For Quick Alerts
ALLOW NOTIFICATIONS  
For Daily Alerts

ಇದು ಕೊಬ್ಬರಿ ಎಣ್ಣೆಯಿಂದ ತಯಾರಿಸಿದ 'ಹಲ್ಲುಜ್ಜುವ ಪೇಸ್ಟ್'!

ಮಾರುಕಟ್ಟೆಯಲ್ಲಿ ಇಂದು ಬಗೆಬಗೆಯ ಟೂತ್ ಪೇಸ್ಟ್‌ಗಳು ಲಭ್ಯವಿದೆ, ಆದರೆ ಇವೆಲ್ಲಕ್ಕಿಂತೂ ಮನೆಯಲ್ಲಿಯೇ ತಯಾರಿಸಬಹುದಾದಂತಹ ನೈಸರ್ಗಿಕ ಟೂತ್ ಪೇಸ್ಟ್ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

By Arshad
|

ನಮ್ಮ ಶರೀರದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಹಲ್ಲುಗಳ ಸ್ವಚ್ಛತೆಗೆ ಪ್ರಮುಖ ಸ್ಥಾನವಿದೆ. ಏಕೆಂದರೆ ಬ್ಯಾಕ್ಟೀರಿಯಾಗಳು ಮೊದಲಾಗಿ ತೇವವಿರುವ ಸ್ಥಳಗಳನ್ನೇ ಮೊದಲಾಗಿ ಆರಿಸಿಕೊಳ್ಳುತ್ತವೆ. ಅಂತೆಯೇ ಬಾಯಿ, ಮೂಗು, ಗಂಟಲುಗಳ ಒಳಭಾಗದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಉಂಟಾಗುವುದು ಬೇಗ. ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ-ಹಲ್ಲುಜ್ಜುವ ಪೇಸ್ಟ್!

ಅದರಲ್ಲಿಯೂ ಬಾಯಿಯ ವಿಸ್ತಾರ ಹೆಚ್ಚಾಗಿದ್ದು ಹಲ್ಲುಗಳ ಸಂದುಗಳಲ್ಲಿ ಹುದುಗಿರುವ ಆಹಾರದ ಕಣಗಳಲ್ಲಿ ಬ್ಯಾಕ್ಟೀರಿಯಾಗಳು ಅಡಗಿ ಕುಳಿತುಕೊಳ್ಳುತ್ತದೆ ಹಾಗೂ ಆಹಾರವನ್ನು ಕೊಳೆಸಿ ಸೋಂಕು ಹರಡುತ್ತದೆ. ಆದ್ದರಿಂದ ಪ್ರತಿ ಬಾರಿ ಆಹಾರ ಸೇವಿಸಿದ ಬಳಿಕ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ಹಲ್ಲುಜ್ಜುವಾಗ ನೀವು ಏನೆಲ್ಲಾ ತಪ್ಪು ಮಾಡ್ತೀರ ಗೊತ್ತಾ?

ಇಲ್ಲದಿದ್ದರೆ ಕೊಳೆತ ಆಹಾರ ಒಸಡುಗಳನ್ನೂ ಹಲ್ಲುಗಳನ್ನು ಸವೆಸಿ ಹುಳುಕಾಗಿಸುತ್ತದೆ. ಇದನ್ನು ತಡೆಯಲು ಉತ್ತಮ ಗುಣಮಟ್ಟದ ಟೂತ್ ಪೇಸ್ಟ್ (ಟೂಥ್ ಪೇಸ್ಟ್) ಬಳಸಿ ಹಲ್ಲುಜ್ಜಿಕೊಳ್ಳುವುದು ಅಗತ್ಯವಾಗಿದೆ. ಹಲ್ಲುಗಳು ಹಳದಿಯಾಗಿದೆಯೇ? ಈ ಮನೆ ಔಷಧ ಪ್ರಯತ್ನಿಸಿ ನೋಡಿ...

