For Quick Alerts
ALLOW NOTIFICATIONS  
For Daily Alerts

ಪಾದಗಳು ಒರಟಾಗಲು ಕಾರಣ ಮತ್ತು ಪರಿಹಾರ

|

ಪಾದಗಳು ತುಂಬಾ ಒರಟಾಗಿದೆಯೇ? ಪಾದದ ಬಗ್ಗೆ ಆರೈಕೆ ಮಾಡದಿದ್ದರೆ ಪಾದಗಳು ಒರಟಾಗುತ್ತದೆ. ಪಾದ ಒರಟಾದಾಗಲೂ ಗಮನಿಸದೆ ಹೋದರೆ ಪಾದಗಳಲ್ಲಿ ಬಿರುಕು ಕಂಡು ಬರುವುದು. ಈ ರೀತಿ ಪಾದಗಳಲ್ಲಿ ಬಿರುಕು ಬಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ ಎಂಬುದಿರಲಿ, ಅದರಿಂದ ಉಂಟಾಗುವ ನೋವು ಸಹಿಸಲು ಅಸಾಧ್ಯವಾಗಿರುತ್ತದೆ.

ಪಾದಗಳಲ್ಲಿ ಬಿರುಕನ್ನು ತಡೆಯಲು ಪಾದಗಳ ಆರೈಕೆ ಮಾಡುವುದು ಅವಶ್ಯಕ. ಪಾದಗಳ ಆರೈಕೆಯೆಂದರೆ ಪಾದಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ಇನ್ನು ಕೆಲವು ಅಂಶಗಳ ಕಡೆಯೂ ಗಮನಕೊಡಬೇಕು. ಪಾದ ಒರಟಾಗಲು ಕಾರಣವೇನು, ಅದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

* ಪಾದಗಳಿಗೆ ಒತ್ತಡ ಬಿದ್ದರೆ

* ಪಾದಗಳಿಗೆ ಒತ್ತಡ ಬಿದ್ದರೆ

ಮೈ ತೂಕ ಹೆಚ್ಚಿದರೆ ಅಥವಾ ಪಾದಗಳಿಗೆ ಒತ್ತಡ ಬೀಳುವಂತಹ ಕೆಲಸ ಮಾಡಿದರೆ ಪಾದಗಳು ಒರಟಾಗಿ ಬಿರುಕು ಕಂಡು ಬರುವುದು.

 * ಪಾದರಕ್ಷೆ

* ಪಾದರಕ್ಷೆ

ಪಾದರಕ್ಷೆ ತುಂಬಾ ಗಟ್ಟಿಯಾಗಿದ್ದರೆ ಪಾದಗಳು ಒರಟಾಗುವುದು. ಪಾದರಕ್ಷೆ ಆಯ್ಕೆ ಮಾಡುವಾಗ ಮೃದುವಾದ ಪಾದರಕ್ಷೆ ಆಯ್ಕೆ ಮಾಡಿ.

ನೀರಿನಲ್ಲಿಯೇ ಹೆಚ್ಚು ಹೊತ್ತು ನಿಂತರೆ

ನೀರಿನಲ್ಲಿಯೇ ಹೆಚ್ಚು ಹೊತ್ತು ನಿಂತರೆ

ನೀರಿನಲ್ಲಿಯೇ ಹೆಚ್ಚು ಹೊತ್ತು ಕೆಲಸ ಮಾಡುವವರಿಗೆ ಪಾದಗಳಲ್ಲಿ ಬಿರುಕು ಕಂಡುಬರುವುದು.

ವಿಟಮಿನ್ಸ್ ಕೊರತೆ

ವಿಟಮಿನ್ಸ್ ಕೊರತೆ

* ಖನಿಜಾಂಶ ಮತ್ತು ಸತು ವಿಟಮಿನ್ಸ್ ಕೊರತೆ ಉಂಟಾದರೆ ಪಾದ ಒರಟಾಗುವುದು.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ವೆಜಿಟೇಬಲ್ ಆಯಿಲ್ ಅಥವಾ ಯಾವುದಾದರು ಮಾಯಿಶ್ಚರೈಸರ್ ಕ್ರೀಮ್ ಬಳಸಿ ದಿನಾ ಪಾದವನ್ನು ಮಾಯಿಶ್ಚರೈಸರ್ ಮಾಡಿದರೆ ಪಾದಗಳು ಒರಟಾಗುವುದಿಲ್ಲ.

 ನಿರ್ಜೀವ ತ್ವಚೆ ಹೋಗಲಾಡಿಸಿ

ನಿರ್ಜೀವ ತ್ವಚೆ ಹೋಗಲಾಡಿಸಿ

* ವಾರಕ್ಕೊಮ್ಮೆ 10 ನಿಮಿಷ ಕಾಲುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಕ್ರಬ್ ಮಾಡಿದರೆ ನಿರ್ಜೀವ ತ್ವಚೆ ಹೋಗುವುದು, ಈ ರೀತಿ ಮಾಡುತ್ತಿದ್ದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.

ಪೆಟ್ರೋಲಿಯಂ ಜೆಲ್

ಪೆಟ್ರೋಲಿಯಂ ಜೆಲ್

* ಬಿರುಕು ಒಡೆದ ಪಾದಗಳಿಗೆ ಪೆಟ್ರೋಲಿಯಂ ಜೆಲ್ ಹಚ್ಚಿದರೆ ಬೇಗನೆ ಬಿರುಕು ಮಾಯವಾಗಿ ಪಾದಗಳು ಮೃದುವಾಗುವುದು.

 ಆಯಿಲ್ ಮಾಯಿಶ್ಚರೈಸರ್

ಆಯಿಲ್ ಮಾಯಿಶ್ಚರೈಸರ್

* ಆಲೀವ್ ಆಯಿಲ್, ಲೆಮನ್ ಆಯಿಲ್, ಲ್ಯಾವೆಂಡರ್ ಆಯಿಲ್ ಮಿಕ್ಸ್ ಮಾಡಿ ಪಾದಕ್ಕೆ ಹಚ್ಚಿದರೆ ಪಾದದ ಬಿರುಕು ಕಮ್ಮಿಯಾಗುವುದು.

 ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು

* ಪಾದಗಳನ್ನು ಸ್ವಚ್ಛವಾಗಿಡಿ

* ದಿನಾ ಮಾಯಿಶ್ಚರೈಸರ್ ಮಾಡಿ.

English summary

Remedies For Dry and Cracked Heels

Cracked heels or dry feet are a sign of lack of attention to foot care, including overexposure to sun rays and lack of moisturising.Here are few tips to get rid from craked heels.
 
X
Desktop Bottom Promotion