For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ತಲೆಹೊಟ್ಟು ನಿವಾರಿಸಲು ಒಮ್ಮೆ ಲೋಳೆಸರ ಪ್ರಯತ್ನಿಸಿ!

By Super
|

ತಲೆಹೊಟ್ಟು ಬಹುತೇಕ ಜನರ ದಿನನಿತ್ಯದ ಸಮಸ್ಯೆಯಾಗಿದೆ. ಜನರೆದುರು ಗಾಳಿಯಲ್ಲಿಯೇ ಕೆಲವು ಪಕಳೆಗಳು ತೇಲಿದಾಗ ಭಾರೀ ಮುಜುಗರ ಉಂಟಾಗುತ್ತದೆ. ಸಿನೇಮಾಗೃಹ ಬಸ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ತಲೆ ತಾಕಿದ ಸ್ಥಳದಲ್ಲಿ ಉದುರಿದ ತಲೆಹೊಟ್ಟು ಬಳಿಕ ಬಂದವರಿಗೆ ವಾಕರಿಕೆ ತರಿಸುತ್ತದೆ. ಈ ತೊಂದರೆಯಿಂದ ಪಾರಾಗಲು ತಲೆಹೊಟ್ಟನ್ನು ಬುಡದಿಂದಲೇ ನಿವಾರಿಸುವುದು ಅನಿವಾರ್ಯವಾಗಿದೆ. ಆದರೆ ಇದರ ನಿವಾರಣೆ ಅಷ್ಟು ಸುಲಭವಲ್ಲ.

ಏಕೆಂದರೆ ಒಮ್ಮೆ ತಲೆಯನ್ನು ಒಂದೂ ಹೊಟ್ಟಿಲ್ಲದಂತೆ ತೊಳೆದು ಬಾಚಿ ಹೊರಟ ದಿನ ಮಧ್ಯಾಹ್ನವೇ ಮತ್ತೆ ಅಷ್ಟೇ ತಲೆಹೊಟ್ಟು ತಲೆಯ ಮೇಲೆ ರಾರಾಜಿಸುತ್ತಿರುತ್ತದೆ. ಇದಕ್ಕೆ ಕಾರಣ ನಮ್ಮ ನೆತ್ತಿಯ ಮೇಲಿನ ಚರ್ಮದ ಹೊರಪದರದ ಕೆಲವು ಜೀವಕೋಶಗಳು ಕೂದಲ ಬುಡವಿರುವರಲ್ಲಿ ಒಣಗಿ ಸೀಳಿ ತೆಳುವಾಕ ಪಕಳೆಯ ರೂಪ ಪಡೆದು ವಿಸರ್ಜಿಸಲ್ಪಡುವುದು. ಇದಕ್ಕೆ ಕೆಲವಾರು ಬ್ಯಾಕ್ಟೀರಿಯಾ ಮತ್ತು ಬೂಸು (fungus) ಗಳು ಕಾರಣ. ತಲೆಯಲ್ಲಿ ಆಶ್ರಯ ಪಡೆದಿರುವ ಹೇನು ಮೊದಲಾದ ಪರಾವಲಂಬಿ ಕೀಟಗಳಿಂದಲೂ ಹೊಟ್ಟು ಹೆಚ್ಚಾಗುತ್ತದೆ. ತಲೆಹೊಟ್ಟಿಗೆ ಗುಡ್ ಬೈ ಹೇಳುವ ಎಣ್ಣೆಗಳು

ಇದಕ್ಕೆ ಹಲವಾರು ಮದ್ದುಗಳಿವೆಯಾದರೂ ಲೋಳೆಸರ (aloe vera)ದಷ್ಟು ಸಮರ್ಪಕವಾದ ಮೂಲಿಕೆ ಇನ್ನೊಂದಿಲ್ಲ. ಏಕೆಂದರೆ ಇದರಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ಜೀವಕೋಶಗಳ ಬೆಳವಣಿಗೆಯನ್ನು ಪ್ರಚೋದಿಸಿ ಬೇಗನೇ ಹೊಸ ಮತ್ತು ಆರೋಗ್ಯವಂತ ಜೀವಕೋಶಗಳ ಹುಟ್ಟಿಗೆ ಕಾರಣವಾಗುತ್ತದೆ.

