For Quick Alerts
ALLOW NOTIFICATIONS  
For Daily Alerts

ಹಳದಿ ಹಲ್ಲುಗಳಿಗೆ ಗುಡ್ ಬೈ ಹೇಳಬೇಕೆ?

|

ಮುತ್ತಿನಂತಹ ಹಲ್ಲುಗಳು ಕೇವಲ ನಮ್ಮ ಸೌಂದರ್ಯ ಮಾತ್ರವಲ್ಲ, ನೋಡುಗರೂ ನಮ್ಮ ನಗುವನ್ನು ಇಷ್ಟ ಪಡುವಂತೆ ಮಾಡುತ್ತದೆ. ಹಳದಿ ಹಲ್ಲುಗಳನ್ನು ನೋಡಲು ಯಾರೂ ಇಷ್ಟಪಡುವುದಿಲ್ಲ. ಕಾಫಿ, ಟೀ ಕುಡಿಯುವ ಅಭ್ಯಾಸ, ಸಿಗರೇಟ್ ಚಟವಿದ್ದರೆ ಹಲ್ಲುಗಳು ಬೇಗನೆ ಹಳದಿಯಾಗುತ್ತದೆ. ಈ ರೀತಿ ಹಳದಿ ಬಣ್ಣಕ್ಕೆ ತಿರುಗಿದ ಹಲ್ಲುಗಳಿಗೆ ಬರೀ ಬ್ರಷ್ ಹಾಕಿ ತಿಕ್ಕಿದರೆ ಅಷ್ಟೇನು ಬೆಳ್ಳಗಾಗುವುದಿಲ್ಲ.

ಕೆಲವರು ಹಲ್ಲನ್ನು ಸ್ವಚ್ಛ ಮಾಡಿಸಲು ಡೆಂಟಲ್ ಕೇರ್ ಗೆ (ದಂತ ಚಿಕಿತ್ಸೆಗೆ) ಹೋಗುತ್ತಾರೆ. ಆದರೆ ಡೆಂಟಲ್ ಕೇರ್ ಗೆ ಹೋಗದೆಯೇ ಕೆಲವೊಂದು ಸರಳವಾದ ವಸ್ತುಗಳನ್ನು ಬಳಸಿ ಬಿಳುಪಾದ ಹಲ್ಲುಗಳನ್ನು ಪಡೆಯಿರಿ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ:

 ನಿಂಬೆ ಹಣ್ಣಿನ ತುಂಡು

ನಿಂಬೆ ಹಣ್ಣಿನ ತುಂಡು

ನಿಂಬೆ ಹಣ್ಣನ್ನು ಚಿಕ್ಕ ತುಂಡಾಗಿ ಕತ್ತರಿಸಿ. ಪೇಸ್ಟ್ ಹಾಕಿ ಹಲ್ಲುಜ್ಜಿದ ನಂತರ ನಿಂಬೆ ಹಣ್ಣಿನ ತುಂಡಿನಿಂದ ಹಲ್ಲನ್ನು ಉಜ್ಜಿ. ಈ ರೀತಿ ಮಾಡಿದರೆ ಹಲ್ಲಿನಲ್ಲಿರುವ ಹಳದಿ ಬಣ್ಣ ಮಾಯವಾಗಿ ಹಲ್ಲಿನ ಬಿಳುಪು ಹೆಚ್ಚುವುದು.

ಉಪ್ಪು

ಉಪ್ಪು

ಪ್ರತೀದಿನ ಹಲ್ಲುಜ್ಜಿದ ಬಳಿಕ, ಸ್ವಲ್ಪ ಉಪ್ಪು ಹಾಕಿ ಹಲ್ಲುಜ್ಜುವುದರಿಂದ ಹಲ್ಲುಗಳು ಬೆಳ್ಳಗಾಗಿ ಇರುವುದು ಮಾತ್ರವಲ್ಲ, ಬಲವಾಗಿಯೂ ಇರುತ್ತದೆ.

 ಮಸಿ

ಮಸಿ

ಸೌದೆ ಹೊತ್ತಿಸಿ, ಅದು ಕೆಂಡವಾದಾಗ ಆ ಕೆಂಡವನ್ನು ನೀರು ಹಾಕಿ ತಣಿಸಿದರೆ ಕಪ್ಪು ಮಸಿ ಉಂಟಾಗುತ್ತದೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಸ್ವಚ್ಛವಾಗುವುದು. ಹಿಂದಿನ ಕಾಲದಲ್ಲಿ ಹಲ್ಲುಜ್ಜಲು ಇದೇ ವಿಧಾನವನ್ನು ಬಳಸುತ್ತಿದ್ದರು, ಅವರ ಹಲ್ಲುಗಳು ಗಟ್ಟಿಮುಟ್ಟಾಗಿ ಇರುತ್ತಿತ್ತು.

 ಕಿತ್ತಳೆಯ ಸಿಪ್ಪೆ

ಕಿತ್ತಳೆಯ ಸಿಪ್ಪೆ

ಕಿತ್ತಳೆಯ ಸಿಪ್ಪೆಯಿಂದ ಹಲ್ಲು ಉಜ್ಜಿದರೆ ಹಲ್ಲಿನಲ್ಲಿರುವ ಹಳದಿ ಬಣ್ಣ ಮಾಯವಾಗುತ್ತದೆ.

ಆಪಲ್ ಸೈಡರ್ ವಿನಿಗರ್

ಆಪಲ್ ಸೈಡರ್ ವಿನಿಗರ್

ಸ್ವಲ್ಪ ವಿನಿಗರ್ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿಯೂ ದುರ್ವಾಸನೆ ಬೀರುವುದಿಲ್ಲ, ಹಲ್ಲು ಕೂಡ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ.

ಲವಂಗದ ಎಣ್ಣೆ

ಲವಂಗದ ಎಣ್ಣೆ

ಹಲ್ಲುಜ್ಜುವಾಗ ಪೇಸ್ಟ್ ಜೊತೆ ಒಂದು ಹನಿ ಲವಂಗದ ಎಣ್ಣೆ ಹಾಕಿ ಹಲ್ಲು ತಿಕ್ಕಿದರೆ ಹಲ್ಲು ಬಿಳಿ ಬಣ್ಣದಲ್ಲಿರುತ್ತದೆ.

 ಕಹಿ ಬೇವಿನ ಎಲೆ

ಕಹಿ ಬೇವಿನ ಎಲೆ

ಬೇವಿನ ಗಿಡದ ಚಿಕ್ಕ ಕಡ್ಡಿಯನ್ನು ಜಜ್ಜಿ ಅದರಿಂದ ಹಲ್ಲು ಉಜ್ಜಿದರೆ ಹಲ್ಲು ತುಂಬಾ ಸ್ವಚ್ಛವಾಗುವುದು.

ಪಲಾವ್ ಎಲೆ

ಪಲಾವ್ ಎಲೆ

ಪಲಾವ್ ಎಲೆಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿ ಇವುಗಳಿಂದ ಹಲ್ಲು ಉಜ್ಜಿ ನೋಡಿ, ಮುತ್ತಿನಂತಹ ಹಲ್ಲು ನಿಮ್ಮದಾಗುವುದು.

English summary

Kitchen Ingredients For White Teeth | Tips For Body Care | ಬಿಳಿ ಹಲ್ಲು ಪಡೆಯಲು ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

You can also include these home ingredients to get white teeth naturally. These ingredients are easily available in your kitchen and effective too. So, make full use of these kitchen ingredients to get white teeth naturally.
X
Desktop Bottom Promotion