For Quick Alerts
ALLOW NOTIFICATIONS  
For Daily Alerts

ಮಗುವಿನ ಹೆಬ್ಬೆರಳು ಚೀಪುವ ಅಭ್ಯಾಸ ಬಿಡಿಸುವುದು ಹೇಗೆ?

|

ಬೆರಳು ಚೀಪುವ ಅಭ್ಯಾಸ ಮಗುವಿಗೆ ಹಾಲು ಹಲ್ಲು ಮೂಡುವುದಕ್ಕಿಂತಲೂ ಮುನ್ನ ಆಗಿರುತ್ತದೆ. ಕಾಲಕ್ರಮೇಣ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಈ ಅಭ್ಯಾಸ ತನ್ನಿಂತಾನೇ ಬಿಟ್ಟು ಹೋಗುತ್ತದೆ. ಆದರೆ ಕೆಲವು ಮಕ್ಕಳು ಇದನ್ನು ಬಿಡದೇ ಹೆಚ್ಚು ಹೊತ್ತು ತಮ್ಮ ಹೆಬ್ಬೆರಳುಗಳನ್ನು ಬಾಯಲ್ಲಿ ಇಟ್ಟುಕೊಳ್ಳುತ್ತಾರೆ. ಈ ಅಭ್ಯಾಸವನ್ನು ಒಮ್ಮೆಲೇ ಬಿಡಿಸುವುದು ಅಸಾಧ್ಯ. ನಿಧಾನವಾಗಿ ಕಾಲಕ್ರಮೇಣ ಈ ಅಭ್ಯಾಸವನ್ನು ದೂರಮಾಡಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಮಗುವಿನ ಗಮನವನ್ನು ಬೇರೆಡೆ ಸೆಳೆಯಿರಿ
ಬೆರಳು ಹೊರತೆಗೆ ಎಂದು ಬಲವಂತ ಮಾಡಿದಷ್ಟೂ ಈ ಅಭ್ಯಾಸ ಹೆಚ್ಚುವುದು ಕಂಡುಬಂದಿದೆ. ಅದಕ್ಕಾಗಿ ಬಾಯಿಯಿಂದ ಬೆರಳು ಹೊರತೆಗೆಯುವ ಮಾತೇ ಆಡದೆ ನಿಧಾನವಾಗಿ ಮಗುವಿನ ಗಮನವನ್ನು ಸೆಳೆದು ಎರಡೂ ಕೈಗಳು ಉಪಯೋಗಿಸುವ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡುವುದು ಒಂದು ಪರಿಣಾಮಕಾರಿ ವಿಧಾನವಾಗಿದೆ. ಉದಾಹರಣೆಗೆ ಎರಡೂ ಕೈಗಳಲ್ಲಿ ಹಿಡಯುವಷ್ಟು ದೊಡ್ಡದಾದ ಅಂದರೆ ಸುಮಾರು ಫುಟ್ ಬಾಲ್ ಗಾತ್ರದ ಚೆಂಡನ್ನು ಉಪಯೋಗಿಸಿ ಆಟವಾಡಿ. ಮಗುವಿನ ಗಮನ ಚೆಂಡಿನತ್ತ ಹರಿದಾಕ್ಷಣ ತನ್ನಿಂತಾನೇ ಬಾಯಿಯಿಂದ ಬೆರಳು ಹೊರಬರುತ್ತದೆ. ಅಂತೆಯೇ ದೊಡ್ಡ ಗೊಂಬೆಯನ್ನು ಅಪ್ಪಿಕೊಳ್ಳುವುದು, ಎರಡೂ ಕೈಗಳಿಂದ ಹಿಡಿದು ಆಟವಾಡಬಹುದಾದ ವೀಡಿಯೋ ಗೇಮ್, ಸ್ಕಿಪ್ಪಿಂಗ್ ಮೊದಲಾದವು ಹೆಚ್ಚು ಪರಿಣಾಮಕಾರಿಯಾಗಿವೆ.

ಹೆಬ್ಬೆರಳನ್ನು ಯಾವುದಾದರೂ ವಸ್ತುವಿನಿಂದ ಸುತ್ತಿ
ಹೆಬ್ಬೆರಳನ್ನು ಯಾವುದಾದರೂ ಬ್ಯಾಂಡ್ ಏಯ್ಡ್ ನಂತಹ ಪಟ್ಟಿ ಅಥವಾ ಬಟ್ಟೆಯ ಪಟ್ಟೆಯನ್ನು ಸುತ್ತಿ. ಈ ಪಟ್ಟಿ ಅಷ್ಟು ಸುಲಭವಾಗಿ ಬಿಚ್ಚಿಕೊಳ್ಳುವಂತಿರಬಾರದು, ಹಾಗೂ ಹೆಬ್ಬೆರಳಿಗೆ ರಕ್ತಸಂಚಾರವನ್ನು ನಿಲ್ಲಿಸುವಷ್ಟು ಬಿಗಿಯೂ ಆಗಿರಬಾರದು. ಈಗ ಮಗುವಿಗೆ ಪಟ್ಟಿಯ ಕಹಿ ರುಚಿ ಹಿಡಿಸದೇ ನಿಧಾನವಾಗಿ ಅಭ್ಯಾಸ ಹತೋಟಿಗೆ ಬರುತ್ತದೆ. ಅಲ್ಲದೆ ಬೆರಳಿನ ಪಟ್ಟಿಗೆ ಸ್ವಲ್ಪ ಬೇವಿನ ಎಣ್ಣೆ ಸವರುವುದರಿಂದಲೂ ಉತ್ತಮ ಪರಿಣಾಮ ಕಂಡುಬಂದಿದೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಬೆರಳು ಚೀಪಲು ಒಂದು ಗಡುವು ನೀಡಿ
ಬೆರಳು ಚೀಪದೇ ಇರಲು ಬಲವಂತ ಮಾಡಿದರೆ ಅದು ಮಗುವಿನ ಮೇಲೆ ಬೇರೆ ದುಷ್ಪರಿಣಾಮಗಳನ್ನು ಮಾಡುವುದರಿಂದ ಬೆರಳು ಚೀಪಲು ಕೆಲವು ಸಮಯದ ನಿಬಂಧನೆಗಳನ್ನು ವಿಧಿಸಿ. ಅಂದರೆ ಕೇವಲ ರಾತ್ರಿ ಮಾತ್ರ ಚೀಪಬಹುದು, ಸಂಜೆ ಏಳರಿಂದ ಒಂಭತ್ತರವರೆಗೆ ಮೊದಲಾದವು. ಆಗ ಉಳಿದ ಸಮಯದಲ್ಲಿ ಮಗು ಬೆರಳು ಚೀಪದೇ ಇರಲು ತನ್ನ ಮನಸ್ಸನ್ನು ಗಟ್ಟಿಮಾಡಿಕೊಳ್ಳುತ್ತದೆ. ಕ್ರಮೇಣ ಈ ಅವಧಿಯನ್ನು ಮೊಟಕುಗೊಳಿಸುತ್ತಾ ಹೋಗಿ, ನಿಧಾನವಾಗಿ ಈ ಅಭ್ಯಾಸ ಇಲ್ಲವಾಗುತ್ತದೆ.

