For Quick Alerts
ALLOW NOTIFICATIONS  
For Daily Alerts

ಪಾದ ದುರ್ವಾಸನೆ ಬೀರುವುದನ್ನು ತಡೆಯಲು ಟಿಪ್ಸ್

By Super
|

ಕಾಲಿನಲ್ಲಿ ವಾಸನೆ ಕಾಣಿಸಿಕೊಳ್ಳುವುದು ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಾಕಷ್ಟು ಮನೆಮದ್ದುಗಳು ಪರಿಹಾರ ಒದಗಿಸಬಹುದು. ಇಡೀ ದಿನ ಕಾಲು ಸಾಕ್ಸ್ ಅಥವಾ ಶೂ, ಚಪ್ಪಲಿಗಳಿಂದ ಮುಚ್ಚಿದ್ದರೆ ಅಲ್ಲಿ ಸುಲಭವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಬಹುದು. ಕಾಲಿನ ಉಷ್ಣತೆ ಹಾಗೂ ತೇವಾಂಶ ಕಾಲಿನಲ್ಲಿ ವಾಸನೆಯನ್ನು ಉಂಟುಮಾಡಬಹುದು. ಈ ಸಮಸ್ಯೆಗೆ ಮೊದಲ ಪರಿಹಾರಾರ್ಥವಾಗಿ, ನಿಮ್ಮ ಶೂ ಹಾಗೂ ಸಾಕ್ಸ್ ಗಳನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಹಾರ್ಮೋನ್ ಗಳ ತೊಂದರೆ ಅತಿಯಾದ ಒತ್ತಡ, ಚಿಕಿತ್ಸೆಗಳೂ ಕೂಡ ಕಾಲಿನಲ್ಲಿ ಉಂಟಾಗುವ ವಾಸನೆಗಳಿಗೆ ಕಾರಣವಾಗಬಹುದು.

ಅಡುಗೆ ಸೋಡ ಕಾಲಿನ ದುರ್ಗಂಧವನ್ನು ತೊಡೆದುಹಾಕುವಲ್ಲಿ ಸಹಾಯಕ. ಸ್ವಲ್ಪ ಬಿಸಿ ನೀರಿಗೆ ಅಡಿಗೆ ಸೋಡವನ್ನು ಬೆರೆಸಿ ಕಾಲನ್ನು ತೊಳೆದರೆ ವಾಸನೆಯನ್ನು ಹೋಗಲಾಡಿಸಬಹುದು. ಕಾಲಿನ ದುರ್ಗಂಧವನ್ನು ಹೋಗಲಾಡಿಸಲು ಸಾಕ್ಸ್ ನ್ನು ವಿನೆಗರ್ ಬೆರೆಸಿದ ನೀರಿನಲ್ಲಿ ಅದ್ದು ತೊಳೆದರೆ ವಾಸನೆ ದೂರವಾಗುತ್ತದೆ. ಕಾಲಿನ ವಾಸನೆ ನಿಮಗೆ ತೀರ್ವ ಸಮಸ್ಯೆಯಾಗಿದ್ದರೆ ದಿನದಲ್ಲಿ ಕೆಲವು ಬಾರಿ ಬ್ಯಾಕ್ಟೀರಿಯಾ ವಿರೋಧಿ ಸೋಪ್ ಬಳಸಿ ಕಾಲನ್ನು ಸ್ವಚ್ಛ ಗೊಳಿಸಿ.

ನಿಮ್ಮ ಪಾದಗಳು ಶೂಗಳಿಂದಾಗಿ ಬಹಳ ಹೊತ್ತು ಮುಚ್ಚಲ್ಪಟ್ಟಿದ್ದರೆ ಕಾಲಿನಲ್ಲಿ ದುರ್ನಾತ ಆರಂಭವಾಗುತ್ತದೆ. ಅಲ್ಲದೇ ಸಾಕ್ಸ್ ಗಳನ್ನು ಬಳಸುವುದರಿಂದ ಈ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತದೆ. ಬ್ಯಾಕ್ಟೀರಿಯಾಗಳೇ ಇದಕ್ಕೆ ಕಾರಣ! ಈ ವಾಸ್ತವ Dreddyclinic.com (ಡಾ,ಎಡ್ಡಿ ಕ್ಲಿನಿಕ್) ನಿಂದ ಬೆಂಬಲಿಸಲ್ಪಟ್ಟಿದೆ. ಶೂ ಹಾಕುವುದರಿಂದ ಅಲ್ಲಿ ಉಂಟಾಗುವ ಉಷ್ಣತೆ ಹಾಗೂ ತೇವಾಂಶ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಪಾದದ ಅಡಿಯಲ್ಲಿರುವ ಸಹಸ್ರ ಬೆವರಿನ ಗ್ರಂಥಿಗಳು ಕಾಲಿನ ವಾಸನೆಯನ್ನು ಸೃಷ್ಟಿಸುತ್ತವೆ. ಬ್ಯಾಕ್ಟೀರಿಯಾಗಳು ಸ್ರವಿಸುವ ಒವಲೆರಿಕ್ ಆಮ್ಲ ಪಾದಗಳ ವಾಸನೆಗೆ ನಿಜವಾದ ಕಾರಣ. ನಿಮ್ಮ ಪಾದದ ವಾಸನೆಯ ಸಮಸ್ಯೆಯನ್ನು ನೀಗಿಸುವ ಕೆಲವು ಮನೆಮದ್ದುಗಳನ್ನು ಇಲ್ಲಿ ಹೇಳಲಾಗಿದೆ.