ಆದರೆ ಇಂದು ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಟೂತ್ ಪೇಸ್ಟ್‌ಗಳು (ಹಲ್ಲುಜ್ಜುವ ಪೇಸ್ಟ್) ರಾಸಾಯನಿಕ ಆಧಾರಿತವಾಗಿದ್ದು ಸ್ವಚ್ಛಗೊಳಿಸುವ ಜೊತೆಗೇ ಕೊಂಚ ಹಲ್ಲನ್ನು ಕರಗಿಸುತ್ತದೆ ಕೂಡಾ. ಬನ್ನಿ, ಇದನ್ನು ತಡೆಯಲು ನಿಸರ್ಗ ನೀಡಿರುವ ಕೊಬ್ಬರಿ ಎಣ್ಣೆಯನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

ಕೊಬ್ಬರಿ ಎಣ್ಣೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕೊಬ್ಬರಿ ಎಣ್ಣೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕೊಬ್ಬರಿ ಎಣ್ಣೆಯ ಬಳಕೆಯ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಆರೋಗ್ಯದ ವಿಷಯ ಬಂದಾಗ ತಲೆಗೂದಲು, ಚರ್ಮ, ನೋವು, ಬಾವು, ಚಿಕ್ಕಪುಟ್ಟ ಗಾಯಗಳು, ಊತ ಮೊದಲಾದವುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚುವ ಮೂಲಕ ಶೀಘ್ರ ಉಪಶಮನ ಪಡೆಯಬಹುದು. ಹಲ್ಲುಗಳ ಸ್ವಚ್ಛತೆಯಲ್ಲಿಯೂ ಕೊಬ್ಬರಿ ಎಣ್ಣೆಯನ್ನು ಬಳಸಬಹುದು.

ಕೊಬ್ಬರಿ ಎಣ್ಣೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕೊಬ್ಬರಿ ಎಣ್ಣೆ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕೊಬ್ಬರಿ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವುದು ಮಾತ್ರವಲ್ಲ, ಬ್ಯಾಕ್ಟೀರಿಯಾಗಳ ಸೋಂಕಿನಿಂದ ಉಂಟಾಗುವ ಆಮ್ಲೀಯತೆಯನ್ನು ನಿಷ್ಫಲಗೊಳಿಸಿ ಹಲ್ಲುಗಳ ಸವೆತವನ್ನು ತಡೆಯುತ್ತದೆ. ಈ ಎಣ್ಣೆಯಲ್ಲಿ ಯಾವುದೇ

ರಾಸಾಯನಿಕವಿಲ್ಲದೇ ಇರುವ ಕಾರಣ ಇದು ಹಲ್ಲುಗಳಿಗೆ ಮತ್ತು ಒಸಡುಗಳಿಗೆ ಸುರಕ್ಷಿತವಾಗಿದೆ.

ಕೊಬ್ಬರಿ ಎಣ್ಣೆಯ ಟೂಥ್ ಪೇಸ್ಟ್ ಹೇಗೆ ತಯಾರಿಸುವುದು?

ಕೊಬ್ಬರಿ ಎಣ್ಣೆಯ ಟೂಥ್ ಪೇಸ್ಟ್ ಹೇಗೆ ತಯಾರಿಸುವುದು?

ಅಗತ್ಯವಿರುವ ಸಾಮಾಗ್ರಿಗಳು:

*2-3 ಚಿಕ್ಕ ಚಮಚ ಅಡುಗೆ ಸೋಡಾ

**½ ಕಪ್ ಕೊಬ್ಬರಿ ಎಣ್ಣೆ

*15-30 ಹನಿ ಲಿಂಬೆ ರಸ ಅಥವಾ ಪುದೀನಾ ಎಣ್ಣೆ

ಅಡುಗೆ ಸೋಡಾ ಏಕೆ?

ಅಡುಗೆ ಸೋಡಾ ಏಕೆ?

