For Quick Alerts
ALLOW NOTIFICATIONS  
For Daily Alerts

ಮದುಮಗಳ ಚೆಲುವು ಹೆಚ್ಚಿಸಲು ಬ್ಯೂಟಿ ಟಿಪ್ಸ್

By Super
|

ಪ್ರತಿಯೊಬ್ಬ ಮಹಿಳೆಯೂ ತನ್ನ ಮದುವೆಯಲ್ಲಿ ಪರಿಪೂರ್ಣವಾಗಿ ಕಾಣಲು ಬಯಸುತ್ತಾಳೆ. ತೂಕ ಕಳೆದುಕೊಂಡು ಬಟ್ಟೆ, ಚರ್ಮ ಎಲ್ಲದರಲ್ಲೂ ಆಕರ್ಷಣೆಯ ಕೇಂದ್ರ ಬಿಂದುವಾಗಲು ಬಯಸುತ್ತಾಳೆ. ಮದುವೆಯಲ್ಲಿ ಸಮತೂಕ ಹೊಂದಿರುವಂತೆ ನೋಡಿಕೊಳ್ಳುವುದು ಮಹಿಳೆಯರಲ್ಲಿ ಹೊಸ ಸಮಸ್ಯೆಯಾಗಿದೆ.

ಸುಂದರವಾಗಿ ಕಾಣಲು ಇದರ ಜೊತೆಗೆ ಅನೇಕ ಅಂಶಗಳು ಮುಖ್ಯವಾಗುತ್ತವೆ. ಕಡಿಮೆ ಕ್ಯಾಲೋರಿ ಇರುವ ಸಮತೋಲನದ ಆಹಾರ, ದಿನನಿತ್ಯದ ವ್ಯಾಯಾಮ , ಚಿಕಿತ್ಸಕ ವಿಶೇಷ ಕಾಳಜಿಗಳು ಇವುಗಳಿಂದ ಯಾವುದೇ ರೀತಿಯ ಅಡ್ಡಪರಿಣಾಮ ಮತ್ತು ಅಲರ್ಜಿ ಇರುವುದಿಲ್ಲ . ಇದರ ಜೊತೆಗೆ ಸುಂದರವಾಗಿ ಕಾಣಲು ಮೊದಲು ಮುಖ ಮತ್ತು ದೇಹಕ್ಕೆ ಸರಿಯಾದ ಕಾಳಜಿಯನ್ನು ತೋರಿಸಬೇಕು.

ಮದುವೆಗಿಂತ ಮೊದಲು ಸುಂದರತೆಗೆ ನೀಡಬೇಕಾದ ಕೆಲವು ಚಿಕಿತ್ಸೆ (ಕಾಳಜಿ) ಗಳು ಇಲ್ಲಿವೆ :

ಒಣ ಚರ್ಮ ಹೋಗಲಾಡಿಸಿ

ಒಣ ಚರ್ಮ ಹೋಗಲಾಡಿಸಿ

ಒಣ ಚರ್ಮ ಮದುಮಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ . ಚರ್ಮವು ಒಣ ಮತ್ತು ಪೇಲವವಾದರೆ ನಿರ್ಜೀವ ತ್ವಚೆ (ಡೆಡ್ ಸ್ಕಿನ್ ) ಅನ್ನು ಪದರ ಪದರವಾಗಿ ತೆಗೆದು ಹಾಕುವ ಪ್ರಯತ್ನ ಮಾಡಿ . ಆಲ್ಫಾ ಹೈಡ್ರಾಕ್ಸಿ ಅಂಶವಿರುವ ಉತ್ಪನ್ನಗಳು ಈ ಡೆಡ್ ಸ್ಕಿನ್ ಅನ್ನು ತೆಗೆದು ಮೃದು ಮಾಡಿ ಯುವತಿಯಂತೆ ಕಾಣಲು ಸಹಕರಿಸುತ್ತವೆ. ಜೀವಸತ್ವ ಎ ಮತ್ತು ಇ ಇರುವ ಮೊಯಿಸ್ಚರೈಸರ್ ಅನ್ನು ಪ್ರತಿದಿನ ಬಳಸುವುದನ್ನು ಮರೆಯದಿರಿ ಇದು ಮೊಡವೆಗಳನ್ನು ತಡೆಯುವಲ್ಲಿ ಸಹ ಸಹಕರಿಸುತ್ತದೆ.

