For Quick Alerts
ALLOW NOTIFICATIONS  
For Daily Alerts

ಧಮ್ ಎಳೆದರೆ ಲುಕ್ ಹೋಗುತ್ತೆ ಹುಷಾರ್!

By Super Admin
|

ಧೂಮಪಾನ ಆರೋಗ್ಯಕ್ಕೆ ಕೆಟ್ಟದು ಎಂಬುದು ಧೂಮಪಾನಿಯನ್ನೂ ಸೇರಿಸಿ ಎಲ್ಲರಿಗೂ ಗೊತ್ತು. ಆದರೆ ಇದು ಸೌಂದರ್ಯಕ್ಕೂ ಮಾರಕ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಧೂಮಪಾನದ ಪರಿಣಾಮದಿಂದ ಕೇವಲ ಶ್ವಾಸಕೋಶ ಮಾತ್ರವಲ್ಲ, ಧೂಮದಲ್ಲಿರುವ ಟಾರು ಬೆರೆತ ರಕ್ತ ಎಲ್ಲೆಲ್ಲಿ ಹರಿಯುತ್ತದೆಯೋ ಅಲ್ಲೆಲ್ಲಾ ವಿಷ ಹರಡುತ್ತಾ ಆರೋಗ್ಯವನ್ನೂ, ಸೌಂದರ್ಯವನ್ನೂ ಕೆಡಿಸುತ್ತದೆ.

ವಿಶೇಷವಾಗಿ ಬಾಯಿ, ಶ್ವಾಸಕೋಶ, ಗಂಟಲಿನಲ್ಲಿ ಇದರ ಪರಿಣಾಮ ಕ್ಯಾನ್ಸರ್‌ಗೆ ತಿರುಗಿ ಸಾವಿಗೆ ಕಾರಣವಾಗುತ್ತದೆ. ಧೂಮಪಾನಿಗಳ ಚರ್ಮ ಸಡಿಲವಾಗುವುದು, ನೆರಿಗೆ ಮೂಡುವುದು, ತುಟಿಗಳ ಸ್ವಾಭಾವಿಕ ಗುಲಾಬಿ ಬಣ್ಣ ಕಳೆದು ಕಪ್ಪಗಾಗುವುದು ಮೊದಲಾದವು ನಿಮ್ಮ ಸೌಂದರ್ಯವನ್ನೇ ಕಸಿದುಬಿಡುತ್ತವೆ. ಅದರಲ್ಲೂ ಸೌಂದರ್ಯಪ್ರಜ್ಞೆಯುಳ್ಳ ಮಹಿಳೆಯರು ಈ ವ್ಯಸನಕ್ಕೆ ತುತ್ತಾಗಿದ್ದರೆ ಈ ಧೂಮ ನಿಮ್ಮ ಸೌಂದರ್ಯವನ್ನು ಯಾವ ರೀತಿಯಾಗಿ ಕಸಿದುಕೊಳ್ಳುತ್ತಿದೆ ಎಂಬುದನ್ನು ನೋಡೋಣ....

1) ಸದಾ ಆಯಾಸಗೊಂಡಿರುವ ಭಾವ ನೀಡುವ ಉಬ್ಬಿದ ಕಣ್ಣುಗಳ ಕೆಳಭಾಗ

1) ಸದಾ ಆಯಾಸಗೊಂಡಿರುವ ಭಾವ ನೀಡುವ ಉಬ್ಬಿದ ಕಣ್ಣುಗಳ ಕೆಳಭಾಗ

ಧೂಮಪಾನದ ಪರಿಣಾಮವಾಗಿ ನಿದ್ದೆ ಬಾರದೇ ಇರುವ ಕಾರಣ ಕಣ್ಣಿನ ಕೆಳಭಾಗ ಕೊಂಚ ಉಬ್ಬಿದಂತೆ ಕಾಣುತ್ತದೆ ಹಾಗೂ ಮುಖದ ವರ್ಣಕ್ಕಿಂತ ಹೆಚ್ಚು ಗಾಢವರ್ಣದ್ದಾಗಿರುತ್ತದೆ. ವಯಸ್ಸಾದಂತೆ ಈ ತರಹ ಉಬ್ಬುವುದು ಸಾಮಾನ್ಯವಾದರೂ ಧೂಮಪಾನಿಗಳಿಗೆ ಚಿಕ್ಕವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಧೂಮಪಾನಿಗಳು ಸಾಮಾನ್ಯರಿಗಿಂತ ನಾಲ್ಕು ಪಟ್ಟು ಹೆಚ್ಚು ನಿದ್ರೆಗೆಡುವುದರ ಪರಿಣಾಮವೇ ಈ 'ಉಬ್ಬಿದ ಚೀಲ'ಗಳು.

