For Quick Alerts
ALLOW NOTIFICATIONS  
For Daily Alerts

ಪರ್ಫೆಕ್ಟ್ ಬಾಡಿ ಕೇರ್ ಅಂದರೆ ಹೀಗಿರಬೇಕು

By Super
|

ಸುಂದರವಾಗಿ ಕಾಣಬೇಕೆಂಬ ಆಸೆ ಸ್ತ್ರೀಯರು ಮತ್ತು ಪುರುಷರು ಇವರೀರ್ವರ ಮನದಲ್ಲಿಯೂ ಚಿರಂತನವಾಗಿರುತ್ತದೆ. ಯುಕ್ತ ರೀತಿಯ ತ್ವಚೆಯ ಕಾಳಜಿ ಮತ್ತು ಕೇಶರಾಶಿಯ ಕಾಳಜಿಯು ಸರಿಯಾದ ರೀತಿಯಲ್ಲಿ ದೇಹಾರೋಗ್ಯದ ಕಾಳಜಿಯೊಂದಿಗೆ ಮಿಳಿತಗೊಂಡಾಗ ವ್ಯಕ್ತಿಗೆ ಸೌಂದರ್ಯ ಮತ್ತು ಉತ್ತಮ ನಿಲುವು, ಬಾಹ್ಯಸೌಂದರ್ಯ ದೊರೆಯುತ್ತದೆ.

ಹೆಚ್ಚಿನ ಜನರು ಸುಂದರವಾದ ತ್ವಚೆಗಾಗಿ ಹಣ ಮತ್ತು ಸಮಯವನ್ನು ವಿನಿಯೋಗಿಸುತ್ತಾರೆ. ಕೆಲವರು ಇದರಲ್ಲಿ ಯಶಸ್ವಿಗಳಾದರೂ ಕೂಡ ಕೆಲವರು ವಿಫಲರಾಗುತ್ತಾರೆ. ಕೆಲವೊಂದು ಪ್ರಯೋಗಗಳು ಅಡ್ಡಪರಿಣಾಮ ಉಂಟು ಮಾಡಿ ಇದ್ದ ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಎಲ್ಲಾ ನೇತ್ಯಾತ್ಮಕ ಪರಿಣಾಮಗಳನ್ನು ಮತ್ತು ದುಂದುವೆಚ್ಚವನ್ನೂ ತಪ್ಪಿಸಲು, ನಿಮ್ಮ ಶರೀರ ಮತ್ತು ತ್ವಚೆಯ ರಕ್ಷಣೆಗಾಗಿ ಪ್ರಾಕೃತಿಕ ವಿಧಾನಗಳನ್ನು ಅನುಸರಿಸುವುದು ಉತ್ತಮವಾಗಿದೆ.

ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಪ್ರಯತ್ನಿಸಿ ಹಾಗೂ ಕನ್ನಡಿಯಲ್ಲಿ ಕಾಣುವ ನಿಮ್ಮದೇ ಪ್ರತಿಬಿಂಬಕ್ಕೆ ಮನಸೋಲಿರಿ.

1 . ಸ್ಕ್ರಬ್ಬಿಂಗ್

1 . ಸ್ಕ್ರಬ್ಬಿಂಗ್

ಮೃತ ಜೀವಕೋಶಗಳನ್ನು ನಿವಾರಿಸಲು ಮತ್ತು ನಿಮ್ಮ ತ್ವಚೆಯ ಮೇಲೆ ಜೀವಾಣುಗಳ ಬೆಳವಣಿಗೆಯನ್ನು ತಡೆಗಟ್ಟಲು, ನಿಮ್ಮ ಶರೀರಕ್ಕೆ ನಿಯಮಿತವಾಗಿ ಸ್ಕ್ರಬ್ಬಿಂಗ್ ಮಾಡಿ.

2 . ನೀರು

2 . ನೀರು

ಪ್ರತಿದಿನವೂ ಕೂಡ ನೀವು ಕನಿಷ್ಟ 8 ರಿಂದ 10 ಲೋಟಗಳಷ್ಟು ನೀರು ಕುಡಿಯಿರಿ. ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.

