For Quick Alerts
ALLOW NOTIFICATIONS  
For Daily Alerts

ಆಫೀಸ್ ಗೆ ಹೋಗುವ ಮಹಿಳೆಯರಿಗೆ ಬ್ಯೂಟಿ ಟಪ್ಸ್

|

ಈಗೀನ ಕಾಲದ ಹೆಣ್ಣು ಮಕ್ಕಳು ಆರ್ಥಿಕ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಪುರುಷರಷ್ಟೇ ಸಮಾನರಾಗಿ ಹೊರಗಡೆ ದುಡಿದು ಬಂದು, ತಮ್ಮ ಸಂಸಾರವನ್ನೂ ನಿರ್ವಹಿಸುವಷ್ಟು ಚಾಕಚಕತ್ಯೆಯನ್ನು ಬೆಳೆಸಿಕೊಂಡಿದ್ದಾರೆ. ಹೊರಗಡೆ ದುಡಿಯುವ ಹೆಣ್ಣು ಮಕ್ಕಳು ಕೆಲಸ ಮತ್ತು ಮನೆಯ ಜವಬ್ದಾರಿ ಎರಡೂ ಹೊರುವುದರಿಂದ ಸಾಕಷ್ಟು ಸಲ ತಮ್ಮ ಸೌಂದರ್ಯದ ಕಡೆಗೆ ಗಮನ ಕೊಡಲು ಪುರುಸೊತ್ತು ಇರುವುದಿಲ್ಲ.

ಗಡಿಬಿಡಿಯಲ್ಲಿ ಆಫೀಸ್ ಗೆ ಹೋಗುವಾದ ಮೇಕಪ್ ಮಾಡಲು ಪುರುಸೊತ್ತು ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ನೀವು ಕೆಲ ಸರಳ ಟಿಪ್ಸ್ ಪಾಲಿಸಿದರೆ ಸರಳ ಸೌಂದರ್ಯದಿಂದ ಆಕರ್ಷಕವಾಗಿ ಕಾಣುವಿರಿ. ನಿಮ್ಮ ಚೆಲುವನ್ನು ಕಾಪಾಡಲು ಏನು ಮಾಡಬೇಕೆಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ:

ಕಣ್ಣುಗಳ ಆರೈಕೆ

ಕಣ್ಣುಗಳ ಆರೈಕೆ

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬಿದ್ದರೆ ಮುಖ ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಇದನ್ನು ತಡೆಯಲು ಆಲೂಗಡ್ಡೆ ಅಥವಾ ಸೌತೆಕಾಯಿಯ ರಸವನ್ನು ಕಣ್ಣಿನ ಸುತ್ತ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ.

ಫೇಶಿಯಲ್ ಹೇರ್

ಫೇಶಿಯಲ್ ಹೇರ್

ಮುಖದಲ್ಲಿರುವ ಅಧಿಕ ಕೂದಲನ್ನು ಬ್ಯೂಟಿ ಪಾರ್ಲರ್ ಹೋಗಿ ತೆಗೆಯಿರಿ. ಮುಖದಲ್ಲಿ ಅಧಿಕ ಕೂದಲಿದ್ದರೆ ಅದು ನಿಮ್ಮ ಚೆಲುವನ್ನು ಮರೆಮಾಚುತ್ತದೆ. ಆದ್ದರಿಂದ ಸ್ವಲ್ಪ ಬಿಡುವು ಮಾಡಿಕೊಂಡು ಮುಖದ ಅಂದದ ಕಡೆ ಗಮನ ಕೊಡುವುದು ಒಳ್ಳೆಯದು.

ತಿಂಗಳಿಗೊಮ್ಮೆ ಮುಖಕ್ಕೆ ಫೇಶಿಯಲ್ ಮಾಡಿಸಿ.

 ಮೊಡವೆ

ಮೊಡವೆ

ಮೊಡವೆ, ಅಲರ್ಜಿ ಈ ರೀತಿಯ ಸಮಸ್ಯೆ ಇರುವವರು ಇದನ್ನು ಹೋಗಲಾಡಿಸುವತ್ತ ಗಮನ ಕೊಡಬೇಕು. ಫೇಸ್ ಪ್ಯಾಕ್ ಮೊಡವೆಯನ್ನು ಕಮ್ಮಿ ಮಾಡುತ್ತದೆ. ತ್ವಚೆ ಅಲರ್ಜಿ ಇದ್ದರೆ ಚರ್ಮ ರೋಗ ತಜ್ಞರನ್ನು ಕಾಣಿ.

