For Quick Alerts
ALLOW NOTIFICATIONS  
For Daily Alerts

ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

|

ಬೇಸಿಗೆ ಕಾಲ ಬರುತ್ತಿದೆ, ಸೌಂದರ್ಯದ ವಿಷಯದಲ್ಲಿ ಕೆಲವೊಂದು ಅಂಶಗಳು ಮಹಿಳೆಯರನ್ನು ಚಿಂತೆಗೀಡು ಮಾಡುತ್ತದೆ. ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿಡುವ ಆಹಾರಗಳನ್ನು ತಿನ್ನುತ್ತೇವೆ, ಬೇಸಿಗೆಗಾಲ ಪ್ರಾರಂಭವಾದ ತಕ್ಷಣ ತಂಪಾದ ಆಹಾರಗಳ ಕಡೆ ಹೆಚ್ಚು ಗಮನ ಕೊಡಬೇಕು. ಕೋಲ್ಡ್ ಕ್ರೀಮ್ ಹಚ್ಚುವುದನ್ನು ನಿಲ್ಲಿಸಬೇಕು, ಸನ್ ಟ್ಯಾನ್(sun tan) ಬೀಳದಂತೆ ತ್ವಚೆ ರಕ್ಷಣೆ ಮಾಡಬೇಕು.

ತೆಳ್ಳಗಾಗಲು ಪ್ರಯತ್ನಿಸುವವರು ಸ್ಟ್ರೆಚ್ ಮಾರ್ಕ್ಸ್ ಬೀಳದಂತೆ ಎಚ್ಚರಿಕೆವಹಿಸಬೇಕು. ನಿಮ್ಮ ದೇಹವನ್ನು ಸ್ಕ್ರಬ್ ಮಾಡುವು,ದು ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ಮಾಡಿದರೆ ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಣೆ ಮಾಡಬಹುದು.

Home To Make coffee body scrub recipe

ಬೇಕಾಗುವ ಸಾಮಾಗ್ರಿಗಳು
ತೆಂಗಿನೆಣ್ಣೆ
ಸಕ್ಕರೆ ಅರ್ಧ ಕಪ್
ಕಾಫಿ ಪುಡಿ ಅರ್ಧ ಕಪ್
ಸೂಜಿ ರವೆ ಅರ್ಧ ಕಪ್

ಸೂಚನೆ
* ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಬೇಕು, ನಂತರ ನಿಮಗೆ ಯಾವ ರೀತಿ ರೀತಿಯ ಸ್ಕ್ರಬ್ ಬೇಕು ಹಾಗೇ ಎಣ್ಣೆ ಹಾಕಿ. ಅಂದರೆ ಎಣ್ಣೆ ಸ್ನಾನ ಬೇಕೆಂದು ಬಯಸಿದರೆ ಎಣ್ಣೆ ಸ್ವಲ್ಪ ಜಾಸ್ತಿ ಹಾಕಿ, ಇಲ್ಲದಿದ್ದರೆ ಸ್ವಲ್ಪ ಹಾಕಿದರೆ ಸಾಕು. ನಂತರ ಈ ಮಿಶ್ರಣವನ್ನು ಚೆನ್ನಾಗಿ ಕದಡಿ.

ಬಳಸುವುದು ಹೇಗೆ?

* ಸ್ನಾನ ಮಾಡಲು ಹೊರಡುವಾಗ ಈ ಮಿಶ್ರಣವನ್ನು ಮಾಡಿ, ಇಲ್ಲದಿದ್ದರೆ ರವೆ ತುಂಬಾ ಮೆತ್ತಗಾಗುತ್ತದೆ.

* ನಂತರ ಇದನ್ನು ಮೈಗೆ ಸೋಪು ಹಚ್ಚುವ ಮೊದಲು ಹಚ್ಚಿ. ಕಣ್ಣಿಗೆ ಹಚ್ಚಬೇಡಿ.

* ನಂತರ ಈ ಮಿಶ್ರಣವನ್ನು ಉಜ್ಜಿ. ಸಕ್ಕರೆ ಕರಗುವವರೆಗೆ ಉಜ್ಜಿ. ನಂತರ 10 ನಿಮಿಷಗಳವರೆಗೆ ಬಿಡಿ. (ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ 2 ನಿಮಿಷದಲ್ಲಿಯೇ ಫೇಶ್ ವಾಶ್ ಬಳಸಿ ತೊಳೆದು ಬಿಡಿ).

* ನಂತರ ಸ್ನಾನಕ್ಕೆ ಬಳಸುವ ಸೋಪು ಹಚ್ಚಿ ಮೈ ತಿಕ್ಕಿದರೆ ತ್ವಚೆ ಸುಂದರವಾಗಿ, ನುಣಪಾಗಿ ಕಾಣುವುದು.

ಸಲಹೆ
* ಇದನ್ನು ವಾರದಲ್ಲಿ 2-3 ಬಾರಿ ಮಾತ್ರ ಹಚ್ಚಿ.
* ಈ ಸ್ಕ್ರಬ್ ನಿಂದ ಮೈ ತಿಕ್ಕಿದರೆ ಬಿಸಿ ನೀರಿನಿಂದ ಸ್ನಾನಮಾಡಬೇಕು.
* ಸ್ನಾನ ಮಾಡಿದ ಬಳಿಕ ಮೈಯನ್ನು ಟವಲ್ ನಿಂದ ಉಜ್ಜಬೇಡಿ. ಮೃದು ಟವಲ್ ನಿಂದ ಮೆಲ್ಲನೆ ಮೈಗೆ ಅದುಮಿ, ನಂತರ ಸ್ವಲ್ಪ ಹೊತ್ತಿನವರೆಗೆ ಸಡಿಲವಾದ ಡ್ರೆಸ್ ಧರಿಸಿ.

ಈ ಸ್ಕ್ರಬ್ ನಿಮ್ಮ ಮೈಯ ಹೊಳಪನ್ನು ಹೆಚ್ಚಿಸುವುದು.

English summary

Home To Make coffee body scrub recipe | Tips For Body Care | ಕಾಫಿ ಬಾಡಿ ಸ್ಕ್ರಬ್ ಮಾಡುವುದು ಹೇಗೆ | ದೇಹದ ಆರೈಕೆಗೆ ಕೆಲ ಸಲಹೆಗಳು

With summer approaching and the temperature rising, there are a few things that begin to worry women. As layers of clothing start coming off, here are a few things about your body that signal immediate attention.
X
Desktop Bottom Promotion