3 . ಧೂಳಿನಿಂದ ದೂರವಿರಿ

3 . ಧೂಳಿನಿಂದ ದೂರವಿರಿ

ನೀವು ಅತಿಯಾಗಿ ಬೆವರುತ್ತೀರಾದರೆ, ನೀವು ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಒಳ್ಳೆಯದು. ಸ್ನಾನದ ಬಳಿಕ, ನಿಮ್ಮ ತ್ವಚೆಯು ಉಸಿರಾಡಲು ಸಹಕಾರಿಯಾಗುವಂತೆ, ಸಡಿಲವಾದ ಹತ್ತಿಯ ಬಟ್ಟೆಗಳನ್ನು ಆರಿಸಿಕೊಳ್ಳಿರಿ.

4. ಕೇಶದ ಆರೈಕೆ

4. ಕೇಶದ ಆರೈಕೆ

ಏರುತ್ತಿರುವ ಉಷ್ಣತೆ ಮತ್ತು ಮಾಲಿನ್ಯವು ನಿಮ್ಮ ಕೇಶದ ಆರೋಗ್ಯದ ಮೇಲೂ ಕೂಡ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಉತ್ತಮ ಕೇಶರಾಶಿಯನ್ನು ಕಾಪಾಡಿಕೊಳ್ಳಲು, ಎಣ್ಣೆ ಹಚ್ಚಿ ಮಸಾಜ್ ಮಾಡಿ ಮೃದುವಾದ ಶ್ಯಾಂಪೂ ಬಳಸಿ. ಗೆ ಶ್ಯಾಂಪೂವನ್ನು ಬಳಸುವಾಗ, ಅದಕ್ಕೆ ಒಂದು ಚಿಟಿಕೆಯಷ್ಟು ಅಡುಗೆ ಸೋಡಾವನ್ನು ಸೇರಿಸಿದರೆ ಒಳ್ಳೆಯದು.

5 . ಸನ್ ಸ್ಕ್ರೀನ್

5 . ಸನ್ ಸ್ಕ್ರೀನ್

ಪ್ರತಿದಿನವೂ ಒಂದು ಉತ್ತಮ ಸನ್ ಸ್ಕ್ರೀನ್ ಬಳಸುವುದು ಒಳ್ಳೆಯದು. ಆದರೆ, ಅಲರ್ಜಿಯನ್ನು ಮತ್ತು ಚರ್ಮದ ಮೇಲೆ ದದ್ದುಗಳುಂಟಾಗುವುದನ್ನು ತಡೆಯಲು ನಿಮ್ಮ ತ್ವಚೆಯ ಸ್ವರೂಪಕ್ಕನುಗುಣವಾದ ಅತ್ಯುತ್ತಮ ಸನ್ ಸ್ಕ್ರೀನ್ ಅನ್ನು ಕಂಡುಕೊಳ್ಳಿರಿ.

6 . ನಿಮ್ಮ ಕಾಲ್ಬೆರಳುಗಳ ಉಸಿರಾಟದತ್ತವೂ ಗಮನವಿರಲಿ

6 . ನಿಮ್ಮ ಕಾಲ್ಬೆರಳುಗಳ ಉಸಿರಾಟದತ್ತವೂ ಗಮನವಿರಲಿ

ಯಾವಾಗಲೂ ತೆರೆದ ಬೂಟುಗಳನ್ನೇ ಧರಿಸಿರಿ. ಇದು ನಿಮ್ಮ ಪಾದಗಳಿಗೆ ಸರಿಯಾದ ವಾಯು ಸಂಚಾರವನ್ನು ಅನುವು ಮಾಡಿಕೊಡುತ್ತದೆ ಮತ್ತು ನಿಮ್ಮ ಪಾದಗಳಿಂದ ಬರಬಹುದಾದ ದುರ್ವಾಸನೆಯನ್ನು ಹಾಗೂ ಫಂಗಸ್ ನ ಸೋಂಕುಗಳನ್ನು ತಡೆಯುತ್ತದೆ.

7. ಮೊಸರು

7. ಮೊಸರು

ಮೊಸರನ್ನು ಡಯಟ್ ನಲ್ಲಿ ಸೇರಿಸಿ. ಯಾಕೆಂದರೆ, ಇದು ಕೇವಲ ನಿಮ್ಮ ತ್ವಚೆಗೆ ಮರುಜೀವವನ್ನು ನೀಡುವುದು ಮಾತ್ರವೇ ಅಲ್ಲದೇ, ವಯಸ್ಸಾಗುವ ಪ್ರಕ್ರಿಯೆಯನ್ನೂ ಕೂಡ ನಿಧಾನಿಸುತ್ತದೆ.

