For Quick Alerts
ALLOW NOTIFICATIONS  
For Daily Alerts

ನಿಮ್ಮ ಸೌಂದರ್ಯ ಕಾಪಾಡಲು ಕೆಲವು ಟಿಪ್ಸ್

|

ನೀವು ಕೆಲವು ಸರಳವಾದ ಸೌಂದರ್ಯಕ್ಕೆ ಸಂಬಂಧಿಸಿದ ಟಿಪ್ಸ್ ಗಳನ್ನು ನಿಮ್ಮಮ್ಮನಿಂದ, ಅಜ್ಜಿಯಿಂದ ಅಥವ ಗೆಳತಿಯರಿಂದ ಕೇಳಿರಬಹುದು. ನೀವು ಕೇಳಿದವುಗಳಲ್ಲಿ ಕೆಲವನ್ನಾದರೂ ನೀವು ಪ್ರಯತ್ತಿಸಿರಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಪ್ರಸಾಧನಗಳಿಗಿಂತ ನೈಸರ್ಗಿಕವಾದ ಈ ವಿಧಾನಗಳನ್ನು ಅನುಸರಿಸುವುದೇ ಒಳ್ಳೆಯದೆಂದು ಪರಿಣತರು ಅಭಿಪ್ರಾಯ ಪಡುತ್ತಾರೆ.

ಪ್ರಪಂಚದಲ್ಲೆಲ್ಲ ಮೇಕಪ್ ಇಲ್ಲದೆ ಕೂಡ ಸುಂದರವಾಗಿ ಕಾಣುವುದು ಭಾರತದ ಮಹಿಳೆಯರ ಹೆಗ್ಗಳಿಕೆಯಂತೆ. ನೀವು ವಿಶೇಷವಾಗಿ, ಸಹಜ ಸುಂದರವಾಗಿ ಕಾಣಬೇಕೆಂದಿದ್ದರೆ ಈ ನೈಸರ್ಗಿಕ ವಿಧಾನಗಳನ್ನೇ ಅನುಸರಿಸಿ.

ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಈ ವಿಧಾನಗಳನ್ನು ಹಂಚಿಕೊಳ್ಳುತ್ತಿದೆ. ನಿಮ್ಮ ಮುಖದ ಮೇಲೆ ಮೊಡವೆಗಳು, ಕಲೆಗಳು ಇದ್ದು ನೀವದನ್ನು ಮೇಕಪ್ ನಿಂದ ಮುಚ್ಚಲು ಪ್ರಯತ್ನಿಸುತ್ತಿದ್ದಲ್ಲಿ ನೀವು ಈ ಸಹಜ ವಿಧಾನಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಹಜ ಸೌಂದರ್ಯ ವಿಧಾನಗಳ ಕೆಲ ಟಿಪ್ಸ್:

ಫೇಸ್ ಪ್ಯಾಕ್ಸ್

ಫೇಸ್ ಪ್ಯಾಕ್ಸ್

ನಿಮ್ಮದು ಒಣ ಚರ್ಮವೇ? ಹಾಗಿದ್ದಲ್ಲಿ ಇದನ್ನು ಪ್ರಯತ್ನಿಸಿ. ಅರ್ಧ ಕಪ್ ಓಟ್ಸ್ ಪುಡಿಯನ್ನು 2 ಟೀಚಮಚ ಜೇನುತುಪ್ಪ, 1 ಟೀಚಮಚ ಸೂರ್ಯಕಾಂತಿ ಎಣ್ಣೆ ಮತ್ತು 1/2 ಟೀಚಮಚ ವೆನಿಲ್ಲಾ ಎಕ್ಸಟ್ರ್ಯಾಕ್ಟ್ ನೊಂದಿಗೆ ಬೆರೆಸಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಸಮವಾಗಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ.

ಮೊಡವೆಗಳಿಗೆ ಸಹಜೌಷಧ

ಮೊಡವೆಗಳಿಗೆ ಸಹಜೌಷಧ

ಅಡುಗೆ ಸೋಡಾವನ್ನು ನೀರಿನೊಂದಿಗೆ ಸೇರಿಸಿ ಗಟ್ಟಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮೊಡವೆಯಾದ ಜಾಗಕ್ಕೆ ಹಚ್ಚಿ ಆ ಜಾಗವನ್ನು ಒಂದು ಸಣ್ಣ ಬಟ್ಟೆ ತುಂಡಿನಿಂದ ಮುಚ್ಚಿಡಿ. ರಾತ್ರಿಯಿಡಿ ಇದು ಹಾಗೆ ಇರಲಿ ಮಾರನೆಯ ಬೆಳಗ್ಗೆ ಇದನ್ನು ತೊಳೆದುಬಿಡಿ.

