For Quick Alerts
ALLOW NOTIFICATIONS  
For Daily Alerts

ಅಂದದ ಕೈ ಮತ್ತು ಕಾಲುಗಳನ್ನು ಪಡೆಯಲು ಟಿಪ್ಸ್

|

ನಮ್ಮಲ್ಲಿ ಹೆಚ್ಚಿನವರು ಮುಖದ ಆರೈಕೆಗೆ ಕೊಡುವ ಗಮನವನ್ನು ಕಾಲಿನ ಆರೈಕೆಗೆ ಕೊಡುವುದಿಲ್ಲ. ಪರಿಣಾಮ ಬಿರುಕು ಅಥವಾ ಡ್ರೈ ಕಾಲನ್ನು ಪಡೆಯುವಿರಿ. ಕಾಲು ಮತ್ತು ಕೈ ಕೂಡ ನೋಡುಗರ ಗಮನವನ್ನು ಸೆಳೆಯುತ್ತದೆ. ಸ್ವಚ್ಛವಾದ, ಆಕರ್ಷಕವಾದ ಪಾದಗಳು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂಬುದನ್ನು ಮರೆಯಬೇಡಿ.

ಕಾಲಿನ ಮತ್ತು ಕೈಯ ಸೌಂದರ್ಯವನ್ನು ಹೆಚ್ಚಿಸಲು ಸ್ಪಾಗಳಿಗೆ ಹೋಗಿ ಪೆಡಿಕ್ಯೂರ್ ಮಾಡಿಸಬಹುದು. ಸುಮ್ಮನೆ ಬ್ಯೂಟಿಪಾರ್ಲರ್ ಗಳಿಗೆ ಹಣ ಸುರಿಯುವ ಬದಲು ನಿಮ್ಮ ಪಾದದ ಆರೈಕೆ ಬಗ್ಗೆ ಗಮನಹರಿಸಿದರೆ ಸಾಕು, ಅಂದದ ಕಾಲುಗಳನ್ನು ಪಡೆಯಬಹುದು.

ಹೆಚ್ಚಿನ ದುಡ್ಡು ಖರ್ಚಿಯಿಲ್ಲದೆ ಸುಂದರ ಪಾದಗಳನ್ನು ಪಡೆಯಬೇಕೆ? ಹಾಗಾದರೆ ಮುಂದೆ ಓದಿ:

 ನಿಮ್ಮ ಉಗುರುಗಳಿಗೆ

ನಿಮ್ಮ ಉಗುರುಗಳಿಗೆ

ಉಗುರು ಶೈನಿಯಾಗಿ ಕಾಣಬೇಕೆಂದರೆ ಅದಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ಪೆಟ್ರೋಲಿಯಂ ಜೆಲ್ಲಿ, ತೆಂಗಿನೆಣ್ಣೆ ಇವುಗಳನ್ನು ಹಚ್ಚಿ. ಪ್ರತೀ ಎರಡು ದಿನಕ್ಕೊಮ್ಮೆ ಉಗುರುಗಳಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿ. ಇದರಿಂದ ಉಗುರುಗಳು ಬಲವಾಗುವುದು ಮತ್ತು ಅವುಗಳ ಹೊಳಪು ಹೆಚ್ಚುವುದು.

ಚಪಾತಿ ಹಿಟ್ಟು ಕಲೆಸುತ್ತೀರಾ?

ಚಪಾತಿ ಹಿಟ್ಟು ಕಲೆಸುತ್ತೀರಾ?

ಚಪಾತಿಗೆ ಹಿಟ್ಟು ಕಲೆಸುವಾಗ ಸ್ವಲ್ಪ ಮಿಶ್ರಣ ಉಳಿದರೆ ಅದಕ್ಕೆ ಸ್ವಲ್ಪ ಹಾಲು ಮತ್ತು ನಿಂಬೆ ರಸ ಹಾಕಿ ಬೆರಳುಗಳಿಗೆ ಹಚ್ಚಿ ಕೆಲವು ನಿಮಿಷ ಇಟ್ಟು ನೀರಿನಿಂದ ತೊಳೆಯಿರಿ. ಇದು ನಿಮ್ಮ ಬೆರಳುಗಳಿಗೆ ಕ್ಲೆನ್ಸ್ ಮಾಡುತ್ತದೆ.

ನಿಂಬೆರಸ ಮತ್ತು ಸಕ್ಕರೆ

ನಿಂಬೆರಸ ಮತ್ತು ಸಕ್ಕರೆ

ನಿಂಬೆರಸಕ್ಕೆ ಒಂದು ಚಮಚ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿ ಅದನ್ನು ಬೆರಳುಗಳಿಗೆ ಹಚ್ಚಿ. ನಿಮ್ಮ ಉಗುರು ಬೆಳ್ಳಗೆ ಆಕರ್ಷಕವಾಗಿ ಕಾಣುತ್ತದೆ.

