For Quick Alerts
ALLOW NOTIFICATIONS  
For Daily Alerts

ಮಲಗುವ ಮುಂಚೆ ಹೀಗೆ ಮಾಡಲು ಮರೆಯದಿರಿ

By Super
|

ದಿನನಿತ್ಯ ನಮ್ಮ ಸೌಂದರ್ಯಕ್ಕೆ ಸಾಕಷ್ಟು ಬೆಲೆ ನೀಡುತ್ತೇವೆ. ಸುಂದರವಾಗಿ ಕಾಣಲು ಸಾಕಷ್ಟು ಹವಣಿಸುತ್ತೇವೆ. ನಾವು ಸುಂದರವಾಗಿ ಕಾಣಬೇಕು ಎಂದು ಹೊರಗೆ ಹೋಗುವಾಗ ಸಾಕಷ್ಟು ಮೇಕಪ್ ಮಾಡಿಕೊಂಡೆ ಹೋಗುತ್ತೇವೆ ಆದರೆ ಮೇಕಪ್ ಮಾಡಲು ತೆಗೆದುಕೊಂಡ ಕಾಳಜಿ ಅದನ್ನು ತೆಗೆಯುವಾಗ ಇರುವುದಿಲ್ಲ. ಮಲಗಲು ಹೋಗುವ ಮುನ್ನ ಕೂದಲು ಮತ್ತು ಚರ್ಮದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಅಗತ್ಯವಿದೆ. ಮುಖ ಮತ್ತು ಕೂದಲಿನ ಸೌಂದರ್ಯ ಕಾಪಾಡಲು ಇವುಗಳು ಕೂಡ ಕಾರಣವಾಗುತ್ತದೆ.

ದಿನನಿತ್ಯದ ಕೆಲಸದ ನಂತರ ಮಲಗಲು ಹೋಗುವ ಮೊದಲು ಬ್ರಶ್ ಮಾಡಿ, ವಿಟಮಿನ್ ಅಂಶ ತೆಗೆದುಕೊಳ್ಳುತ್ತೀರ? ಇಲ್ಲ ನೀವು ಹಾಗೆ ಮಾಡುವುದಿಲ್ಲ. ನಿಮ್ಮ ಕೂದಲು ಸಿಕ್ಕು ಕಟ್ಟಿಕೊಂಡಿದೆ, ಮುಖದ ಚರ್ಮ ಕಳೆಗುಂದಿದೆ ಆದರೆ ಅವುಗಳ ಬಗ್ಗೆ ನಿಮ್ಮ ಗಮನ ಇರುವುದಿಲ್ಲ. ನೀವು ಮಲಗಲು ಹೋಗುವ ಮುನ್ನ ಕೂದಲು ಮತ್ತು ಚರ್ಮದ ಮೇಲೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ.

1. ತಲೆಸ್ನಾನ

1. ತಲೆಸ್ನಾನ

ನಿಮ್ಮ ಕೂದಲು ಕೊಳೆಯಾಗಿದ್ದರೆ ಹಾಗೇ ಮಲಗಬೇಡಿ. ತಲೆ ಸ್ನಾನ ಮಾಡಿ ಒಣಗಿಸಿ ಮಲಗಿ ಇದರಿಂದ ನಿಮ್ಮ ಬೆಳಗಿನ ಸಮಯ ಕೂಡ ಉಳಿಯುತ್ತದೆ.

2. ಕೂದಲನ್ನು ಒಣಗಿಸಿ, ಹೇರ್ ಡ್ರೈಯರ್ ಬಳಸಿ ಒಣಗಿಸಬೇಡಿ

2. ಕೂದಲನ್ನು ಒಣಗಿಸಿ, ಹೇರ್ ಡ್ರೈಯರ್ ಬಳಸಿ ಒಣಗಿಸಬೇಡಿ

ಎರಡನೆಯದಾಗಿ ನೀವು ಒದ್ದೆ ಕೂದಲಿನೊಂದಿಗೆ ಮಲಗಬೇಡಿ.ನೀವು ಮಲಗುವ ಮುನ್ನ ನಿಮ್ಮ ಕೂದಲು ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ.

ತಲೆ ಬಾಚಿ

ತಲೆ ಬಾಚಿ

3.ನೀವು ಕೂದಲಿಗೆ ಬೆಳಗ್ಗಿನಿಂದ ಬಳಸಿದ ಎಲ್ಲವನ್ನು ಬಾಚಿ ತೆಗೆಯಿರಿ.

4.ಮಲಗುವ ವೇಳೆ ಸುಕ್ಕು ರಹಿತ ಕೂದಲನ್ನು ಖಾತ್ರಿ ಮಾಡಿಕೊಳ್ಳಿ.

5.ವಿಟಮಿನ್ ಇ

5.ವಿಟಮಿನ್ ಇ

ವಿಟಮಿನ್ ಇ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ.ವಿಟಮಿನ್ ಇ ಮಾತ್ರೆ ಕತ್ತರಿಸಿ ಅದನ್ನು ಕೂದಲಿಗೆ ಬಳಸಿ.ಕೂದಲು ಉದುರುವಿಕೆ,ಒಣ ನೆತ್ತಿ,ಸೀಳು ಕೂದಲು ಇವುಗಳಿಗೆಲ್ಲ ಇದು ಪರಿಹಾರ ನೀಡುತ್ತದೆ.