ಅಲ್ಲದೇ ಲೋಳೆಸರದಲ್ಲಿರುವ ಹಲವು ಪೋಷಕಾಂಶಗಳು ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯಕ್ಕೆ ಪೂರಕವಾಗಿವೆ. ಚರ್ಮದ ರಂಧ್ರಗಳಲ್ಲಿ ಕುಳಿತಿರುವ ಸಿಬಮ್ (sebam) ಎಂಬ ಕೊಳೆಯನ್ನು ತೆಗೆಯಲು, ಇನ್ನೂ ಚರ್ಮಕ್ಕೆ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು ಈ ಪೋಷಕಾಂಶಗಳು ನೆರವಾಗುವುದರಿಂದ ಕೆಲವು ಬಾರಿಯ ಪ್ರಯೋಗಗಳಲ್ಲಿಯೇ ತಲೆಹೊಟ್ಟು ಬಹುತೇಕ ನಿವಾರಣೆಯಾಗುತ್ತವೆ. ತಲೆಹೊಟ್ಟು ನಿವಾರಣೆಗೆ 6 ನೈಸರ್ಗಿಕ ವಿಧಾನ

ಲೋಳೆಸರವನ್ನು ಉಪಯೋಗಿಸಲು ವಿವಿಧ ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದುದನ್ನು ಮುಂದೆ ವಿವರಿಸಲಾಗಿದೆ. ಇದಕ್ಕೂ ಮೊದಲು ಮೃದುವಾದ ಶಾಂಪೂ ಉಪಯೋಗಿಸಿ ತಲೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಶಾಂಪೂಗಳಲ್ಲಿ ಹಾನಿಕರವಾದ ಸಲ್ಫೇಟುಗಳು (sodium lauryl sulphate) ಇಲ್ಲವೆಂಬುದನ್ನು ಲೇಬಲ್ ಮೇಲೆ ಬರೆದಿರುವ ವಿವರಗಳನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಿ. ಏಕೆಂದರೆ ಈ ಸಲ್ಫೇಟುಗಳು ತಲೆಹೊಟ್ಟನ್ನು ನಿವಾರಿಸುವ ಬದಲು ಇನ್ನಷ್ಟು ಹೆಚ್ಚಿಸುತ್ತವೆ.

ಕೇವಲ ಲೋಳೆಸರ

ಕೇವಲ ಲೋಳೆಸರ

ಲೋಳೆಸರದ ಕೆಲವು ಕೋಡುಗಳನ್ನು ಮುರಿದು ಚೆನ್ನಾಗಿ ಹಿಂಡಿ ರಸವನ್ನು ಸಂಗ್ರಹಿಸಿ. ಬೆರಳತುದಿಗಳನ್ನುಈ ರಸದಲ್ಲಿ ಅದ್ದಿ ಕೂದಲ ಬುಡಗಳಿಗೆ ತಾಕುವಂತೆ ನಯವಾಗಿ ಮಸಾಜ್ ಮಾಡಿ. ಇಡಿಯ ತಲೆಯನ್ನು ಲೋಳೆಸರ ಪೂರ್ಣ ಆವರಿಸಿದ ಬಳಿಕ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಮತ್ತು ಶಾಂಪೂ ಏನನ್ನೂ ಉಪಯೋಗಿಸಬೇಡಿ. (ಉಪಯೋಗಿಸಿದರೆ ಲೋಳೆಸರದ ಔಷಧೀಯ ಗುಣಗಳೂ ತೊಳೆದುಹೋಗುತ್ತವೆ) ಇದೇ ರೀತಿ ವಾರಕ್ಕೆ ಎರಡರಿಂದ ಮೂರು ಬಾರಿಯಂತೆ ಎರಡು ವಾರ ಉಪಯೋಗಿಸಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ. ಈ ಅವಧಿಯಲ್ಲಿ ತಲೆಗೆ ಎಣ್ಣೆ, ಶಾಂಪೂ ಯಾವುದನ್ನೂ ಬಳಸದಿರಿ. ಈ ರಸ ಸೂರ್ಯನ ಕಿರಣಗಳಿಗೆ ಸುಟ್ಟ ಚರ್ಮ, ಸುಟ್ಟ ಗಾಯ, ಚರ್ಮದ ತುರಿಕೆಗಳಿಗೂ ಉಪಯೋಗಿಸಬಹುದು.

