For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿದೆ ನಿಮ್ಮ ಅಂದದ ರಹಸ್ಯ

By Super
|

ದಿನವಿಡಿ ಮನೆಯಿಂದ ಹೊರಗೆ ಕೆಲಸ ಮಾಡಿ, ಅದರಲ್ಲೂ ಸೂರ್ಯನ ಕಿರಣಗಳ ಅಡಿಯಲ್ಲಿಯೇ ದಿನವನ್ನು ಕಳೆದರೆ ನಮ್ಮ ತ್ವಚೆಯಲ್ಲಿ ಬದಲಾವಣೆಗಳು ಉಂಟಾಗುವುದು ಸಹಜ. ಅದರಲ್ಲೂ ಸೂರ್ಯನ ಕಿರಣಗಳ ಜೊತೆಗೆ, ಹೊರಗಿನ ಧೂಳಿನ ಕಣಗಳೂ ಕೂಡ ನಿಮ್ಮ ತ್ವಚೆಯಲ್ಲಿ, ಸುಕ್ಕುಗಟ್ಟುವಿಕೆ, ಹಾಗೂ ಮುಖದಲ್ಲಿ ಕಲೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಕೂದಲಿನಲ್ಲಿಯೂ ಸಹ ಸಮಸ್ಯೆಗಳು ಕಂಡುಬರುತ್ತವೆ.

ಕೆಲವೊಮ್ಮೆ ಕೆಲಸದಿಂದ ಮರಳುತ್ತಿದ್ದ ಹಾಗೇ ಇನ್ನೊಂದು ಸಮಾರಂಭಕ್ಕೆ ಹೋಗಬೇಕೆಂದಿದ್ದರೆ ತಕ್ಷಣಕ್ಕೆ ಬ್ಯೂಟಿ ಪಾರ್ಲರ್ ಗಳಂತಹ ಸ್ಥಳಕ್ಕೆ ಹೋಗಿ ಸಿದ್ಧವಾಗುವುದು ಕಷ್ಟ. ಆದರೆ ಸಮಾರಂಭಗಳಿಗೆ ಭೇಟಿ ನೀಡುವಾಗ ನಿಮ್ಮ ತ್ವಚೆ ಸುಂದರವಾಗಿ ಕಾಣಬೇಕು ತಾನೇ? ಆದ್ದರಿಂದಲೇ ನಿಮ್ಮ ದಿನದ ಸುಸ್ತು ನಿಮ್ಮ ಮುಖದಲ್ಲಿ ಗೋಚರಿಸದಂತೆ ತಡೆಯಲು ನಿಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಸಾಕಷ್ಟು ಪರಿಹಾರಗಳಿವೆ!

ನಿಮ್ಮ ತ್ವಚೆಯ ಸೊಬಗನ್ನು ಹೆಚ್ಚಿಸುವ ಕೆಲವು ಸುಲಭ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

ಮೊಸರು

ಮೊಸರು

ಮುಖದಲ್ಲಿನ ಟ್ಯಾನ್ ಕಲೆ ಹಾಗೂ ಸನ್ ಬರ್ನ್ (ಬಿಸಿಲುಕಂದು) ಕಲೆಗಳನ್ನು ಹೋಗಲಾಡಿಸಲು ಸಹಾಯಕಾರಿ. ಸೂರ್ಯನ ಕಿರಣಗಳಿಂದ ಮುಖದಲ್ಲಿ ಕಲೆಗಳು ಉಂಟಾಗುತ್ತವೆ.

