For Quick Alerts
ALLOW NOTIFICATIONS  
For Daily Alerts

ಬಳಲಿದ ಕಣ್ಣುಗಳಿಗೆ ಆರೈಕೆ ಹೀಗಿರಲಿ

|

ಕಣ್ಣುಗಳು ಬಳಲಿದಾಗ ಯಾವ ಮೇಕಪ್ ನಿಮ್ಮ ಮುಖದಲ್ಲಿ ಕಳೆಯನ್ನೂ ಹೆಚ್ಚಿಸುವುದಿಲ್ಲ. ಹೊಳೆಯುವ ಕಣ್ಣುಗಳು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸರಿಯಾಗಿ ನಿದ್ದೆ ಮಾಡದಿದ್ದರೆ, ವಿಪರೀತ ಕೆಲಸ ಮಾಡಿದರೆ ಕಣ್ಣುಗಳು ಬಳಲುತ್ತದೆ. ಇದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬಿದ್ದು ನಿಮ್ಮ ಮುಖದ ಅಂದವನ್ನು ಕಡಿಮೆ ಮಾಡುತ್ತದೆ.

ಈ ಕೆಳಗಿನ ಟಿಪ್ಸ್ ಕಣ್ಣಿನ ಹೊಳಪನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿವೆ:

Brighten Up Tired Eyes Instantly

ಐಸ್ ಪ್ಯಾಕ್
ಐಸ್ ಕ್ಯೂಬ್ ಅನ್ನು ಕರ್ಚೀಪ್ ನಲ್ಲಿಟ್ಟು, ಅದರಿಂದ ಕಣ್ಣನ್ನು ಮೆಲ್ಲನೆ ಉಜ್ಜಬೇಕು. ನಂತರ ಮುಖ ತೊಳೆದರೆ ಕಣ್ಣಿನ ಹೊಳಪು ಹೆಚ್ಚುವುದು.

ರೋಸ್ ವಾಟರ್
ಸ್ವಲ್ಪ ಹತ್ತಿಯ ಉಂಡೆಯನ್ನು ರೋಸ್ ವಾಟರ್ ನಲ್ಲಿ ಅದ್ದಿ, ಅದರಿಂದ ಕಣ್ಣನ್ನು ಒರೆಸಿ ಹತ್ತು ನಿಮಿಷ ಕಣ್ಣು ಮುಚ್ಚಿ ವಿಶ್ರಾಂತಿ ತೆಗೆದುಕೊಳ್ಳಿ. ಈ ರೀತಿ ಮಾಡಿದರೆ ಕಣ್ಣಿನಲ್ಲಿ ಬಳಲಿಕೆ ಎದ್ದು ಕಾಣುವುದಿಲ್ಲ.

ಸೌತೆಕಾಯಿಯ ಪ್ಯಾಕ್
ಸೌತೆಕಾಯಿಯಷ್ಟು ಪರಿಣಾಮಕಾರಿಯಾದ ಐಸ್ ಪ್ಯಾಕ್ ಮತ್ತೊಂದಿಲ್ಲ. ಸೌತೆಕಾಯಿಯನ್ನು ಪೇಸ್ಟ್ ಕಣ್ಣಿನ ಸುತ್ತ ಹಚ್ಚಿ ವಿಶ್ರಾಂತಿ ತೆಗೆದರೆ ಕಣ್ಣು ತಂಪಾಗುತ್ತದೆ, ಕಣ್ಣಿನ ಸುತ್ತ ಬಿದ್ದ ಡಾರ್ಕ್ ಸರ್ಕಲ್ ಕಡಿಮೆಯಾಗಿ ಕಣ್ಣಿನ ಹೊಳಪು ಹೆಚ್ಚುವುದು.

ನಿಂಬೆ ಜ್ಯೂಸ್

ನಿಂಬೆ ಹಣ್ಣಿನ ತುಂಡಿನಿಂದ ಕಣ್ಣಿನ ಸುತ್ತ ಉಜ್ಜಿದರೆ ಕಪ್ಪುಕಲೆ ಕಡಿಮೆಯಾಗುವುದು. ಆದರೆ ನಿಂಬೆ ರಸ ಕಣ್ಣಿನ ಒಳಗೆ ಹೋಗದಂತೆ ಎಚ್ಚರವಹಿಸಿ.

English summary

Brighten Up Tired Eyes Instantly | Tips For Body Care | ಬಳಲಿದ ಕಣ್ಣಿನ ಹೊಳಪಿಗೆ ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

When your eyes are tired, no amount of eye makeup can help you look good. When you wake up in the morning and you you have not had a good night's sleep, then your eyes look dull. Here are some of the most effective ways to rejuvenate the tired skin around the eyes.
Story first published: Wednesday, March 20, 2013, 15:51 [IST]
X
Desktop Bottom Promotion