ಲೋಳೆಸರ ಮತ್ತು ಮೆಂತೆ

ಲೋಳೆಸರ ಮತ್ತು ಮೆಂತೆ

ಸುಮಾರು ಒಂದು ಚಮಚದಷ್ಟು ಮೆಂತೆಕಾಳುಗಳನ್ನು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ನೆನೆದ ಕಾಳುಗಳನ್ನು ಅರೆದು ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಲೋಳೆಸರದ ಒಂದು ಚಿಕ್ಕ ಕೋಡನ್ನು ಸೇರಿಸಿ ಮತ್ತೊಮ್ಮೆ ಅರೆದು ನುಣ್ಣಗಿನ ಪೇಸ್ಟ್ ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮೇಲಿನ ವಿಧಾನದಂತೆಯೇ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತಲೆಯಲ್ಲಿರುವ ಹೆಚ್ಚುವರಿ ಎಣ್ಣೆ ಮತ್ತು ಬೂಸು ನಿವಾರಣೆಯಾಗುತ್ತದೆ. ಈ ವಿಧಾನದಲ್ಲಿ ಸ್ವಲ್ಪ ತಡವಾಗಿ ಫಲಿತಾಂಶ ಬರುವುದರಿಂದ ಕೊಂಚ ತಾಳ್ಮೆ ಅಗತ್ಯ.

ಲೋಳೆಸರ ಮತ್ತು ನೀಲಗಿರಿ ಎಣ್ಣೆ

ಲೋಳೆಸರ ಮತ್ತು ನೀಲಗಿರಿ ಎಣ್ಣೆ

ಲೋಳೆಸರದ ಒಂದು ಚಿಕ್ಕ ಕೋಡನ್ನು ಕೆಲವು ಹನಿ ನೀಲಗಿರಿ ಎಣ್ಣೆಯೊಂದಿಗೆ ಸೇರಿಸಿ ಅರೆಯಿರಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಸುಮಾರು ಒಂದು ಘಂಟೆ ಕಾಲ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದು ಸ್ವಚ್ಛವಾಗ ಟವೆಲ್ಲಿನಿಂದ ಒರೆಸಿಕೊಳ್ಳಿ. ಇದರಿಂದ ಲೋಳೆಸರ ಕೂದಲ ಬುಡಗಳ ಆಳಕ್ಕೆ ಇಳಿದು ತಲೆಹೊಟ್ಟಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಹಾಗೂ ಕೂದಲ ಬುಡಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಸುಮಾರು ಎರಡರಿಂದ ಮೂರು ವಾರಗಳಲ್ಲಿ ತಲೆಹೊಟ್ಟು ಪೂರ್ಣವಾಗಿ ನಿವಾರಣೆಯಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶಾಂಪೂ ಅಥವಾ ಸೋಪನ್ನು ಉಪಯೋಗಿಸಬಾರದು.

