For Quick Alerts
ALLOW NOTIFICATIONS  
For Daily Alerts

ಕಾಲುಗಳು ನುಣಪಾಗಿ, ಆಕರ್ಷಕವಾಗಿ ಕಾಣಲು ಟಿಪ್ಸ್

|

ಹೆಚ್ಚಿನವರು ಮುಖ ಕಾಂತಿ ಹೆಚ್ಚಿಸಲು ಕೊಡುವ ಗಮನವನ್ನು ಕಾಲು ಆಕರ್ಷಕವಾಗಿ ಕಾಣಲು ಕೊಡುವುದಿಲ್ಲ. ಮುಕ್ಕಾಲು ಪ್ಯಾಂಟ್, ಶಾರ್ಟ್ಸ್, ಸ್ಕರ್ಟ್ಸ್ ಈ ರೀತಿಯ ಡ್ರೆಸ್ ಗಳನ್ನು ಧರಿಸಲು ನೀವು ಇಷ್ಟ ಪಡುವುದಾದರೆ ಕಾಲಿನ ಸೌಂದರ್ಯದ ಕಡೆಗೂ ಗಮನ ಕೊಡಬೇಕು. ಕಾಲಿನ ತ್ವಚೆ ಡಲ್ಲಾಗಿದ್ದರೆ ಅಂತಹ ಡ್ರೆಸ್ ನಲ್ಲಿ ನೀವು ಆಕರ್ಷಕವಾಗಿ ಕಾಣಲು ಸಾಧ್ಯವಾಗುವುದಿಲ್ಲ.

ಇಲ್ಲಿ ನಾವು ಆಕರ್ಷಕವಾದ ಕಾಲುಗಳನ್ನು ಪಡೆಯಲು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

 ಕಾಲಿನಲ್ಲಿರುವ ಬೇಡದ ಕೂದಲನ್ನು ತೆಗೆಯಿರಿ

ಕಾಲಿನಲ್ಲಿರುವ ಬೇಡದ ಕೂದಲನ್ನು ತೆಗೆಯಿರಿ

ಮೊದಲು ಕಾಲಿನಲ್ಲಿರುವ ಬೇಡದ ಕೂದಲನ್ನು ತೆಗೆಯಬೇಕು. ಶೇವ್ ಮಾಡಬೇಡಿ, ವ್ಯಾಕ್ಸ್ ಮಾಡಿ.

ನಂತರ ಮಸಾಜ್ ಮಾಡಿ

ನಂತರ ಮಸಾಜ್ ಮಾಡಿ

ನಂತರ ಮಾಯಿಶ್ಚರೈಸರ್ ಹಚ್ಚಿ ಮಸಾಜ್ ಮಾಡಿ. ಮಾಯಿಶ್ಚರೈಸರ್ ಅನ್ನು ಪ್ರತೀದಿನ ಮಾಡಿದರೆ ಕಾಲಿನ ತ್ವಚೆಯ ಹೊಳಪು ಹೆಚ್ಚುವುದು. ಮಸಾಜ್ ಕಾಲಿನ ರಕ್ತ ಸಂಚಾರಕ್ಕೆ ಸಹಾಯ ಮಾಡುವುದರಿಂದ ಕಾಲುನೋವು, ಮಸಲ್ ಕ್ಯಾಚ್ ಮುಂತಾದ ಸಮಸ್ಯೆ ಕೂಡ ಉಂಟಾಗುವುದಿಲ್ಲ.

 ರೋಸ್ ವಾಟರ್

ರೋಸ್ ವಾಟರ್

ಕಾಲನ್ನು ತೊಳೆದ ಬಳಿಕ ರೋಸ್ ವಾಟರ್ ಹಚ್ಚಿದರೆ ಕಾಲಿನ ತ್ವಚೆ ತುಂಬಾ ಮೃದುವಾಗಿ ಆಕರ್ಷಕವಾಗಿ ಕಾಣುವುದು. ವಾರಕ್ಕೊಮ್ಮೆ ಪಾದಗಳಿಗೆ ಪೆಡಿಕ್ಯೂರ್ ಮಾಡಿ.

ಸ್ನಾನ ಮಾಡುವ ಮುನ್ನ ಕಾಲಿನ ಆರೈಕೆ ಮಾಡಿ

ಸ್ನಾನ ಮಾಡುವ ಮುನ್ನ ಕಾಲಿನ ಆರೈಕೆ ಮಾಡಿ

ಸ್ನಾನ ಮಾಡುವ ಅರ್ಧ ಗಂಟೆಗೆ ಮುನ್ನ ಕಾಲಿಗೆ ಎಣ್ಣೆ ಅಥವಾ ಹಾಲಿನ ಕೆನೆ ಅಥವಾ ಹಾಲು ಹಚ್ಚಿದರೆ ಒಳ್ಳೆಯದು.

ಆಲೂಗಡ್ಡೆಯ ಸಿಪ್ಪೆ

ಆಲೂಗಡ್ಡೆಯ ಸಿಪ್ಪೆ

ಕಾಲಿನ ಹೊಳಪನ್ನು ಹೆಚ್ಚಿಸಲು ಮತ್ತೊಂದು ವಿಧಾನವೆಂದರೆ ಆಲೂಗಡ್ಡೆ ಸಿಪ್ಪೆಯನ್ನು ಹಾಕಿ ತಿಕ್ಕಿ ಅರ್ಧ ಗಂಟೆಯ ಬಳಿಕ ಕಾಲನ್ನು ಹದ ಬಿಸಿ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ವ್ಯಾಕ್ಸ್ ಕಲೆಗಳನ್ನು ಕೂಡ ಹೋಗಲಾಡಿಸಬಹುದು.

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಣನ್ನು ಕತ್ತರಿಸಿ ಅದರಿಂದ ಕಾಲು ಮತ್ತು ಉಗುರನ್ನು ತಿಕ್ಕಿ, ಈ ರೀತಿ ಮಾಡುವುದರಿಂದಲೂ ಕಾಲಿನ ಚೆಲುವು ಹೆಚ್ಚಿಸಬಹುದು.

English summary

Beauty Tips For Glowing Legs

These beauty secrets can be put to use especially if you are heading out to a party later on. You can show off those beautiful, glowing legs with a jaw dropping dress and a nice pair of heels.
 
X
Desktop Bottom Promotion