For Quick Alerts
ALLOW NOTIFICATIONS  
For Daily Alerts

ಪೆಟ್ರೋಲಿಯಂ ಜೆಲ್ ನಲ್ಲಿದೆ 12 ಸೌಂದರ್ಯ ರಕ್ಷಣೆಯ ಗುಣ

|

ಪೆಟ್ರೋಲಿಯಂ ಜೆಲ್ ದುಬಾರಿಯೇನಲ್ಲ, ಆದರೆ ಇದರಲ್ಲಿರುವ ಸೌಂದರ್ಯವರ್ಧಕ ಗುಣವಿದೆಯೆಲ್ಲಾ ಅವುಗಳು ಯಾವ ದುಬಾರಿ ಕ್ರೀಮ್ ಗಳಿಗಿಂತಲೂ ಕಮ್ಮಿಯೇನಿಲ್ಲ. ಚಿಕ್ಕ ಡಬ್ಬಿ ಪೆಟ್ರೋಲಿಯಂ ಜೆಲ್ ಇದ್ದರೆ ಸಾಕು ಅದರಿಂದ ನಿಮ್ಮ ನಾನಾ ಸೌಂದರ್ಯ ಸಂಬಂಧಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಅದರಲ್ಲೂ ಈ ಕೆಳಗಿನ ಸಮಸ್ಯೆ ಸೌಂದರ್ಯ ಸಮಸ್ಯೆ ಎದುರಿಸುತ್ತಿರುವವರು ಪೆಟ್ರೋಲಿಯಂ ಜೆಲ್ ಬಳಸಿ, ಒಳ್ಳೆಯ ಫಲಿತಾಂಶ ದೊರೆಯುವುದು.

 ಕೂದಲು ಕವಲೊಡೆದಿದ್ದರೆ

ಕೂದಲು ಕವಲೊಡೆದಿದ್ದರೆ

ಕೂದಲು ಕವಲೊಡೆಯುವುದು ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಕೂದಲಿನ ತುದಿಗೆ ಪೆಟ್ರೋಲಿಯಂ ಜೆಲ್ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದರೆ ಕೂದಲು ಕವಲೊಡೆಯುವುದಿಲ್ಲ.

ಒಡೆದ ತುಟಿಗೆ

ಒಡೆದ ತುಟಿಗೆ

ತುಟಿ ಒಡೆದಿದ್ದರೆ ಪೆಟ್ರೋಲಿಯಂ ಜೆಲ್ ಹಚ್ಚಿದರೆ ಸಾಕು 2-3 ದಿನಗಳಲ್ಲಿಯೇ ತುಟಿ ಒಡೆಯುವುದು ಕಮ್ಮಿಯಾಗಿ, ಮೃದುವಾದ ತುಟಿ ನಿಮ್ಮದಾಗುವುದು.

ಲಿಪ್ ಸ್ಟಿಕ್ ತುಂಬಾ ಸಮಯ ಹೊಳಪಿನಿಂದ ಕೂಡಿರಲು

ಲಿಪ್ ಸ್ಟಿಕ್ ತುಂಬಾ ಸಮಯ ಹೊಳಪಿನಿಂದ ಕೂಡಿರಲು

ಲಿಪ್ ಸ್ಟಿಕ್ ಹಚ್ಚಿ ಅದರ ಮೇಲೆ ತೆಳುವಾಗಿ ಪೆಟ್ರೋಲಿಯಂ ಜೆಲ್ ಹಚ್ಚಿದರೆ ತುಟಿ ಹೊಳೆಯುವುದರಿಂದ ನಿಮ್ಮ ಚೆಲುವಿಗೆ ಮತ್ತಷ್ಟು ಮೆರಗು ದೊರೆಯುವುದು.

 ಉಗುರುಗಳ ಅಂದಕ್ಕೆ

ಉಗುರುಗಳ ಅಂದಕ್ಕೆ

ಕೆಲವರಿಗೆ ಉಗುರುಗಳಲ್ಲಿ ಗೆರೆಗಳು (ಒಡೆದ ರೀತಿ) ಕಂಡು ಬರುವುದು ಅಥವಾ ಉಗುರಿನಲ್ಲಿ ಬಿಳಿ ಬಣ್ಣ ಕಂಡು ಬರುವುದು. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡು ಬಂದರೆ ಈ ರೀತಿ ಉಂಟಾಗುವುದು. ಇಂತವರು ಕ್ಯಾಲ್ಸಿಯಂ ಇರುವ ಆಹಾರಗಳನ್ನು ತಿನ್ನಿ. ಹಾಗೂ ಉಗುರುಗಳಿಗೆ ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ ಹಚ್ಚಿ ಮಲಗಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಅಂದವಾದ ಉಗುರು ನಿಮ್ಮದಾಗುವುದು.

 ಒಡೆದ ಪಾದಗಳು

ಒಡೆದ ಪಾದಗಳು

ಒಡೆದ ಪಾದಗಳು ಆಕರ್ಷಕವಾಗಿ ಕಾಣುವುದಿಲ್ಲ, ಅಲ್ಲದೆ ಅದರಿಂದ ತುಂಬಾ ನೋವು ಕಂಡು ಬರುವುದು. ಕಾಲಿಗೆ ಪಟ್ರೋಲಿಯಂ ಜೆಲ್ ಹಚ್ಚಿ, ದೂಳು, ಕೊಳೆ ಕೂರದಂತೆ ಎಚ್ಚರವಹಿಸಿ. ಪಾದಗಳಲ್ಲಿ ಬಿರುಕು ಮುಚ್ಚಿ, ನುಣಪಾದ ಪಾದಗಳು ನಿಮ್ಮದಾಗುವುದು.

