ಸೌಂದರ್ಯದ 11 ರಹಸ್ಯ ನಿಂಬೆಯಲ್ಲಿ ಅಡಗಿದೆ!

By:
Subscribe to Boldsky

ಎಲ್ಲಾ ರೀತಿಯ ಸೌಂದರ್ಯವರ್ಧಕ ಗುಣ ಒಂದೇ ಬ್ಯೂಟಿ ಪ್ರಾಡಕ್ಟ್ ನಲ್ಲಿ ಬೇಕೆ? ಹಾಗಾದರೆ ನಮ್ಮ ಟಿಪ್ಸ್ ಒಂದೇ ಅದು ನಿಂಬೆ ಹಣ್ಣು. ನಿಂಬೆ ಹಣ್ಣಿನಲ್ಲಿ ಅನೇಕ ರೀತಿಯ ಸೌಂದರ್ಯವರ್ಧಕ ಗುಣಗಳಿವೆ.

ನಮಗೆ ಹಿತ್ತಲ ಗಿಡ ಮದ್ದಲ್ಲ, ಆದ್ದರಿಂದಲೇ ಸೌಂದರ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸುಲಭದಲ್ಲಿ ಸಿಗುವ ನಿಂಬೆ ಹಣ್ಣನ್ನು ಬಿಟ್ಟು ಕೆಮಿಕಲ್ ಇರುವ ಬ್ಯೂಟಿ ಪ್ರಾಡಕ್ಟ್ ಮೇಲೆ ದುಡ್ಡು ಸುರಿಯುತ್ತೇವೆ. ನಿಂಬೆ ಹಣ್ಣಿನಲ್ಲಿ 10 ಕ್ಕಿಂತ ಹೆಚ್ಚಿನ ಸೌಂದರ್ಯವರ್ಧಕ ಗುಣಗಳಿವೆ, ಅಂದ ಮೇಲೆ ನಿಮ್ಮ ಸಾಕಷ್ಟು ಸೌಂದರ್ಯ ಸಮಸ್ಯೆಗೆ ಪರಿಹಾರ ಇದರಲ್ಲಿಯೇ ಇದೆ ಎಂದಾಯುತ್ತಲ್ಲವೇ? ನಿಂಬೆ ಹಣ್ಣನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಬಹುದು ಎಂದು ನೋಡೋಣ ಬನ್ನಿ:

ಸೂಪರ್ ಬ್ಲೀಚ್

ಮುಖವನ್ನು ಬ್ಲೀಚ್ ಮಾಡಲು ಕೆಮಿಕಲ್ ಇರುವ ಬ್ಲೀಚ್ ಪೌಡರ್ ಬಳಸುವ ಬದಲು ನಿಂಬೆ ಹಣ್ಣನ್ನು ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ಮುಖ ತೊಳೆದರೆ ಸಾಕು, ಮುಖದ ಹೊಳಪು ಹೆಚ್ಚುವುದು ಹೀಗೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ತಲೆ ಹೊಟ್ಟಿಗೆ ಗುಡ್ ಬೈ

ತಲೆ ಹೊಟ್ಟನ್ನು ಹೋಗಲಾಡಿಸಲು ನಿಂಬೆ ರಸ ಬಳಸಿದರೆ ಸಾಕು ತಕ್ಷಣ ಪರಿಹಾರ ದೊರೆಯುವುದು.

ತ್ವಚೆ ಬೆಳ್ಳಗಾಗಿಸಲು

ಕೈ, ಕಾಲುಗಳು ಬಿಸಿಲು ತಾಗಿ ದೇಹದ ಇತರ ಭಾಗಕ್ಕಿಂತ ಕಪ್ಪಾಗಿದ್ದರೆ ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಮತ್ತು ಸಕ್ಕರೆ ಹಾಕಿ ಮೈಯನ್ನು ಸ್ಕ್ರಬ್ ಮಾಡಿ. ಇದರಿಂದ ತ್ವಚೆಯ ಬಿಳುಪು ಹೆಚ್ಚುವುದು.

ಮೃದುವಾದ ಕೂದಲಿಗಾಗಿ

ಕೂದಲು ತುಂಬಾ ಒರಟಾಗಿದ್ದು, ಮೃದು ಕೂದಲು ಬೇಕೆಂದು ಬಯಸುವುದಾದರೆ ನಿಂಬೆ ರಸವನ್ನು ಶ್ಯಾಂಪೂ ಜೊತೆ ಮಿಶ್ರಣ ಮಾಡಿ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಕೂದಲು ಮೃದುವಾಗುವುದು.

