For Quick Alerts
ALLOW NOTIFICATIONS  
For Daily Alerts

ಜೇನಿನಿಂದ ಸೌಂದರ್ಯ ವೃದ್ಧಿಸುವುದು

|

ಒಂದು ಹನಿ ಜೇನು ನಿಮ್ಮ ಮುಖದ ಹೊಳಪನ್ನೇ ಬದಲಿಸಬಹುದು ಎಂಬುದು ನಿಮಗೆ ಗೊತ್ತಾ?ಬಹುಶಃ ನೀವು ಟೀ ಗೆ ಜೇನು ಬಳಸಿರಬಹುದು ಈಗ ಇದನ್ನು ಮುಖಕ್ಕೆ ಬಳಸಿ ನೋಡಿ.

ಜೇನು ಕೇವಲ ಮುಖವನ್ನು ಕಾಂತಿಯುತವಾಗಿ ಮತ್ತು ಮೃದುವಾಗಿ ಮಾಡುವುದಷ್ಟೇ ಅಲ್ಲ,ಇದರಲ್ಲಿರುವ ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ.ಕೇವಲ ಮುಖಕ್ಕೆ ಮಾತ್ರವಲ್ಲ,ಸಾಕಷ್ಟು ಕೂದಲ ನಿಯಂತ್ರಕಗಳು ಕೂಡ ಜೇನನ್ನು ಹೊಂದಿರುತ್ತವೆ. ಆದ್ದರಿಂದ ಇಲ್ಲಿದೆ ಒಂದು ಪದಾರ್ಥ ಅದು ಆರೋಗ್ಯಯುತವಾಗಿರುವುದರ ಜೊತೆಗೆ ಮುಖ ಮತ್ತು ಕೂದಲ ಹೊಳಪನ್ನು ಹೆಚ್ಚಿಸುತ್ತದೆ,ಒಟ್ಟಾರೆಯಾಗಿ ನಿಮ್ಮ ಸೌದರ್ಯವನ್ನು ಸಂಪೂರ್ಣ ಹೆಚ್ಚಿಸುವಲ್ಲಿ ಜೇನು ಮುಖ್ಯವಾದುದು.ಈ ಕೆಳಗೆ ಮುಖಕ್ಕೆ ಮತ್ತು ಕೂದಲಿಗೆ ಅನುಕೂಲವಾಗುವ ಕೆಲವು ಜೇನಿನ ಮನೆ ಮದ್ದುಗಳನ್ನು ನೀಡಲಾಗಿದೆ.

ಹೇರ್ ಪ್ಯಾಕ್

ಹೇರ್ ಪ್ಯಾಕ್

ರೇಷ್ಮೆಯಂತ ನುಣುಪಾದ ಕೂದಲಿಗೆ:ನಿಮಗೆ ರೇಷ್ಮೆಯಂತ ಕೂದಲು ಬೇಕು ಎಂದಿದ್ದಲ್ಲಿ ಇಲ್ಲಿ ಹೇಳಿದ ಹೇರ್ ಪ್ಯಾಕ್ ಕೂದಲಿಗೆ ಹಚ್ಚಿ.

2 ಚಮಚ ಮೊಸರು,2 ಮೊಟ್ಟೆ,ನಿಂಬೆ ರಸ ಮತ್ತು 5 ಹನಿ ಜೇನನ್ನು ಒಂದು ಬೌಲ್ ನಲ್ಲಿ ಹಾಕಿ ಮಿಶ್ರ ಮಾಡಿ ಅದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಿರಿ.

ಹೊಳೆಯುವ ಕೂದಲಿಗೆ:

ಹೊಳೆಯುವ ಕೂದಲಿಗೆ:

ಇನ್ನೊಂದು ಹೇರ್ ಪ್ಯಾಕ್ ಇಲ್ಲಿದೆ ನೋಡಿ.ಜೇನನ್ನು ಆಲೀವ್ ಎಣ್ಣೆಯೊಂದಿಗೆ ಮಿಶ್ರ ಮಾಡಿ ಅದನ್ನು ತಲೆಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಲೆಯನ್ನು ತೊಳೆದುಕೊಳ್ಳಿ. ಇದು ನಿಮ್ಮ ಕೂದಲು ಹೊಳೆಯುವಂತೆ ಮಾಡುತ್ತದೆ.