8 . ಹೊಸ ರೀತಿಯ ಶೇವಿಂಗ್ ತಂತ್ರವನ್ನು ಅಳವಡಿಸಿಕೊಳ್ಳಿರಿ

8 . ಹೊಸ ರೀತಿಯ ಶೇವಿಂಗ್ ತಂತ್ರವನ್ನು ಅಳವಡಿಸಿಕೊಳ್ಳಿರಿ

ನೀವು ರೇಝರ್ ಬ್ಲೇಡ್ ಅನ್ನು ಉಪಯೋಗಿಸುವವರಾದರೆ, ಸ್ನಾನದ ವೇಳೆ, ಅದನ್ನು ನಿಮ್ಮ ತೋಳುಗಳು ಮತ್ತು ಕಾಲುಗಳ ಮೇಲೆ ಉಪಯೋಗಿಸುವ ಮೊದಲು ಕನಿಷ್ಟ 3 ನಿಮಿಷಗಳವರೆಗೆ ಕಾಯಿರಿ. ಬೆಚ್ಚಗಿನ ನೀರನ್ನು ಉಪಯೋಗಿಸಿರಿ. ಯಾಕೆಂದರೆ, ಇದು ನಿಮ್ಮ ಕೂದಲಿನ ಬುಡವನ್ನು ಸಡಿಲಿಸಲು ನೆರವಾಗುತ್ತದೆ ಹಾಗೂ ತ್ವಚೆಯನ್ನು ನುಣಪಾಗಿಸುತ್ತದೆ. ಇದಾದ ಬಳಿಕ ತಣ್ಣೀರಿಗೆ ಕೆಲವು ಹನಿಗಳಷ್ಟು ಆಸ್ಟ್ರಿಜೆಂಟ್ ಲೋಷನ್ ಅನ್ನು ಸೇರಿಸಿ ಮುಖಕ್ಕೆ ಹಾಕಿ.

9 . ರೇಷ್ಮೆಯಂತಹ ನಾಜೂಕಾದ ತಲೆದಿಂಬನ್ನು ಬಳಸಿರಿ

9 . ರೇಷ್ಮೆಯಂತಹ ನಾಜೂಕಾದ ತಲೆದಿಂಬನ್ನು ಬಳಸಿರಿ

ರೇಷ್ಮೆಯ ತಲೆದಿಂಬಿನ ಕವರನ್ನು ಉಪಯೋಗಿಸುವುದರಿಂದ, ನಿಮ್ಮ ಕೂದಲು ಮತ್ತು ದಿಂಬಿನ ಕವರಿನ ನಡುವಣ ಘರ್ಷಣೆಯು ತಪ್ಪುತ್ತದೆ. ಇಲ್ಲವಾದಲ್ಲಿ, ಇಂತಹ ಘರ್ಷಣೆಯು ನಿಮ್ಮ ಕೂದಲು ಘಾಸಿಗೊಳಗಾಗುವಂತೆ ಮಾಡುತ್ತದೆ ಮತ್ತು ಕೂದಲನ್ನು ಒರಟಾಗಿಸುತ್ತದೆ.

10 . ಟ್ಯಾನ್ ಆಗುವುದನ್ನು ತಡೆಗಟ್ಟಲು ಟಿಪ್ಸ್

10 . ಟ್ಯಾನ್ ಆಗುವುದನ್ನು ತಡೆಗಟ್ಟಲು ಟಿಪ್ಸ್

ಟ್ಯಾನ್ ಹೋಗಲಾಡಿಸಲು ಮೊಟ್ಟೆಯ ಬಿಳಿಯ ಭಾಗ, ಜೋಳದ ಹೂ, ಮತ್ತು ಲಿಂಬೆಯ ರಸದ ಮಿಶ್ರಣವನ್ನು ತ್ವಚೆಗೆ ಹಚ್ಚಿ ಅಥವಾ ಸ್ವಲ್ಪ ಆಲೂಗೆಡ್ಡೆಯ ಅಥವಾ ಲಿಂಬೆಯ ರಸವನ್ನು ಕಂದು ಬಣ್ಣವಿರುವ ತ್ವಚೆಯ ಭಾಗಕ್ಕೆ ಲೇಪಿಸಿ ಅದನ್ನು ನಿವಾರಿಸಿರಿ. ಒಂದು ವೇಳೆ ನಿಮಗೆ ಇದರಿಂದ ಉಪಯೋಗವಾಗದಿದ್ದರೆ, ಕೂಡಲೇ ತ್ವಚೆ ತಜ್ಞರ ಸಹಾಯವನ್ನು ಪಡೆಯಿರಿ.