ಬೆರಳಿನ ಮೇಲೆ ಲಿಂಬೆರಸ ಹಚ್ಚಿ
ಸಾಧಾರಣವಾಗಿ ಮಕ್ಕಳು ಸಿಹಿಯನ್ನು ಇಷ್ಟಪಡುತ್ತಾರೆಯೇ ಹೊರತು ಹುಳಿ, ಕಹಿಯನ್ನಲ್ಲ. ಮಗುವಿನ ಬೆರಳಿನ ಮೇಲೆ ಕೆಲವು ಹನಿ ಲಿಂಬೆರಸವನ್ನು ಹಚ್ಚಿ ಒಣಗಲು ಬಿಡಿ. ಬೆರಳು ಚೀಪಿದಾಕ್ಷಣ ಹುಳಿಯನ್ನು ಅನುಭವಿಸಬೇಕಾಗಿ ಬರುವುದರಿಂದ ಕೂಡಲೇ ಮಗು ಬೆರಳನ್ನು ಹೊರತೆಗೆಯುತ್ತದೆ. ಒಂದು ವೇಳೆ ಮತ್ತೆ ಚೀಪಿ ನಿಧಾನಕ್ಕೆ ಅಭ್ಯಾಸವನ್ನು ಮುಂದುವರೆಸಿದರೆ ಲಿಂಬೆಯ ಬದಲಿಗೆ ಹುಳಿ, ಹಾಗಲಕಾಯಿ ಅಥವಾ ಬೇರೆಯ ರುಚಿಯನ್ನು ಪ್ರಯತ್ನಿಸಬಹುದು. ಬೇರೆ ರಾಸಾಯನಿಕಗಳಿಗಿಂತ ಇದು ಹೆಚ್ಚು ಸುರಕ್ಷಿತವಾಗಿದೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಪ್ಲಾಸ್ಟಿಕ್ ಕವಚವನ್ನು ತೊಡಿಸಿ
ಮೇಲಿನ ಯಾವುದೇ ಕ್ರಮಗಳಿಗೆ ಮಗು ಜಗ್ಗದೇ ಇದ್ದಾಗ ಮಾತ್ರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಹೆಬ್ಬೆರಳನ್ನು ಸಂಪೂರ್ಣವಾಗಿ ಮರೆಮಾಚುವ ಪ್ಲಾಸ್ಟಿಕ್ಕಿನ ಕವಚವೊಂದನ್ನು ಸುಲಭವಾಗಿ ಕಳಚಲಾಗದಂತೆ ತೊಡಿಸಿ. ಇದರಿಂದ ಮಗುವಿಗೆ ಬೆರಳು ಚೀಪುವ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತಾಗಿ ಪ್ರಾರಂಭದಲ್ಲಿ ಕೊಂಚ ಅತ್ತು ರಂಪ ಮಾಡಿದರೂ ಕ್ರಮೇಣವಾಗಿ ಪಾಲಕರು ತನ್ನ ಹಠಕ್ಕೆ ಬಗ್ಗುವುದಿಲ್ಲ ಎಂಬ ಸತ್ಯಕ್ಕೆ ಶರಣಾಗಿ ಬೆರಳನ್ನು ಚೀಪುವ ಅಭ್ಯಾಸದಿಂದ ಬಲವಂತವಾಗಿ ಹೊರಬರುತ್ತದೆ. ಆದರೆ ಈ ವಿಧಾನದಲ್ಲಿ ಮಗುವಿನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಅಗತ್ಯ. ಕೆಲವೊಮ್ಮೆ ಈ ಕವಚವನ್ನು ಮಗು ತನ್ನ ಸ್ವಾತಂತ್ರ್ಯದ ಬಂಧನ ಎಂದು ತಿಳಿದು ಭಾವುಕನಾಗಲೂಬಹುದು.

English summary

Remedies To Stop Thumb Sucking Habits In Children

For grown up kids and grown-ups, leaving thumb sucking instantly may not be possible. It is a habit developed over years. We cannot expect it to vanish in a while. But, here are some remedies that may be of help to you:
Story first published: Thursday, October 30, 2014, 18:22 [IST]
X
Desktop Bottom Promotion