For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೆ ತಯಾರಿಸಬಹುದು ರೋಸ್ ವಾಟರ್

|
How To Prepare Rose Water

ಗುಲಾಬಿ ಹೂವು ಗಿಡದಲ್ಲಿ ಇದ್ದರೂ ಚೆಂದ, ಹೆಣ್ಣಿನ ಮುಡಿಯಲ್ಲಿ ಇದ್ದರೂ ಅಂದ. ಅದೇ ಗುಲಾಬಿ ಹೂಗಳನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಮುಖವನ್ನು ಕ್ಲೆನ್ಸ್ ಮಾಡಲು ರೋಸ್ ವಾಟರ್ ಬಳಸುತ್ತೇವೆ. ಇವತ್ತು ನಾವು ರೋಸ್ ವಾಟರ್ ಮನೆಯಲ್ಲಿಯೆ ತಯಾರಿಸುವ ವಿಧಾನ ಮತ್ತು ಅದನ್ನು ಮುಖ ಮತ್ತು ಕೂದಲಿನ ಆರೈಕೆಯಲ್ಲಿ ಬಳಸುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇವೆ.

ಮೊದಲಿಗೆ ರೋಸ್ ವಾಟರ್ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ

1. ನೀರನ್ನು ಪಾತ್ರೆಯಲ್ಲಿ ಬಿಸಿ ಮಾಡಿ ಅದಕ್ಕೆ ತಾಜಾ ರೋಸ್ ದಳ ಹಾಕಬೇಕು. (ಮುಚ್ಚಳವಿರುವ ಪಾತ್ರೆ ಆಗಿರಬೇಕು)

2. ಪಾತ್ರೆಯನ್ನು ಮುಚ್ಚಳದಿಂದ ಗಟ್ಟಿಯಾಗಿ ಮುಚ್ಚಿ ತಣ್ಣಗಾಗಲು ಇಡಬೇಕು.

3. ತಣ್ಣಗಾದ ಮೇಲೆ ಈ ಗುಲಾಬಿ ದಳ ಹಾಕಿರುವ ನೀರನ್ನು ಫ್ರಿಜ್‌ನಲ್ಲಿ ಒಂದು ದಿನ ಇಡಬೇಕು.

4. ನಂತರ ನೀರನ್ನು ಸೋಸಬೇಕು. ನಂತರ ಆ ನೀರನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಬೇಕು. ನಂತರ ಈ ನೀರನ್ನು ಸೌಂದರ್ಯವರ್ಧಕವಾಗಿ ಈ ಕೆಳಗಿನಂತೆ ಬಳಸಿ.

ಕೂದಲಿನ ಆರೈಕೆಗೆ ರೋಸ್ ವಾಟರ್

1. ರೋಸ್ ವಾಟರ್ ಕೂದಲಿಗೆ ಉತ್ತಮವಾದ ಹೇರ್ ಮಾಯಿಶ್ಚರೈಸರ್. ಇದನ್ನು ಹಚ್ಚುವುದರಿಂದ ಕೂದಲು ಮೃದುವಾಗುವುದು.

2. ಅರ್ಧ ಬಕೆಟ್ ನೀರಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ತಲೆ ಸ್ನಾನದ ಬಳಿಕ ಅದರಲ್ಲಿ ತಲೆ ತೊಳೆದರೆ ಕೂದಲು ಹೊಳಪನ್ನು ಪಡೆಯುತ್ತದೆ.

3. ಕೂದಲು ಚೆನ್ನಾಗಿ ಬೆಳೆಯಲು ಬೆಣ್ಣೆ ಹಣ್ಣು ಅಥವಾ ಆಲೀವ್ ಎಣ್ಣೆಯನ್ನು ರೋಸ್ ವಾಟರ್ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ 2 ಗಂಟೆ ಬಳಿಕ ತಲೆಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

English summary

How To Prepare Rose Water at home

We commonly use rose water to protect and increase glowing of skin. Instead of buying rosewater from the market, prepare your natural skin care solution at home.
X
Desktop Bottom Promotion