For Quick Alerts
ALLOW NOTIFICATIONS  
For Daily Alerts

ವ್ಯಾಕ್ಸಿಂಗ್ ಮಾಡಿಸುವ ಮುನ್ನ ಈ ಅಂಶಗಳು ತಿಳಿದಿರಲಿ

|

ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್ ಜನಪ್ರಿಯ ವಿಧಾನ. ಇದು ಈಗೀನ ಟ್ರೆಂಡ್ ಅಲ್ಲ ಹಿಂದಿನ ಕಾಲದಿಂದಲೂ ಇದೆ. ಈಜಿಪ್ಟ್ ಮಹಿಳೆಯರು ಬೇಡದ ಕೂದಲನ್ನು ತೆಗೆಯಲು ಸರ್ಜರಿ ವ್ಯಾಕ್ಸ್ ಬಳಸುತ್ತಿದ್ದರಂತೆ. ಶೇವಿಂಗ್ ಬದಲು ವ್ಯಾಕ್ಸಿಂಗ್ ಮಾಡಿದರೆ ಕೂದಲು ಪುನಃ ಹುಟ್ಟಲು ಮೂರರಿಂದ ಎಂಟು ವಾರಗಳು ತೆಗೆದುಕೊಳ್ಳುತ್ತದೆ, ಅಲ್ಲದೆ ವ್ಯಾಕ್ಸಿಂಗ್ ತ್ವಚೆಯನ್ನೂ ಮೃದುವಾಗಿಸುತ್ತದೆ.

ವ್ಯಾಕ್ಸಿಂಗ್ ಬಳಸುವ ಮುನ್ನ ಯಾವ ರೀತಿಯ ವ್ಯಾಕ್ಸಿಂಗ್ ನಮಗೆ ಸೂಕ್ತ, ಯಾರು ವ್ಯಾಕ್ಸಿಂಗ್ ಮಾಡಿಸಬಾರದು, ಯಾವಾಗ ಮಾಡಿಸಬಾರದು, ವ್ಯಾಕ್ಸಿಂಗ್ ಮಾಡಿಸಿದ ನಂತರ ಹೇಗೆ ತ್ವಚೆ ಆರೈಕೆ ಮಾಡಬೇಕು ಎಂಬ ಅಂಶವನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆದ್ದರಿಂದ ವ್ಯಾಕ್ಸಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ:

ವ್ಯಾಕ್ಸಿಂಗ್ ವಿಧಾನಗಳು

ವ್ಯಾಕ್ಸಿಂಗ್ ವಿಧಾನಗಳು

ವಾರ್ಮ್ ವ್ಯಾಕ್ಸ್: ಇದು ಕೋಲ್ಡ್ ವ್ಯಾಕ್ಸ್ ಗಿಂತ ಹೆಚ್ಚು ಪರಿಣಾಮಕಾರಿ. ಪಾರ್ಲರ್ ಗಳಲ್ಲಿ ಈ ವಿಧಾನ ಬಳಸಿ ವ್ಯಾಕ್ಸ್ ಮಾಡುತ್ತಾರೆ.

ಕೋಲ್ಡ್ ವ್ಯಾಕ್ಸ್: ಇದು ಅಂಗಡಿಗಳಲ್ಲಿ ದೊರೆಯುತ್ತದೆ. ಮನೆಯಲ್ಲಿಯೇ ವ್ಯಾಕ್ಸ್ ಮಾಡಿಕೊಳ್ಳುವವರು ಇದನ್ನು ಬಳಸಬಹುದು.

ವ್ಯಾಕ್ಸಿಂಗ್ ಮಾಡುವ ಜನರಲ್ ವಿಧಾನ

ವ್ಯಾಕ್ಸಿಂಗ್ ಮಾಡುವ ಜನರಲ್ ವಿಧಾನ

ಕೂದಲು ಬೆಳೆಯುವ ವಿರುದ್ಧ ದಿಕ್ಕಿಗೆ ಬೇಡದ ಕೂದಲು ಇರುವ ಜಾಗದಲ್ಲಿ ವ್ಯಾಕ್ಸ್ ತೆಳು ಲೇಪನ ಮಾಡಬೇಕು. ನಂತರ ಬಟ್ಟೆ ಅಥವಾ ಪೇಪರ್ ತೆಗೆದುಕೊಂಡು ವ್ಯಾಕ್ಸ್ ಹಚ್ಚಿದ ಭಾಗದಲ್ಲಿ ಹಚ್ಚಿ ತಕ್ಷಣ ಅದನ್ನು ಎಳೆದು ತೆಗೆಯಬೇಕು. ಈ ವಿಧಾನದಿಂದ ಬೇಡದ ಕೂದಲನ್ನು ಹೋಗಲಾಡಿಸಬಹುದು ಹಾಗೂ ತ್ವಚೆಯೂ ಮೃದುವಾಗಿ, ಆಕರ್ಷಕವಾಗಿ ಕಾಣುವುದು.

