For Quick Alerts
ALLOW NOTIFICATIONS  
For Daily Alerts

ಕಂಕುಳಿನ ದುರ್ವಾಸನೆಗೆ ನಿವಾರಿಸಲು ಸಲಹೆಗಳು

By Super
|

ಕಂಕುಳಿನಿಂದ ಬರುವ ದುರ್ವಾಸನೆಗಿಂತ ದೊಡ್ಡದಾದ ಮುಜುಗರ ಮತ್ತೊಂದು ಇರಲಿಕ್ಕಿಲ್ಲ. ಈ ದುರ್ವಾಸನೆಗೆ ಹಲವಾರು ರೀತಿಯ ಕಾರಣಗಳಿರಬಹುದು. ಇದರಲ್ಲಿ ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿ, ಕಂಕುಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದು, ಫಂಗಲ್ ಬೆಳವಣಿಗೆ, ಅತಿಯಾದ ಬೊಜ್ಜು, ಹಾರ್ಮೋನ್, ಅನುವಂಶಿಕ, ಹವಾಮಾನ ಇತ್ಯಾದಿ. ಕಾರಣ

ಏನೇ ಆಗಿದ್ದರೂ ಕೂಡ ಇದನ್ನು ನಿವಾರಿಸಿ ಸಾಮಾಜಿಕ ಮುಜುಗರವನ್ನು ತಪ್ಪಿಸಬೇಕು ಮತ್ತು ಇದನ್ನು ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಅದು ಚರ್ಮರೋಗಕ್ಕೆ ಕಾರಣವಾಗಬಹುದು. ಇದಕ್ಕೆ ಹಲವಾರು ಮನೆಮದ್ದುಗಳು ಮತ್ತು ಕಂಕುಳಿನ ದುರ್ವಾಸನೆ ನಿವಾರಣಿಗೆ ಸುಲಭ ವಿಧಾನಗಳಿವೆ. ಸರಳ ವಿಧಾನವೆಂದರೆ ಸ್ನಾನದ ವೇಳೆ ಕಂಕುಳನ್ನು ಆ್ಯಂಟಿ ಬ್ಯಾಕ್ಟೀರಿಯಾ ಅಥವಾ

ಆ್ಯಂಟಿ ಫಂಗಲ್ ಸೋಪ್ ಅಥವಾ ಕಾರಕಗಳಿಂದ ತೊಳೆಯಬೇಕು. ನಿಮ್ಮ ಚರ್ಮಕ್ಕೆ ಹೊಂದಿಕೊಂಡು ಮಾರುಕಟ್ಟೆಯಲ್ಲಿ ಸಿಗುವ ಡಿಯೋಡ್ರೆಂಟ್ ಗಳನ್ನು ಬಳಸಬಹುದು. ಕೆಲವು ಸಲ ಕಂಕುಳಿನಿಂದ ಬರುವ ದುರ್ವಾಸನೆಗೆ ನೀವು ಧರಿಸಿರುವ ಬಟ್ಟೆಯು ಕಾರಣವಾಗಿರಬಹುದು. ಸರಿಯಾಗಿ ಬಟ್ಟೆಯನ್ನು ತೊಳೆಯದೆ ಅಥವಾ ಒಂದೇ ಬಟ್ಟೆಯನ್ನು ಪ್ರತೀ ದಿನ

ಬಳಸುವುದರಿಂದ ಹೀಗೆ ಆಗಬಹುದು. ಬ್ಯಾಕ್ಟೀರಿಯಾ ಮತ್ತು ಫಂಗಲ್ ನ್ನು ತೊಳೆದುಹಾಕಬಲ್ಲ ಡಿಟರ್ಜೆಂಟ್ ನ್ನು ಉಪಯೋಗಿಸಿ ಮತ್ತು ಬಟ್ಟೆಗಳಿಗೆ ಒಳ್ಳೆಯ ಸುಗಂಧ ದ್ರವ್ಯಗಳನ್ನು ಬಳಸಿ. ಬೇಸಿಗೆ ಕಾಲ ಮತ್ತು ಅತಿಯಾದ ಸೆಕೆ ಇದ್ದಾಗ ಬೆವರಿನಿಂದಾಗಿ ಕಂಕುಳಿನ ದುರ್ವಾಸನೆ ಬರುತ್ತದೆ.