ನೋ ಪಿಂಪಲ್

ನೋ ಪಿಂಪಲ್

ಮೊಡವೆ ವಿರುದ್ಧ ಹೋರಾಡಲು ಸಾಕಷ್ಟು ಚಿಕಿತ್ಸೆಗಳಿವೆ.ರೆಟಿನ್ ಎ, ಬೆನ್ಜಾಯ್ಲ್ ಪೆರಾಕ್ಸೈಡ್, ಸ್ಯಾಲಿಸಿಕ್ ಮತ್ತು ಸಲ್ಫಾರ್ ಕ್ಲಿಯೋಟಿನ್ ಟಿ ಇರುವ ಕ್ರೀಂ ಗಳಿಂದ ರಂದ್ರಗಳು ಮತ್ತು ಮುಖ ಕೆಂಪಗಾಗುವುದನ್ನು ತಡೆಯಬಹುದು.ಆದರೆ ಈ ಗುಣಗಳನ್ನು ಹೊಂದಿರುವ ಉತ್ಪನ್ನಗಳು ಮುಖದ ತೇವಾಂಶವನ್ನು ಕೂಡ ಕಡಿಮೆ ಮಾಡುವುದು ವಿಷಾದನೀಯ. ಇದನ್ನು ಸರಿಪಡಿಸಲು ಎಣ್ಣೆ ಅಂಶ ಕಡಿಮೆ ಇರುವ ಮೊಯಿಸ್ಚರೈಸ್ ಅನ್ನು ಬಳಸುವುದು ಸೂಕ್ತ. ಅತಿಯಾದ ಮೊಡವೆ ಸಮಸ್ಯೆ ಇದ್ದರೆ ಚರ್ಮತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.

ಕಣ್ಣಿನ ಸುತ್ತಲು ಕಪ್ಪು ವರ್ತುಲಗಳು

ಕಣ್ಣಿನ ಸುತ್ತಲು ಕಪ್ಪು ವರ್ತುಲಗಳು

ಒತ್ತಡ, ನಿದ್ರಾಹೀನತೆ, ಪೋಷಕಾಂಶ ಮತ್ತು ಸೂರ್ಯನ ಕಿರಣದ ಕೊರತೆ, ಅಲರ್ಜಿ ಇವುಗಳು ಕಣ್ಣಿನ ಸುತ್ತ ಕಪ್ಪು ವರ್ತುಲಗಳಾಗಲು ಕಾರಣವಾಗಿದೆ. ಇದಕ್ಕೆ ಈಗ ವಿವಿಧ ಚಿಕಿತ್ಸೆಗಳು ಲಭ್ಯವಿದ್ದು ಹೆಚ್ಚಿನವು ಕಣ್ಣಿನ ಸುತ್ತ ಆಗಿರುವ ವರ್ತುಲಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ . ಜೀವಸತ್ವ ಸಿ, ಕೆ ಮತ್ತು ಆಲ್ಫಾ ಹೈಡ್ರಾಕ್ಸಿ ಆಮ್ಲವನ್ನು ಒಳಗೊಂಡಿರುವ ಕ್ರೀಂ ಗಳು ಹೆಚ್ಚು ಬೇಗ ಕೆಲಸ ಮಾಡುತ್ತವೆ. ಈ ಕ್ರೀಂ ಅಷ್ಟೊಂದು ಪರಿಣಾಮಕಾರಿ ಆಗಿರದಿದ್ದಲ್ಲಿ ಹೆದರಬೇಕಾಗಿಲ್ಲ ಕನ್ಸೀಲರ್ ಅನ್ನು ಕಣ್ಣಿನ ಸುತ್ತ ಬಳಸಿ ವರ್ತುಲವನ್ನು ಮರೆಮಾಚಬಹುದು .

ಕಣ್ಣಿನ ರೆಪ್ಪೆ ಊದಿಕೊಳ್ಳುವುದು(ಐ ಬಗ್ಸ್ )

ಕಣ್ಣಿನ ರೆಪ್ಪೆ ಊದಿಕೊಳ್ಳುವುದು(ಐ ಬಗ್ಸ್ )

ಒತ್ತಡ, ಅಲರ್ಜಿ, ನಿದ್ರಾಹೀನತೆ ಇವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಂತೆ ಈ ಐ ಬಗ್ಸ್ ಕೂಡ ತಾತ್ಕಾಲಿಕವಾಗಿ ಆಗುತ್ತದೆ. ಅಲರ್ಜಿ ಯಿಂದ ಕಣ್ಣು ಊದಿ ಕೊಂಡರೆ ಅದನ್ನು ಅಲರ್ಜಿ ಔಷಧದಿಂದ ಪರಿಹರಿಸಬಹುದು . ಅಲರ್ಜಿಯಿಂದ ಅಲ್ಲದಿದ್ದ ಪಕ್ಷದಲ್ಲಿ ಐ ಕ್ರೀಂ, ಫೇಸ್ ಮಾಸ್ಕ್, ತಣ್ಣೀರಿನ ಸಂಕೋಚನದಿಂದ ಕೂಡ ಪರಿಹಾರ ಕಂಡುಕೊಳ್ಳಬಹುದು. ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇರುವ ಕ್ರೀಂ ಹೆಚ್ಚು ಪ್ರಯೋಜನಕಾರಿ ಇವೆರಡು ಕಣ್ಣಿನ ಊತವನ್ನು ಕಡಿಮೆ ಮಾಡುತ್ತವೆ.

English summary

Beauty Care For Wedding

Every woman want to look perfect on her wedding day. Ranging from weight loss, skin to clothing in order to be the center of attraction. Getting desired body weight for the wedding is often a new problem in women.
X
Desktop Bottom Promotion