2) ಹಳದಿಯಾದ ಹಲ್ಲುಗಳು

2) ಹಳದಿಯಾದ ಹಲ್ಲುಗಳು

ಸಿಗರೇಟಿನ ಹೊಗೆಯಲ್ಲಿರುವ ಪ್ರಮುಖ ಹಾನಿಕಾರಕ ಅಂಶವೆಂದರೆ ನಿಕೋಟಿನ್. ಒಂದು ಬಿಳಿಯ ಬಟ್ಟೆಯ ಮೂಲಕ ಸಿಗರೇಟು ಹೊಗೆಯನ್ನು ಸೋಸಿದರೆ ಸೋಸಿದ ಕೇಂದ್ರಭಾಗದಲ್ಲಿ ಕಪ್ಪು ಟಾರಿನಂತಹ ದ್ರವ ಕಂಡುಬರುತ್ತದೆ. ಈ ದ್ರವದಲ್ಲಿರುವ ಪ್ರಮುಖ ಅಂಶವೇ ನಿಕೋಟಿನ್. ಈ ನಿಕೋಟಿನ್ ಹೀರಿದ ಬಿಳಿಬಟ್ಟೆ ಹಳದಿಯಾಗಿರುವುದನ್ನು ಗಮನಿಸಬಹುದು. ಇದೇ ಪರಿಣಾಮ ಹೊಗೆಯ ಸಂಪರ್ಕಕ್ಕೆ ಬರುವ ಹಲ್ಲುಗಳಿಗೂ ಆಗುತ್ತದೆ. ಸಿಗರೇಟ್ ಸೇವನೆ ಬಿಟ್ಟರೂ ಒಮ್ಮೆ ಹಳದಿಯಾದ ಹಲ್ಲು ಮತ್ತೆ ಬಿಳಿಯಾಗುವುದೇ ಇಲ್ಲ, ದಂತವೈದ್ಯರು ಈ ಹಳದಿಯಾದ ಹಲ್ಲುಗಳಿಗೆ ಪಾಲಿಷ್ ಮಾಡಿ ಕೊಂಚ ಹೊಳಪು ಬರುಸುತ್ತಾರೆಯೇ ವಿನಃ ಹಲ್ಲಿನ ನೈಸರ್ಗಿಕ ಬಿಳಿಬಣ್ಣವನ್ನು ತಂದುಕೊಡಲು ಸಾಧ್ಯವಾಗದು.

3) ಬೇಗನೇ ಬರುವ ಸುಕ್ಕುಗಳು

3) ಬೇಗನೇ ಬರುವ ಸುಕ್ಕುಗಳು

ಯಾವಾಗಲೂ ನಗುತ್ತಿದ್ದರೆ ಏನಾಗುತ್ತದೆ? ಮುದುಕರಾದಾಗ ಎಲ್ಲೆಲ್ಲಿ ನೆರಿಗೆ ಬೀಳುತ್ತವೆ ಎಂದು ಈಗಲೇ ಗೊತ್ತಾಗುತ್ತದೆ - ಹೀಗೊಂದು ಜೋಕು. ಆದರೆ ಧೂಮಪಾನಿಗಳ ಮಟ್ಟಿಗೆ ಮುದುಕರಾಗುವ ಮೊದಲೇ ಈ ಸುಕ್ಕುಗಳು ಗೋಚರಿಸುತ್ತವೆ, ನಗುವ ಅಗತ್ಯವೂ ಇಲ್ಲ! ಇದಕ್ಕೆ ಕಾರಣವೇನೆಂದರೆ ಮುಖದ ಚರ್ಮಕ್ಕೆ ರಕ್ತ ಸರಬರಾಜು ಮಾಡುವ ನರಗಳು ನಿಕೋಟಿನ್ ದೆಸೆಯಿಂದ ಸಂಕುಚಿತಗೊಂಡು ತುದಿಭಾಗಗಳಿಗೆ ರಕ್ತ ತಲುಪಿಸುವಲ್ಲಿ ಸೋಲುತ್ತವೆ. ಪರಿಣಾಮವಾಗಿ ಚರ್ಮಕ್ಕೆ ಅಗತ್ಯವಾದ ಆಮ್ಲಜನಕ ಸಿಗದೇ ಒಣಗುತ್ತದೆ. ಈ ಒಣಗಿದ ಭಾಗ ಬೇಗನೇ ಸುಕ್ಕಿಗೆ ಒಳಗಾಗುತ್ತದೆ. ವೈದ್ಯಕೀಯ ಸಂಶೋಧನೆಗಳಿಂದ ಧೂಮಪಾನಿಗಳು ಇತರರಿಗಿಂತ 1.4 ಪಟ್ಟು ಹೆಚ್ಚು ವಯಸ್ಸಾದವರಾಗಿ ಕಾಣುವುದನ್ನು ಗಮನಿಸಲಾಗಿದೆ.