ಕ್ಲೆನ್ಸರ್

ಮುಖದ ತ್ವಚೆಯಲ್ಲಿರುವ ಬೇಡದ ರಾಸಾಯನಿಕಗಳನ್ನು ತೆಗೆದು ಹಾಕುವಲ್ಲಿ ನಿಂಬೆ ರಸ ಸಹಾಯ ಮಾಡುತ್ತದೆ. ಫೇಸ್ ಮಾಸ್ಕ್ ಅಥವಾ ಫೇಶಿಯಲ್ ಮಾಡಿಸುವಾಗ ನಿಂಬೆ ರಸ ಕೂಡ ಬಳಸುವುದು ಒಳ್ಳೆಯದು.

ಮೊಡವೆ

ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಪ್ರತೀದಿನ ನಿಂಬೆ ರಸ ಹಚ್ಚಿ 5 ನಿಮಿಷ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ನೆರಿಗೆ ಬೇಗನೆ ಬೀಳದಂತೆ ತಡೆಯುತ್ತದೆ

ವಯಸ್ಸಾದಂತೆ ಮುಖದಲ್ಲಿ ನೆರಿಗೆ ಬೀಳುವುದು ಸಹಜ. ಆದರೆ ನಿಂಬೆ ರಸದಿಂದ ನಿಮ್ಮ ತ್ವಚೆ ಆರೈಕೆ ಮಾಡಿದರೆ ಬೇಗನೆ ಮುಪ್ಪು ನಿಮ್ಮ ಮುಖವನ್ನು ಆವರಿಸಲು ಬಿಡುವುದಿಲ್ಲ.

ಕೂದಲು ಸುವಾಸನೆಯಿಂದ ಕೂಡಿರಲು

ಕೂದಲು ಬೆವರಿದರೆ ಅಥವಾ ಸರಿಯಾಗಿ ಒಣಗಿದ್ದರೆ ಕೆಟ್ಟ ವಾಸನೆ ಬೀರುತ್ತದೆ. ನಿಂಬೆ ರಸ ಕೂದಲು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ.

ಎಣ್ಣೆ ತ್ವಚೆ ಹೋಗಲಾಡಿಸಲು

ಮುಖದಲ್ಲಿರುವ ಎಣ್ಣೆಯಂಶವಿರುವವರಿಗೆ ಯಾವ ಮೇಕಪ್ ತುಂಬಾ ಹೊತ್ತು ನಿಲ್ಲುವುದಿಲ್ಲ. ಆದ್ದರಿಂದ ಎಣ್ಣೆ ತ್ವಚೆಯವರು ಮೇಕಪ್ ಗೆ ಮುಂಚೆ ನಿಂಬೆ ರಸ ಹಚ್ಚಿ 5 ನಿಮಿಷ ಬಿಟ್ಟು ಮುಖ ತೊಳೆದು ನಂತರ ಮೇಕಪ್ ಮಾಡಿದರೆ ಮೇಕಪ್ ತುಂಬಾ ಹೊತ್ತಿನವರೆಗೆ ಇರುತ್ತದೆ.

ಬಿಳಿ ಉಗುರಿನ ಅಂದ ಪಡೆಯಲು

ಉಗುರು ಬೆಳ್ಳಗಿದ್ದರೆ ಕೈ, ಕಾಲುಗಳು ತುಂಬಾ ಆಕರ್ಷಕವಾಗಿ ಕಾಣುತ್ತದೆ. ನಿಂಬೆ ಹಣ್ಣಿನಿಂದ ಉಗುರನ್ನು ತಿಕ್ಕಿದರೆ ಉಗುರು ಬೆಳ್ಳಗಾಗುತ್ತದೆ.

ತ್ವಚೆ ಅಲರ್ಜಿಗೆ ಬೆಸ್ಟ್ ಮನೆಮದ್ದು

ತ್ವಚೆ ಅಲರ್ಜಿ ಉಂಟಾಗಿದ್ದರೆ ನಿಂಬೆ ರಸ ಹಚ್ಚಿದರೆ ಸಾಕು, ಬೇಗನೆ ಗುಣ ಮುಖವಾಗುವುದು.

Story first published: Tuesday, April 2, 2013, 12:01 [IST]
English summary

Amazing Beauty Benefits of Lemon | Tips For Skin Care | ಸೌಂದರ್ಯದ 11 ರಹಸ್ಯ ನಿಂಬೆಯಲ್ಲಿ ಅಡಗಿದೆ | ದೇಹದ ಆರೈಕೆಗೆ ಸಲಹೆಗಳು

Lemon is one of the most versatile natural ingredients to enhance your beauty. The beauty benefits of lemon are numerous and very potent. One of the main beauty benefits of lemon is that it works as natural bleach. So, lemon lightens skin and hair naturally.
Please Wait while comments are loading...
Subscribe Newsletter