For Quick Alerts
ALLOW NOTIFICATIONS  
For Daily Alerts

ಕನ್ನಡಕ ಧರಿಸುವುದರಿಂದ ಬಿದ್ದ ಕಲೆಗೆ ಪರಿಹಾರ

|

ಕನ್ನಡಕ ಧರಿಸುವವರಿಗೆ ಕಾಡುವ ಪ್ರಮುಖ ಸೌಂದರ್ಯ ಸಮಸ್ಯೆಯೆಂದರೆ ಮೂಗಿನ ಮೇಲೆ ಕಲೆ ಬೀಳುವುದು. ಈ ಕಲೆಯಿಂದಾಗಿ ಕನ್ನಡಕ ಬಿಚ್ಚಿಟ್ಟಾಗ ಆಕರ್ಷಕವಾಗಿ ಕಾಣುವುದಿಲ್ಲ.

ಕನ್ನಡಕಕ್ಕೆ ಗುಡ್ ಬೈ ಹೇಳಿ, ಲೆನ್ಸ್ ಬಳಸೋಣ ಎಂದು ಯೋಚಿಸುವವರಿಗೆ ಕನ್ನಡಕ ಧರಿಸಿದ್ದರಿಂದ ಬಿದ್ದಂತಹ ಕಲೆಯನ್ನು ಹೋಗಲಾಡಿಸುವುದೇ ಒಂದು ಸವಾಲಾಗಿರುತ್ತದೆ.

Remove Scars On Nose Due To Specks

ಈ ಕಲೆಯನ್ನು ಹೋಗಲಾಡಿಸುವುದು ಹೇಗೆ ಅನ್ನುವ ಚಿಂತೆ ಬಿಡಿ. ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ, ಅವುಗಳನ್ನು ಪಾಲಿಸಿದರೆ ಸಾಕು ಮೂಗಿನ ಮೇಲೆ ಇರುವ ಕಲೆ ಮಾಯವಾಗುವುದು.

* ಕ್ಲೆನ್ಸ್ : ದಿನಕ್ಕೆ ಎರಡು ಬಾರಿ ಮೂಗನ್ನು ಕ್ಲೆನ್ಸ್ ಮಾಡಿ. ಈ ರೀತಿ ಮಾಡುವುದರಿಂದ ಕಲೆ ಬೇಗನೆ ಹೋಗುವುದು. ಲೆನ್ಸ್ ಗೆ ಬದಲಾಗಿ ಕನ್ನಡಕ ಧರಿಸದೇ ಇದ್ದರೆ ಕೆಲವು ತಿಂಗಳುಗಳಲ್ಲಿ ಆ ಕಲೆ ಸ್ವಾಭಾವಿಕವಾಗಿ ಮಾಯವಾಗುವುದು.

* ಮಾಯಿಶ್ಚರೈಸರ್: ಈ ಕಲೆಯನ್ನು ಬೇಗನೆ ಹೋಗಲಾಡಿಸಲು ಪ್ರತೀದಿನ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಆ ಭಾಗದ ತ್ವಚೆ ಡ್ರೈಯಾಗುವುದಿಲ್ಲ.

* ನೈಸರ್ಗಿಕವಾದ ಬ್ಲೀಚಿಂಗ್ : ಟೊಮೆಟೊ, ನಿಂಬೆ ಹಣ್ಣು, ಆಲೂಗಡ್ಡೆ ಈ ರೀತಿಯ ನೈಸರ್ಗಿಕವಾದ ಬ್ಲೀಚಿಂಗ್ ವಸ್ತುಗಳಿಂದ ಮೂಗನ್ನು ಸ್ಕ್ರಬ್ ಮಾಡುವುದರಿಂದ ಕಲೆಯನ್ನು ಹೋಗಲಾಡಿಸಬಹುದು.

* ಟೋನರ್ ಹಚ್ಚಿ: ವಿಟಮಿನ್ ಇ ಇರುವ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಮೂಗಿನ ಮೇಲೆ ಇರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು.
ಈ ರೀತಿ ಆರೈಕೆ ಮಾಡಿದರೆ ನಿಮ್ಮ ಮುಖ ನೈಸರ್ಗಿಕವಾದ ಚೆಲುವನ್ನು ಪಡೆಯುವುದು.

English summary

Remove Scars On Nose Due To Specks | Tips For Body Care | ಕನ್ನಡಕ ಧರಿಸಿ ಬಿದ್ದ ಕಲೆ ಹೋಗಲಾಡಿಸಲು ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

It is possible to remove the scars on your nose that bear evidence to your habit. There are various home remedies and some basic tips, which can not only remove the scars on your nose but also prevent their reappearance.
Story first published: Wednesday, April 24, 2013, 11:48 [IST]
X
Desktop Bottom Promotion