4) ಹಳದಿಯಾದ ಬೆರಳುಗಳು ಮತ್ತು ಅಂಗೈ

4) ಹಳದಿಯಾದ ಬೆರಳುಗಳು ಮತ್ತು ಅಂಗೈ

ಹಲ್ಲುಗಳಿಗೆ ಹಳದಿ ಗತಿ ಕಾಣಿಸಿದ ನಿಕೋಟಿನ್ನೇ ನಮ್ಮ ದೇಹದ ತುದಿ ಭಾಗಗಳಾದ ಅಂಗೈ, ಬೆರಳು, ಅಂಗಾಲು ಮತ್ತು ಕಾಲುಬೆರಳುಗಳಲ್ಲಿಯೂ ಹಳದಿತನವನ್ನು ತರುತ್ತದೆ. ಹೃದಯದಿಂದ ಹೊರಟ ರಕ್ತ ಈ ಭಾಗಗಳಿಗೆ ಬರುವಷ್ಟರಲ್ಲಿ ನಿಕೋಟಿನ್ ದೆಸೆಯಿಂದ ಸಂಕುಚಿತಗೊಂಡ ನರಗಳ ಮೂಲಕ ಸಾಕಷ್ಟು ಪ್ರಮಾಣದಲ್ಲಿ ತಲುಪದೇ ಆಮ್ಲಜನಕರದ ಕೊರತೆಯುಂಟಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಹಲವು ಚಿಕಿತ್ಸೆಗಳು ಲಭ್ಯವಿವೆ. ಆದರೆ ಧೂಮಪಾನದಿಂದ ದೂರವಿದ್ದು ಅಂಗೈ ಚೆಲುವನ್ನು ಉಳಿಸುಕೊಳ್ಳುವುದು ಹೆಚ್ಚು ಜಾಣತನ, ಅಲ್ಲವೇ?

 5) ದುರ್ಬಲವಾದ, ಸೀಳಿದ, ಹೊಳಪು ಕಳೆದುಕೊಂಡ ಕೂದಲು

5) ದುರ್ಬಲವಾದ, ಸೀಳಿದ, ಹೊಳಪು ಕಳೆದುಕೊಂಡ ಕೂದಲು

ಧೂಮಪಾನದ ಮೂಲಕ ನಿಕೋಟಿನ್ ಅಲ್ಲದೇ ಇನ್ನೂ ಹಲವಾರು ಹಾನಿಕಾರಕ ರಸಾಯನಿಕಗಳು ಧೂಮಪಾನಿಯ ರಕ್ತವನ್ನು ಸೇರುತ್ತದೆ. ಈ ರಾಸಾಯನಿಕಗಳು ಹೇಗೆ ನಮ್ಮ ಕೂದಲಿನ ಡಿ.ಎನ್.ಎ. ಗಳನ್ನು ಮಾರ್ಪಾಡಿಸುತ್ತವೆ ಎಂದರೆ ಕೂದಲು ಹೊಳಪು ಕಳೆದುಕೊಳ್ಳುತ್ತದೆ, ದುರ್ಬಲವಾಗುತ್ತದೆ ಹಾಗೂ ಸೀಳಲೂ, ಉದುರಲೂ ತೊಡಗುತ್ತದೆ. ಇದಕ್ಕೆ ಯಾವ ರಸಾಯನಗಳು ಕಾರಣ ಎಂಬುವುದು ಇದುವರೆಗೂ ಪತ್ತೆಮಾಡಲಾಗಿಲ್ಲ. ಧೂಮಪಾನಿಗಳ ಕೂದಲು ಇತರರಿಗಿಂತ ಹೆಚ್ಚು ಕಳೆಗುಂದಿರುತ್ತದೆ ಅಥವಾ ಬೇಗನೇ ಉದುರಿ ಹೋಗುತ್ತದೆ.

