For Quick Alerts
ALLOW NOTIFICATIONS  
For Daily Alerts

ಕೂದಲು ಮತ್ತು ತ್ವಚೆ ಸೌಂದರ್ಯಕ್ಕೆ-ಸಾಸಿವೆ ಎಣ್ಣೆ

|
Mustard Oil, Body Massage
ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಸೌಂದರ್ಯ ಮಾತ್ರವಲ್ಲ, ಆರೋಗ್ಯ ಕೂಡ ಹೆಚ್ಚಾಗುತ್ತದೆ. ಈ ರೀತಿ ಮಸಾಜ್ ಮಾಡಲು ಬಾದಾಮಿ, ಆಲೀವ್, ತೆಂಗಿನೆಣ್ಣೆ ಹೀಗೆ ಅನೇಕ ಬಗೆಯ ಎಣ್ಣೆಗಳನ್ನು ಬಳಸುತ್ತೇವೆ. ಈ ರೀತಿ ಬಾಡಿ ಮಸಾಜ್ ಗೆ ಸಾಸಿವೆ ಎಣ್ಣೆಯನ್ನು ಕೂಡ ಬಳಸಬಹುದು. ಏಕೆಂದರೆ ಸಾಸಿವೆ ಎಣ್ಣೆಯಲ್ಲಿ ಅನೇಕ ಆರೋಗ್ಯಕರ ಗುಣಗಳಿವೆ ಆದ್ದರಿಂದ ಈ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಕ್ಲೆನ್ಸಿಂಗ್: ಸಾಸಿವೆ ಎಣ್ಣೆಯಿಂದ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ಎಣ್ಣೆಯ ಜೊತೆ ಬೇರೆ ವಸ್ತುಗಳನ್ನು ಮಿಶ್ರಣ ಮಾಡಬೇಕಾದ ಅವಶ್ಯಕತೆಯಿಲ್ಲ. ಬರೀ ಈ ಎಣ್ಣೆಯನ್ನು ಬಳಸಿ ಮೈಗೆ ಮಸಾಜ್ ಮಾಡಿದರೆ ನಿಮ್ಮ ತ್ವಚೆ ಹೊಳಪನ್ನು ಪಡೆಯುತ್ತದೆ.
ಕೆಮ್ಮು,ಶೀತವಿದ್ದರೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿದರೆ ಶೀತ ಕಡಿಮೆಯಾಗುವುದು ಮತ್ತು ಮೈಕೈ ನೋವು ಕೂಡ ಕಡಿಮೆಯಾಗುವುದು.

ಕೂದಲಿನ ಬೆಳವಣಿಗೆ ಸಹಕಾರಿಯಾಗಿದೆ: ಪ್ರತಿದಿನ ಸಾಸಿವೆ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ಕೂದಲಿನ ಬುಡ ಬಲವಾಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ಈ ರೀತಿ ಮಾಡುತ್ತಿದ್ದರೆ ಅಕಾಲಿಕ ನೆರೆ ಕೂದಲಿನ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ ತುಂಬಾ ಒತ್ತಡದಿಂದಾಗಿ ಸುಸ್ತು ಮತ್ತು ತಲೆನೋವು ಕಾಣಿಸಿಕೊಂಡರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಇದರಿಂದ ತಲೆಗೆ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.

ಮಾಯಿಶ್ಚರೈಸರ್: ಪ್ರತಿದಿನಸಾಯಾಂಕಾಲ ಮುಖ ತೊಳೆದ ಬಳಿಕ 2-3 ಹನಿ ಸಾಸಿವೆ ಎಣ್ಣೆಯನ್ನು ಕೈಗೆ ಹಾಕಿ ಮುಖಕ್ಕೆ ಮಾಯಿಶ್ಚರೈಸರ್ ಮಾಡಿ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ನಯವಾದ ತ್ವಚೆಯನ್ನು ಪಡೆಯಬಹುದು.

ಫೇಸ್ ಮಾಸ್ಕ್: ವಾರಕ್ಕೆ ಒಮ್ಮೆ ಫೇಸ್ ಮಾಸ್ಕ್ ಮಾಡುವುದು ಒಳ್ಳೆಯದು. ಈ ರೀತಿ ಫೇಸ್ ಮಾಸ್ಕ್ ಅನ್ನು ಸಾಸಿವೆ ಎಣ್ಣೆಯಿಂದ ಕೂಡ ಮಾಡಬಹುದು. ಇದರಿಂದ ಫೇಸ್ ಮಾಸ್ಕ್ ಮಾಡುವುದಾದರೆ 2 ಚಮಚ ಸಾಸಿವೆ ಎಣ್ಣೆ, ಸ್ವಲ್ಪ ಕಡಲೆ ಹಿಟ್ಟು, 2 ಚಮಚ ಮೊಸರು ಮತ್ತು 1 ಚಮಚ ನಿಂಬೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆದರೆ ಮುಖದಲ್ಲಿ ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ವರ್ತುಲ ಮುಂತಾದ ಸಮಸ್ಯೆಗಳು ಕಂಡು ಬರುವುದಿಲ್ಲ.

English summary

Benefit Of Massage From Mustard Oil | Tips For Beauty | ಸಾಸಿವೆ ಎಣ್ಣೆಯ ಸೌಂದರ್ಯವರ್ಧಕ ಗುಣಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Mustard oil is best to use for body massage. If you did massage fro this oil you feel relax and it's also helps for your skin and hair.
X
Desktop Bottom Promotion