For Quick Alerts
ALLOW NOTIFICATIONS  
For Daily Alerts

ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು

|
Beauty Product
ಬಾದಾಮಿ ಎಣ್ಣೆಯ ಸುವಾಸನೆ ಕೇಳಿದರೆ ಮನಸ್ಸಿಗೆ ಹಿತ ಅನಿಸುವುದು. ತ್ವಚೆ ಸೌಂದರ್ಯಕ್ಕೂ ಮತ್ತು ಎಣ್ಣೆಗೂ ನಿಕಟ ಸಂಬಂಧವಿದೆ ಎಂಬುದು ತಿಳಿದಿರುವ ವಿಷಯ. ನಿಮ್ಮ ಸೌಂದರ್ಯ ವೃದ್ಧಿಸುವ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ನಮ್ಮಲ್ಲಿ ತ್ವಚೆ ಸಮಸ್ಯೆ ಇದ್ದರೆ ಬಾದಾಮಿ ಎಣ್ಣೆ ಬಳಸಿ ಹೇಗೆ ಹೋಗಲಾಡಿಸಬಹುದು ಎಂದು ತಿಳಿಯೋಣ ಬನ್ನಿ.

1. ಒಡೆದ ತುಟಿ: ಕೆಲವರಿಗೆ ತುಟಿ ತುಂಬಾ ಒಡೆಯುತ್ತದೆ, ತುಂಬಾ ಡ್ರೈ ಆಗಿರುತ್ತದೆ. ಎ.ಸಿ ರೂಮಿನಲ್ಲಿ ಕೆಲಸ ಮಾಡುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಂತಹವರು ಬಾದಾಮಿ ಎಣ್ಣೆ ಉಪಯೋಗಿಸಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು. ಬಾದಾಮಿ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಮೃದುವಾದ ತುಟಿ ನಿಮ್ಮದಾಗುವುದು.

2. ನೆರಿಗೆ: ಆದಷ್ಟು ವಿಟಮಿನ್ ಎ ಮತ್ತು ಬಿ ಇರುವ ಆಹಾರಗಳು ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ಈ ಎರಡು ಅಂಶಗಳು ಇರುವುದರಿಂದ ಇದನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.

3. ಕಣ್ಣಿನ ಸುತ್ತ ಕಪ್ಪು ಕಲೆ: ಇದು ಹೆಚ್ಚಿನವರಿಗೆ ಕಂಡುಬರುವ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಮಲಗಿ. ಈ ರೀತಿ ಮಾಡುತ್ತಾ ಬಂದರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗುವುದು.

4. ಸ್ಕ್ರಬ್: ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಇದರಿಂದ ಕೂಡ ಸ್ಕ್ರಬ್ ಮಾಬಹುದು. ಒಂದು ಚಮಚ ಬಾದಾಮಿ ಎಣ್ಣೆಗೆ ಒಂದು ಚಮಚ ಸಕ್ಕರೆ ಹಾಕಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಕಾಂತಿ ಹೆಚ್ಚುವುದು.

5. ಮಾಯಿಶ್ಚರೈಸರ್: ದೇಹಕ್ಕೆ ಮಾಯಿಶ್ಚರೈಸ್ ಮಾಡುತ್ತಿದ್ದರೆ ಮಾತ್ರ ತ್ವಚೆ ಆಕರ್ಷಕವಾಗಿ ಕಾಣಲು ಸಾಧ್ಯ. ಈ ರೀತಿ ಮಾಯಿಶ್ಚರೈಸರ್ ಮಾಡಲು ಬಾದಾಮಿ ಎಣ್ಣೆಯನ್ನು ಬಳಸಬಹುದು.

6. ಕೂದಲು: ಕೂದಲಿನ ಆರೈಕೆಗೆ ಕೂಡ ಬಾದಾಮಿ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ಇದರಿಂದ ಕೂದಲಿಗೆ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯ ಹೆಚ್ಚುವುದು.

English summary

Almond Oil As A Beauty Product | Tips For Body Care | ಸೌಂದರ್ಯವರ್ಧಕವಾಗಿ ಬಾದಾಮಿ ಎಣ್ಣೆ | ಸೌಂದರ್ಯ ಹೆಚ್ಚಿಸಲು ಕೆಲ ಸಲಹೆಗಳು

Almond oil is produced from the sweet kernels of almond. Apart from being healthy, almond oil has many beauty benefits. Almond oil is excellent for skin care.
X
Desktop Bottom Promotion