ಕಂಕುಳಿನ ದುರ್ವಾಸನೆ ನಿವಾರಿಸಲು ಕೆಲವು ಸರಳ ವಿಧಾನಗಳು ಇಲ್ಲಿವೆ.

1. ನಿಯಮಿತವಾಗಿ ಸ್ನಾನ ಮಾಡಿ

1. ನಿಯಮಿತವಾಗಿ ಸ್ನಾನ ಮಾಡಿ

ವ್ಯಕ್ತಿ ಚರ್ಮ ಮತ್ತು ಆತ ವಾಸವಾಗಿರುವ ಪ್ರದೇಶವನ್ನು ಅವಲಂಬಿಸಿ ಸ್ನಾನ ಮಾಡುವ ಆವರ್ತನವು ಅವಲಂಬಿತವಾಗಿರುತ್ತದೆ. ಹೆಚ್ಚಿನ ಗಮನದೊಂದಿಗೆ ನಿಯಮಿತವಾಗಿ ಸ್ನಾನ ಮಾಡಿ ಮತ್ತು

ಕಂಕುಳಿನ ಕಡೆ ಹೆಚ್ಚಿನ ಗಮನಹರಿಸಿ. ಇದು ಬೆವರಿನಿಂದ ಬರುವ ದುರ್ವಾಸನೆಯನ್ನು ತಡೆಯುತ್ತದೆ.

2. ಹತ್ತಿ ಅಥವಾ ಲಿನಿನ್ ಬಟ್ಟೆಗಳು

2. ಹತ್ತಿ ಅಥವಾ ಲಿನಿನ್ ಬಟ್ಟೆಗಳು

ಇತರ ಬಟ್ಟೆಗಳಿಗಿಂತ ಹತ್ತಿ ಅಥವಾ ಲಿನಿನ್ ಬಟ್ಟೆಗಳನ್ನು ಹೆಚ್ಚಾಗಿ ಧರಿಸಿ. ಅದರಲ್ಲೂ ಬೇಸಿಗೆ ಹಾಗೂ ಉಷ್ಣತೆ ಹೆಚ್ಚಾಗಿರುವ ದಿನಗಳಲ್ಲಿ ಇದನ್ನು ಬಳಸಿ. ಹತ್ತಿ ಮತ್ತು ಲಿನಿನ್ ಬಟ್ಟೆಗಳು

ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ಬಟ್ಟೆಯ ಒಳಗೆ ಗಾಳಿ ಬರಲು ಬಿಡುತ್ತದೆ. ಇದರಿಂದ ಕಂಕುಳ ತುಂಬಾ ತಂಪಾಗಿ ಮತ್ತು ಒಣಗಿರುತ್ತದೆ.

3. ತಿನ್ನುವ ಆಹಾರ

3. ತಿನ್ನುವ ಆಹಾರ

ಕೆಲವು ಆಹಾರಗಳಿಂದಾಗಿ ಬೆವರು ದುರ್ಗಂಧ ಬೀರುತ್ತದೆ. ಇದರಿಂದ ಕಂಕುಳಿನಲ್ಲಿ ದುರ್ವಾಸನೆ ಬರುತ್ತದೆ. ಬೆಳ್ಳುಳ್ಳಿ, ಈರುಳ್ಳಿ, ಕೆಫಿನ್ ಯುಕ್ತ ಪಾನೀಯ ಇತ್ಯಾದಿಗಳನ್ನು ತ್ಯಜಿಸಿ. ಇದು ನಿಮ್ಮ

ದೇಹದಿಂದ ದುರ್ಗಂಧ ಬರುವಂತೆ ಮಾಡುತ್ತದೆ ಮತ್ತು ಅದರಲ್ಲೂ ಮುಖ್ಯವಾಗಿ ಕಂಕುಳಿನಿಂದ.

