For Quick Alerts
ALLOW NOTIFICATIONS  
For Daily Alerts

ಟೀನೇಜ್ ಗರ್ಲ್ಸ್ ಗೆ ಆರ್ಯುವೇದಿಕ್ ಬ್ಯೂಟಿ ಟಿಪ್ಸ್

|

ಸುಂದರವಾದ ಜಗತ್ತಿನಲ್ಲಿ ಪ್ರತಿಯೊಬ್ಬರು ಸುಂದರವಾಗಿಯೇ ಕಾಣಲು ಬಯಸುತ್ತಾರೆ. ಸುಂದರವಾಗಿ ಕಾಣಲು ಯಾರಿಗೆ ಮನಸ್ಸಿಲ್ಲ ಹೇಳಿ? ಅದರಲ್ಲೂ ಇಂದಿನ ಯುವತಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದಕ್ಕಾಗಿಯೇ ದಿನದಲ್ಲಿ ಹಲವಾರು ಗಂಟೆ ಮೀಸಲಿಡುತ್ತಾರೆ. ಕೆಲವರಿಗೆ ಎಷ್ಟು ಸುಂದರವಾಗಿ ಕಂಡರೂ ಮತ್ತಷ್ಟು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ.

ಇಂದಿನ ಕಾಲೇಜು ಮತ್ತು ಉದ್ಯೋಗಕ್ಕೆ ತೆರಳುವ ಯುವತಿಯರು ಹೆಚ್ಚಾಗಿ ಹಲವಾರು ಸೌಂದರ್ಯ ವರ್ಧಕಗಳನ್ನು ಬಳಸಿಕೊಂಡು ಹಣ ಹಾಗೂ ಸಮಯ ಎರಡನ್ನೂ ವ್ಯರ್ಥ ಮಾಡುತ್ತಿರುತ್ತಾರೆ. ಆದರೆ ಕೆಲವೊಂದು ಸಲ ಇಂತಹ ಸೌಂದರ್ಯ ವರ್ಧಕಗಳು ಯಾವುದೇ ಕೆಲಸ ಮಾಡುವುದಿಲ್ಲ. ಇಂತವರಿಗೆ ನೈಸರ್ಗಿಕವಾಗಿ ಸೌಂದರ್ಯ ಹೆಚ್ಚಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.

ಜೇನು ಮತ್ತು ಶುಂಠಿ ಪೇಸ್ಟ್

ಜೇನು ಮತ್ತು ಶುಂಠಿ ಪೇಸ್ಟ್

ಜೇನು ಮತ್ತು ಶುಂಠಿಯ ಪೇಸ್ಟ್ ಮಾಡಿ ಅದನ್ನು ದಿನಾಲೂ ಬೆಳಗ್ಗೆ ಎದ್ದ ತಕ್ಷಣ, ಹಲ್ಲುಜ್ಜುವ ಮೊದಲು ನಿಮ್ಮ ಮುಖದ ಮೇಲೆ ಹಚ್ಚಿ. ಇದು ಮುಖದ ಮೇಲಿರುವ ಸುಕ್ಕುಗಳನ್ನು ತೆಗೆದುಹಾಕುತ್ತದೆ.

ರಿಚ್ ಆಲಿವ್

ರಿಚ್ ಆಲಿವ್

ಮಸಾಜ್ ಮಾಡುವುದರಿಂದ ರಕ್ತದ ಸಂಚಲನೆಗೆ ಉತ್ತಮವಾಗಿ ಚರ್ಮ ಬಿಗಿಗೊಳ್ಳುತ್ತದೆ. ದಿನಾಲೂ ನಿಮ್ಮ ಚರ್ಮಕ್ಕೆ ಮಸಾಜ್ ಮಾಡಲು ಆಲೀವ್ ಎಣ್ಣೆಯನ್ನು ಬಳಸಿ. ಅಪ್ರದಕ್ಷಿಣವಾಗಿ ಮಸಾಜ್ ಮಾಡುವುದನ್ನು ನೆನಪಿಡಿ.

ಹೇರಳ ಸೇಬು

ಹೇರಳ ಸೇಬು

ಸೇಬನ್ನು ತುಂಬಾ ತೆಳುವಾಗಿ ಕತ್ತರಿಸಿ ನಿಮ್ಮ ಮುಖದಲ್ಲಿ ಕಲೆಬಿದ್ದ ಸ್ಥಳಕ್ಕೆ ಉಜ್ಜಿ. ಹತ್ತು ನಿಮಿಷ ಬಿಟ್ಟು ಮುಖವನ್ನು ಬಿಸಿ ನೀರಿನಿಂದ ತೊಳೆಯಿರಿ. ಇದು ಚರ್ಮದಲ್ಲಿನ ಎಣ್ಣೆಯಂಶವನ್ನು ತಡೆಯಲು ನೆರವಾಗುತ್ತದೆ.

ಆರೋಗ್ಯಕರ ಅರಿಶಿಣ

ಆರೋಗ್ಯಕರ ಅರಿಶಿಣ

ಅರಿಶಿಣ, ಸ್ವಲ್ಪ ಹಾಲು ಮತ್ತು ಲಿಂಬೆ ರಸವನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿ. ಇದು ಕಲೆ ತೆಗೆದುಹಾಕಲು ನೆರವಾಗುತ್ತದೆ.

ಸಿಹಿ ಜೇನು

ಸಿಹಿ ಜೇನು

ಜೇನು, ಲಿಂಬೆ ಮತ್ತು ತರಕಾರಿ ಎಣ್ಣೆಯ ಮಿಶ್ರಣ ಮಾಡಿ ಅದನ್ನು ಒಣ ಚರ್ಮದ ಮೇಲೆ ಹಚ್ಚಿ ಮತ್ತು 10-15 ನಿಮಿಷ ಬಿಟ್ಟು ತೊಳೆಯಿರಿ. ಒಣ ಚರ್ಮಕ್ಕೆ ಇದು ಒಳ್ಳೆಯ ಕಾಂತಿ ನೀಡುತ್ತದೆ.

