For Quick Alerts
ALLOW NOTIFICATIONS  
For Daily Alerts

ಪುರುಷರ ಜಿಮ್ ಬ್ಯಾಗ್ ನಲ್ಲಿ ಇರಬೇಕಾದ ವಸ್ತುಗಳಿವು

By Super
|

ಜಿಮ್ ಗೆ ಸೇರಿ ಬಾಡಿ ಬಿಲ್ಡ್ ಮಾಡಬೇಕೆಂಬುವುದು ಹೆಚ್ಚಿನ ಪುರುಷರ ಬಯಕೆಯಾಗಿರುತ್ತದೆ. ಆದರೆ ಜಿಮ್ ಗೆ ಸೇರುವ ಮೊದಲು ಪೂರ್ವ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಹೆಚ್ಚಿನವರು ತಮ್ಮ ಜಿಮ್ ಕಿಟ್ ನಲ್ಲಿ ಜಿಮ್ ನಲ್ಲಿ ಧರಿಸಲು ಬೇಕಾಗುವ ಬಟ್ಟೆ ಮಾತ್ರ ಇಟ್ಟಿರುತ್ತಾರೆ. ಆದರೆ ಬರೀ ಜಿಮ್ ಬಟ್ಟೆ ಮಾತ್ರ ತೆಗೆದುಕೊಂಡು ಹೋದರೆ ಸಾಲದು, ಮತ್ತೆ ಕೆಲವು ವಸ್ತುಗಳನ್ನು ಅವಶ್ಯಕವಾಗಿ ಕೊಂಡೊಯ್ಯಬೇಕಾಗುತ್ತದೆ.

ನೀವು ಜಿಮ್ ಗೆ ಕೇವಲ ಜಿಮ್ ಬಟ್ಟೆ ಮಾತ್ರ ತೆಗೆದುಕೊಂಡು ಹೋದರೆ ಜಿಮ್ ಮುಗಿದ ನಂತರ ನೀವು ನೋಡಲು ಸುಂದವಾಗಿ ಕಾಣುವುದಿಲ್ಲ. ಬೆವರಿನಿಂದ ಕೂಡಿದ ಮೈ ಮತ್ತು ಸುಸ್ತಾದ ನಿಲುವು ನಿಮ್ಮ ಅಂದವನ್ನು ಮಂಕಾಗಿಸುತ್ತದೆ. ಆದ್ದರಿಂದ ನೀವು ಜಿಮ್ ಗೆ ಹೋಗುವಾಗ ಜಿಮ್ ಬಟ್ಟೆ ಜೊತೆಗೆ ಈ ಕೆಳಗಿನ ವಸ್ತುಗಳೂ ನಿಮ್ಮ ಜಿಮ್ ಬ್ಯಾಗ್ ನಲ್ಲಿರಲಿ.

1)ಜಿಮ್ ಟವೆಲ್

1)ಜಿಮ್ ಟವೆಲ್

ನಿಮಗೆ ಜಿಮ್ ಟವೆಲ್ ಬೇಕೇ ಬೇಕು. ಏಕೆಂದರೆ ಒಂದು ಟವೆಲ್ ನಿಮ್ಮ ಸಲಕರಣೆಗಳನ್ನು ಉಪಯೋಗಿಸಿದ ನಂತರ ಮತ್ತು ಉಪಯೋಗಿಸುವ ಮೊದಲು ಒರೆಸಲು ಮತ್ತು ಇನ್ನೊಂದು ಬೆವರಿದ ನಂತರ ಮೈ ಒರೆಸಿಕೊಳ್ಳಲು.ಜಿಮ್ ಮಾಡಿದಾಗ ಬರುವ ಬೆವರನ್ನು ಒರೆಸಿದ ಟವಲ್ ಅನ್ನು ತೊಳೆಯದೇ ಹಾಗೆ ಒಣಗಿಸುವುದು ಅನಾರೋಗ್ಯಕರ.

2)ಡಿಯೋಡ್ರೆಂಟ್

2)ಡಿಯೋಡ್ರೆಂಟ್

ಜಿಮ್ ಮಾಡಿದ ನಂತರ ಸ್ನಾನ ಮಾಡಬೇಕು ಇಲ್ಲದಿದ್ದಲ್ಲಿ ಬೆವರಿನ ದುರ್ಗಂಧ ಬರುತ್ತದೆ.ಆದರೆ ಮನೆಗೆ ಹೋಗಿ ಸ್ನಾನ ಮಾಡುವವರೆಗೆ ಸೆಂಟ್ ಅನ್ನು ಬಳಸಬಹುದು. ಇದು ಉಪಯೋಗಕ್ಕೆ ಬರುತ್ತದೆ.

