For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್ ಅಂದದ ಕೈ ಕಾಲು ಬಯಸುವವರಿಗಾಗಿ ಮಾತ್ರ

|

ಹೆಚ್ಚಿನ ಸ್ತ್ರೀಯರು ತಮ್ಮ ಮುಖದ ಆರೈಕೆಗೆ ಕೊಡುವ ಗಮನವನ್ನು ಕೈ ಕಾಲುಗಳ ಅಂದವನ್ನು ಹೆಚ್ಚಿಸಲು ಕೊಡುವುದಿಲ್ಲ. ಮುಖ ಆಕರ್ಷಕವಾಗಿದ್ದು, ಕೈ ಕಾಲುಗಳು ಅಂದವಾಗಿ ಕಾಣದಿದ್ದರೆ ನೀವು ಅಷ್ಟೊಂದು ಆಕರ್ಷಕವಾಗಿ ಕಾಣುವುದಿಲ್ಲ. ಉಗುರುಗಳನ್ನು ಕತ್ತರಿಸಿದರೆ ಮಾತ್ರ ಸಾಲದು, ಅದಕ್ಕೊಂದು ಶೇಪ್ ಕೊಟ್ಟಿರಬೇಕು. ಕಾಲುಗಳು ಡ್ರೈಯಾದಂತೆ ಕಾಣಬಾರದು, ಮಾಯಿಶ್ಚರೈಸರ್ ಆಗಿರಬೇಕು, ಆಗ ಮಾತ್ರ ನಿಮ್ಮ ಪಾದಗಳು ಆಕರ್ಷಕವಾಗಿ ಕಾಣುವುದು.

ಕೈ ಕಾಲುಗಳ ಅಂದ ಹೆಚ್ಚಿಸಲು ಪೆಡಿಕ್ಯೂರ್ ಮಾಡಿಸುವುದು ಒಳ್ಳೆಯದು. ಈ ಪೆಡಿಕ್ಯೂರ್ ಅನ್ನು ನೀವೇ ಮಾಡಬಹುದು ಅಥವಾ ಬ್ಯೂಟಿ ಪಾರ್ಲರ್ ಗೆ ಹೋಗಿ ಮಾಡಿಸಬಹುದು.

ಇಲ್ಲಿ ನಾವು ನಾನಾ ಬಗೆಯ ಪೆಡಿಕ್ಯೂರ್ ಬಗ್ಗೆ ಹೇಳಿದ್ದೇವೆ. ನಿಮಗೆ ಯಾವುದು ಸೂಕ್ತವೋ ಆ ಪೆಡಿಕ್ಯೂರ್ ಮಾಡಿಸಿಕೊಳ್ಳಬಹುದು:

ಹಾಟ್ ವಾಟರ್ ಪೆಡಿಕ್ಯೂರ್

ಹಾಟ್ ವಾಟರ್ ಪೆಡಿಕ್ಯೂರ್

ಬಕೆಟ್ ಗೆ ಬಿಸಿ ನೀರನ್ನು ( ಕಾಲು ಹಾಕುವಷ್ಟು ಬಿಸಿಯಾದ) ಹಾಕಿ ಅದರಲ್ಲಿ ಉಪ್ಪು ಮತ್ತು ಸ್ವಲ್ಪ ಸುಗಂಧವಾಸನೆಯ ಎಣ್ಣೆ ಹಾಕಿ ಅದರಲ್ಲಿ ಕಾಲುಗಳನ್ನು 15 ನಿಮಿಷ ಇಡಿ. ನಂತರ ಕಾಲುಗಳನ್ನು ಸ್ಕ್ರಬ್ ಮಾಡಿ, ಉಗುರನ್ನು ನಿಂಬೆ ಹಣ್ಣಿನಿಂದ ತಿಕ್ಕಿದರೆ ಕಾಲುಗಳ ಅಂದ ಹೆಚ್ಚುವುದು. ಕೈ ಬೆರಳಿಗೂ ಇದೇ ರೀತಿ ಮಾಡಿ.

 ಫಿಶ್ ಪೆಡಿಕ್ಯೂರ್

ಫಿಶ್ ಪೆಡಿಕ್ಯೂರ್

ಫಿಶ್ ಪೆಡಿಕ್ಯೂರ್ ಕೆಲವು ಕಡೆಗಳಲ್ಲಿ ಮಾತ್ರ ಮಾಡುತ್ತರೆ. ಈ ಪೆಡಿಕ್ಯೂರ್ ನಲ್ಲಿ ಮೀನಿನ ತೊಟ್ಟಿಗೆ ಕಾಲನ್ನು ಇಳಿ ಬಿಟ್ಟು ಕೂರಬೇಕು. ಮೀನುಗಳು ಕಾಲಿನಲ್ಲಿರುವ ಕೊಳೆಯನ್ನು ತಿಂದು ಸುಂದರವಾಗಿ ಕಾಣುವುದು.