ವ್ಯಾಕ್ಸ್ ಮಾಡಿಸುವಾಗ ಈ ಅಂಶಗಳನ್ನು ಗಮನಿಸಿ

ವ್ಯಾಕ್ಸ್ ಮಾಡಿಸುವಾಗ ಈ ಅಂಶಗಳನ್ನು ಗಮನಿಸಿ

*ನಿಮ್ಮ ಚರ್ಮಕ್ಕೆ ಸೂಕ್ತ ಎನಿಸುವ ವ್ಯಾಕ್ಸ್ ಅನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿರುವ ಲೇಬಲ್ ಬಗ್ಗೆ ಗಮನವಿರಲಿ.

*ವ್ಯಾಕ್ಸ್ ಅನ್ನು ಲೇಬಲ್ ನಲ್ಲಿ ಕೊಟ್ಟಿರುವ ಸೂಚನೆಯಂತೆ ಬಿಸಿ ಮಾಡಿ.(ತುಂಬಾ ಬಿಸಿ ಮಾಡಬೇಡಿ ಇದರಿಂದ ಚರ್ಮ ಸುಡಬಹುದು).

ಉಳಿದ ಟಿಪ್ಸ್ ಅನ್ನು ಮುಂದಿನ ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ.

ವ್ಯಾಕ್ಸಿಂಗ್

ವ್ಯಾಕ್ಸಿಂಗ್

*ವ್ಯಾಕ್ಸ್ ಹಚ್ಚುವ ಮೊದಲು ನಿಮ್ಮ ಕಾಲುಗಳನ್ನು ತೊಳೆದು ಒರೆಸಿಕೊಳ್ಳಿ.

* ವ್ಯಾಕ್ಸ್ ತಣ್ಣಗಾಗುವ ಮೊದಲು(ವ್ಯಾಕ್ಸ್ ಸ್ವಲ್ಪ ಬಿಸಿ ಇರಬೇಕು)ಅದನ್ನು ಬೇಡದ ಕೂದಲಿನ ಮೇಲೆ ಹಚ್ಚಿ.

*ಈಗ ಹಚ್ಚಿದ ವ್ಯಾಕ್ಸ್ ಮೇಲೆ ಹತ್ತಿ ಬಟ್ಟೆ ಅಥವಾ ಸ್ಟ್ರಿಪ್ ಅನ್ನು ಹಾಕಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ.

*ನಂತರ ಅದನ್ನು ನಿಮ್ಮ ಬೇಡದ ಕೂದಲಿನ ವಿರುದ್ಧ ದಿಕ್ಕಿಗೆ ಒಂದೇ ಬಾರಿ ಎತ್ತಿಬಿಡಿ. ನೇರವಾಗಿ ಎತ್ತಬೇಡಿ ಅದು ಹೆಚ್ಚು ನೋವು ನೀಡುತ್ತದೆ.

ವ್ಯಾಕ್ಸಿಂಗ್ ಬಗ್ಗೆ ಕೆಲ ಅಂಶಗಳು

*ರಿಲಾಕ್ಸ್ ಎನಿಸಲು ವ್ಯಾಕ್ಸ್ ಮಾಡಿದ ಜಾಗದಲ್ಲಿ ಒಂದು ಒದ್ದೆ ಬಟ್ಟೆ ಹಾಕಿ.

*ಕಾಲು,ಕೈ ಎಲ್ಲಾ ಕಡೆಗಳಲ್ಲೂ ವ್ಯಾಕ್ಸ್ ಮಾಡಿ ಮುಗಿಸುವವರೆಗೂ ಇದೇ ವಿಧಾನವನ್ನು ಪುನಃ ಮಾಡಿ.

*ಎಲ್ಲಾ ಕಡೆ ತೆಗೆದಾದ ನಂತರ ಮಾಯಿಶ್ಚರೈಸರ್ ಅಥವಾ ಕ್ರೀಂ ಹಚ್ಚಿ.

ಮುಖ ಮತ್ತು ಹುಬ್ಬಿಗೆ ಮಾಡುವ ವ್ಯಾಕ್ಸ್ ಅನ್ನು ಪ್ರೊಫೆಶನಲ್ಸ್ ಜೊತೆ ಮಾಡಿಸಿಕೊಳ್ಳುವುದು ಸೂಕ್ತ ಮನೆಯಲ್ಲಿ ಮಾಡುವುದರಿಂದ ತೊಂದರೆ ಆಗಬಹುದು.