ಕೂದಲನ್ನು ಸಡಿಲವಾಗಿ ಕಟ್ಟಿ

ಕೂದಲನ್ನು ಸಡಿಲವಾಗಿ ಕಟ್ಟಿ

6.ನಿಮ್ಮ ಕೂದಲಿಗೆ ಜುಟ್ಟನ್ನು ಎತ್ತರದಲ್ಲಿ ಕಟ್ಟಿ ಇದರಿಂದ ನೆತ್ತಿಗೆ ಗಾಳಿ ದೊರಕುತ್ತದೆ.ತುಂಬಾ ಗಟ್ಟಿಯಾಗಿ ಕಟ್ಟುವುದನ್ನು ಕೂಡ ತಡೆಯಿರಿ.ನಿಮ್ಮ ಕೂದಲು ಉದ್ದ ಇದ್ದರೆ ಸಡಿಲವಾಗಿ ಕಟ್ಟುವುದು ಉತ್ತಮ.

7.ಕೂದಲನ್ನು ನೆತ್ತಿಯ ಬೈತಲೆಯ ಬುಡದಲ್ಲಿ ತನ್ನಿ.ಮೆದುವಾಗಿ ಬಾಚಿ ಮೇಲೆ ಒಂದು ಗಂಟು ಕಟ್ಟಿ.ಬೆಳಗ್ಗೆ ಎದ್ದಾಗ ನಿಮ್ಮ ಕೂದಲು ನೈಸರ್ಗಿಕವಾಗಿ ವಿರುದ್ಧ ದಿಕ್ಕಿನಲ್ಲಿ ಹೋಗುತ್ತದೆ.ಮತ್ತು ಸುಂದರವಾಗಿ ಕಾಣುತ್ತದೆ.

ಮುಖದ ಕಾಳಜಿ

ಮುಖದ ಕಾಳಜಿ

1. ಕ್ಲೆನ್ಸಿಂಗ್,ಸೂರ್ಯನಿಂದ ರಕ್ಷಣೆ ಮತ್ತು ಮೊಶ್ಚರೈಸರ್ ಇವು 3 ಮುಖ ಚರ್ಮ ಆಳ್ವಿಕೆಯ ಅಂಶಗಳು.

2. ಕ್ಲೆನ್ಸಿಂಗ್ ಲೋಷನ್ ಬಳಸಿ ನಿಮ್ಮ ಮುಖದಲ್ಲಿರುವ ಮೇಕಪ್ ಅನ್ನು ಸ್ವಚ್ಚಗೊಳಿಸಿ.

3. ಪ್ರತಿದಿನ ನಿಮ್ಮ ಮುಖವನ್ನು ಫೇಸ್ ವಾಶ್ ನಿಂದ ತೊಳೆಯಿರಿ.

4. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಮಾಯಿಶ್ಚರೈಸರ್ ಬಳಸಿ.

ಕಣ್ಣಿನ ಕಾಳಜಿ

ಕಣ್ಣಿನ ಕಾಳಜಿ

ಕಣ್ಣಿನ ಸುತ್ತಲು ಕಪ್ಪಾಗುವುದು ಕಂಡು ಬರುವುದು ಸಹಜ.ಆಂಟಿ-ಏಜಿಂಗ್ ಬಳಸುವುದನ್ನು ಮರೆಯದಿರಿ.

ಕೈ ಮತ್ತು ಪಾದಗಳು

ಕೈ ಮತ್ತು ಪಾದಗಳು

ನಿಮ್ಮ ಕೈ ಮತ್ತು ಕಾಲಿನ ಪಾದಗಳಲ್ಲಿ ಯಾವುದೇ ರೀತಿಯ ತೈಲ ಗ್ರಂಥಿಗಳು ಇಲ್ಲದಿರುವುದರಿಂದ ಅವುಗಳು ಬೇಗ ಒಣಗಿದಂತೆ ಮತ್ತು ಬೇಗ ವಯಸ್ಸಾದಂತೆ ಕಾಣುತ್ತದೆ.ಮುಖದ ಸೌಂದರ್ಯ ಹೆಚ್ಚಿಸುವ ಕಾರ್ಯದಲ್ಲಿ ಮಗ್ನರಾಗಿರುವ ಜನರು ಕೈ ಮತ್ತು ಕಾಲಿನ ಬಗ್ಗೆ ಹೆಚ್ಚು ಗಮನ ನೀಡಿರುವುದಿಲ್ಲ.ಆಲ್ಫಾ ಹೈಡ್ರೋಜನ್ ಆಮ್ಲಗಳು ಹೆಚ್ಚಾಗಿ ಇರುವ ಕ್ರೀಂಗಳನ್ನೂ ಕೈ ಮತ್ತು ಕಾಲುಗಳಿಗೆ ಬಳಸಿ.

English summary

Things To Remember Before Going To Bed

Is your hair and skin ready for bed just yet? You have to prep your skin and hair before you hit snooze. here we suggest some bedtime beauty ritual for you.
X
Desktop Bottom Promotion