For Quick Alerts
ALLOW NOTIFICATIONS  
For Daily Alerts

ಆಕರ್ಷಕ ಸ್ತನಕ್ಕೆ ಈ 5 ಅಂಶಗಳು ಅವಶ್ಯಕ

|
Tips To Get An Attractive Breast
ಸರಿಯಾದ ಸ್ತನ ಗಾತ್ರ ಹೆಣ್ಣುಮಕ್ಕಳ ಸೌಂದರ್ಯ ಹೆಚ್ಚುವುದಷ್ಟೆ ಅಲ್ಲ ದೇಹದ ಆರೋಗ್ಯ ಕೂಡ ಹೆಚ್ಚುವುದು. ಆಕರ್ಷಕವಾದ ಸ್ತನದ ಆಕಾರ ಬೇಕೆಂದರೆ ಈ ಕೆಳಗಿನ 5 ಅಂಶಗಳು ಅವಶ್ಯಕ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

1.ಈಸ್ಟೋಜನ್ ಕಡಿಮೆಮಾಡುವ ಆಹಾರದಿಂದ ದೂರವಿರಿ:

ಮದ್ಯ ಕುಡಿದರೆ ದೇಹದಲ್ಲಿ ಈಸ್ಟೋಜನ್ ಪ್ರಮಾಣ ಕಡಿಮೆಯಾಗುವುದು. ಇದರಿಂದ ಸ್ತನದ ಆಕಾರದಲ್ಲಿ ವ್ಯತ್ಯಾಸ ಉಂಟಾಗುವುದು. ಅಧಿಕ ನಾರಿನಂಶ ಇರುವ ಆಹಾರಗಳನ್ನು ತಿನ್ನಬೇಕು. ಆಹಾರದಲ್ಲಿರುವ ಪ್ರೊಟೀನ್ ಸ್ತನದ ಗಾತ್ರವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಮೀನು, ಆಲೀವ್ ಎಣ್ಣೆ, ತರಕಾರಿ ಮತ್ತು ಹಣ್ಣುಗಳನ್ನು ಪ್ರತಿನಿತ್ಯ ಸೇವಿಸಬೇಕು.

2. ಬ್ರಾ ಸೈಜ್ ಸರಿಯಾಗಿರಬೇಕು:

ತುಂಬಾ ಬಿಗಿ ಅಥವಾ ಸಡಿಲವಾಗಿರುವ ಬ್ರಾಗಳನ್ನು ಧರಿಸಬಾರದು. ಆಟಗಾರರು, ಎದೆ ಹಾಲುಣಿಸುವವರು ಮತ್ತು ಮಧ್ಯ ವಯಸ್ಸು ದಾಟಿದವರು ಸ್ತನ ಬಿಗಿಯಾಗಿ ನಿಲ್ಲುವಂತಹ ಬ್ರಾ ಧರಿಸಬೇಕು. ಎದೆಯಲ್ಲಿ ತುಂಬಾ ಕೊಬ್ಬಿನಂಶ ಶೇಖರವಾದರೆ ಗಾತ್ರ ಮಿತಿ ಮೀರಿ ಹೆಚ್ಚಾಗಿ ಕಾಣುವುದು. ಅದು ಕೂಡ ದೇಹದ ಅಂದವನ್ನು ಹಾಳು ಮಾಡುತ್ತದೆ.

3. ದೇಹದ ತೂಕದಲ್ಲಿ ಸಮತೋಲನ:

ಯೋಗ, ವ್ಯಾಯಾಮ, ಆಹಾರಕ್ರಮ ಇವುಗಳಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡುವಂತೆ ಮಾಡುತ್ತದೆ. ಇದರಿಂದ ಆಕರ್ಷಕ ಸ್ತನ ಗಾತ್ರ ದೊರೆಯುವುದು.

4. ವ್ಯಾಯಾಮ
:

ಪುಶ್ ಅಪ್ ಅಥವಾ ಪುಲ್ ಅಪ್ ವ್ಯಾಯಾಮಗಳು ಸ್ತನವನ್ನು ಬಿಗಿಯಾಗಿರುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

5. ಮಸಾಜ್:

ರಾತ್ರಿ ಮಲಗುವಾಗ ಸ್ತನಕ್ಕೆ ಮಾಯಿಶ್ಚರೈಸರ್ ನಿಂದ ಮಸಾಜ್ ಮಾಡುವುದರಿಂದ ವಯಸ್ಸಾದರೂ ಸ್ತನ ಆಕರ್ಷಕವಾಗಿ ಕಾಣುವುದು. ಅಲ್ಲದೆ ತ್ವಚೆ ಒಣಗುವುದನ್ನು ತಡೆಗಟ್ಟಬಹುದು.

English summary

Tips To Get An Attractive Breast | Tips For Body Care | ಆಕರ್ಷಕ ಸ್ತನಕ್ಕಾಗಿ ಕೆಲ ಸಲಹೆಗಳು | ದೇಹದ ಆರೈಕೆಗೆ ಕೆಲ ಸಲಹೆಗಳು

Breasts are the result of not only good care, but good health as well. Science has shown that the following five tips can actually make a difference in the ability of the breasts to keep their tone and shape despite the effects of aging and gravity.
Story first published: Friday, March 2, 2012, 12:16 [IST]
X
Desktop Bottom Promotion