ಇವುಗಳನ್ನು ಹೋಗಲಾಡಿಸಲು ಮನೆಯಲ್ಲಿಯೇ ತಯಾರಿಸಿದ ಮೊಸರು ಬಳಸುವುದು ಅತ್ಯಂತ ಉತ್ತಮ. ಸನ್ ಬರ್ನ್ ಆದ ಸ್ಥಳಗಳಲ್ಲಿ ಮೊಸರನ್ನು ಹಚ್ಚಿ. ಇದು ಈ ಸುಟ್ಟ ಕಲೆಗಳನ್ನು ತೆಗೆಯುವುದು ಮಾತ್ರವಲ್ಲದೇ ಮುಖದಲ್ಲಿನ ಟ್ಯಾನ್ ಕಲೆಗಳನ್ನೂ ಹೋಗಲಾಡಿಸುತ್ತದೆ. ಪ್ಯಾಕೇಟ್ ಮೊಸರನ್ನು ಬಳಸುತ್ತಿದ್ದರೆ ತಯಾರಿಕಾ ದಿನಾಂಕವನ್ನು ಸರಿಯಾಗಿ ಗಮನಿಸಿ. ನಿಮ್ಮ ತ್ವಚೆ ಎಣ್ಣೆಯುಕ್ತ ತ್ವಚೆಯಾಗಿದ್ದರೆ ಅಥವಾ ಸೂಕ್ಷ್ಮವಾಗಿದ್ದರೆ ಮೊಸರನ್ನು ಬಳಸಬೇಡಿ.

ನಿಂಬೆ ರಸ ಮತ್ತು ಗ್ಲಿಸರೀನ್

ನಿಂಬೆ ರಸ ಮತ್ತು ಗ್ಲಿಸರೀನ್

ಟ್ಯಾನ್ ಹೋಗಲಾಡಿಸಲು ಮತ್ತು ಫೇರ್ ನೆಸ್/ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದು.

ನಿಂಬೆ ರಸ ಮತ್ತು ಗ್ಲಿಸರಿನ್

ನಿಂಬೆ ರಸ ಮತ್ತು ಗ್ಲಿಸರಿನ್

ಮೊಸರು ತ್ವಚೆಗೆ ಒಳ್ಳೆಯದೇ ಆದರೂ ಸಹ ಎಣ್ಣೆಯುಕ್ತ ತ್ವಚೆ ಅಥವಾ ಸೂಕ್ಷ್ಮ ತ್ವಚೆ ನಿಮ್ಮದಾಗಿದ್ದರೆ ಮೊಸರನ್ನು ಒಳಸುವುದು ಉತ್ತಮವಲ್ಲ. ಅಲ್ಲದೇ ಹಾಲಿನ ಯಾವುದೇ ಉತ್ಪನ್ನಗಳೂ ಕೂಡ ಇಂತಹ ತ್ವಚೆಗೆ ಒಳ್ಳೆಯದಲ್ಲ. ಆದ್ದರಿಂದ ಎಲ್ಲಾ ತ್ವಚೆಗೂ ಸರಿಹೊಂದುವಂತಹ ಗ್ಲಿಸರೀನ್ ಬೆರೆಸಿದ ನಿಂಬೆರಸ ಬಳಸುವುದು ಅತ್ಯಂತ ಉತ್ತಮ. ಅರ್ಧದಷ್ಟು ನಿಂಬೆರಸ ಹಾಗೂ ಅರ್ಧದಷ್ಟು ಗ್ಲಿಸರೀನ್ ನನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ.

ಮೊಸರು ತ್ವಚೆಗೆ ಒಳ್ಳೆಯದೇ ಆದರೂ ಸಹ ಎಣ್ಣೆಯುಕ್ತ ತ್ವಚೆ ಅಥವಾ ಸೂಕ್ಷ್ಮ ತ್ವಚೆ ನಿಮ್ಮದಾಗಿದ್ದರೆ ಮೊಸರನ್ನು ಒಳಸುವುದು ಉತ್ತಮವಲ್ಲ. ಅಲ್ಲದೇ ಹಾಲಿನ ಯಾವುದೇ ಉತ್ಪನ್ನಗಳೂ ಕೂಡ ಇಂತಹ ತ್ವಚೆಗೆ ಒಳ್ಳೆಯದಲ್ಲ. ಆದ್ದರಿಂದ ಎಲ್ಲಾ ತ್ವಚೆಗೂ ಸರಿಹೊಂದುವಂತಹ ಗ್ಲಿಸರೀನ್ ಬೆರೆಸಿದ ನಿಂಬೆರಸ ಬಳಸುವುದು ಅತ್ಯಂತ ಉತ್ತಮ. ಅರ್ಧದಷ್ಟು ನಿಂಬೆರಸ ಹಾಗೂ ಅರ್ಧದಷ್ಟು ಗ್ಲಿಸರೀನ್ ನನ್ನು ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ.