4.ಆ್ಯಂಟಿಪೆರ್ಸ್ಪಿರೆಂಟ್ ಸ್ಪ್ರೇ

4.ಆ್ಯಂಟಿಪೆರ್ಸ್ಪಿರೆಂಟ್ ಸ್ಪ್ರೇ

ಆ್ಯಂಟಿಪೆರ್ಸ್ಪಿರೆಂಟ್ ಗಳು ಅಥವಾ ಕೆಲವು ಡಿಒಡೊರೈಸಿಂಗ್ ಸ್ಪ್ರೇಗಳು ಕಂಕುಳಿನ ದುರ್ವಾಸನೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಆ್ಯಂಟಿಪೆರ್ಸ್ಪಿರೆಂಟ್ ನ್ನು ಸ್ಪ್ರೇ ಮಾಡಿದಾಗ ಅಥವಾ ಆ

ಜಾಗಕ್ಕೆ ಹಚ್ಚಿದಾಗ ಅದು ಕಂಕುಳಿನ ಸುತ್ತ ಬೆವರು ಬರುವುದನ್ನು ತಡೆಯುತ್ತದೆ. ಇದರಿಂದಾಗಿ ಬೆವರಿನಿಂದಾಗಿ ಬ್ಯಾಕ್ಟೀರಿಯಾ ನಿರ್ಮಾಣವಾಗುವುದು ತಪ್ಪುತ್ತದೆ.

5. ಆ್ಯಂಟಿಪೆರ್ಸ್ಪಿರೆಂಟ್ ಟಾಲ್ಕ್

5. ಆ್ಯಂಟಿಪೆರ್ಸ್ಪಿರೆಂಟ್ ಟಾಲ್ಕ್

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಆ್ಯಂಟಿಪೆರ್ಸ್ಪಿರೆಂಟ್ ಟಾಲ್ಕ್ ಇದೆ. ಇದನ್ನು ನಿಮ್ಮ ಕಂಕುಳಿನ ಭಾಗಕ್ಕೆ ಸ್ನಾನದ ಬಳಿಕ ಸಿಂಪಡಿಸಬೇಕು. ಇದರಿಂದ ಕಂಕುಳಿನ ಭಾಗ ಕೆಲವು ಗಂಟೆಗಳ

ಕಾಲ ಶುಷ್ಕ ಹಾಗೂ ಬೆವರು ಮುಕ್ತವಾಗಿರುತ್ತದೆ. ಇದು ಕಂಕುಳಿನಲ್ಲಿ ದುರ್ವಾಸನೆ ತಡೆಯಲು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

6. ಶೇವ್ ಅಥವಾ ವ್ಯಾಕ್ಸ್ ಮಾಡಿ

6. ಶೇವ್ ಅಥವಾ ವ್ಯಾಕ್ಸ್ ಮಾಡಿ

ಕಂಕುಳಿನ ಭಾಗದಲ್ಲಿರುವ ಕೂದಲನ್ನು ಶೇವ್ ಅಥವಾ ವ್ಯಾಕ್ಸ್ ಮಾಡುವ ಮೂಲಕ ತೆಗೆಯುವುದು ತುಂಬಾ ಮುಖ್ಯ. ಇದರಿಂದ ಈ ಭಾಗದಲ್ಲಿ ಬೆವರು ನಿಲ್ಲುವುದಿಲ್ಲ ಮತ್ತು ದುರ್ವಾಸನೆ

ಬರುವುದಿಲ್ಲ. ಕಂಕುಳಿನ ಭಾಗದ ಕೂದಲನ್ನು ಟ್ರಿಮ್ ಮಾಡಬಹುದು.

