For Quick Alerts
ALLOW NOTIFICATIONS  
For Daily Alerts

ಹೊಳಪಿನ ಉಗುರಿಗಾಗಿ 4 ರೀತಿಯ ಮ್ಯಾನಿಕ್ಯೂರ್

|

ಹೆಚ್ಚಿನವರಿಗೆ ಉಗುರು ಬೆಳೆಸುವುದರಲ್ಲಿ ಆಸಕ್ತಿ ಇರುತ್ತದೆ, ಆದರೆ ಅವುಗಳನ್ನು ಸುಂದರವಾಗಿ ಕಾಣುವಂತೆ ಮಾಡುವುದರ ಬಗ್ಗೆ ಹೆಚ್ಚಿನ ಐಡಿಯಾ ಇರುವುದಿಲ್ಲ. ಉಗುರು ಆಕರ್ಷಕವಾಗಿ ಕಾಣಲು ಅದನ್ನು ನೀಟಾಗಿ ಕತ್ತರಿಸಿದರೆ ಮಾತ್ರ ಸಾಲದು ಅದರ ಹೊಳಪನ್ನು ಹೆಚ್ಚಿಸಬೇಕು.

ಈ ಕೆಳಗೆ ಕೆಲವು ಮ್ಯಾನಿಕ್ಯೂರ್ ಗಳನ್ನು ಹೇಳಲಾಗಿದೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸಿದರೆ ಸಾಕು ಉಗುರಿನ ಸೌಂದರ್ಯ ಹೆಚ್ಚುವುದು. ಈ ಮ್ಯಾನಿಕ್ಯೂರ್ ಗಳನ್ನು ಪಾರ್ಲರ್ ಗೆ ಹೋಗಿ ಎರಡು ತಿಂಗಳಿಗೆ ಒಮ್ಮೆ ಮಾಡಿದರೂ ಸಾಕು.

Types Of Nail Manicure you Must Try

1. ಫ್ರೆಂಚ್ ಮ್ಯಾನಿಕ್ಯೂರ್: ಈ ಮ್ಯಾನಿಕ್ಯೂರ್ ಮಾಡಿದರೆ ಉಗುರು ತುಂಬಾ ಬೆಳ್ಳಗೆ ಕಾಣಿಸುತ್ತದೆ. ಈ ರೀತಿಯ ಮ್ಯಾನಿಕ್ಯೂರ್ ಮಾಡುವಾಗ ಉಗುರನ್ನು ಚೌಕಾಕಾರದಲ್ಲಿ ಕತ್ತರಿಸಿ ನಂತರ ಅವುಗಳನ್ನು ಮ್ಯಾನಿಕ್ಯೂರ್ ಮಾಡಲಾಗುವುದು. ಈ ರೀತಿ ಮಾಡಿದ್ದೇ ಆದರೆ ಉಗುರು ಅತ್ಯಾಕರ್ಷಕವಾಗಿ ಕಂಡು ಕೈ ಮತ್ತು ಕಾಲಿನ ಅಂದ ಹೆಚ್ಚುವುದು.

2. ಪಾರಾಫಿನ್ ವ್ಯಾಕ್ಸ್ ಮ್ಯಾನಿಕ್ಯೂರ್: ಈ ಮ್ಯಾನಿಕ್ಯೂರ್ ಮಾಡಿದರೆ ಕೈ , ಕಾಲು ಮತ್ತು ಉಗುರುಗಳು ತುಂಬಾ ಸ್ವಚ್ಚವಾಗಿ ಕಾಣುತ್ತದೆ. ಇದರಲ್ಲಿ ಬಿಸಿಯಾದ ವ್ಯಾಕ್ಸ್ ಅನ್ನು ಹಚ್ಚಿ ಒಣಗಿದ ನಂತರ ಕಿತ್ತು ತೆಗೆಯಲಾಗುವುದು. ಈ ರೀತಿ ಮಾಡಿದರೆ ತ್ವಚೆ ತುಂಬಾ ಮೃದುವಾಗುವುದು ಮತ್ತು ಕೈ ಮತ್ತು ಕಾಲು ಆಕರ್ಷಕವಾಗಿ ಕಾಣುತ್ತದೆ.

3. ಬ್ರೆಜಲೈನ್ ಮ್ಯಾನಿಕ್ಯೂರ್: ಮ್ಯಾನಿಕ್ಯೂರ್ ನಲ್ಲಿ ಬಳಸುವ ರಾಸಾಯನಿಕವು ಉಗುರನ್ನು ಹೊಳೆಯುವಂತೆ ಮಾಡುವುದರ ಜೊತೆಗೆ ಗಟ್ಟಿ ಮಾಡುತ್ತದೆ. ಇದರಿಂದ ಉಗುರುಗಳು ಬೇಗನೆ ಮುರಿಯುವುದಿಲ್ಲ.

4. ಹಾಟ್ ಸ್ಟೋನ್ ಮ್ಯಾನಿಕ್ಯೂರ್: ಬಿಸಿ ಕಲ್ಲನ್ನು ಬಳಸಿ ಮ್ಯಾನಿಕ್ಯೂರ್ ಮಾಡಲಾಗುವುದು. ಈ ರೀತಿ ಮಾಡಿದರೆ ದೇಹಕ್ಕೆ ವಿಶ್ರಾಂತಿಯ ಅನುಭವ ಉಂಟಾಗುವುದು ಮತ್ತು ತ್ವಚೆ ಹೊಳಪು ಹೆಚ್ಚುವುದು. ಇದರಿಂದಾಗಿ ಕೈ ಮತ್ತು ಕಾಲುಗಳು ಸ್ವಚ್ಚವಾಗಿ, ಆಕರ್ಷಕವಾಗಿ ಕಾಣುವುದು.

4. ಶೆಲಾಕ್ ಜೆಲ್ ಮ್ಯಾನಿಕ್ಯೂರ್: ಇದು ಸ್ವಲ್ಪ ದುಬಾರಿ ಬೆಲೆಯ ಮ್ಯಾನಿಕ್ಯೂರ್ ಆಗಿದೆ. ಈ ಮ್ಯಾನಿಕ್ಯೂರ್ ಮಾಡಿದರೆ ಉಗುರುಗಳು ಗಟ್ಟಿಯಾಗುತ್ತದೆ ಮತ್ತು ನೋಡಲು ಬೆಳ್ಳಗೆ ಹೊಳಪಿನಿಂದ ಕೂಡಿರುತ್ತದೆ.

English summary

Types Of Nail Manicure you Must Try | Tips For Beauty | ಉಗುರಿನ ಸೌಂದರ್ಯಕ್ಕಾಗಿ ಮ್ಯಾನಿಕ್ಯೂರ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

There are many types of manicures that help you keep your hands in fine condition. You can try all of the nail manicures at certain intervals of time. It is considered good to go for a manicure every 2 months.
X
Desktop Bottom Promotion