1. ಸಾಕ್ಸ್ ಮತ್ತು ಶೂಗಳನ್ನು ಸ್ವಚ್ಛವಾಗಿಡಿ

1. ಸಾಕ್ಸ್ ಮತ್ತು ಶೂಗಳನ್ನು ಸ್ವಚ್ಛವಾಗಿಡಿ

ಶೂ ಹಾಗೂ ಸಾಕ್ಸ್ ಗಳನ್ನು ಸ್ವಚ್ಛವಾಗಿಡುವುದರಿಂದ ಕಾಲಿನಲ್ಲಿ ಕಾಣಿಸಿಕೊಳ್ಳುವ ವಾಸನೆಯ ಸಮಸ್ಯೆಯಿಂದ ದೂರವಿರಬಹುದು. ಶೂ ಹಾಗೂ ಸಾಕ್ಸ್ ಗಳನ್ನು ಯಾವಾಗಲೂ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಲೆದರ್ ಶೂ ಆಗಿದ್ದರೆ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯದವರೆಗೆ ಇಡಿ. ಈ ಶೂಗಳ ಒಳಗಡೆ ಸ್ವಲ್ಪ ಪ್ರಮಾಣದಲ್ಲಿ ಅಡುಗೆ ಸೋಡವನ್ನು ಹಾಕುವುದರಿಂದ ದುರ್ಗಂಧವನ್ನು ದೂರಮಾಡಬಹುದು.

2. ಚಹಾ ಮತ್ತು ನೀರು

2. ಚಹಾ ಮತ್ತು ನೀರು

ಕಾಲಿನ ವಾಸನೆಯ ತೊಂದರೆ ತೀರ್ವವಾಗಿ ಮಾರ್ಪಟ್ಟಿದ್ದರೆ ಟೀ ಬ್ಯಾಗ್ ಮತ್ತು ಬಿಸಿ ನೀರನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಒಂದು ಟಬ್ ನಲ್ಲಿ ನೀರನ್ನು ಹಾಕಿ ಅದಕ್ಕೆ ಕೆಲವು ಟೀ ಬ್ಯಾಗ್ ಗಳನ್ನು ಹಾಕಿ. ನಂತರ ಟಬ್ ನಲ್ಲಿ ನಿಮ್ಮ ಪಾದಗಳನ್ನು ಅರ್ಧಗಂಟೆಯವರೆಗೆ ಹಾಗೆಯೇ ಅದ್ದಿ (ಸೋಕಿಂಕ್).

3. ಆಪಲ್ ಸೈಡರ್ ವಿನೆಗರ್

3. ಆಪಲ್ ಸೈಡರ್ ವಿನೆಗರ್

ಟಬ್ ನಲ್ಲಿ ನೀರನ್ನು ಹಾಕಿ ಅದರಲ್ಲಿ ಆಪಲ್ ಸೈಡರ್ ವಿನೇಗರ್ ನ್ನು ಹಾಕಿ ಸ್ಪಲ್ಪ ಸಮಯದ ವರೆಗೆ ಕಾಲನ್ನು ನೀರಿನಲ್ಲಿ ಅದ್ದಿ. ಇದು ಕಾಲಿನ ವಾಸನೆಗೆ ಉತ್ತಮ ಪರಿಹಾರ ಒದಗಿಸುತ್ತದೆ.

4. ಆಂಟಿಬ್ಯಾಕ್ಟೀರಿಯಲ್ ಸೋಪ್

4. ಆಂಟಿಬ್ಯಾಕ್ಟೀರಿಯಲ್ ಸೋಪ್

ಕಾಲಿನ ವಾಸನೆಯನ್ನು ತೊಡೆದುಹಾಕಲು, ಕನಿಷ್ಠ ದಿನಕ್ಕೆ ಎರಡು ಬಾರಿ ನಿಯಮಿತವಾಗಿ ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ಪಾದಗಳನ್ನು ಸ್ವಚ್ಛಗೊಳಿಸುವುದನ್ನು ರೂಢಿಸಿಕೊಳ್ಳಿ. ಇದು ಕೆಟ್ಟ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಿಷ್ಕ್ರಿಯಗೊಳ್ಳುತ್ತವೆ.

