ಉಗುರುಗಳ ಅಂದಕ್ಕೆ ನೀವೇ ಮಾಡಿ ಪೆಡಿಕ್ಯೂರ್

By:
Subscribe to Boldsky

How To Do Pedicure By Yourself
ಕೈ ಕಾಲುಗಳು ಸ್ವಚ್ಛವಾಗಿ ಆಕರ್ಷಕವಾಗಿದ್ದರೆ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಮೆರಗು ಸಿಗುವುದು. ಕೈ, ಕಾಲುಗಳನ್ನು ಪೆಡಿಕ್ಯೂರ್ ಮಾಡಲು ಬ್ಯೂಟಿಪಾರ್ಲರ್ ಗೆ ಹೋದರೆ ಒಂದಿಷ್ಟು ದುಡ್ಡು ಸುರಿಯಬೇಕು. ಅದರ ಬದಲು ರಜಾದಿನಗಳಲ್ಲಿ ಒಂದು ಗಂಟೆ ಪುರುಸೊತ್ತು ತೆಗೆದುಕೊಂಡು ನಿಮ್ಮ ಕಾಲು ಮತ್ತು ಕೈಗಳ ಅಂದವನ್ನು ಹೆಚ್ಚಿಸಬಹುದು. ಅದಕ್ಕಾಗಿ ನೀವು ಈ 5 ವಿಧಾನಗಳನ್ನು ಪಾಲಿಸಿದರೆ ಸಾಕು.

1. ಮೊದಲು ಕಾಲು ಮತ್ತು ಕೈ ಬೆರಳಿನಲ್ಲಿರುವ ಉಗುರನ್ನು ಕತ್ತರಿಸಬೇಕು. ನಂತರ ಶೇಪರ್ ಬಳಸಿ ಶೇಪ್ ಕೊಡಿ. ನಂತರ ಉಗುರುಗಳಲ್ಲಿ ನೇಲ್  ಪಾಲೀಷ್ ಇದ್ದರೆ ಅವುಗಳನ್ನು ರಿಮೋವರ್ ಬಳಸಿ ತೆಗೆಯಬೇಕು. ನಂತರ ಕಾಲುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಸಬೇಕು.

2. ನಂತರ ನೀರನ್ನು ಬೇಸನ್ ಅಥವಾ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಹಾಕಿ, ಅದಕ್ಕೆ 10 ನಿಮಿಷ ನೆನೆಸಬೇಕು. ನಂತರ ಟವಲ್ ನಿಂದ ಕಾಲುಗಳನ್ನು ಒರೆಸಿ ಒಣಗಿಸಿ.

3. ನಂತರ ಯಾವುದಾದರೂ ಕ್ಯೂಟಿಕಲ್ ಕ್ರೀಮ್ ಅನ್ನು ಉಗುರುಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ನಂತರ ಕಾಲುಗಳನ್ನು ಪುನಃ ಪಾತ್ರೆಯ ನೀರಿನಲ್ಲಿ ಇಟ್ಟು ನಂತರ ಪ್ಯೂಮಿಕ್ ಸ್ಟೋನ್ ನಿಂದ ಉಜ್ಜಬೇಕು.  ಈಗ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಕಾಲುಗಳನ್ನು ಮೃದುವಾಗಿ ಉಜ್ಜಬೇಕು. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಮೃದುವಾಗಿ ಒರೆಸಿಕೊಳ್ಳಬೇಕು.

4. ನಂತರ ಆಲೀವ್ ಅಥವಾ ಬಾದಾಮಿ ಎಣ್ಣೆಯಿಂದ ಕಾಲುಗಳಿಗೆ ಮಸಾಜ್ ಮಾಡಬೇಕು. ಈ ರೀತಿ ಮಾಡಿದರೆ ಕಾಲು ಒಡೆಯುವ ಸಮಸ್ಯೆ ಉಂಟಾಗುವುದಿಲ್ಲ. ಕಾಲುಗಳಲ್ಲಿ ರಕ್ತ ಸಂಚಲನಕ್ಕೆ ಸಹಕಾರಿಯಾಗುವುದು.

5. ನಂತರ ಉಗುರುಗಳಿಗೆ ಬಣ್ಣ ಹಚ್ಚುವುದಾದರೆ ಬಣ್ಣ ಹಚ್ಚಿ. ಕಾಲುಗಳಿಗೆ ರಾತ್ರಿ ಮಲುಗುವ ಮುನ್ನ ಎಣ್ಣೆ ಮಸಾಜ್ ಮಾಡಬೇಕು. ಈ ರೀತಿ ಮಾಡಿದರೆ ಕೈ ಮತ್ತು ಕಾಲುಗಳು ನೋಡಲು ತುಂಬಾ ಸುಂದರವಾಗಿರುತ್ತದೆ.

Story first published: Saturday, July 14, 2012, 15:57 [IST]
English summary

How To Do Pedicure By Yourself | Tips For Beauty | ಉಗುರುಗಳ ಅಂದಕ್ಕೆ ಪೆಡಿಕ್ಯೂರ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

If you want to look your leg and hand beautiful, you have to do pedicure. For hat you need not go to beauty parlor, you can do pedicure your self at home itself.
Please Wait while comments are loading...
Subscribe Newsletter