For Quick Alerts
ALLOW NOTIFICATIONS  
For Daily Alerts

ತ್ವಚೆ ಬಿರುಕು ಬಿಡುವುದನ್ನು ತಡೆಯಬೇಕೆ?

|

ಚಳಿಗಾಲ ಬಂತೆಂದರೆ ಕಾಲು ಮತ್ತು ಕೈಯ ಆರೈಕೆಗೆ ಸ್ವಲ್ಪ ಅಧಿಕವೇ ಗಮನ ಕೊಡಬೇಕು. ಇಲ್ಲದಿದ್ದರೆ ಕೈ ಮತ್ತು ಕಾಲುಗಳ ತ್ವಚೆ ಒಡೆಯಲಾರಂಭಿಸುತ್ತದೆ, ತನ್ನ ನುಣಪನ್ನು ಕಳೆದುಕೊಂಡು ದೇಹ ಕಪ್ಪಾಗುವುದು. ಆದ್ದರಿಂದ ಚಳಿಗಾಲದಲ್ಲಿ ತ ತ್ವಚೆ ಬಗ್ಗೆ ಸ್ಪೆಷಲ್ ಕೇರ್ ತೆಗೆದುಕೊಳ್ಳುವುದು ಒಳ್ಳೆಯದು.

ಈ ಚಳಿಗಾಲದಲ್ಲಿ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರಬೇಕೆಂದು ನೀವು ಬಯಸುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು:

Steps To Soften Palms And Feet

ಬಿಸಿ ನೀರಿನಲ್ಲಿ ಕಾಲುಗಳನ್ನು ನೆನೆ ಹಾಕಿ ತೊಳೆಯುವುದು
ಅಗಲವಾದ ಬಾಯಿ ಇರುವ ಬಕೆಟ್ ಗೆ ಹದ ಬಿಸಿ ನೀರು ಹಾಕಿ ಅದರಲ್ಲಿ ಕಾಲುಗಳನ್ನು 10 ನಿಮಿಷ ಕಾಲ ನೆನೆಸಿ ನಂತರ ಬ್ರೆಷ್ ಹಾಕಿ ಉಜ್ಜಿ ತೊಳೆದು, ನಂತರ ಮಾಯಿಶ್ಚರೈಸರ್ ಹಚ್ಚಿದರೆ ಪಾದಗಳು ಒಡೆಯುವುದನ್ನು ತಪ್ಪಿಸಬಹುದು.

ಬಿಸಿ ನೀರಿನಲ್ಲಿ
ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಒಳ್ಳೆಯದು. ಅದರಲ್ಲೂ ಎಣ್ಣೆ ಮಸಾಜ್ ಹಚ್ಚಿ ಸ್ನಾನ ಮಾಡಿದರೆ ಒಳ್ಳೆಯದು.

ನಿಂಬೆ ಹಣ್ಣಿನಿಂದ ಸ್ಕ್ರಬ್
ನಿಂಬೆ ಹಣ್ಣಿನಿಂದ ಕೈ ಮತ್ತು ಕಾಲುಗಳನ್ನು ಸ್ಕ್ರಬ್ ಮಾಡಿ ಅರ್ಧ ಗಂಟೆಯ ಬಳಿಕ ತೊಳೆಯಿರಿ. ಹೀಗೆ ಮಾಡಿದರೆ ಕೈ ಬೆಳ್ಳಗಾಗುವುದು.

ಸ್ಕ್ರಬ್ಬಿಂಗ್, ಮ್ಯಾನಿಕ್ಯೂರ್, ಪೆಡಿಕ್ಯೂರ್
ತಿಂಗಳಿಗೊಮ್ಮೆ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡಿಸಿದರೆ ಕಾಲು ಮತ್ತು ಕೈಗಳ ಹೊಳಪು ಹೆಚ್ಚುವುದು. ಚಳಿಗೆ ತ್ವಚೆಯಲ್ಲಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ.

ಎಣ್ಣೆ
ಒಂದು ವೇಳೆ ತ್ವಚೆ ಡ್ರೈಯಾಗುತ್ತಿದ್ದರೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ತ್ವಚೆ ಮೃದುವಾಗುವುದಲ್ಲದೆ ತ್ವಚೆಯೂ ಬಿರುಕು ಬಿಡುವುದಿಲ್ಲ. ಹೊರಗಡೆ ಹೋಗುವಾಗ ಮಾಯಿಶ್ಚರೈಸರ್ ಹಚ್ಚಿ.

ದೂಳಿನಲ್ಲಿ ಓಡಾಡಬೇಡಿ
ದೂಳಿನಲ್ಲಿ ಓಡಾಡಿದರೆ ಪಾದಗಳಲ್ಲಿ ಬಿರುಕು ಹೆಚ್ಚಾಗುವುದು. ಅದರಲ್ಲಿ ಮಲಗುವ ಮುಂಚೆ ಪಾದಗಳನ್ನು ಸ್ವಚ್ಛಗೊಳಿಸಿ, ಮಾಯಿಶ್ಚರೈಸರ್ ಹಚ್ಚಿ ಮಲಗಿ, ಇದರಿಂದ ಪಾದಗಳಲ್ಲಿ ಬಿರುಕಿನ ಸಮಸ್ಯೆ ಕಂಡು ಬರುವುದಿಲ್ಲ.

ಸ್ಕ್ರಬ್ಬಿಂಗ್
ಸ್ನಾನ ಮಾಡುವ ಮುಂಚೆ 2 ಚಮಚ ಸಕ್ಕರೆಗೆ 2 ಚಮಚ ೆಣ್ಣೆ ಹಾಕಿ ಮಿಶ್ರಣ ಮಾಡಿ ಮೈ ಸ್ಕ್ರಬ್ ಮಾಡಿ. ಇದು ನಿರ್ಜಿವ ತ್ವಚೆಯನ್ನು ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ.

English summary

Steps To Soften Palms And Feet

Palms and feet of both men as well as women become hard from cold and dry air during the winter season. If you want to soften your feet and palm then following care steps will help you a lot.
X
Desktop Bottom Promotion