6) ಮಾಗದ ಗಾಯಗಳು

6) ಮಾಗದ ಗಾಯಗಳು

ಧೂಮಪಾನದ ಮೂಲಕ ರಕ್ತ ಸೇರುವ ನಿಕೋಟಿನ್ ನ ಪರಿಣಾಮವಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ವೈದ್ಯಕೀಯ ಭಾಷೆಯಲ್ಲಿ vasoconstriction ಎಂದು ಕರೆಯಲ್ಪಡುವ ಈ ಪರಿಣಾಮದಿಂದ ಮುಖಕ್ಕೆ ತಲುಪಬೇಕಾಗಿದ್ದ ರಕ್ತದ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮುಖದ ಮೇಲೆ ಏನಾದರೂ ಗಾಯವಾದರೆ ಅಥವಾ ಗೀರು ಬಿದ್ದರೆ ಆ ಗಾಯ ಮಾಗಲು ತುಂಬಾ ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಗಾಯವಾದ ಅಥವಾ ಗೀರುಬಿದ್ದ ಸ್ಥಳದಲ್ಲಿ ಚರ್ಮ ದಪ್ಪನಾಗಿ ಬೆಳೆದು ಕಲೆ ಉಳಿಯುತ್ತದೆ.

7) ಸ್ಮೋಕರ್ಸ್ ಫೇಸ್

7) ಸ್ಮೋಕರ್ಸ್ ಫೇಸ್

ಸಿಗರೇಟಿನ ಹೊಗೆಯಲ್ಲಿರುವ ಇನ್ನೊಂದು ಪ್ರಮುಖ ಹಾನಿಕಾರಕ ರಾಸಾಯನಿಕ ವಸ್ತುವೆಂದರೆ ಕಾರ್ಬನ್ ಮೋನಾಕ್ಸೈಡ್. ನಿಜವಾಗಿ ನೋಡಿದರೆ ಇದು ಒಂದು ಪ್ರಬಲ ವಿಷ. ಈ ರಾಸಾಯನ ರಕ್ತದಲ್ಲಿರುವ ಆಮ್ಲಜನಕವನ್ನು ತೆಗೆದು ಅದರ ಜಾಗದಲ್ಲಿ ತಾನು ಕುಳಿತುಕೊಳ್ಳುತ್ತದೆ. ಅಲ್ಲದೇ ನಿಕೋಟಿನ್ ಪರಿಣಾಮವಾಗಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಈ ಎರಡು ಕೈಗಳು ಜೋಡಿದ ಬಳಿಕ ಸರಬರಾಜಾದ ರಕ್ತದಲ್ಲಿ ಶಕ್ತಿಯೇ ಇರುವುದಿಲ್ಲ. ಹೀಗಿದ್ದಾಗ ಆರೋಗ್ಯ ಎಲ್ಲಿಂದ ಬರಬೇಕು? ಪರಿಣಾಮವಾಗಿ ಜೋಲುಬಿದ್ದ, ಒಣಗಿದ, ಸುಕ್ಕುಭರಿತ, ಹೊಳಪು ಕಳೆದುಕೊಂಡ ಚರ್ಮದಿಂದಾಗಿ ಮುಖ ಬೇರೆಯೇ ಚಹರೆ ಪಡೆಯುತ್ತದೆ. ವೈದ್ಯರು ಈ ಚಹರೆಯನ್ನು ಸ್ಮೋಕರ್ಸ್ ಫೇಸ್ ಎಂದು ಕರೆಯುತ್ತಾರೆ.

