For Quick Alerts
ALLOW NOTIFICATIONS  
For Daily Alerts

ಕಣ್ಣಿನ ಸುತ್ತ ಕಪ್ಪು ಕಲೆ ನಿವಾರಣೆಗೆ 6 ಮನೆಮದ್ದು

|

ಕಣ್ಣಿನ ಸುತ್ತ ಕಪ್ಪು ಕಲೆಗಳು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕಣ್ಣಿಸುತ್ತ ಕಪ್ಪು ಕಲೆ ಮೂಡಿದರೆ ಮುಖದ ಅಂದ ಕಳೆಗುಂದುವುದು. ಮಾನಸಿಕ ಒತ್ತಡ, ಸರಿಯಾಗಿ ನಿದ್ದೆ ಮಾಡದಿರುವುದು, ಚಿಂತೆ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ಮೇಕಪ್, ಇವೆಲ್ಲಾ ಕಾರಣಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ.

ಹಾಗಂತ ಇದನ್ನು ಮರೆಮಾಚಲು ಮೇಕಪ್ ಮಾಡಿದರೆ ಕೆಮಿಕಲ್ ಇರುವ ಕ್ರೀಮ್ ಗಳನ್ನು ಬಳಸಿದರೆ ಅದು ಮತ್ತಷ್ಟು ತ್ವಚೆಯನ್ನು ಹಾಳು ಮಾಡುತ್ತದೆ. ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನವನ್ನು ಬಳಸಿ ಹೋಗಲಾಡಿಸಿದರೆ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಅಲ್ಲದೆ ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ. ಈ ಕೆಳಗಿನ ನೈಸರ್ಗಿಕವಾದ ವಿಧಾನಗಳಿಂದ ಆ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

1. ನೀರು:

1. ನೀರು:

ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗಿದ್ದರೆ ದಿನಕ್ಕೆ 10 ಲೋಟ ನೀರು ಕುಡಿಯಬೇಕು. ಹಣ್ಣುಗಳ ಜ್ಯೂಸ್ ಕುಡಿಯಿರಿ. ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು.

2. ವಿಟಮಿನ್ ಕೆ ಇರುವ ಕ್ರೀಮ್ :

2. ವಿಟಮಿನ್ ಕೆ ಇರುವ ಕ್ರೀಮ್ :

ಕೆಲವರಿಗೆ ವಂಶಪಾರಂಪರ್ಯವಾಗಿ ಈ ರೀತಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡು ಬರುತ್ತದೆ. ವಯಸ್ಸಾಗುತ್ತಿದ್ದಂತೆ ಈ ರೀತಿಯ ಸಮಸ್ಯೆ ಕಂಡು ಬರುವುದು. ಅಂತವರು ಕ್ರೀಮ್ ಗಳನ್ನು ಹಚ್ಚುವಾಗ ವಿಟಮಿನ್ ಕೆ ಇರುವ ಕ್ರೀಮ್ ಬಳಸುವುದು ಒಳ್ಳೆಯದು.

3. ಸೌತೆಕಾಯಿಂದ ಆರೈಕೆ:

3. ಸೌತೆಕಾಯಿಂದ ಆರೈಕೆ:

ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗೆಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಸೌತೆಕಾಯಿ ಪೀಸ್ ಇಡುವ ಬದಲು ಅದರ ರಸವನ್ನು ಕಣ್ಣಿನ ಸುತ್ತ ಹಚ್ಚಿದರೂ ಸಾಕು ಕಪ್ಪು ಕಲೆ ಕಡಿಮೆಯಾಗುವುದು.

4. ಬಾದಾಮಿ:

4. ಬಾದಾಮಿ:

ಬಾದಾಮಿ ಎಣ್ಣೆಯನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚುತ್ತಾ ಬಂದರೂ ಕಪ್ಪು ಕಲೆಯ ಸಮಸ್ಯೆ ಕಂಡು ಬರುವದಿಲ್ಲ. ಬಾದಾಮಿಯ ಸಿಪ್ಪೆ ಸುಲಿದು ಅರೆದು ಅದನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ ಕಪ್ಪು ಕಲೆ ಕಡಿಮೆಯಾಗುವುದು.

5. ಅರಿಶಿಣ ಪುಡಿ ಮತ್ತು ಪೈನಾಪಲ್ ರಸ:

5. ಅರಿಶಿಣ ಪುಡಿ ಮತ್ತು ಪೈನಾಪಲ್ ರಸ:

ಅರಿಶಿಣ ಪುಡಿಯನ್ನು ಪೈನಾಪಲ್ ಜ್ಯೂಸ್ ಜೊತೆ ಮಿಶ್ರಣ ಮಾಡಿ ಕಣ್ಣಿನ ಸುತ್ತಾ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಕಣ್ಣಿನ ಸುತ್ತ ಉಂಟಾಗಿರುವಾಗ ಕಪ್ಪು ಕಲೆ ಸಂಪೂರ್ಣವಾಗಿ ಕಡಿಮೆಯಾಗುವುದು.

6.ಪುದೀನಾ ರಸ:

6.ಪುದೀನಾ ರಸ:

ಪುದೀನಾ ಎಲೆಯ ರಸವನ್ನು ಹಿಂಡಿ ಅದನ್ನು ಕಣ್ಣಿನ ಸುತ್ತ ಹಚ್ಚಿದರೂ ಕಪ್ಪು ಕಲೆಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.

English summary

6 Effective Home Remedies For Dark Circle | Tips For Beauty | ಕಣ್ಣಿನ ಸುತ್ತ ಕಪ್ಪು ಕಲೆ ಹೋಗಲಾಡಿಸಲು 6 ಮನೆಮದ್ದು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

After middle age most of the people will have have dark circles under the eyes. Stress, diseases, less sleep these are the main reason for dark circle under eyes. Here are few home remedies to get rid from dark circle problem.
X
Desktop Bottom Promotion