7. ಸ್ಚಚ್ಛ ಬಟ್ಟೆಗಳನ್ನು ಧರಿಸಿ

7. ಸ್ಚಚ್ಛ ಬಟ್ಟೆಗಳನ್ನು ಧರಿಸಿ

ಒಗೆಯದೆ ಇರುವ ಅಥವಾ ಕೊಳೆಯಿರುವ ಬಟ್ಟೆಯಿಂದಾಗಿ ಬೆವರು ಬಂದಾಗ ದುರ್ವಾಸನೆ ಬರಬಹುದು. ಕೊಳಕು ಬಟ್ಟೆಯಿಂದಾಗಿ ಕಂಕುಳಿನಲ್ಲಿ ಬೆವರು ಬಂದಾಗ ಬೇಗ ದುರ್ವಾಸನೆ ಬರುತ್ತದೆ.

ನಿಯಮಿತವಾಗಿ ಬಟ್ಟೆಗಳನ್ನು ಆ್ಯಂಟಿ ಬ್ಯಾಕ್ಟೀರಿಯಾ ಡಿಟರ್ಜೆಂಟ್ ಗಳಿಂದ ಒಗೆಯಿರಿ.

8. ಅಡುಗೆ ಸೋಡಾ

8. ಅಡುಗೆ ಸೋಡಾ

ಕಂಕುಳಿನ ಭಾಗದ ದುರ್ವಾಸನೆ ಹೋಗಲಾಡಿಸಲು ಇದು ಅತ್ಯಂತ ಪ್ರಸಿದ್ಧ ಮತ್ತು ಸರಳ ಮನೆಮದ್ದು. ಸ್ನಾನದ ಬಳಿಕ ಅಡುಗೆ ಸೋಡಾವನ್ನು ಕಂಕುಳಿನ ಭಾಗಕ್ಕೆ ಸಿಂಪಡಿಸುವ ಮೂಲಕ

ಹಲವಾರು ಮಂದಿ ಧನಾತ್ಮಕ ಫಲಿತಾಂಶವನ್ನು ಪಡೆದಿದ್ದಾರೆ.

9. ಕಾಟನ್ ಪ್ಯಾಡ್

9. ಕಾಟನ್ ಪ್ಯಾಡ್

ಕಂಕುಳಿನ ಭಾಗದಲ್ಲಿ ಇಟ್ಟುಕೊಳ್ಳಬಹುದಾದ ಕಾಟನ್ (ಹತ್ತಿ) ಪ್ಯಾಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆ್ಯಂಟಿ ಬ್ಯಾಕ್ಟೀರಿಯಾ ಅಥವಾ ಲಘುವಾದ ಪರಿಮಳ ಸೂಸುವ ಪ್ಯಾಡ್ ನ್ನು ಆಯ್ಕೆ

ಮಾಡಿ ಕಂಕುಳಲ್ಲಿ ಇಟ್ಟುಕೊಳ್ಳಿ. ಇದು ಕಂಕುಳಿನಲ್ಲಿ ಬೆವರನ್ನು ಹೀರಿಕೊಂಡು ಬ್ಯಾಕ್ಟೀರಿಯಾ ಬೆಳೆಯದಂತೆ ನೋಡಿಕೊಳ್ಳುತ್ತದೆ.

10. ವಿನೇಗರ್

10. ವಿನೇಗರ್

ಕಂಕುಳಿನ ದುರ್ವಾಸನೆ ತಡೆಯಲು ಮತ್ತೊಂದು ಮನೆಮದ್ದು ವಿನೇಗರ್. ಹತ್ತಿಯ ಮೂಲಕ ವಿನೇಗರ್ ನ್ನು ಕಂಕುಳಿನ ಭಾಗಕ್ಕೆ ಹಚ್ಚುವ ಮೂಲಕ ಹಲವಾರು ಗಂಟೆಗಳ ಕಾಲ ಕಂಕುಳಿನ

ಭಾಗವನ್ನು ಶುಷ್ಕವಾಗಿರಿಸಿ ಬೆವರಿನ ದುರ್ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

X
Desktop Bottom Promotion