For Quick Alerts
ALLOW NOTIFICATIONS  
For Daily Alerts

ಮೂಗುತಿ ಚೆಲುವೆಯರಿಗಾಗಿ ಈ ಬ್ಯೂಟಿ ಟಿಪ್ಸ್

|

ಮೂಗುತಿ ಹಾಕುವುದನ್ನು ಸಂಪ್ರದಾಯ ಅನ್ನಬೇಕೋ, ಫ್ಯಾಷನ್ ಅನ್ನಬೇಕೋ ಒಂದೂ ತಿಳಿಯುತ್ತಿಲ್ಲ. ಏಕೆಂದರೆ ಕೆಲವು ಧರ್ಮದಲ್ಲಿ ಹೆಣ್ಣು ಮಕ್ಕಳು ಮೂಗುತಿಯನ್ನು ಕಡ್ಡಾಯ ಚುಚ್ಚಿಸಿಕೊಳ್ಳಬೇಕು. ಚುಚ್ಚದೆ ಇರುವವರು ಮದುವೆ ಸಮಯದಲ್ಲಾದರೂ ಚುಚ್ಚಲೇಬೇಕೆಂಬ ಕಟ್ಟಳೆ ಇರುತ್ತದೆ. ಅನೇಕ ನನ್ನ ಗೆಳತಿಯರು ಮದುವೆ ಸಮಯದಲ್ಲಿ ಭಾವಿ ಗಂಡನ ಮನೆಯವರನ್ನು ಮನಸ್ಸಿನಲ್ಲಿ ಬೈಯ್ದು ಕೊಳ್ಳುತ್ತಾ ಚುಚ್ಚಿಸಿದ್ದನ್ನು ನೋಡಿದ್ದೇನೆ.

ಇನ್ನು ಕೆಲವರು ಫ್ಯಾಷನ್ ಗಾಗಿ ಚುಚ್ಚಿಸಿ, ನಂತರ ಔಟ್ ಆಫ್ ಫ್ಯಾಷನ್ ಆಯ್ತು ಎಂದು ಬಿಚ್ಚಿಟ್ಟು ಬಿಟ್ಟರು. ಮೂಗುತಿ ಚುಚ್ಚುವುದನ್ನು ಫ್ಯಾಷನೋ ಅಂತಲೋ ಹೇಳಿ, ಸಂಪ್ರದಾಯ ಅಂತಲೋ ಹೇಳಿ ಮೂಗುತಿ ಹೆಣ್ಣಿನ ಮುಖದ ಕಳೆ ಹೆಚ್ಚಿಸುತ್ತದೆ ಅನ್ನುವುದು ಮಾತ್ರ ಸುಳ್ಳಲ್ಲ. ಇನ್ನು ತುಟಿಯ ಮೇಲೆ, ಹುಬ್ಬಿಗೆ ಹೀಗೆ ಕಂಡ ಕಂಡಲ್ಲಿ ಚುಚ್ಚಿಸಿಕೊಳ್ಳುವುದು ಮಾತ್ರ ಫ್ಯಾಷನ್.

ಮೂಗುತಿ ಚುಚ್ಚಿದ ಮೇಲೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅದರರ್ಥ ಸದಾ ನಿಮ್ಮ ಗಮನ ಮೂಗಿನ ಮೇಲೆ ಇರಬೇಕೆಂದೇನೂ ಅಲ್ಲ. ಇಲ್ಲಿ ಕೆಳಗಿನ ಕೆಲ ಸರಳ ಟಿಪ್ಸ್ ಪಾಲಿಸಿದ್ದೇವೆ. ಅವುಗಳನ್ನು ಪಾಲಿಸಿದರೆ ಸಾಕು.

Body Piercing: Safe Aftercare Tips

ಟಿಪ್ಸ್

* ಮೂಗುತಿ ಚುಚ್ಚಿದ ನಂತರ ಸಾಮಾನ್ಯವಾಗಿ ಅದರ ಸುತ್ತ ಒಣ ತ್ವಚೆ ಬಂದು ನಿಂತುಕೊಳ್ಳುವುದು ಸಾಮಾನ್ಯ. ಆದ್ದರಿಂದ ಆ ಭಾಗದ ಶುಚಿತ್ವದ ಕಡೆಗೆ ಗಮನ ಕೊಡುವುದು ಒಳ್ಳೆಯದು.