11 . ಟೋಪಿ ಬಗ್ಗೆ ಎಚ್ಚರ

11 . ಟೋಪಿ ಬಗ್ಗೆ ಎಚ್ಚರ

ನೀವು ಟೋಪಿಯನ್ನು ಧರಿಸುವವರಾದರೆ, ಹಣೆಯಲ್ಲಿ ಜಿಡ್ಡಿನಂಶ ನಿಂತು ಮೊಡವೆಗಳು ಬರಬಹುದು. ಇದನ್ನು ತಡೆಗಟ್ಟಲು, ಒಂದು ಉತ್ತಮ ಕ್ಲೀನರ್ ( ಶುಭ್ರ ಬಟ್ಟೆ) ನಿಂದ ನಿಮ್ಮ ಹಣೆಯನ್ನು ಉಜ್ಜಿ ಬೆವರು, ಧೂಳು, ಮತ್ತು ಎಣ್ಣೆಪಸೆಯನ್ನು ನಿವಾರಿಸಿರಿ.

12 . ಆರೋಗ್ಯಯುತ ಪಾದ

12 . ಆರೋಗ್ಯಯುತ ಪಾದ

ನಿಮ್ಮ ಪಾದಗಳನ್ನು ಮುಚ್ಚಿದ ಬೂಟುಗಳೊಳಗೆ ತೂರಿಸುವ ಮೊದಲು, ಯಾವಾಗಲೂ ಫಂಗಸ್ ಪ್ರತಿಬಂಧಕ ಪುಡಿಯನ್ನು (anti -fungal powder) ಅವುಗಳಿಗೆ ಲೇಪಿಸಿರಿ. ಇದರ ಜೊತೆಗೆ, ಪಾದಗಳ ಮೃತ ಜೀವಕೋಶಗಳನ್ನು ನಿವಾರಿಸಲು ಪ್ಯೂಮಿಕ್ ಕಲ್ಲನ್ನು ಬಳಸಿರಿ ಮತ್ತು ತನ್ಮೂಲಕ ನಿಮ್ಮ ಪಾದಗಳಿಗೆ ಮರುಜೀವವನ್ನು ನೀಡಿರಿ.

13 . ಪ್ರೋಟೀನ್ ಯುಕ್ತ ಅಹಾರಕ್ರಮವನ್ನು ಅನುಸರಿಸಿರಿ

13 . ಪ್ರೋಟೀನ್ ಯುಕ್ತ ಅಹಾರಕ್ರಮವನ್ನು ಅನುಸರಿಸಿರಿ

ಮಾಂಸ, ಮೊಟ್ಟೆ, ಧಾನ್ಯಗಳು, ಹಾಲು, ಮತ್ತು ಗಿಣ್ಣು ಇವೇ ಮೊದಲಾದ ವಸ್ತುಗಳು ಸಮೃದ್ಧ ಪ್ರೋಟೀನ್ ಅನ್ನು ಹೊಂದಿದ್ದು, ಆರೋಗ್ಯಯುತ ಮತ್ತು ಕಾಂತಿಯುಕ್ತ ತ್ವಚೆಗಾಗಿ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿರಿ. ಈ ಪ್ರೋಟೀನ್ ಯುಕ್ತ ಆಹಾರವಸ್ತುಗಳು ಆರೋಗ್ಯಯುತ ಮೂಳೆ ಮತ್ತು ಹಲ್ಲುಗಳನ್ನು ಕಾಪಾಡಿಕೊಳ್ಳಲೂ ಸಹಕಾರಿಯಾಗಿವೆ.

14 . ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ

14 . ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ

ಸುಂದರವಾಗಿ ಕಾಣುವಂತಾಗಲು, ನಿಮ್ಮ ನಿತ್ಯಜೀವನದಲ್ಲಿ ಸಾಕಷ್ಟು ನಿದ್ದೆ ಮತ್ತು ನೀರನ್ನು ಪಡೆಯಿರಿ. ಈ ಎರಡು ಪ್ರಮುಖವಾದ ಅಂಶಗಳು, ನೀವು ಪ್ರಖರವಾದ, ಕಾಂತಿಯುಕ್ತ ತ್ವಚೆಯನ್ನು ಹೊಂದಲು ಸಹಕರಿಸುತ್ತವೆ.