ಹಣ್ಣುಗಳ ಊಟ

ಹಣ್ಣುಗಳ ಊಟ

ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ಹಣ್ಣುಗಳನ್ನು ಸೇರಿಸುವ ಹವ್ಯಾಸ ಮಾಡಿಕೊಳ್ಳಿ. ಹಣ್ಣುಗಳನ್ನು ಉಪ್ಪು ಮತ್ತು ಸಕ್ಕರೆ ಹಾಕದೆ ತಿನ್ನಿ. ವಿವಿಧ ರೀತಿಯ ಹಣ್ಣು ಹಾಗೂ ತರಕಾರಿ, ಅದರಲ್ಲೂ ಕಡು ಹಸಿರು ಬಣ್ಣದ ತರಕಾರಿಗಳನ್ನು ತಿನ್ನಿ ಮತ್ತು ನಿಮ್ಮ ಚರ್ಮದಲ್ಲಿ ಬದಲಾವಣೆ ನೋಡಿ.

ಮಾದರಿ ಪಾನೀಯ

ಮಾದರಿ ಪಾನೀಯ

ಬೆಳಗ್ಗೆ ಎರಡು ಗ್ಲಾಸ್ ನೀರು ಕುಡಿಯುವುದನ್ನು ಹವ್ಯಾಸ ಮಾಡಿಕೊಳ್ಳಿ. ಬೆಳ್ಳಂಬೆಳಗ್ಗೆ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚಾಗಿ ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ.

ಸಂಪೂರ್ಣ ಬೆಣ್ಣೆ

ಸಂಪೂರ್ಣ ಬೆಣ್ಣೆ

ಸೂರ್ಯನ ಕಿರಣಗಳಿಂದ ಆದ ಕಂದುಬಣ್ಣವನ್ನು ಹೋಗಲಾಡಿಸಲು ಮಜ್ಜಿಗೆ ಮತ್ತೊಂದು ಪರಿಹಾರ. ಕೆಲವು ದಿನಗಳ ಕಾಲ ಮಜ್ಜಿಗೆಯಿಂದ ನಿಮ್ಮ ಮುಖವನ್ನು ತೊಳೆಯಿರಿ ಮತ್ತು ನಿಮಗೆ ಬದಲಾವಣೆ ಕಂಡುಬರುತ್ತದೆ. ಒಂದು ನೈಸರ್ಗಿಕ ಸಂಕೋಚಕವಾಗಿರುವ ಕಾರಣ ಚರ್ಮಕ್ಕೆ ಕಾಂತಿ ನೀಡುತ್ತದೆ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಇದು ಉತ್ತಮ.

ಬೆಳಗ್ಗಿನ ಉಪಹಾರ

ಬೆಳಗ್ಗಿನ ಉಪಹಾರ

ಬೆಳಗ್ಗೆ ಮತ್ತು ಮಧ್ಯಾಹ್ನ ವೇಳೆ ರಾತ್ರಿಗಿಂತ ಹೆಚ್ಚು ಕ್ಯಾಲೋರಿಗಳಿರುವ ಆಹಾರ ತಿನ್ನಲು ಪ್ರಯತ್ನಿಸಿ. ಈ ಮೂಲಕ ಸಂಜೆ ವೇಳೆ ನೀವು ಕಡಿಮೆ ತಿನ್ನಬೇಕಾಗುತ್ತದೆ. ಇದು ದಿನದ ಮತ್ತು ಮಧ್ಯಾಹ್ನದ ಸಮಯದಲ್ಲಿ ಕ್ಯಾಲೊರಿ ಸುಡಲು ಹೆಚ್ಚು ಸಮಯ ಮತ್ತು ಅವಕಾಶ ನೀಡುತ್ತದೆ.

ಮಾಯಿಶ್ಚರೈಸರ್

ಮಾಯಿಶ್ಚರೈಸರ್

ಬೆಚ್ಚಗಿನ ಮುಖ ಅಥವಾ ಸ್ನಾನದ ಬಳಿಕ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಒಳ್ಳೆಯ ಪರಿಹಾರ. ಮೊಶ್ಚಿರೈಸರ್ ಚರ್ಮದಲ್ಲಿರುವ ಎಣ್ಣೆಯನ್ನು ಪುನಃಸ್ಥಾಪಿಸಲು ಮತ್ತು ಚರ್ಮದಲ್ಲಿನ ನೀರನ್ನು ಕಾಪಾಡಲು ನೆರವಾಗುತ್ತದೆ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿ ಹಣ್ಣಿನ ರಸಕ್ಕೆ 3-4 ಟೇಬಲ್ ಸ್ಪೂನ್ ತೋಕೆ ಗೋಧಿ ಹಿಟ್ಟನ್ನು ಸೇರಿಸಿ. ದಪ್ಪವಾದ ಪೇಸ್ಟ್ ನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ ಮತ್ತು ಸ್ವಲ್ಪ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಚರ್ಮ ಆರೋಗ್ಯಕರ ಮತ್ತು ನುಣುಪಾಗುತ್ತದೆ.

English summary

Ayurvedic Beauty Tips For Teens

Young girls, specially, spend lots of money and energy on choosing their beauty products – all with the hope to look beautiful. Here are some natural beauty tips for girls.
Story first published: Thursday, September 26, 2013, 16:33 [IST]
X
Desktop Bottom Promotion