ನಿಂಬೆರಸ

ನಿಂಬೆರಸ

ಕೂದಲಿನ ಹೊಳಪು ಹೆಚ್ಚಿಸಲು ಸಹಾಯಕಾರಿ

ನಿಂಬೆರಸದಲ್ಲಿ ಸ್ವಲ್ಪ ಮಟ್ಟಿಗೆ ಆಮ್ಲೀಯ ಅಂಶವಿರುವುದರಿಂದ ಇದು ಕೂದಲಿನ ಹೊಳಪಿಗೆ ಅತ್ಯಂತ ಸಹಾಯಕ. ನಿಮಗೆ ನಿಮ್ಮಕೂದಲಿನ ಬಣ್ಣದಲ್ಲಿ ಹೊಳಪು ಬೇಕೆಂದಿದ್ದರೆ ಮುಕ್ಕಾಲು ಭಾಗ ನೀರಿಗೆ ಕಾಲು ಭಾಗ ನಿಂಬೆರಸವನ್ನು ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಇದು ಕೂದಲಿಗೆ ಬಳಸುವ ಯಾವುದೇ ಇತರ ಉತ್ವನ್ನಗಳಿಂಗಿಂತ ಹೆಚ್ಚು ಉತ್ತಮ ಹಾಗೂ ಪರಿಣಾಮಕಾರಿ!

ಸೌತೆಕಾಯಿ

ಸೌತೆಕಾಯಿ

ಕಣ್ಣುಗಳ ರಕ್ಷಣೆ

ನಿಮ್ಮ ಕಣ್ಣುಗಳ ಕೆಳಗಿನ ಕಪ್ಪು ಕಲೆ / ಡಾರ್ಕ್ ಸರ್ಕಲ್ ಗಳು ನಿಮ್ಮನ್ನು ಇನ್ನಷ್ಟು ದಣಿವಾದಂತೆ ಕಾಣುವಂತೆ ಮಾಡುತ್ತವೆ! ಆದ್ದರಿಂದ ನೀವು ಮಲಗುವ ಮುನ್ನ ಸೌತೆಕಾಯಿ ಚೂರು (ಸೈಲ್ಸ್) ಗಳನ್ನು ಕಣ್ಣಿನ ಮೇಲಿಟ್ಟುಕೊಂಡು ಮಲಗಿ ನಂತರ ಅರ್ಧ ಗಂಟೆ ಅಥವಾ 20 ನಿಮಿಷಗಳವರೆಗೆ ಹಾಗೆಯೇ ಬಿಡಿ. ಇದು ನಿಮ್ಮ ಕಣ್ಣಿನ ರಕ್ಷಣೆಗೆ ಅತ್ಯಂತ ಸಹಾಯಕಾರಿ.

ಟೀ ಬ್ಯಾಗ್

ಟೀ ಬ್ಯಾಗ್

ಪಫಿ ಐಸ್ / ಕಣ್ಣುಗಳ ರಕ್ಷಣೆ ಮತ್ತು ಕಾಲಿನ ದುರ್ಗಂಧ ನಿವಾರಕ

ಕಣ್ಣಿನ ದಣಿವನ್ನು ಹೋಗಲಾಡಿಸಲು ಮತ್ತು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಉಗುರುಬೆಚ್ಚಗಿನ ನೀರಿನಲ್ಲಿ ಟೀ ಬ್ಯಾಗ್ ನ್ನು ಅದ್ದಿ ಅದನ್ನು ನಿಮ್ಮ ಎರಡು ಕಣ್ಣುಗಳ ಮೇಲೆ ಇಡಿ. 20 ನಿಮಿಷಗಳವರೆಗೆ ಹಾಗೆಯೇ ಬಿಟ್ಟರೆ ದಣಿವಾರಿದ ಸುಂದರ ಕಣ್ಣು ನಿಮ್ಮದಾಗುತ್ತದೆ!