15 . ಅತಿಯಾದ ಮೇಕಪ್ ನಿಂದ ದೂರವಿರಿ

15 . ಅತಿಯಾದ ಮೇಕಪ್ ನಿಂದ ದೂರವಿರಿ

ನಿಮ್ಮ ಮುಖಕ್ಕೆ, ಮೇಕಪ್ ಬಳಸುವಾಗ, ಅದು ಆದಷ್ಟು ಮಿತವಾಗಿರುವುದನ್ನು ಖಾತ್ರಿ ಮಾಡಿಕೊಳ್ಳಿ. ಮೇಕಪ್ ನ ಅತಿಯಾದ ಬಳಕೆಯು ನಿಮ್ಮ ತ್ವಚೆಯ ಮೇಲಿರುವ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ, ತ್ವಚೆಯು ಸುಕ್ಕಾಗಿ, ಸಡಿಲವಾಗುವಂತೆ ಮಾಡುತ್ತದೆ. ಜೊತೆಗೆ, ನೀವು ರಾತ್ರಿ ಮಲಗುವುದಕ್ಕೆ ಮುಂಚೆ, ನಿಮ್ಮ ಎಲ್ಲಾ ಮೇಕಪ್ ನಿವಾರಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.

16 . ಯಾವಾಗಲೂ CTM) ನಿಯಮವನ್ನು ಪಾಲಿಸಿರಿ

16 . ಯಾವಾಗಲೂ CTM) ನಿಯಮವನ್ನು ಪಾಲಿಸಿರಿ

CTM (Cleansing, Toning, Moisturising)

ನಿಮ್ಮ ತ್ವಚೆಯ ಗುಣಧರ್ಮಕ್ಕನುಗುಣವಾಗಿ ಒಂದು ಕ್ಲೆನ್ಸರ್ ಮತ್ತು ಟೋನರ್ ಅನ್ನು ಆರಿಸಿಕೊಳ್ಳಿ ಹಾಗೂ CTM ನಿಯಮವನ್ನು ದಿನನಿತ್ಯ ಪಾಲಿಸಿ. ಒಂದು ಒಳ್ಳೆಯ ಕ್ಲೆನ್ಸರ್ ತ್ವಚೆಯ ಎಲ್ಲಾ ನಿರ್ಜೀವ ಕೋಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದು ನಿಮ್ಮ ತ್ವಚೆಯ ಪ್ರಾಕೃತಿಕ ಎಣ್ಣೆಯ ಅಂಶವನ್ನೂ ಕೂಡ ತೆಗೆದು ಬಿಡುತ್ತದೆ. ಅದ್ದರಿಂದ, ಈ ಕೆಟ್ಟ ಪರಿಣಾಮಕ್ಕೆ ಪ್ರತಿಯಾಗಿ ಒಂದು ಒಳ್ಳೆಯ ಜಿಡ್ಡು ಮುಕ್ತ ಮಾಯಿಶ್ಚರೈಸರ್ ಅನ್ನು ತ್ವಚೆಗೆ ಬಳಸಿರಿ ಹಾಗೂ ತನ್ಮೂಲಕ ನಿಮ್ಮ ತ್ವಚೆಗೆ ಉತ್ತಮವಾದುದನ್ನು ನೀಡಿರಿ.

17 . ಯಾವಾಗಲೂ ಒಂದು ಕರವಸ್ತ್ರ (hand sanitiser) ಅನ್ನು ಜೊತೆಗಿರಿಸಿಕೊಳ್ಳಿರಿ

17 . ಯಾವಾಗಲೂ ಒಂದು ಕರವಸ್ತ್ರ (hand sanitiser) ಅನ್ನು ಜೊತೆಗಿರಿಸಿಕೊಳ್ಳಿರಿ

ಕೊಳಕು ಕೈಗಳಿಂದ ಪದೇ ಪದೇ ನಿಮ್ಮ ಮುಖವನ್ನು ಸ್ಪರ್ಶಿಸುವುದರಿಂದ, ನಿಮ್ಮ ಮುಖದ ಮೇಲೆ ಮೊಡವೆ ಮತ್ತು ಬಿರುಕುಗಳು ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ, ನೀವು ಹೊರಗಡೆ ಇದ್ದಾಗ ಕರವಸ್ತ್ರವನ್ನು ಹಿಡಿಯಿರಿ, ಮುಖವನ್ನು ಆಗಾಗ ಮುಟ್ಟಬೇಡಿ.