ನೆರಿಗೆ

ನೆರಿಗೆ

ಅಧಿಕ ಒತ್ತಡದ ಬದುಕು ಮುಖದಲ್ಲಿ ಬೇಗನೆ ನೆರಿಗೆ ಬೀಳುವಂತೆ ಮಾಡುತ್ತದೆ. ಇದನ್ನು ತಡೆಯಲು ವಾರಕ್ಕೊಮ್ಮೆ ಮೊಸರು ಬಳಸಿ ಮಸಾಜ್ ಮಾಡುವುದು ಒಳ್ಳೆಯದು.

ಕೂದಲಿನ ಆರೈಕೆ

ಕೂದಲಿನ ಆರೈಕೆ

ಗಾಡಿಯಲ್ಲಿ ಓಡಾಡುವವರು ಕೂದಲಿನ ಆರೈಕೆ ಬಗ್ಗೆ ಸ್ವಲ್ಪ ಅಧಿಕವೇ ಗಮನ ಹರಿಸಬೇಕು. ವಾರಕ್ಕೊಮ್ಮೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು.

ಉಗುರಿನ ಆರೈಕೆ

ಉಗುರಿನ ಆರೈಕೆ

ಉಗುರನ್ನು ಸ್ವಚ್ಛವಾಗಿಡಿ. ನೇಲ್ ಪಾಲಿಶ್ ಹಚ್ಚುವುದಾದರೆ ನೇಲ್ ಪಾಲಿಶ್ ಉಗುರಿನಿಂದ ಸ್ವಲ್ಪ-ಸ್ವಲ್ಪ ಕಿತ್ತು ಹೋದಾಗ ಹಾಗೇ ಇಡಬೇಡಿ, ರಿಮೂವರ್ ಬಳಸಿ ಸ್ವಚ್ಛಗೊಳಿಸಿ, ಉಗುರುಗಳಿಗೆ ಮಾಯಿಶ್ಚರೈಸರ್ ಹಚ್ಚಿ ಮಸಾಜ್ ಮಾಡಿ.

ಬೇಡದ ಕೂದಲನ್ನು ತೆಗೆಯಬೇಕು

ಬೇಡದ ಕೂದಲನ್ನು ತೆಗೆಯಬೇಕು

ದೇಹದಲ್ಲಿರುವ ಬೇಡದ ಕೂದಲನ್ನು ತೆಗೆದ ಬಳಿಕ ಸೋಪು ಹಚ್ಚುವ ಬದಲು ಕಂಡೀಷನರ್ ಹಚ್ಚಿ ತೊಳೆಯಿರಿ, ನಂತರ ಮಾಯಿಶ್ಚರೈಸರ್ ಹಚ್ಚಿ, ಇದರಿಂದ ತ್ವಚೆ ಒರಟಾಗುವುದನ್ನು ತಡೆಯಬಹುದು.

 ತುಟಿಯ ಆರೈಕೆ

ತುಟಿಯ ಆರೈಕೆ

ತುಟಿಯ ಅಂದವಾಗಿ ಕಾಣಲು ಲಿಪ್ ಗ್ಲೋಸ್ ಅಥವಾ ಲಿಪ್ ಸ್ಟಿಕ್ ಹಚ್ಚಿ. ತುಂಬಾ ಎದ್ದು ಕಾಣುವ ಬಣ್ಣದ ಲಿಪ್ ಸ್ಟಿಕ್ ಗಿಂತ ನ್ಯೂಡ್ ಲಿಪ್ ಸ್ಟಿಕ್ ಆಫೀಸ್ ಡ್ರೆಸ್ಸಿಂಗ್ ಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

English summary

Beauty Tips For Indian Working Women

We have put together few beauty tips for Indian women to follow. These beauty tips cater to mostly working women since they are the ones who have to look their very best each day before stepping into office.
X
Desktop Bottom Promotion