ಬ್ಲಾಕ್ ಹೆಡ್ಸ್

ಬ್ಲಾಕ್ ಹೆಡ್ಸ್

ನಿಂಬೆರಸ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಬ್ಲಾಕ್ ಹೆಡ್ ಇರುವ ಜಾಗದಲ್ಲಿ ವೃತ್ತಾಕಾರದಲ್ಲಿ ಹಚ್ಚಿ. ಆ ಜಾಗ ಮೃದುವಾಗಿದೆ ಎಂದೆನಿಸಿದಾಗ ಅದನ್ನು ಒತ್ತಿ ತೆಗೆದುಬಿಡಿ.

ಸಹಜ ಮಾಯ್ಸಿಶ್ಚುರೈಸರ್

ಸಹಜ ಮಾಯ್ಸಿಶ್ಚುರೈಸರ್

ತರಕಾರಿ ಎಣ್ಣೆಗಳನ್ನು ಬಳಸಿದಲ್ಲಿ ಚರ್ಮ ಮೃದುವಾಗುತ್ತದೆ ಮತ್ತು ಹೊಳಪನ್ನು ಪಡೆಯುತ್ತದೆ. ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ 30 ನಿಮಿಷಗಳ ತರುವಾಯ ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಸಹಜ ಎಕ್ಸ್ ಫೊಲಿಯೆಂಟ್

ಸಹಜ ಎಕ್ಸ್ ಫೊಲಿಯೆಂಟ್

ಸತ್ತ ಚರ್ಮದ ಕಣಗಳು ಮತ್ತು ಪದರಗಳನ್ನು ನಿಯಮಿತವಾಗಿ ತೆಗೆದುಬಿಡುವುದು ಚರ್ಮದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಇದನ್ನು ಪ್ರತಿದಿನ ಮಾಡಬಾರದು. ಅಡುಗೆ ಸೋಡವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮುಖವನ್ನು ತೊಳೆಯಿರಿ. ನಂತರ ನಿಮ್ಮ ಮುಖವನ್ನು ಮೃದುವಾಗಿ ಉಜ್ಜಿರಿ. 10 ನಿಮಿಷಗಳ ಕಾಲ ಈ ಮಿಶ್ರಣ ಮುಖದ ಮೇಲಿರಲಿ. ಆನಂತರ ಅದನ್ನು ತೊಳೆಯಿರಿ.

ನ್ಯಾಚುರಲ್ ಸ್ಪಾ

ನ್ಯಾಚುರಲ್ ಸ್ಪಾ

ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ಪಾ ಮಾಡಿಕೊಳ್ಳುವುದು ಅಗತ್ಯ. ಬಿಸಿನೀರಿನ ಸ್ನಾನ ದೇಹಕ್ಕೆ ಆರಾಮ ಒದಗಿಸುತ್ತದೆ. ನಿಮ್ಮ ಸ್ನಾನದ ಟಬ್ಬಿನಲ್ಲಿ ನೀರು ತುಂಬಿ ಅದರೊಳಗೆ ಒಂದು ಕಪ್ ಓಟ್ಸ್, ಒಂದು ಕಪ್ ಉಪ್ಪು, 2 ಟೀಚಮಚ ತರಕಾರಿ ಎಣ್ಣೆ ಮತ್ತು 3 ಟೀಚಮಚ ವೆನಿಲ್ಲಾ ಎಕ್ಸ್ ಟ್ರ್ಯಾಕ್ಟ್ ಹಾಕಿ. 5 ನಿಮಿಷದ ನಂತರ ಈ ಬಿಸಿನೀರಿನಲ್ಲಿ ಸ್ನಾನ ಮಾಡಿ.

ನಗು

ನಗು

ಸುಂದರ ನಗುವಿಗೆ ಹೊಳೆಯುವ ಹಲ್ಲುಗಳು ಮೆರುಗನ್ನು ತರುತ್ತವೆ. ದಿನಕ್ಕೆರಡು ಬಾರಿ ಹಲ್ಲುಜುವುದರಿಂದ ಕಲೆಗಳಿಂದ ದೂರವುಳಿಯಬಹುದು. ಜೊತೆಗೆ ಹಲ್ಲಿನ ಮೇಲೆ ಕಲೆಯುಳಿಸುವ ಆಹಾರಗಳಿಂದ ದೂರವಿರಿ.

ಮನೆಯಲ್ಲೇ ತಯಾರಿಸಿದ ಕಂಡೀಷನರ್

ಮನೆಯಲ್ಲೇ ತಯಾರಿಸಿದ ಕಂಡೀಷನರ್

1 ಟೀಚಮಚ ಜೇನುತುಪ್ಪ ಮತ್ತು 2 ಟೀಚಮಚ ತಾಜಾ ಕ್ರೀಂ ಅನ್ನು ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ. 10 ನಿಮಿಷದ ತರುವಾಯ ಮುಖ ತೊಳೆದುಕೊಳ್ಳಿ.