18 .ಎಕ್ಸ್ ಫೋಲೆಟ್

18 .ಎಕ್ಸ್ ಫೋಲೆಟ್

ಕನಿಷ್ಥ ಪಕ್ಷ ತಿಂಗಳಿಗೊಂದು ಬಾರಿಯಾದರೂ ಎಕ್ಸ್ ಫೋಲೆಟ್ ಮಾಡಿ. ಇದು ನಿಮ್ಮ ತ್ವಚೆಯ ಎಲ್ಲಾ ಕೊಳೆ, ಧೂಳು, ಮತ್ತು ಇತರ ಕಶ್ಮಲಗಳನ್ನು ನಿವಾರಿಸಲು ಸಹಕರಿಸುತ್ತದಲ್ಲದೇ, ನಿಮ್ಮ ತ್ವಚೆಗೆ ಆರೋಗ್ಯಯುತವಾದ ಕಾಂತಿಯನ್ನು ನೀಡುತ್ತದೆ.

19 . ನಿಮ್ಮ ಕೇಶರಾಶಿಯನ್ನು ಕಂಡೀಷನ್ ಮಾಡಿಕೊಳ್ಳಿರಿ

19 . ನಿಮ್ಮ ಕೇಶರಾಶಿಯನ್ನು ಕಂಡೀಷನ್ ಮಾಡಿಕೊಳ್ಳಿರಿ

ನಿಮ್ಮ ತಲೆಗೂದಲನ್ನು ತೊಳೆದ ನಂತರ, ಒಂದು ಒಳ್ಳೆಯ ಕಂಡೀಷನರ್ ಉಪಯೋಗಿಸಿ, ಅದನ್ನು ಕಂಡೀಷನ್ ಮಾಡಿರಿ. ಇದು ಮಾಲಿನ್ಯದ ಕಾರಣದಿಂದ, ತಲೆಗೂದಲು ಗುಂಗುರಾಗುವುದು ಮತ್ತು ಹಾಳಾಗುವುದನ್ನು ತಡೆಯುತ್ತದೆ. ಇದಕ್ಕಿಂತಲೂ ಮಿಗಿಲಾಗಿ, ಪದೇ ಪದೇ ನಿಮ್ಮ ಕೂದಲನ್ನು ಗಾಳಿ ಊದಿ ಒಣಗಿಸುವುದನ್ನು ಮಾಡಬೇಡಿರಿ.

20 . ನಿಮ್ಮ ಬೆನ್ನನ್ನೂ ಸಹ ಉಪಚರಿಸಿರಿ

20 . ನಿಮ್ಮ ಬೆನ್ನನ್ನೂ ಸಹ ಉಪಚರಿಸಿರಿ

ಆಕರ್ಷಣೀಯ, ಸೆಕ್ಸಿಯಾದ ಬೆನ್ನನ್ನು ಪಡೆಯಲು, ಬೆನ್ನಿಗೆ ಸ್ಕ್ರಬ್ಬಿಂಗ್ ಮಾಡಿ. ಪಪ್ಪಾಯಿ ಹಣ್ಣಿನ ರಸವನ್ನು ನಿಮ್ಮ ಬೆನ್ನಿನ ಮೇಲೆ 5 ರಿಂದ 10 ನಿಮಿಷಗಳ ಕಾಲ ಉಜ್ಜಿರಿ. ಈ ರೀತಿಯ ಉಪಚಾರವು ನಿಮ್ಮ ಬೆನ್ನಿನಲ್ಲಿರಬಹುದಾದ ನಿರ್ಜೀವ ಜೀವಕೋಶಗಳು ಮತ್ತು ಕೊಳೆ, ಧೂಳನ್ನು ನಿವಾರಿಸಲು ಸಹಕರಿಸುತ್ತದೆ.

English summary

Top 20 Tips To Be Beautiful In A Healthy Way

Being beautiful is a perennial wish women and men have in their minds. Proper skin care and hair care clubbed rightly with body care gives one beauty and good looks. Try these tips and fall in love with your reflection in the mirror... all over again.
X
Desktop Bottom Promotion