5. ಬಾಯ್ಲ್ ರೈಸ್ ವಾಟರ್

5. ಬಾಯ್ಲ್ ರೈಸ್ ವಾಟರ್

ಶಾಶ್ವತವಾಗಿ ಕಾಲಿನ ವಾಸನೆಯನ್ನು ತೆಗೆಯಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು, ಅಕ್ಕಿ ನೀರಿನಲ್ಲಿ ಕಾಲನ್ನು ನೆನೆಸುವುದು./ಅದ್ದುವುದು. ನೀರಿನಲ್ಲಿ ಅಕ್ಕಿಯನ್ನು ಹಾಕಿ, ನಂತರ ಅಕ್ಕಿಯ ಸಾರ ಬಿಡುತ್ತಿದ್ದಂತೆ ಅಕ್ಕಿಯನ್ನು ತೆಗೆದು ಆ ನೀರಿನಲ್ಲಿ ಕಾಲನ್ನು ಅರ್ಧ ಗಂಟೆಗಳ ಕಾಲ ಅದ್ದಿ. ಹೀಗೆ ಮಾಡುವುದರಿಂದ ಕಾಲಿನಲ್ಲಿ ವಾಸನೆ ಎಂದಿಗೂ ಮರಳುವುದಿಲ್ಲ.

6. ಕೋಷರ್ ಉಪ್ಪು

6. ಕೋಷರ್ ಉಪ್ಪು

ನಿಮ್ಮ ಪಾದಗಳು ಅತಿಯಾಗಿ ಬೆವರಿದ ಸಮಯದಲ್ಲಿ, ವಾಸನೆಯನ್ನು ತೆಗೆದು ಹಾಕಲು ಕೋಷರ್ ಉಪ್ಪು ಸಹಾಯ ಮಾಡಬಹುದು. ಒಂದು ಟಬ್ ನಲ್ಲಿ ನೀರನ್ನು ಹಾಕಿ ಇದಕ್ಕೆ ಕೋಷರ್ ಉಪ್ಪು ಹಾಕಿ ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಲ್ಲಿ ಪಾದಗಳು ಅದ್ದಿ. ಇದು ವಾಸನೆಯನ್ನು ಶಾಶ್ವತವಾಗಿ ಹೋಗಲಾಡಿಸುತ್ತದೆ. ಈ ನೀರನ್ನು ಪುನರ್ ಬಳಕೆ ಮಾಡಬೇಡಿ.

7. ಆಂಟಿಪರ್ ಸ್ಪಿರೆಟ್ಸ್ (Antiperspirants)

7. ಆಂಟಿಪರ್ ಸ್ಪಿರೆಟ್ಸ್ (Antiperspirants)

ನೀವು ದೇಹದ ವಿವಿಧ ಭಾಗಗಳಲ್ಲಿ ಡಿಯೊಡ್ರಂಟ್ ಗಳನ್ನು ಬಳಸುವ ರೀತಿಯಲ್ಲಿ, ನಿಮ್ಮ ಕಾಲುಗಳ ಮೇಲೆಯೂ ಅವುಗಳನ್ನು ಸ್ಪ್ರೇ ಮಾಡಬಹುದು. ಇದು ಖಂಡಿತವಾಗಿಯೂ ಅಡಿ ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಂದೆ ವಾಸನೆ ಬರದಂತೆ ತಡೆಯುತ್ತದೆ. ನೀವು ಬೆವರನ್ನು ನಿಲ್ಲಿಸಲು ಪೌಡರ್ ನ್ನು ಸಹ ಬಳಸಬಹುದು.

8. ಸರಿಯಾದ ಆಹಾರ

8. ಸರಿಯಾದ ಆಹಾರ

ಕಾಲಿನ ವಾಸನೆ ನೀವು ಸೇವಿಸುವ ಆಹಾರ ರೀತಿಗೂ ಸಂಬಂಧಿಸಿದೆ. ನೀವು ಈರುಳ್ಳಿ, ಮೆಣಸು, ಬೆಳ್ಳುಳ್ಳಿ ಇತ್ಯಾದಿ ಕೆಲವು ಬಲವಾದ ಸುವಾಸನೆಯುಳ್ಳ ವಸ್ತುಗಳನ್ನು ಸೇವಿಸಿದರೆ ಕಾಲಿನಲ್ಲಿ ಹೆಚ್ಚಿನ ವಾಸನೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ನೀವು ದೀರ್ಘಕಾಲದವರೆಗೆ ಬೂಟುಗಳನ್ನು ಧರಿಸುವುದಾದರೆ ಇಂತಹ ಆಹಾರಗಳಿಂದ ದೂರವಿರಿ!

English summary

Home Remedies For Foot Odour

The isovaleric acid secreted by these bacteria is the actual reason of the bad smell of the feet. Here are some home remedies that can stop the feet from stinking, thus assisting you to avoid an embarrassing situation in public.
X
Desktop Bottom Promotion