ಎಚ್ಚರಿಕೆ

ಎಚ್ಚರಿಕೆ

* ಮಧುಮೇಹ ಮತ್ತು ರಕ್ತ ಸಂಚಲನದ ತೊಂದರೆ ಇದ್ದವರು ಇದನ್ನು ಮಾಡದಿರುವುದು ಸೂಕ್ತ.

*Retin-A,Renova,Differin ಮತ್ತು Isotretinoin ತೆಗೆದುಕೊಳ್ಳುವ ವ್ಯಕ್ತಿಗಳು ಈ ವಿಧಾನವನ್ನು ಆಯ್ಕೆ ಮಾಡದಿರಲು ಸಲಹೆ ನೀಡಲಾಗಿದೆ.

ಸನ್ ಬರ್ನ್, ಗುಳ್ಳೆಗಳು, ಮೊಡವೆ, ಮಚ್ಚೆಗಳಿರುವ ಜಾಗಗಳಿಗೆ ವ್ಯಾಕ್ಸ್ ಬಳಸದಿರುವುದು ಉತ್ತಮ.

*ಹರಿದ ಚರ್ಮ ಅಥವಾ ಉಬ್ಬಿರುವ ಸ್ಥರಗಳ ಮೇಲೆ ವ್ಯಾಕ್ಸ್ ಹಚ್ಚಬೇಡಿ.

ಉಪಯೋಗಗಳು

ಉಪಯೋಗಗಳು

ಬೇರೆ ವಿಧಾನಗಳಿಗೆ ಹೋಲಿಸಿದರೆ ವ್ಯಾಕ್ಸ್ ನಿಂದ ಕೂದಲು ನಿಧಾನವಾಗಿ ಹುಟ್ಟುತ್ತದೆ ಮತ್ತು ಚರ್ಮ ಮೃದು ಆಗುತ್ತದೆ. ವ್ಯಾಕ್ಸ್ ವಿಧಾನದಿಂದ ಕೂದಲು ಬೆಳೆಯಲು ಮೂರರಿಂದ ಎಂಟು ವಾರಗಳು ಬೇಕಾಗುತ್ತವೆ.

*ಬೇರೆ ವಿಧಾನಗಳಾದ ಶೇವಿಂಗ್ ಗೆ ಹೋಲಿಸಿದರೆ ವ್ಯಾಕ್ಸ್ ನಿಂದ ಯಾವುದೇ ಹಾನಿ ಆಗುವುದಿಲ್ಲ.

*ಇದು ಬೇಡದ ಕೂದಲನ್ನು ತೆಗೆಯುತ್ತದೆ,ಚರ್ಮವನ್ನು ಮೃದು ಮಾಡುತ್ತದೆ ಮತ್ತು ಚರ್ಮದ ಡೆಡ್ ಸೆಲ್ಸ್ ಅನ್ನು ಕೂಡ ತೆಗೆದುಹಾಕುತ್ತದೆ.

* ನಿಯಮಿತವಾಗಿ ವ್ಯಾಕ್ಸಿಂಗ್ ಮಾಡುವುದರಿಂದ ಕೂದಲ ಬೆಳವಣಿಗೆ ಕಡಿಮೆ ಆಗುತ್ತದೆ.

ನ್ಯೂನ್ಯತೆಗಳು

ನ್ಯೂನ್ಯತೆಗಳು

* ಇದು ಕೂದಲನ್ನು ತೆಗೆಯುವ ತಾತ್ಕಾಲಿಕ ವಿಧಾನ,ಶಾಶ್ವತವಾಗಿ ಕೂದಲನ್ನು ತೆಗೆಯುವುದಿಲ್ಲ.

*ಹತ್ತಿ ಬಟ್ಟೆಯಿಂದ ವ್ಯಾಕ್ಸ್ ಕೀಳುವಾಗ ಚರ್ಮಕ್ಕೆ ತುಂಬಾ ನೋವಾಗುತ್ತದೆ.

*ಬೇರೆ ವಿಧಾನಗಳಾದ ಶೇವಿಂಗ್ ಗೆ ಹೋಲಿಸಿದರೆ ವ್ಯಾಕ್ಸಿಂಗ್ ಸ್ವಲ್ಪ ದುಬಾರಿ.

English summary

The Facts Must Know About Waxing

Waxing is a most popular and temporary method for removal of unwanted hair. This method is not a modern one; this is an ancient method where ancient Egyptian women used sugary wax to remove unsightly hair.
X
Desktop Bottom Promotion