For Quick Alerts
ALLOW NOTIFICATIONS  
For Daily Alerts

50ರ ನಂತರ ಹೆಂಗಸರ ದೇಹದ ಆರೈಕೆ

|

50ರ ನಂತರ ಒಳ್ಳೆಯ ಚರ್ಮವನ್ನು ಕಾಪಾಡಿಕೊಳ್ಳುವುದು ಕಷ್ಟ. ಆದ್ದರಿಂದ 50ರ ನಂತರ ನೀವು ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ವಯಸ್ಸಿನಲ್ಲೇ ನಿಮ್ಮ ಚರ್ಮವು ಕಳಾಹೀನವಾಗಿ ಸುಕ್ಕುಗಟ್ಟಲು ಆರಂಭವಾಗುತ್ತದೆ. ಆದ್ದರಿಂದ ನೀವು 50ರ ವಯಸ್ಸಿಗೆ ಬರುತ್ತಿದ್ದಂತೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಿ ಚರ್ಮದ ಆರೈಕೆ ಮಾಡಬೇಕಾದದ್ದು ಅವಶ್ಯಕ.

ಚರ್ಮವು ವಯಸ್ಸಾಗುವುದನ್ನು ತಡೆಯಲು ಮತ್ತು ಮಾಲಿನ್ಯದ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಹೆಚ್ಚಿನ ನೀರಿನ ಮತ್ತು ನೈಸರ್ಗಿಕ ಪರಿಹಾರಗಳ ಅಗತ್ಯವಿರುತ್ತದೆ. ಇಂದು ನಾವು ನಿಮಗೆ 50ರ ಹರೆಯದಲ್ಲಿ ನಿಮ್ಮ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಈ ಕೆಲವು ದೇಹದ ಆರೈಕೆಯ ಟಿಪ್ಸ್ ಗಳು ನಿಮ್ಮ ಚರ್ಮ ಜೋತುಬೀಳುವುದು ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ.

Women After 50: Body Care

ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳಬೇಡಿ
ನಿಮ್ಮ ದೇಹವನ್ನು ಹೆಚ್ಚಾಗಿ ಸೂರ್ಯನ ಬೆಳಕಿಗೆ ಒಡ್ಡದಂತೆ ಕಾಪಾಡಿಕೊಳ್ಳಿ. ಇದು ಕೇವಲ ಚರ್ಮವನ್ನು ಕಪ್ಪಾಗಿಸುವುದಿಲ್ಲ ಬದಲಿಗೆ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. 50ರ ನಂತರ ನಿಮ್ಮ ಚರ್ಮ ಹೆಚ್ಚು ಸೂಕ್ಷ್ಮ ಮತ್ತು ಮೃದುವಾಗುತ್ತದೆ. ಸೂರ್ಯನಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

ಎಕ್ಸ್ ಫೊಲಿಯೇಶನ್
ನಿಮ್ಮ ಚರ್ಮ ಎಷ್ಟೇ ಸೂಕ್ಷ್ಮವಾದರೂ ಎಲ್ಲ ವಯಸ್ಸಿನಲ್ಲೂ ಸತ್ತ ಚರ್ಮದ ಪದರಗಳನ್ನು ತೆಗೆದುಬಿಡುವುದು ಒಳ್ಳೆಯದು. 50ರ ನಂತರ ಹೆಂಗಸರು ಹೆಚ್ಚು ಒರಟಲ್ಲದ ನೈಸರ್ಗಿಕ ಪದಾರ್ಥಗಳಾದ ಸಕ್ಕರೆ ಅಥವ ಉಪ್ಪನ್ನು ಬಳಸಿ ಈ ಪದರಗಳನ್ನು ತೆಗೆದುಬಿಡಬೇಕು. ಇವು ಚರ್ಮಕ್ಕೆ ಒಳ್ಳೆಯದು.

ನೀರು
ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ನೀರು. ಇದು ದೇಹವು ನಿರ್ಜಲೀಕರಣದಿಂದ ಬಳಲದಂತೆ ತಡೆಯುತ್ತದೆ. ಮುಖವನ್ನು ಾಗಾಗ ತೊಳೆಯುವುದರಿಂದ ಚರ್ಮದ ಮೇಲಿರುಬಹುದಾದ ಕಲ್ಮಷವನ್ನು ಇದು ತೆಗೆದುಹಾಕುತ್ತದೆ.

ಫೇಸ್ ಪ್ಯಾಕ್
ಹೆಂಗಸರು 50ರ ನಂತರ ತಮ್ಮ ಚರ್ಮಕ್ಕೆ ಹೊಂದುವಂತಹ ನೈಸರ್ಗಿಕ ಫೇಸ್ ಪ್ಯಾಕ್ ಗಳನ್ನು ನಿಯಮಿತವಾಗಿ ಬಳಸುವುದು ಒಳ್ಳೆಯದು. ಸ್ಟ್ರಾಬೆರಿ ಮತ್ತು ಪಪ್ಪಾಯದಂತಹ ಫೇಸ್ ಪ್ಯಾಕ್ ಗಳು ಚರ್ಮಕ್ಕೆ ಒಳ್ಳೆಯದು.

ಚರ್ಮದ ಹೊರದಬ್ಬುವಿಕೆ
ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಮೊಡವೆ ಅಥವ ಮತ್ತೇನಾದರೂ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಮೊಡವೆಗೆ ಈ ವಯಸ್ಸಿನಲ್ಲಿ ಹಾಗಲಕಾಯನ್ನು ಔಷಧಿಯಾಗಿ ಬಳಸಬಹುದು.

ನೀವು 50ರ ಹರೆಯದಲ್ಲಿ ಈ ಕೆಲವು ಟಿಪ್ಸ್ ಗಳನ್ನು ತಪ್ಪದೆ ಅನುಸರಿಸಿದರೆ ನಿಮ್ಮ ಕಾಂತಿಯುಕ್ತ ಚರ್ಮದಲ್ಲಿ ಹರೆಯದ ಕಳೆಯನ್ನು ಕಾಪಾಡಿಕೊಳ್ಳಬಹುದು.

English summary

Women After 50: Body Care

After the age of 50, it becomes quite difficult to maintain good skin. Therefore, after the age of 50, you need to take extra care of your body.
Story first published: Wednesday, December 18, 2013, 16:57 [IST]
X
Desktop Bottom Promotion