ಕಾಲುಗಳಲ್ಲಿ ದುರ್ಗಂಧವು ಕಾಣಿಸಿಕೊಳ್ಳುತ್ತಿದ್ದರೆ ನಾಲ್ಕರಿಂದ ಐದು ಟೀ ಬ್ಯಾಗ್ ಅಥವಾ ನಾಲ್ಕರಿಂದ ಐದು ಚಮಚ ಟೀ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದು ಬಿಸಿ ಆರುವವರೆಗೂ ಹಾಗೆಯೇ ಬಿಡಿ. ನಂತರ ಸುಮಾರು 30 ನಿಮಿಷಗಳವರೆಗೆ ನಿಮ್ಮ ಕಾಲನ್ನು ಈ ನೀರಿನಲ್ಲಿ ಅದ್ದಿರಿ. ನಂತರ ಕಾಲನ್ನು ಚೆನ್ನಾಗಿ ಒರೆಸಿ ಕಾಲಿನ ಪೌಡರನ್ನು ಹಚ್ಚಿ. ಹೀಗೆ ನಿರಂತರವಾಗಿ ಮಾಡಿದರೆ ನಿಮ್ಮ ಕಾಲಿನ ದುರ್ಗಂಧದ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು.

ಕಿತ್ತಳೆ ರಸ : ತ್ವಚೆಯ ಟ್ಯಾನ್ ಹೋಗಲಾಡಿಸಲು

ಕಿತ್ತಳೆ ರಸ : ತ್ವಚೆಯ ಟ್ಯಾನ್ ಹೋಗಲಾಡಿಸಲು

ಕಿತ್ತಳೆ ರಸದಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಟೋನರ್ ಆಗಿ ಕೆಲಸ ಮಾಡುತ್ತದೆ. ಈ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿದರೆ ಇದು ಮುಖದಲ್ಲಿನ ಕೊಳೆಯನ್ನು ಹೋಗಲಾಡಿಸುತ್ತದೆ. ಕಿತ್ತಳೆ ರಸಕ್ಕೆ ಅರ್ಧ ಚಮಚ ನಿಂಬೆರಸವನ್ನು ಸೇರಿಸಿ ಸ್ವಲ್ಪ ನೀರನ್ನು ಸೇರಿಸಿ ಮುಖಕ್ಕೆ ಹಚ್ಚಿ. ನಂತರ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಸರು, ಕಡ್ಲೆ ಹಿಟ್ಟು ಮತ್ತು ಅರಿಶಿನ : ತ್ವಚೆಯ ಸುಧಾರಣೆ

ಸುಂದರವಾದ, ಸ್ವಚ್ಛ ಹಾಗೂ ಹೊಳಪಿನ ತ್ವಚೆಗಾಗಿ ಒಂದು ಚಮಚ ಮೊಸರಿಗೆ ಅದೇ ಪ್ರಮಾಣದ ಕಡ್ಲೆ ಹಿಟ್ಟು ಹಾಗೂ ಅರಿಶಿನ ಸೇರಿಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆಯಿರಿ.

ವಿನೆಗರ್ : ತಲೆಹೊಟ್ಟು ನಿವಾರಕ

ವಿನೆಗರ್ : ತಲೆಹೊಟ್ಟು ನಿವಾರಕ

ವಿನೆಗರ್ ನ್ನು ನಿಮ್ಮ ತಲೆಗೆ ಚೆನ್ನಾಗಿ ತಿಕ್ಕಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹರ್ಬಲ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ತಲೆಹೊಟ್ಟಿನ ಸಮಸ್ಯೆ ಅತೀಯಾಗಿದ್ದರೆ ವಾರದಲ್ಲಿ ಮೂರು ಬಾರಿ ವಿನೆಗರ್ ನ್ನು ಬಳಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ಜೇನುತುಪ್ಪ ಮತ್ತು ಆಲೀವ್ ಎಣ್ಣೆ : ಹೇರ್ ಕಂಡೀಶನರ್ / ಕೂದಲಿನ ಹೊಳಪು

ಎರಡು ಚಮಚ ಜೇನು ಹಾಗೂ ಒಂದು ಚಮಚ ಆಲೀವ್ ಎಣ್ಣೆಯನು ಮಿಶ್ರಣ ಮಾಡಿ ನಿಮ್ಮ ಕೂದಲನ್ನು ಮಸಾಜ್ ಮಾಡಿ ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು ಹರ್ಬಲ್ ಶಾಂಪೂವನ್ನು ಬಳಸಿ ಕೂದಲನ್ನು ಚೆನ್ಣಾಗಿ ತೊಳೆಯಿರಿ.