ಬಾಡಿ ಸ್ಕ್ರಬ್

ಬಾಡಿ ಸ್ಕ್ರಬ್

ಪೆಟ್ರೋಲಿಯಂ ಜೆಲ್ ಅನ್ನು ಸಕ್ಕರೆ ಜೊತೆ ಮಿಶ್ರಣ ಮಾಡಿ ಬಾಡಿ ಸ್ಕ್ರಬ್ ಮಾಡಿದರೆ ದೇಹದ ಕಾಂತಿ ಹೆಚ್ಚುವುದು.

ಮೇಕಪ್ ರಿಮೋವರ್

ಮೇಕಪ್ ರಿಮೋವರ್

ಕೆಲವೊಂದು ಮೇಕಪ್ ಮುಖ ತೊಳೆದಾಗ ಮುಖ ತುಂಬಾ ಹರಡುತ್ತದೆ ವಿನಾಃ ಹೋಗುವುದಿಲ್ಲ. ಅಂತಹ ಮೇಕಪ್ ಹೋಗಲಾಡಿಸಲು ಪೆಟ್ರೋಲಿಯಂ ಜೆಲ್ ಟ್ರಿಕ್ಸ್ ಬಳಸಿ. ಪೆಟ್ರೋಲಿಯಂ ಹಚ್ಚಿ ತಿಕ್ಕಿ, ನಂತರ ಮುಖ ತೊಳೆಯಿರಿ, ಹೀಗೆ ಮಾಡಿದರೆ ಮೇಕಪ್ ಸಂಪೂರ್ಣವಾಗಿ ಹೋಗುವುದು.

 ಮೊಣಕೈ ಬೆಳ್ಳಗಾಗಿಸಲು

ಮೊಣಕೈ ಬೆಳ್ಳಗಾಗಿಸಲು

ಸಾಮಾನ್ಯವಾಗಿ ನಾವು ಮೊಣಕೈ ಊರಿ ಕೂರುವುದರಿಂದ ನಮ್ಮ ಮೊಣ ಕೈ ಕಪ್ಪಗಾಗಿರುತ್ತದೆ. ಮೊಣ ಕೈಗೆ ಪೆಟ್ರೋಲಿಯಂ ಜೆಲ್ ಹಚ್ಚಿದರೆ ಮೊಣಕೈ ಸ್ವಲ್ಪ ಬೆಳ್ಳಗಾಗುವುದು.

ಸೆಂಟ್ ತುಂಬಾ ಹೊತ್ತು ಇರಲು

ಸೆಂಟ್ ತುಂಬಾ ಹೊತ್ತು ಇರಲು

ಫರ್ ಫ್ಯೂಮ್ ಸ್ಪ್ರೇ ಮಾಡುವ ಮುನ್ನ ಸ್ವಲ್ಪ ಪೆಟ್ರೋಲಿಯಂ ಜೆಲ್ ಅನ್ನು ಕಂಕುಳಕ್ಕೆ ಹಚ್ಚಿ ನಂತರ ಸ್ಪ್ರೇ ಮಾಡಿ. ಈ ರೀತಿ ಮಾಡಿದರೆ ಸೆಂಟ್ ವಾಸನೆ ತುಂಬಾ ಹೊತ್ತು ಇರುವುದು.

 ಆಕರ್ಷಕವಾದ ಕಣ್ಣು ರೆಪ್ಪೆ

ಆಕರ್ಷಕವಾದ ಕಣ್ಣು ರೆಪ್ಪೆ

ಕಪ್ಪಾದ, ಉದ್ದವಾದ ಕಣ್ಣು ರೆಪ್ಪೆ ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಕಣ್ಣು ರೆಪ್ಪೆಗೆ ಪೆಟ್ರೋಲಿಯಂ ಜೆಲ್ ಹಚ್ಚಿ. ಇದರಿಂದ ಕಣ್ಣು ರೆಪ್ಪೆ ಆಕರ್ಷಕವಾಗಿ ಬೆಳೆಯುವುದು.

ನೇಲ್ ಪಾಲಿಶ್ ಚ್ಚುವಾಗ

ನೇಲ್ ಪಾಲಿಶ್ ಚ್ಚುವಾಗ

ಉಗುರುಗಳಿಗೆ ಪಾಲಿಶ್ ಹಚ್ಚುವ ಮುನ್ನ ಪೆಟ್ರೋಲಿಯಂ ಜೆಲ್ಲಿ ಸವರಿ. ಇದರಿಂದ ನೇಲ್ ಪಾಲಿಶ್ ಸ್ಪ್ರೆಡ್ ಆಗದಂತೆ ತಡೆಯಬಹುದು.

ಮಗುವಿಗೆ ಸ್ನಾನ ಮಾಡಿಸುವಾಗ

ಮಗುವಿಗೆ ಸ್ನಾನ ಮಾಡಿಸುವಾಗ

ಸ್ನಾನಕ್ಕೆ ಮುನ್ನ ಮಗುವಿನ ಕಣ್ಣು ರೆಪ್ಪೆಯ ಮೇಲೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ಈ ರೀತಿ ಮಾಡಿದರೆ ಶ್ಯಾಂಪೂ ಕಣ್ಣಿಗೆ ತಾಗಿದಾಗ ಮಗುವಿಗೆ ಕಣ್ಣು ಉರಿಯುವುದಿಲ್ಲ.

English summary

Beauty Uses Of Petroleum Jelly

If you have leftover petroleum jelly, you can make use of this beauty product to the fullest. Here is how you can use petroleum jelly in different ways.
X
Desktop Bottom Promotion