ಫೇಸ್ ಪ್ಯಾಕ್

ಫೇಸ್ ಪ್ಯಾಕ್

ಬೇಡದ ಕೂದಲುಗಳನ್ನು ತೆಗೆಯಲು: ನಿಮ್ಮ ಮುಖದಲ್ಲಿ ಬೇಡದ ಕೂದಲುಗಳಿದ್ದರೆ ಈ ಫೇಸ್ ಪ್ಯಾಕ್ ಬಳಸಿನೋಡಿ.

ತಟ್ಟೆಯಲ್ಲಿ ಒಂದು ಚಮಚ ಜೇನನ್ನು ಹಾಕಿ ಮತ್ತು ಒಂದು ಚಮಚ ಸಕ್ಕರೆ,ಒಂದೆರಡು ಹನಿ ನಿಂಬೆ ರಸ ಹಾಕಿ.ಇದನ್ನು ಚೆನ್ನಾಗಿ ಕಲಸಿ ಮೈಕ್ರೋವೇವ್ ನಲ್ಲಿ 3 ನಿಮಿಷಗಳವರೆಗೆ ಇಟ್ಟು ಬಿಸಿ ಮಾಡಿ.ಹದವಾದ ಬಿಸಿ ಇರುವಾಗ ಇದನ್ನು ಬೇಡದ ಕೂದಲಿರುವ ಜಾಗದಲ್ಲಿ ಹಚ್ಚಿ.ನಂತರ ಒಂದು ಬಟ್ಟೆ ತೆಗೆದುಕೊಂಡು ಫೇಸ್ ಪ್ಯಾಕ್ ಹಚ್ಚಿದ ಜಾಗದಲ್ಲಿ ಹಾಕಿ ಮೇಲೆತ್ತಿ.ಇದರಿಂದ ನಿಮ್ಮ ಮುಖದಲ್ಲಿರುವ ಬೇಡದ ಕೂದಲುಗಳು ಕಿತ್ತು ಬರುತ್ತದೆ.

ಕಲೆರಹಿತ ಚರ್ಮ

ಕಲೆರಹಿತ ಚರ್ಮ

ನಿಮಗೆ ನಿಮ್ಮ ಮುಖ ಮೃದು ಮತ್ತು ಕಲೆರಹಿತವಾಗಿ ಕಾಣಬೇಕು ಎಂದಿದ್ದರೆ ಈ ಫೇಸ್ ಪ್ಯಾಕ್ ಉಪಯೋಗಿಸಿ.

ಜೇನಿನೊಂದಿಗೆ ಕಡಲೆಹಿಟ್ಟು ಮತ್ತು ಮಲೈ,ಚಂದನ ಮತ್ತು ರೋಸ್ ಎಣ್ಣೆ ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ.ನಂತರ ಇದನ್ನು ಒಣಗಲು ಬಿಡಿ ಮತ್ತು ಒಣಗಿದ ನಂತರ ತೆಗೆಯಿರಿ.ಇದು ಕೇವಲ ಕಲ್ಮಶಗಳನ್ನಷ್ಟೇ ಅಲ್ಲ ನಿಮ್ಮ ಮುಖವನ್ನು ಮೃದುವಾಗಿ ಮಾಡುತ್ತದೆ.ಉತ್ತಮ ಪಲಿತಾಂಶಕ್ಕಾಗಿ ವಾರಕ್ಕೊಮ್ಮೆ ಉಪಯೋಗಿಸಿ.

ಟ್ಯಾನಿಂಗ್

ಟ್ಯಾನಿಂಗ್

ಸೂರ್ಯನ ಕಿರಣಗಳಿಂದಾಗಿ ಮುಖ ಟ್ಯಾನ್ ಆದಾಗ ಜೇನು ಉಪಯೋಗಕ್ಕೆ ಬರುತ್ತದೆ.ಜೇನು,ಬಾದಾಮಿ ಎಣ್ಣೆ,ಮಿಲ್ಕ್ ಪೌಡರ್,ನಿಂಬೆ ರಸ ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮುಖ ಮತ್ತು ಕೈಗಳಿಗೆ ಹಚ್ಚಿ 20 ನಿಮಿಷ ಬಿಡಿ ನಂತರ ತೊಳೆಯಿರಿ.