ಬ್ಲಾಕ್ ಟೀ ಬ್ಯಾಗ್ : ತುಟಿಗಳ ರಕ್ಷಣೆ

ಬ್ಲಾಕ್ ಟೀ ಬ್ಯಾಗ್ : ತುಟಿಗಳ ರಕ್ಷಣೆ

ಬ್ಲಾಕ್ ಟೀ ಬ್ಯಾಗ್ ನ್ನು ಬಿಸಿ ನೀರಿನಲ್ಲಿ ಅದ್ದಿ ಆ ಬ್ಯಾಗ್ ನ್ನು ನಿಮ್ಮ ತುಟಿಗಳ ಮೇಲೆ ಇಟ್ಟುಕೊಳ್ಳಿ. ಟೀ ಬ್ಯಾಗ್ ನಿಂದ ನಿಮ್ಮ ತುಟಿಗಳನ್ನು ಮಸಾಜ್ ಮಾಡುತ್ತಿದ್ದಂತೆ ತುಟಿಗಳು ಮೃದುತ್ವವನ್ನು ಹೊಂದುತ್ತವೆ. ಈ ಪ್ರಕ್ರಿಯೆಯನ್ನು ಬೇಕಾದಷ್ಟು ಸಲ ಮಾಡಬಹುದು.

ಕೊತ್ತಂಬರಿ ಎಲೆಗಳು: ತುಟಿಗಳ ರಕ್ಷಣೆ

ಕೊತ್ತಂಬರಿ ಎಲೆಗಳ ರಸದಿಂದ ನಿಮ್ಮ ತುಟಿಗಳನ್ನು ಮಸಾಜ್ ಮಾಡಿದರೆ ತುಟಿಗಳು ಸುಂದರ ಹಾಗೂ ಮೃದುವಾಗಿ ಕಾಣಿಸುತ್ತದೆ.

ತುರಿದ ಆಲೂಗಡ್ಡೆ : ಕಪ್ಪು ವತ್ರುಲಗಳು / ವೃತ್ತಗಳು

ತುರಿದ ಆಲೂಗಡ್ಡೆ : ಕಪ್ಪು ವತ್ರುಲಗಳು / ವೃತ್ತಗಳು

ತ್ವಚೆಯ ಹೊಳಪಿಗೆ ಆಲೂಗಡ್ಡೆಯನ್ನು ಬಳಸುವುದು ಉತ್ತಮ. ಇದು ಕಣ್ಣಿನ ಕೆಳಗಿನ ಕಪ್ಪು ವೃತ್ತಗಳನ್ನು ಕಡಿಮೆಗೊಳಿಸುತ್ತದೆ. ಹಸಿ ಆಲೂಗಡ್ಡೆಯನ್ನು ತುರಿದು ಕಣ್ಣಿನ ಸುತ್ತಲೂ ಹಚ್ಚಿ. ಹದಿನೈದು ನಿಮಿಷಗಳವರೆಗೆ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ಮನೆಯಲ್ಲಿಯೇ ಇರುವ ಸಾಕಷ್ಟು ವಸ್ತುಗಳು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಸೌಂದರ್ಯವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತವೆ. ಕಡಿಮೆ ಖರ್ಚಿನಲ್ಲಿ ಆರೋಗ್ಯಕರವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಮನೆಮದ್ದುಗಳನ್ನು ಬಳಸಲು ನೀವೂ ಆರಂಭಿಸುತ್ತೀರಿ ತಾನೇ?

English summary

Using Kitchen Products To Improve Appearance

With a glam party to attend in a couple of hours, what do you do when aren’t exactly looking like lady-killer material? By using these readily available kitchen products, you can spruce up your appearance within minutes. And the price is free!
X
Desktop Bottom Promotion