8) ಹಿಗ್ಗಿದ ಚರ್ಮ

8) ಹಿಗ್ಗಿದ ಚರ್ಮ

ಚರ್ಮದ ಜೀವಕೋಶಗಳು ನಿಕೋಟಿನ್ ಸಂಪರ್ಕಕ್ಕೆ ಬಂದರೆ ಹಲವು ರೀತಿಯಿಂದ ಘಾಸಿಗೊಳಗಾಗುತ್ತದೆ. ಚರ್ಮ ತನ್ನ ಸ್ಥಿತಿಸ್ಥಾಪಕತ್ವ (ಹೊಂದಿಕೊಳ್ಳುವ ಗುಣ) ವನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ತೂಕ ಹೆಚ್ಚಾದರೂ ಕಡಿಮೆಯಾದರೂ ಆರೋಗ್ಯಕರ ಚರ್ಮ ತೂಕಕ್ಕನುಗುಣವಾಗಿ ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ. ಧೂಮಪಾನಿಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಂಡ ಚರ್ಮ ಹಿಗ್ಗಲು ಸಾಧ್ಯವಾಗದೇ ಕೆಲವೆಡೆ ಬಿರುಕಿನ ಮಾದರಿಯಲ್ಲಿ ತೆಳುವಾಗಿಬಿಡುತ್ತದೆ. ಈ ತೆಳುವಾದ ಜಾಗದಲ್ಲಿ ಚರ್ಮದ ಬಣ್ಣ ಪೇಲವವಾಗುತ್ತದೆ. ಪ್ರಸವವಾದ ಬಳಿಕ ಮಹಿಳೆಯರ ಹೊಟ್ಟೆಯಲ್ಲಿ ಕಾಣಬರುವ ಈ ಪರಿಣಾಮ ಧೂಮಪಾನಿಯ ದೇಹದೆಲ್ಲೆಡೆ ಕಾಣಬರುವ ಸಾಧ್ಯತೆ ಇದೆ. ಆರೋಗ್ಯಕರ ಚರ್ಮಕ್ಕೆ ಈ ಸ್ಥಿತಿಯನ್ನು ರಿಪೇರಿ ಮಾಡಿಕೊಳ್ಳುವ ಗುಣವಿರುವುದರಿಂದ ಕ್ರಮೇಣ ಈ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಆದರೆ ಧೂಮಪಾನಿಗಳಲ್ಲಿ ನಿಕೋಟಿನ್ ಈ ರಿಪೇರಿ ಮಾಡಿಕೊಳ್ಳುವ ಶಕ್ತಿಯನ್ನೇ ಕಬಳಿಸಿಬಿಡುವುದರಿಂದ ಈ ಕಲೆಗಳು ಶಾಶ್ವತವಾಗಿ ಉಳಿಯುವ ಸಂಭವವಿರುತ್ತದೆ.

9) ಉದುರುವ ಹಲ್ಲು

9) ಉದುರುವ ಹಲ್ಲು

ಸಾಧಾರಣ ಪ್ರಮಾಣದಲ್ಲಿ ಧೂಮಪಾನ ಮಾಡುವವರ ಹಲ್ಲುಗಳು ಹಳದಿಯಾಗಿದ್ದರೂ ಆಹಾರ ಅರೆಯಲು ಸಮರ್ಥವಾಗಿರುತ್ತವೆ. ಆದರೆ ಅತಿಹೆಚ್ಚು ಪ್ರಮಾಣದಲ್ಲಿ ಧೂಮಪಾನ ಮಾಡುವವರ ಹಲ್ಲುಗಳು ಹಳದಿಯಾಗಿರುವುದು ಮಾತ್ರವಲ್ಲ, ತಮ್ಮ ಸಾಮರ್ಥ್ಯವನ್ನೂ ಕಳೆದುಕೊಂಡಿರುತ್ತವೆ. ಒಸಡುಗಳು ದುರ್ಬಲವಾಗಿ ಹಲ್ಲುಗಳ ಬೇರನ್ನು ಹಿಡಿದಿಟ್ಟುಕೊಳ್ಳಲು ಅಸಮರ್ಥವಾಗುತ್ತವೆ. ಈ ಅವಕಾಶವನ್ನೇ ಕಾಯುತ್ತಿದ್ದ ಬ್ಯಾಕ್ಟೀರಿಯಾಗಳು ಒಸಡಿನ ಒಳಗೆ, ಹಲ್ಲುಗಳ ಬೇರುಗಳ ನಡುವೆ ತಮ್ಮ ಕಾಲೋನಿಯನ್ನು ವೃದ್ಧಿಸಿಕೊಳ್ಳುತ್ತವೆ. ಅನಿವಾರ್ಯವಾಗಿ ವೈದ್ಯರು ಈ ಹಲ್ಲುಗಳನ್ನು ಕಿತ್ತು ಹಾಕಬೇಕಾಗುತ್ತದೆ. ದುರ್ಬಲವಾದ ಒಸಡುಗಳ ಮೇಲೆ ಕೃತಕ ಹಲ್ಲುಗಳನ್ನು ನೆಡುವುದೂ ಅಸಂಭವವಾಗುತ್ತದೆ. ಉದುರುವ ಮೊದಲು ಅತಿಹೆಚ್ಚು ಸಂವೇದನೆಯನ್ನು ತೋರುವ ಹಲ್ಲು ಕೊಂಚ ಬಿಸಿ ಅಥವಾ ಕೊಂಚ ತಣ್ಣನೆಯ ಆಹಾರವನ್ನು ಸ್ವೀಕರಿಸಲೂ ನಿರಾಕರಿಸಿಬಿಡುತ್ತವೆ.