3)ನ್ಯೂಟ್ರಿಷನ್ ಬಾರ್

3)ನ್ಯೂಟ್ರಿಷನ್ ಬಾರ್

ನೀವು ಆಫೀಸ್ ನಿಂದ ನೇರವಾಗಿ ಜಿಮ್ ಗೆ ಹೋದರೆ ನಿಮ್ಮ ವರ್ಕ್ ಔಟ್ ಮುಗಿದ ನಂತರ ತುಂಬಾ ಹಸಿವಾಗುತ್ತದೆ.ನಿಮ್ಮ ಜೊತೆ ನ್ಯೂಟ್ರಿಷನ್ ಬಾರ್ ಇದ್ದರೆ ಅದು ನಿಮಗೆ ಸಹಾಯಕ್ಕೆ ಬರುತ್ತದೆ.

4)ಹೆಚ್ಚುವರಿ ಶೇವಿಂಗ್ ಕಿಟ್

4)ಹೆಚ್ಚುವರಿ ಶೇವಿಂಗ್ ಕಿಟ್

ನಿಮ್ಮ ಜೊತೆ ಬೇಸಿಕ್ ಶೇವಿಂಗ್ ವಸ್ತುಗಳನ್ನು ಇಟ್ಟುಕೊಂಡಿರಿ.ಜಿಮ್ ಮುಗಿದ ತಕ್ಷಣ ಆಫಿಸ್ ಗೆ ಹೋಗಬೇಕಾಗಿ ಬಂದಲ್ಲಿ ಶೇವ್ ಮಾಡಿಕೊಂಡು ಸ್ನಾನ ಮಾಡಿದರೆ ಫ್ರೆಶ್ ಎನಿಸುತ್ತದೆ.ಇದು ಸಹಾಯಕ್ಕೆ ಬರುತ್ತದೆ.

ನೋವು ನಿವಾರಕ ಕ್ರೀಂ

ನೋವು ನಿವಾರಕ ಕ್ರೀಂ

ನೋವು ನಿವಾರಕ ಕ್ರೀಂ ಗಳಲ್ಲಿ ಮೆನ್ತೋಲ್ ಅಂಶವಿರುವುದರಿಂದ ಇದು ಸಂಧಿ ನೋವು ಮತ್ತು ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ.ವರ್ಕ್ ಔಟ್ ಮಾಡುವ ಮೊದಲು ಮತ್ತು ನಂತರ ಇದನ್ನು ಬಳಸಿ.ಇದು ಸ್ನಾಯು ದೌರ್ಬಲ್ಯವನ್ನು ತಡೆಯುತ್ತದೆ.

6)ಮ್ಯುಸಿಕ್ ಪ್ಲೇಯರ್

6)ಮ್ಯುಸಿಕ್ ಪ್ಲೇಯರ್

ಸಂಗೀತ ದೇಹಕ್ಕೆ ಹೊಸ ಹುರುಪನ್ನು ನೀಡುತ್ತದೆ.ಅತಿ ವೇಗದ ಹಾಡುಗಳನ್ನು ಹೊಂದಿರುವ ಎಂಪಿ 3 ನಿಮ್ಮ ಜೊತೆಗೆ ಇಟ್ಟುಕೊಳ್ಳಿ.ಅದು ನಿಮಗೆ ಹುರುಪು ನೀಡು ಶಕ್ತಿ ಬರುವಂತೆ ಮಾಡುತ್ತದೆ.ಯಾವಾಗಲು ಸಣ್ಣ ಪ್ಲೇಯರ್ ಇರಲಿ ಇದು ನಿಮ್ಮ ಜಿಮ್ ವರ್ಕ್ ಔಟ್ ಮಾಡಲು ಅಡ್ಡಿಯಾಗದಂತೆ ಇರಲಿ.

7)ಹ್ಯಾಂಡ್ ಸ್ಯಾನಿಟೈಜರ್

7)ಹ್ಯಾಂಡ್ ಸ್ಯಾನಿಟೈಜರ್

ಜಿಮ್ ಎಂದರೆ ಅಲ್ಲಿ ಸೋಂಕು ತಗುಲುವ ಸಂಭವ ಹೆಚ್ಚಿರುತ್ತದೆ.ನಿಮ್ಮ ಜೊತೆಗೆ ಹ್ಯಾಂಡ್ ಸ್ಯಾನಿಟೈಜರ್ ಇಟ್ಟುಕೊಳ್ಳಿ ಮತ್ತು ಅದನ್ನು ಶ್ರದ್ದೆಯಿಂದ ಉಪಯೋಗಿಸಿ.ಕೈಯನ್ನು ಅದರಿಂದ ಸ್ವಚ್ಚ ಮಾಡಿಕೊಳ್ಳಿ.

