ್ನು ಹಾಕಿ ಕಾಲುಚೀಲದ ತೆರೆದ ಕೊನೆಯನ್ನು ಕಟ್ಟಿಕೊಳ್ಳಿ. ಇದೀಗ ನೋವಿರುವ ಕಿವಿಯ ಬದಿಯಲ್ಲಿ ಮಲಗಿ ಕಿವಿಯ ಅಡಿಯಲ್ಲಿ ಕಾಲುಚೀಲವನ್ನು ಇಡಿ. 8-10 ಬಾರಿ ನಿಮಗೆ ಅವಶ್ಯವಿರುವಷ್ಟು ಬಾರಿ ಹೀಗೆ ಮಾಡಿ. ಇದು ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ.

ಆಲೀವ್ ಆಯಿಲ್:

ಆಲೀವ್ ಆಯಿಲ್:

ಪ್ಯಾನ್‌ನಲ್ಲಿ ಆಲೀವ್ ಆಯಿಲ್ ಬಿಸಿ ಮಾಡಿಕೊಳ್ಳಿ. ಇದರ ಕೆಲವು ಹನಿಗಳನ್ನು ನೋವಿರುವ ಕಿವಿಗೆ ಹಾಕಿ. ಎಣ್ಣೆ ತುಂಬಾ ಬಿಸಿಯಾಗಿರಬಾರದು. ಕಿವಿಯಲ್ಲಿ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಆಲೀವ್ ಆಯಿಲ್ ತಡೆಯುತ್ತದೆ. ಕಿವಿಗೆ ಹಾಕಿಕೊಳ್ಳುವ ಬಡ್ಸ್ ಬಳಸಿ ಆಲಿವ್ ಆಯಿಲ್ ಅನ್ನು ಕಿವಿಗೆ ಹಾಕಿಕೊಳ್ಳಬಹುದು.

ಲೆಮನ್ ಬಾಮ್:

ಲೆಮನ್ ಬಾಮ್:

ನೋವಿರುವ ಕಿವಿಗೆ ಲೆಮೆನ್ ಬಾಮ್ ಅನ್ನು ಹಚ್ಚಿ. ನೋವನ್ನು ತುರ್ತಾಗಿ ಉಪಶಮನ ಮಾಡುವ ಲೆಮನ್ ಬಾಮ್ ಕಿವಿ ನೋವನ್ನು ಶೀಘ್ರ ಗುಣಪಡಿಸುತ್ತದೆ.

ಮಾವಿನ ಎಲೆಯ ರಸ:

ಮಾವಿನ ಎಲೆಯ ರಸ:

ಮಾವಿನ ಎಲೆಯ ರಸ ಕೂಡ ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ. ತಾಜಾ ಹಾಗೂ ಮೃದುವಾದ ಮಾವಿನ ಎಲೆಯನ್ನು ಜಜ್ಜಿ ಅದರ ರಸ ತೆಗೆಯಿರಿ. ಸ್ವಲ್ಪ ಬಿಸಿ ಮಾಡಿಕೊಂಡು 3-4 ಹನಿ ಕಿವಿಗೆ ಹಾಕಿಕೊಳ್ಳಿ. ನೋವು ಕೂಡಲೇ ಪರಿಹಾರಗೊಳ್ಳುತ್ತದೆ. ದಿನದಲ್ಲಿ ಮೂರು ಅಥವಾ ನಾಲ್ಕು ಸಲ ಈ ವಿಧಾನವನ್ನು ಅನುಸರಿಸಬಹುದು.

ಬಿಳಿ ವಿನೇಗರ್:

ಬಿಳಿ ವಿನೇಗರ್:

ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬಿಳಿ ವಿನೇಗರ್ ಅನ್ನು ಮಿಶ್ರ ಮಾಡಿ. ನೋವಿರುವ ಕಿವಿಗೆ ಹಾಕಿ. ನಂತರ ಅದನ್ನು ಸರಿಯಾಗಿ ಒಣಗಿಸಿಕೊಳ್ಳಿ. ಇದು ಕಿವಿ ನೋವನ್ನು ಕೂಡಲೇ ಪರಿಹರಿಸುತ್ತದೆ.

English summary

10 Best Home Remedies for Ear Infection

A bacterial or viral infection in the middle ear, accompanied with chronic pain and inflammation is termed as an ‘ear infection’. It generally affects the middle part of the ear at the back of the eardrum, which consists of the empty space with tiny vibrating ear bones.
X
Desktop Bottom Promotion