ಎಕ್ಸ್ ಫೋಲೆಟ್

ಎಕ್ಸ್ ಫೋಲೆಟ್

4 ಚಮಚ ಎಣ್ಣೆಗೆ 4 ಚಮಚ ಸಕ್ಕರೆ ಹಾಕಿ ಮಿಶ್ರಣ ಮಾಡಿ ಕೈ ಮತ್ತು ಕಾಲುಗಳಿಗೆ ಉಜ್ಜಿದರೆ ನಿರ್ಜೀವ ತ್ವಚೆ ಹೋಗುತ್ತದೆ, ಇದರಿಂದ ಕಾಲು ಮತ್ತು ಕೈ ಕಾಣಲು ಆಕರ್ಷಕವಾಗಿ ಕಾಣುತ್ತದೆ

ಸ್ಕ್ರಬ್

ಸ್ಕ್ರಬ್

ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಿ ಅದರಲ್ಲಿ ಕಾಲುಗಳನ್ನು 20 ನಿಮಿಷ ಇಡಿ. ನಂತರ ಪ್ಯೂಮಿಕ್ ಸ್ಟೋನ್ ನಿಂದ ಉಜ್ಜಿ, ಕಾಲುಗಳನ್ನು ತೊಳೆದು ಟವಲ್ ನಿಂದ ಒರೆಸಿ ನಂತರ ಕಾಲುಗಳಿಗೆ ಮಾಯಿಶ್ಚರೈಸರ್ ಹಚ್ಚಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೂ ಪಾದಗಳು ನೋಡಲು ಸುಂದರವಾಗಿರುತ್ತದೆ.

ಹಾಲು

ಹಾಲು

ಹೋಮ್ ಮೇಡ್ ಹ್ಯಾಂಡ್ ಸ್ಕ್ರಬ್ ಮಾಡಲು ಸ್ವಲ್ಪ ಓಟ್ಸ್ ಗೆ, 1 ಚಮಚ ಎಣ್ಣೆ, 1 ಕಪ್ ವಾಟರ್, ಅರ್ಧ ಚಮಚ ಹಾಲು ಹಾಕಿ ಮಿಶ್ರ ಮಾಡಿ ಆ ಪೇಸ್ಟ್ ಅನ್ನು ಕೈಗೆ ಹ್ಚಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಕೈಯ ಕಪ್ಪು ಬಣ್ಣ ಕಡಿಮೆಯಾಗುವುದು, ಚರ್ಮದ ನುಣುಪು ಹೆಚ್ಚುವುದು.

ಜೇನು, ಓಟ್ಸ್ , ನಿಂಬೆರಸ

ಜೇನು, ಓಟ್ಸ್ , ನಿಂಬೆರಸ

ಜೇನಿಗೆ ಓಟ್ಸ್ ಪುಡಿ ಹಾಕಿ ಅ್ವಲ್ಪ ನಿಂಬೆ ರಸ ಹಿಂಡಿ ಆ ಮಿಶ್ರಣದಿಂದ ಕೂಡ ಕೈ ಮತ್ತು ಕಾಲನ್ನು ಸ್ಕ್ರಬ್ ಮಾಡಿ ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಬಹುದು.

ಬಿರುಕು ಪಾದಗಳಿಂದ ಮುಕ್ತಿ

ಬಿರುಕು ಪಾದಗಳಿಂದ ಮುಕ್ತಿ

ಪಾದಗಳಲ್ಲಿರುವ ಬಿರುಕನ್ನು ಹೋಗಲಾಡಿಸಲು ದಿನಾ ಮಾಯಿಶ್ಚರೈಸರ್ ಮಾಡಿ, ಮೃದುವಾದ ಚಪ್ಪಲಿಗಳನ್ನು ಬಳಸಿ. ಈ ರೀತಿ ಮಾಡುವುದರಿಂದ ಕೈ ಮತ್ತು ಕಾಲುಗಳು ಆಕರ್ಷಕವಾಗಿ ಕಾಣುವುದು.

English summary

Tips To Get Beautiful Legs And Hand | Tips For Body care | ಅಂದದ ಕೈ ಮತ್ತು ಕಾಲುಗಳನ್ನು ಪಡೆಯಲು ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

We ignore our hands and feet, but it’s not too late to make amends. Here we give you 10 ways to revive your hands and legs without heading to the salon.
Story first published: Saturday, February 16, 2013, 10:59 [IST]
X
Desktop Bottom Promotion