8)ಎಣ್ಣೆ ರಹಿತ ಫೇಸ್ ವಾಶ್

8)ಎಣ್ಣೆ ರಹಿತ ಫೇಸ್ ವಾಶ್

ಜಿಮ್ ಮಾಡಿದಾಗ ಬೆವರುವುದು ಸಾಮಾನ್ಯ.ನೀವು ಹೆಚ್ಚು ಜಿಮ್ ಮಾಡಿ ಬೆವರಿದಾಗ ಅದರಿಂದ ಮೊಡವೆಗಳು ಆಡಬಾರದು ಎಂದರೆ ನಿಮ್ಮ ಜೊತೆಗೆ ಎಣ್ಣೆ ರಹಿತ ಫೇಸ್ ವಾಶ್ ಇಟ್ಟುಕೊಳ್ಳಿ.ಸ್ಯಾಲಿಸಿಲಿಕ್ ಆಸಿಡ್ ನಿಮ್ಮ ಮುಖವನ್ನು ಸ್ವಚ್ಚಗೊಳಿಸಿ ಕಲೆ,ಮೊಡವೆಗಳಾಗದಂತೆ ನೋಡಿಕೊಳ್ಳುತ್ತದೆ.

9)ನೀರಿನ ಬಾಟಲಿ

9)ನೀರಿನ ಬಾಟಲಿ

ಬೇರೆಬೇರೆ ರೀತಿಯ ವ್ಯಾಯಾಮ ಮಾಡುವಾಗ ನೀರಿನ ಅಂಶ ಕಾಪಾಡಿಕೊಳ್ಳುವುದು ಅತಿ ಅವಶ್ಯಕವಾಗಿರುತ್ತದೆ.ನಿಮ್ಮ ಜೊತೆಗೆ ಒಂದು ನೀರಿನ ಬಾಟಲಿ ಇದ್ದರೆ ನಿಮಗೆ ಬಾಯಾರಿಕೆಯಾದಾಗ ತಕ್ಷಣ ನೀರು ಕುಡಿಯಬಹುದು.ನೀವು ನೀರು ಕುಡಿಯುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದು ಶೇಖಡಾ 100 ರಷ್ಟು ಖಚಿತ.

10)ಒಂದು ಜೊತೆ ಹೆಚ್ಚುವರಿ ಬಟ್ಟೆ ನಿಮ್ಮೊಂದಿಗಿರಲಿ

10)ಒಂದು ಜೊತೆ ಹೆಚ್ಚುವರಿ ಬಟ್ಟೆ ನಿಮ್ಮೊಂದಿಗಿರಲಿ

ನೀವು ಇತರರಿಗೆ ಜಿಮ್ ನಿಂದ ಹೊರಬರುತ್ತಿದ್ದೀರಿ ಎಂದು ತೋರಿಸಬೇಕು ಎಂದಿದ್ದರೆ ಸರಿ, ಇಲ್ಲದಿದ್ದರೆ ತಕ್ಷಣ ಬಟ್ಟೆ ಬದಲಾಯಿಸಿ.ಒಂದೊಮ್ಮೆ ನೀವು ಜಿಮ್ ಮುಗಿಸಿ ನೇರವಾಗಿ ಮನೆಗೆ ಹೋಗಬೇಕು ಎಂದಿದ್ದರೂ ಸಹ ಬಟ್ಟೆ ಬದಲಾಯಿಸುವುದು ಒಳ್ಳೆಯದು ಏಕೆಂದರೆ ನೀವು ಹಚ್ಚಿಕೊಂಡ ಮಯಿಶ್ಚರೈಸರ್ ಕರಗಿ ಜಿಮ್ ಬಟ್ಟೆಗೆ ಮತ್ತಿಕೊಂಡು ಬಟ್ಟೆ ಬೇಗ ಹಾಳಾಗುವಂತೆ ಮಾಡುತ್ತದೆ.

English summary

10 Gym Bag Essentials For Men

To help you achieve the perfect after-gym look. Here is a list of 10 gym bag essentials that you must bring along. Read on!
X
Desktop Bottom Promotion