ಸುಟ್ಟ ಕಲೆಗಳನ್ನು ಹೋಗಲಾಡಿಸಲು

ಸುಟ್ಟ ಕಲೆಗಳನ್ನು ಹೋಗಲಾಡಿಸಲು

ಸುಟ್ಟ ಕಲೆಗಳಿದ್ದರೆ ಅವುಗಳಿಗೆ ಜೇನನ್ನು ಹಚ್ಚಿ,ಜೇನಿನಲ್ಲಿ ನಂಜು ನಿರೋಧಕ ಮತ್ತು ಚಿಕಿತ್ಸಕ ಗುಣಗಳಿರುವುದರಿಂದ ನೀವು ಪ್ರತಿದಿನ ಹಚ್ಚುವುದರಿಂದ ಇದನ್ನು ಗುಣಪಡಿಸಬಹುದು.

ಮೊಡವೆಗಳು

ಮೊಡವೆಗಳು

ಮೊಡವೆ ಕಲೆಗಳು ಮತ್ತು ಮೊಡವೆಗಳಿಂದ ದೂರ ಉಳಿಯುವುದು ಕಷ್ಟದ ಕೆಲಸ.ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಇದನ್ನು ಮೊಡವೆ ಇರುವಲ್ಲಿ ಹಚ್ಚಿ.ಇದನ್ನು ರಾತ್ರಿ ಪೂರ್ತಿ ನಿಮ್ಮ ಮುಖದಲ್ಲಿ ಇಟ್ಟುಕೊಂಡು ಬೆಳಗ್ಗೆ ಹದವಾದ ಬಿಸಿ ನೀರಿನಲ್ಲಿ ತೊಳೆಯಿರಿ.

ಜೇನು ತುಪ್ಪ

ಜೇನು ತುಪ್ಪ

ಜೇನು ತುಪ್ಪ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತದೆ ಆದರೆ ಒಳ್ಳೆಯದನ್ನು ನೋಡಿ ತೆಗೆದುಕೊಳ್ಳಿ. ಸಾಕಷ್ಟು ಭಾರಿ ಬೆಲ್ಲ,ಸಕ್ಕರೆ ಅಥವಾ ನೀರು ಸೇರಿಸಿ ಮೋಸ ಮಾಡುತ್ತಾರೆ. ಇದು ಜೇನಿನಲ್ಲಿರಬೇಕಾದ ಬ್ಯಾಕ್ಟೀರಿಯ ನಿರೋಧಕವನ್ನು ನಾಶಗೊಳಿಸುತ್ತದೆ ಆದ್ದರಿಂದ ಗಮನಿಸಿ ತೆಗೆದುಕೊಳ್ಳಿ. ಜೇನನ್ನು ಪರೀಕ್ಷಿಸುವ ಸುಲಭ ವಿಧಾನವೆಂದರೆ ಫ್ರೀಜ್ ಮಾಡುವುದು ಆಗ ಇದು ಮೊದಲಿನಂತೆಯೇ ಇದ್ದರೆ ಶುದ್ಧವೆಂದರ್ಥ.ಇದರ ಬಳಿ ಇರುವೆಗಳು ಮುತ್ತಿಕೊಂಡರೆ ಅಶುದ್ಧವಾದುದು ಎಂದರ್ಥ ಏಕೆಂದರೆ ಶುದ್ಧ ಜೇನಿಗೆ ಇರುವೆಗಳು ಮುತ್ತಿಕೊಳ್ಳುವುದಿಲ್ಲ.ಇನ್ನೊಂದು ನಿದರ್ಶನವೆಂದರೆ ಇದು ಕಲ್ಲಿನಂತೆ ಆಗುವುದು ಇದು ಕಲ್ಲಿನಂತಾದರೆ ಸಕ್ಕರೆ ಮಿಶ್ರಣ ಮಾಡಲಾಗಿದೆ ಎಂದರ್ಥ.ಆದ್ದರಿಂದ ಇವುಗಳನ್ನೆಲ್ಲ ಗಮನಿಸಿ ಪ್ಯೂರ್ ಜೇನನ್ನು ತೆಗೆದುಕೊಳ್ಳಿ.

English summary

Say Goodbye To Hair And Skin Problems With Honey

Honey not only nourishes and soothes your skin, but its anti-bacterial and hydrating properties rejuvenates it and reduces blemishes. Not just skin, but many hair packs too have honey in them. So here’s one ‘super ingredient’ that is healthy to eat, good for your skin and hair – basically a complete solution for your beauty problems.
X
Desktop Bottom Promotion