10) ಕುಂಠಿತವಾಗುವ ದೃಷ್ಟಿ

10) ಕುಂಠಿತವಾಗುವ ದೃಷ್ಟಿ

ಸತತ ಧೂಮಪಾನ ಕಣ್ಣುಗಳಿಗೂ ಹಾನಿಕರ. ದೃಷ್ಟಿಯನ್ನು ಮಂದಗೊಳಿಸುವ ಕಣ್ಣಿನ ಪೊರೆ ಅಥವಾ ಕ್ಯಾಟರಾಕ್ಟ್ ತೊಂದರೆ ಧೂಮಪಾನಿಗಳಲ್ಲಿ ಕಡಿಮೆ ವಯಸ್ಸಿಗೇ ಕಂಡುಬಂದಿರುವುದು ವೈದ್ಯಕೀಯ ಅಂಕಿ ಅಂಶಗಳಿಂದ ಧೃಡಪಟ್ಟಿದೆ. ಕಡಿಮೆ ಸೇದುವ ಅಥವಾ ಇತ್ತೀಚೆಗೆ ಧೂಮಪಾನಿಗಳಾದವರಲ್ಲೂ ಕ್ಯಾಟಕಾಕ್ಟ್ ತೊಂದರೆ ಕಂಡುಬಂರುವುದು ಮಾತ್ರ ಆತಂಕಕಾರಿಯಾಗಿದೆ.

ಯಾರನ್ನೋ ಮೆಚ್ಚಿಸಲು, ಅಥವಾ ಯಾರನ್ನೋ ಅನುಸರಿಸಲು ಅಥವಾ ಯಾವುದೋ ಕೆಟ್ಟ ಕುತೂಹಲದಿಂದ ಒಂದು ಸಿಗರೇಟಿನಿಂದ ಪ್ರಾರಂಭವಾದ ಈ ಕೆಟ್ಟ ಚಟ ಆರೋಗ್ಯದ ಮೇಲೆ ಮಾತ್ರವಲ್ಲದೇ ನಿಮ್ಮ ಅಂದಚೆಂದವನ್ನೂ ಹೇಗೆ ಘಾಸಿಗೊಳಿಸುತ್ತದೆ ಎಂದು ಈಗ ಅರಿವಾಗಿದೆಯೆಲ್ಲ. ಮೂವತ್ತು ವರ್ಷ ಸತತ ಧೂಮಪಾನಿಯಾಗಿದ್ದವರೊಬ್ಬರು ವೈದ್ಯರ ನಿರ್ದೇಶನ ಪಡೆದು ಧೂಮಪಾನ ಸಂಪೂರ್ಣವಾಗಿ ಬಿಟ್ಟಿರಬೇಕಾದರೆ ಬೇರೆ ಯಾರಿಗೂ ಅಸಾಧ್ಯವಲ್ಲ. ಬೇಕಾಗಿರುವುದುರು ಧೂಮಪಾನ ಬಿಡಲೇ ಬೇಕು ಎಂಬ ಕಠಿಣ ಸಂಕಲ್ಪ ಹಾಗೂ ವೈದ್ಯರ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರತಿಜ್ಞೆ ಮಾತ್ರ.

English summary

smoking is the biggest enemy of your looks

When the damage is visible, you tend to be more careful about your bad habits. If cigarette could cause a visible bump on your face, you would definitely quit smoking today. Let’s list down 10 reasons why smoking is the biggest enemy of your looks!
X
Desktop Bottom Promotion