ಫ್ಲೋರಲ್ ಪೆಡಿಕ್ಯೂರ್

ಫ್ಲೋರಲ್ ಪೆಡಿಕ್ಯೂರ್

ಈ ಪೆಡಿಕ್ಯೂರ್ ಮಾಡುವಾಗ ನೀರಿನಲ್ಲಿ ಕಾಲು ನೆನೆಸುವ ನೀರಿನಲ್ಲಿ ಹೂವನ್ನು ಕೂಡ ಹಾಕಿ ಮಾಡುತ್ತಾರೆ. ಹೂಗಳು ನಿಮ್ಮ ಪಾದವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ.

ಆರ್ಮೋಥೆರಪಿ ಪೆಡಿಕ್ಯೂರ್

ಆರ್ಮೋಥೆರಪಿ ಪೆಡಿಕ್ಯೂರ್

ಈ ಪೆಡಿಕ್ಯೂರ್ ನಲ್ಲಿ ಆರ್ಮೋಥೆರಪಿಗೆ ಬಳಸುವ ಎಣ್ಣೆ ಮತ್ತು ಉಪ್ಪನ್ನು ಬಳಸಿ ಮಾಡಲಾಗುವುದು. ಈ ಪೆಡಿಕ್ಯೂರ್ ಕೈ, ಕಾಲುಗಳ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

 ವೈನ್ ಪೆಡಿಕ್ಯೂರ್

ವೈನ್ ಪೆಡಿಕ್ಯೂರ್

ವೈನ್ ತ್ವಚೆಗೆ ತುಂಬಾ ಒಳ್ಳೆಯದು. ವೈನ್ ನಿಂದ ಪೆಡಿಕ್ಯೂರ್ ಹಾಗೂ ಫೇಶಿಯಲ್ ಮಾಡಬಹುದು.

ಹಾಟ್ ಸ್ಟೋನ್ ಪೆಡಿಕ್ಯೂರ್

ಹಾಟ್ ಸ್ಟೋನ್ ಪೆಡಿಕ್ಯೂರ್

ಸ್ನಾಯು ಸೆಳೆತವಿರುವವರು ಈ ಪೆಡಿಕ್ಯೂರ್ ಮಾಡಿಸುವುದು ಒಳ್ಳೆಯದು. ಈ ಪೆಡಿಕ್ಯೂರ್ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ, ಇದರಿಂದ ಸ್ನಾಯು ಸೆಳೆತ ಕಡಿಮೆಯಾಗುವುದು.

anti tan ಪೆಡಿಕ್ಯೂರ್

anti tan ಪೆಡಿಕ್ಯೂರ್

ಬಿಸಿಲಿಗೆ ಹೋದರೆ ಮುಖ ಮಾತ್ರವಲ್ಲ ಕೈ, ಕಾಲುಗಳು ಕಪ್ಪಾಗುತ್ತದೆ. ಈ ಸನ್ ಟ್ಯಾನ್ ಹೋಗಲಾಡಿಸಲು ಈ anti tan ಪೆಡಿಕ್ಯೂರ್ ಮಾಡಿಸಬಹುದು.

ಫೂರ್ ಸ್ಪಾ ( ಮಾನಸಿಕ ಒತ್ತಡ ಕಡಿಮೆ ಮಾಡುವ ಪೆಡಿಕ್ಯೂರ್)

ಫೂರ್ ಸ್ಪಾ ( ಮಾನಸಿಕ ಒತ್ತಡ ಕಡಿಮೆ ಮಾಡುವ ಪೆಡಿಕ್ಯೂರ್)

ಈ ಪೆಡಿಕ್ಯೂರ್ ನಿಮ್ಮ ಕೈ ಕಾಲುಗಳನ್ನು ಸುಂದರವಾಗಿಸುತ್ತದೆ, ಮನಸ್ಸಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ, ವಿಶ್ರಾಂತಿಯ ಅನುಭವನ್ನು ನೀಡುತ್ತದೆ.

ಪಾರಾಫಿನ್ ಪೆಡಿಕ್ಯೂರ್

ಪಾರಾಫಿನ್ ಪೆಡಿಕ್ಯೂರ್

ಪಾರಾಫಿನ್ ಪೆಡಿಕ್ಯೂರ್ ಅನ್ನು ಮೇಣ ಬಳಸಿ ಮಾಡಲಾಗುವುದು. ನಿಮ್ಮ ಪಾದಗಳು ತುಂಬಾ ಒರಟಾಗಿದ್ದರೆ ಈ ಪೆಡಿಕ್ಯೂರ್ ಮಾಡಿಸುವುದು ಒಳ್ಳೆಯದು.

English summary

Which Is The Best Type Of Pedicure For You? | Tips For Beauty | ಯಾವ ಬಗೆಯ ಪೆಡಿಕ್ಯೂರ್ ನಿಮಗೆ ಇಷ್ಟ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

If you have pain in your feet, then you can go for a hot stone pedicure to soothe the pain. And if you just want tidy feet, then the best type of pedicure for you is the regular one. Here are some of the popular types of pedicures that you can get in foot spas these days.
X
Desktop Bottom Promotion