ಸುಕ್ಕುಗಟ್ಟುವಿಕೆ

ಸುಕ್ಕುಗಟ್ಟುವಿಕೆ

ಹರಳೆಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಚರ್ಮ ಮೃದುವಾಗುತ್ತದೆ. ಜೊತೆಗೆ ಇದು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನವಾಗಿಸುತ್ತದೆ.

ಚರ್ಮದ ಆರೈಕೆ

ಚರ್ಮದ ಆರೈಕೆ

ಉದ್ದಿನ ಬೇಳೆ ಮತ್ತು 5-6 ಬಾದಾಮಿಯನ್ನು ಹಿಂದಿನ ರಾತ್ರಿಯೆ ನೆನಸಿಡಿ. ಬೆಳಗ್ಗೆ ಇದನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ನಂತರ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ. ಈ ಪ್ರೊಟಿನ್ ಮಾಸ್ಕ್ ನಿಮ್ಮ ಚರ್ಮಕ್ಕೆ ಆರೈಕೆ ಮಾಡುತ್ತದೆ ಮತ್ತು ನಿಮ್ಮ ಕಾಂಪ್ಲೆಕ್ಷನ್ ಕೂಡ ಹೆಚ್ಚಿಸುತ್ತದೆ.

ಪಿಗ್ಮೆಂಟೇಶನ್

ಪಿಗ್ಮೆಂಟೇಶನ್

ಆಲೂಗಡ್ಡೆಯ ತುಂಡುಗಳನ್ನು ಪಿಗ್ಮೆಂಟ್ ಗಳಿರುವ ಜಾಗದಲ್ಲಿ ಉಜ್ಜಿ. ಆಲೂಗಡ್ಡೆಯಲ್ಲಿನ ರಸ ಕಲೆಗಳನ್ನು ತೆಗೆಯುತ್ತದೆ ಮತ್ತು ನಿಮ್ಮನ್ನು ಸುಂದರವಾಗಿಸುತ್ತದೆ.

ಸನ್ ಸ್ಕ್ರೀನ್ ಲೋಶನ್

ಸನ್ ಸ್ಕ್ರೀನ್ ಲೋಶನ್

ಸೌತೆಕಾಯಿ ರಸ, ಗ್ಲಿಸರಿನ್ ಮತ್ತು ರೋಸ್ ವಾಟರ್ ಮಿಶ್ರ ಮಾಡಿ. ಇದನ್ನು ನೀವು ಮನೆಯಿಂದ ಹೊರಡುವ ಒಂದು ಗಂಟೆ ಮೊದಲು ಹಚ್ಚಿಕೊಳ್ಳಿ.

ಚರ್ಮದ ಹೊಳಪಿಗೆ

ಚರ್ಮದ ಹೊಳಪಿಗೆ

ತೆಂಗಿನಕಾಯಿ ತುರಿಯಿಂದ ಹಾಲನ್ನು ಹಿಂಡಿಕೊಳ್ಳಿ. ಇದನ್ನು ನಿಮ್ಮ ತುಟಿ ಮುಖದ ಮೇಲೆ ವೃತ್ತಾಕಾರವಾಗಿ ಹಚ್ಚಿಕೊಳ್ಳಿ. ಈ ತೆಂಗಿನ ಹಾಲು ನಿಮ್ಮ ಮುಖಕ್ಕೆ ಸಹಜ ಹೊಳಪನ್ನು ತಂದುಕೊಡುತ್ತದೆ.

ಬಾಡಿ ಸ್ಕ್ರಬ್

ಬಾಡಿ ಸ್ಕ್ರಬ್

ಒಂದು ಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ಉಪ್ಪನ್ನು ಮಿಶ್ರ ಮಾಡಿ ಅದನ್ನು ನಿಮ್ಮ ದೇಹದ ಮೇಲೆ ಉಜ್ಜಿಕೊಳ್ಳಿ. ಇದು ಅತ್ಯಂತ ಕಡಿಮೆ ವೆಚ್ಚದ ಮತ್ತು ಸರಳವಾದ ಸ್ಕ್ರಬ್.

ಕಾಲಿನ ಕೂದಲನ್ನು ತೆಗೆಯುವಾಗ

ಕಾಲಿನ ಕೂದಲನ್ನು ತೆಗೆಯುವಾಗ

ನಿಮ್ಮ ಕಾಲಿನ ಕೂದಲನ್ನು ಶೇವ್ ಮಾಡುವ ಮುನ್ನ ತೆಂಗಿನೆಣ್ಣೆಯನ್ನು ಹಚ್ಚಿ ಇದು ಹೊಳಪನ್ನು ಹೆಚ್ಚಿಸುತ್ತದೆ.

English summary

Natural Beauty Tips For A Beautiful You

There are some of the most simpliest beauty tips you would have heard from your mum and grand mum and even from your friends.
Story first published: Thursday, December 19, 2013, 11:54 [IST]
X
Desktop Bottom Promotion