For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸೌಂದರ್ಯ ರಕ್ಷಣೆಗೆ ಬ್ಯೂಟಿ ಟಿಪ್ಸ್

|

ಉಳಿದ ಸಮಯಕ್ಕಿಂತ ಚಳಿಗಾಲದಲ್ಲಿ ಸೌಂದರ್ಯ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ. ತ್ವಚೆ ಒಡೆಯುವುದು, ಪಾದಗಳಲ್ಲಿ ಬಿರುಕು, ತುಟಿ ಡ್ರೈಯಾಗಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಈ ರೀತಿಯ ನಾನಾ ಸಮಸ್ಯೆಗಳು ಕಂಡು ಬರುವುದು.

ಈ ಸಮಸ್ಯೆಗಳನ್ನು ತಡೆಯಲು ಚಳಿಗಾಲ ಪ್ರಾರಂಭವಾಗುತ್ತಿರುವಾಗಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಚಳಿಗಾಲದಲ್ಲಿ ನಿಮ್ಮ ಸೌಂದರ್ಯ ಕಾಪಾಡುವಲ್ಲಿ ಈ ಟಿಪ್ಸ್ ತುಂಬಾ ಸಹಾಯಕಾರಿಯಾಗಿವೆ:

Beauty Tips For Winter Season

1. ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಇರಬೇಕಾಗುತ್ತದೆ ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು, ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.

2. ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು, ಅತಿ ಬೆಚ್ಚಗಿನ ನೀರು ಚರ್ಮಕ್ಕೆ ಒಳ್ಳೆಯದಲ್ಲ, ಮೈಗೆ ಸೋಪು ಕೂಡ ಅತಿ ನೊರೆ ಬರುವ ಹಾಗೆ ಉಜ್ಜುವುದು ಒಳ್ಳೆಯದಲ್ಲ.

3. ಸ್ನಾನ ಮಾಡುವಾಗ ಚೇರಿ ಅಥವಾ ಸ್ಮ್ರಬ್ಬರ್ ಬಳಸುವುದರಿಂದ ದೇಹಕ್ಕೆ ಫ್ರೆಶ್ ಲುಕ್ ಸಿಗುವುದು.

4. ಚಳಿಗಾಲದಲ್ಲಿ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡುವುದು ಒಳ್ಳೆಯದು, ವಾರಕ್ಕೊಮ್ಮೆ ಎಣ್ಣೆ ಸ್ನನ ಮಾಡುವುದರಿಂದ ಅದು ದೇಹದ ಕಾಂತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

5. ತುಟಿ ಒಣಗುವುದು ಚಳಿಗಾಲದಲ್ಲಿ ಸಾಮಾನ್ಯ, ಆದ್ದರಿಂದ ತುಟಿಗೆ ಬಾಮ್ ಅಥವಾ ತುಪ್ಪ ಸವರ ಬೇಕು, ಇದರಿಂದ ತುಟಿ ಒಡೆಯುವುದಿಲ್ಲ.

6. ತ್ವಚೆ ಡ್ರೈಯಾಗುತ್ತಿದ್ದರೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ತ್ವಚೆ ಮೃದುವಾಗುವುದಲ್ಲದೆ ತ್ವಚೆಯೂ ಬಿರುಕು ಬಿಡುವುದಿಲ್ಲ. ಹೊರಗಡೆ ಹೋಗುವಾಗ ಮಾಯಿಶ್ಚರೈಸರ್ ಹಚ್ಚಿ.

7. ಸ್ನಾನ ಮಾಡುವ ಮುಂಚೆ 2 ಚಮಚ ಸಕ್ಕರೆಗೆ 2 ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿ ಮೈ ಸ್ಕ್ರಬ್ ಮಾಡಿ. ಇದು ನಿರ್ಜಿವ ತ್ವಚೆಯನ್ನು ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ.

8. ಚಳಿಗಾಲದಲ್ಲಿ ತ್ವಚೆ ಹಾಗೂ ಕೂದಲು ತುಂಬಾ ಒಣಗುತ್ತದೆ. ಕೂದಲು ಕವಲೊಡೆದು ಉದುರಲಾರಂಭಿಸುತ್ತದೆ. ಈ ಸಮಯದಲ್ಲಿ ಎಣ್ಣೆಯನ್ನು ಹಾಗೇ ತಲೆಗೆ ಹಚ್ಚುವುದಕ್ಕಿಂತ ಬಿಸಿ ಮಾಡಿ ಹಚ್ಚಿದರೆ ಒಳ್ಳೆಯದು.

English summary

Beauty Tips For Winter Season

During winter season dry skin, chapped lip, cracked foot, dry hair these kind of problem very problem. But If you take little care about you body during this season you can avoid all these problem.
Story first published: Wednesday, November 13, 2013, 10:27 [IST]
X
Desktop Bottom Promotion