ಅಡುಗೆ ಸೋಡಾ ಒಂದು ನೈಸರ್ಗಿಕ ಉಜ್ಜುಕವಾಗಿದ್ದು ಹಲ್ಲುಗಳಿಗೆ ಹಾನಿ ಎಸಗದೇ ಹಲ್ಲುಗಳ ಮೇಲೆ ಕುಳಿತಿದ್ದ ಕಲೆಗಳನ್ನು ನಿವಾರಿಸಲು ಸಮರ್ಥವಾಗಿದೆ. ಇದರಿಂದ ಹಲ್ಲುಗಳ ಬಿಳುಪು ಹೆಚ್ಚುತ್ತದೆ.... ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಲಿಂಬೆ ರಸ

ಲಿಂಬೆ ರಸ

ಲಿಂಬೆರಸವೂ ಆಮ್ಲೀಯವಾಗಿದ್ದರೂ ಹಲ್ಲುಗಳನ್ನು ಕರಗಿಸುವಷ್ಟು ಪ್ರಬಲವಾಗಿಲ್ಲ. ಆದರೆ ಬ್ಯಾಕ್ಟೀರಿಯಾಗಳನ್ನು ಸಡಿಲಿಸಲು ಸಮರ್ಥವಾಗಿದೆ. ಆದರೆ ಇದರ ಪ್ರಮಾಣವನ್ನು ಮಾತ್ರ ಸರ್ವಥಾ ಹೆಚ್ಚಿಸಬಾರದು, ಏಕೆಂದರೆ ಒಸಡುಗಳಿಗೆ ಆಮ್ಲೀಯತೆ ಹಾನಿ ಎಸಗಬಹುದು.

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಕೆಲವು ಬ್ಯಾಕ್ಟೀರಿಯಾಗಳು ಆಮ್ಲಜನಕವಿಲ್ಲದ ವಾತಾವರಣದಲ್ಲಿಯೂ ಬೆಳೆಯುತ್ತವೆ. ಬಾಯಿ ಮುಚ್ಚಿಕೊಂಡಿದ್ದಾಗ ಆಮ್ಲಜನಕ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಈ ಬ್ಯಾಕ್ಟೀರಿಯಾಗಳು ವೃದ್ಧಿಗೊಂಡು ಆಹಾರವನ್ನು ಕೊಳೆಸುತ್ತವೆ. ಪುದೀನಾ ಎಣ್ಣೆ ಈ ಬ್ಯಾಕ್ಟೀರಿಯಾಗಳನ್ನು ಕೊಂದು ಒಸಡುಗಳು ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ.

ವಿಧಾನ

ವಿಧಾನ

ಈ ಪರಿಕರಗಳಿಂದ ಟೂಥ್ ಪೇಸ್ಟ್ ತಯಾರಿಸುವುದು ಸುಲಭವಾಗಿದೆ. ಎಲ್ಲಾ ಪರಿಕರಗಳನ್ನು ಚೆನ್ನಾಗಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ನಿಮ್ಮ ನಿತ್ಯದ ಟೂಥ್ ಪೇಸ್ಟ್ ಬದಲಿಗೆ ಬಳಸಿ.

ಮುಕ್ಕಳಿಕೆಯಿಂದ ಹೆಚ್ಚಿನ ಸ್ವಚ್ಛತೆ

ಮುಕ್ಕಳಿಕೆಯಿಂದ ಹೆಚ್ಚಿನ ಸ್ವಚ್ಛತೆ

*ಇನ್ನೂ ಉತ್ತಮವಾದ ವಿಧಾನವೆಂದರೆ ಈ ಲೇಪನವನ್ನು ಕೊಂಚವೇ ಹಲ್ಲುಗಳಿಗೆ ಹಚ್ಚಿ ತಣ್ಣೀರಿನಿಂದ

*ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಡದೇ ಮುಕ್ಕಳಿಸಿ.

*ಬಳಿಕ ನಿತ್ಯದ ವಿಧಾನದಂತೆ ಟೂಥ್ ಬ್ರಶ್ ಬಳಸಿ ಹಲ್ಲುಜ್ಜಿಕೊಳ್ಳಿ.

English summary

Coconut oil is better than any toothpaste read to find out how...

Using coconut oil for dental care is the best solution that will put a full stop for all your oral-related health problems. So, continue reading this article to know how we can use coconut oil for dental care.
X
Desktop Bottom Promotion