* ಮೂಗನ್ನು ಮುಟ್ಟುವ ಮೊದಲು ಸೋಂಕಾಣುಗಳ ವಿರುದ್ಧ ಹೋರಾಡುವ ಲಿಕ್ವಿಡ್ ಸೋಪಿನಿಂದ ಕೈ ತೊಳೆದ ಬಳಿಕವಷ್ಟೆ ಮೂಗನ್ನು ಮುಟ್ಟಿ.

* ಬಟ್ಟೆ ಧರಿಸುವಾಗ ಮೂಗುತಿಗೆ ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳುವುದು ಒಳ್ಳೆಯದು. ಮೂಗು ಚುಚ್ಚಿದ ಪ್ರಾರಂಭದ ದಿನಗಳಲ್ಲಿ ಬಟ್ಟೆ ಸಿಕ್ಕಿ ಹಾಕಿದರೆ ತುಂಬಾ ನೋವಾಗುವುದು ಹಾಗೂ ಗಾಯವೂ ದೊಡ್ಡದಾಗುವುದು.

* ಮೂಗು, ಕಿವಿ ಚುಚ್ಚಿದರೆ ಗಾಯ ಬೇಗನೆ ಒಣಗಲು ಉಪ್ಪು ನೀರು ಮಾಡಿ ಅದರಲ್ಲಿ ಹತ್ತಿಯನ್ನು ಅದ್ದಿ ಆ ಭಾಗವನ್ನು ಸ್ವಚ್ಛ ಮಾಡಿ. ಈ ರೀತಿ ಮಾಡುತ್ತಾ ಬಂದರೆ ಗಾಯ ಬೇಗನೆ ಗುಣಮುಖವಾಗುವುದು.

* ಫ್ಯಾಷನ್ ಹೆಸರಿನಲ್ಲಿ ನಾಲಗೆ, ತುಟಿಯ ಮೇಲೆ ಚುಚ್ಚಿಸಿಕೊಳ್ಳುತ್ತಾರೆ. ಈ ರೀತಿ ಚುಚ್ಚಿಸಿಕೊಂಡವರು ಬಾಯಿ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮೌತ್ ವಾಶ್ ಬಳಸಿ ಬಾಯಿ ಮುಕ್ಕಳಿಸುವುದು ಒಳ್ಳೆಯದು.

* ಮೂಗುತಿ ಚುಚ್ಚಿ ಅದನ್ನು ತಿರುಗಿಸುವ ಮುನ್ನ ಹೊರಭಾಗದ ಚರ್ಮ ಸಂಪೂರ್ಣ ಒಣಗಿರಲಿ, ಇಲ್ಲದಿದ್ದರೆ ಗಾಯ ದೊಡ್ಡದಾಗುವ ಸಾಧ್ಯತೆ ಹೆಚ್ಚು.

* ದೇಹದ ಯಾವುದೇ ಭಾಗಕ್ಕೆ ಚುಚ್ಚಿಕೊಂಡರೂ ಗಾಯ ಒಣಗುವವರೆಗೆ ಆ ಭಾಗಕ್ಕೆ ಪರ್ ಫ್ಯೂಮ್ ತಾಗದಂತೆ ಎಚ್ಚರವಹಿಸುವುದು ಒಳ್ಳೆಯದು.

* ಟೀ ಟ್ರೀ ಎಣ್ಣೆ ಹಚ್ಚಿದರೆ ಗಾಯ ಬೇಗನೆ ಗುಣಮುಖವಾಗುವುದು.

English summary

Body Piercing: Safe Aftercare Tips | Tips For Body Care | ಮೂಗುತಿ ಚೆಲುವೆಯರಿಗಾಗಿ ಈ ಬ್ಯೂಟಿ ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

You have to be very careful with the piercing. After a body piercing it is necessary that you look after it. Here are some general body piercing aftercare tips:
X
Desktop Bottom Promotion