ಲೋಳೆಸರ ಮತ್ತು ಲಿಂಬೆರಸ

ಲೋಳೆಸರ ಮತ್ತು ಲಿಂಬೆರಸ

ಅರ್ಧ ಲಿಂಬೆಹಣ್ಣಿನ ರಸಕ್ಕೆ ಒಂದು ಚಿಕ್ಕ ಕೋಡು ಲೋಳೆಸರವನ್ನು ಸೇರಿಸಿ ಅರೆಯಿರಿ. ಪ್ರಮಾಣ ಹತ್ತು ಭಾರ ಲೋಳೆಸರಕ್ಕೆ ಒಂದು ಭಾಗ ಲಿಂಬೆರಸದಂತೆ ಇರಲಿ. ಮೇಲಿನ ವಿಧಾನದಂತೆಯೇ ಇದನ್ನು ಹಚ್ಚಿ ಒಂದು ಘಂಟೆ ಒಣಗಲು ಬಿಡಿ. ಬಳೀಕ ತಣ್ಣೀರು ಮತ್ತು ಸ್ವಲ್ಪವೇ ಸ್ವಲ್ಪ ಪ್ರಮಾಣದ ಮೃದುವಾದ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಿ. ಏಕೆಂದರೆ ಲಿಂಬೆಯ ಆಮ್ಲೀಯ ಪದರ ಬರೆಯ ನೀರಿನಿಂದ ಪೂರ್ತಿಯಾಗಿ ಹೋಗುವುದಿಲ್ಲ. ಹಾಗೇ ಉಳಿದರೆ ಆಮ್ಲದ ಗುಣದಿಂದಾಗಿ ಕೂದಲಿಗೆ ಹಾನಿಯುಂಟಾಗಬಹುದು.

ಲೋಳೆಸರ ಮತ್ತು ಹರಳೆಣ್ಣೆ

ಲೋಳೆಸರ ಮತ್ತು ಹರಳೆಣ್ಣೆ

ಲೋಳೆಸರವನ್ನು ಅರೆದು ಅರ್ಧ ಕಪ್ ನಷ್ಟು ತುಂಬಿಸಿ. ಇದಕ್ಕೆ ಎರಡು ಚಿಕ್ಕ ಚಮಚದಷ್ಟು ಹರಳೆಣ್ಣೆ ಸೇರಿಸಿ (ಸುಂಗಧವುಳ್ಳ ಹರಳೆಣ್ಣೆ ಬೇಡ, ಅಪ್ಪಟವಾದ ಹರಳೆಣ್ಣೆ ಇರಲಿ). ಈ ಎರಡನ್ನೂ ಚೆನ್ನಾಗಿ ಮಿಶ್ರಣಗೊಳಿಸಿ ತಲೆಗೆ ಹಚ್ಚಿ. ಇದು ಕೂದಲನ್ನು ಆವರಿಸಿ ದಪ್ಪನಾಗಿ ಬರುವಂತೆ ಇಡಿಯ ತಲೆಗೆ ಲೇಪಿಸಿ. ತಲೆಗೊಂದು ಪ್ಲಾಸ್ಟಿಕ್ಕಿನ ಟೊಪ್ಪಿಯನ್ನು ಧರಿಸಿ (ಸ್ನಾನ ಮಾಡುವಾಗ ತೊಡುವ ಶವರ್ ಕ್ಯಾಪ್) ಮಲಗಿಬಿಡಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತಲೆಯನ್ನು ನಿಧಾನವಾಗಿ ತೋಯಿಸುತ್ತಾ ತೊಳೆದುಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪವೇ ಸ್ವಲ್ಪ ಮೃದುವಾದ ಶಾಂಪೂ ಉಪಯೋಗಿಸಿ. ಈ ವಿಧಾನವನ್ನು ವಾರಕ್ಕೊಮ್ಮೆಯಂತೆ ನಾಲ್ಕೈದು ವಾರ ಅನುಸರಿಸಿ. ಶೀಘ್ರದಲ್ಲಿಯೇ ಕೂದಲ ಬುಡದಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೇ ಹೊಸ ಕೂದಲು ಹುಟ್ಟಲು ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

English summary

Eliminating Dandruff Using Aloe Vera

Dandruff is a very common contagious skin disorder of the hair scalp brought on by spread of bacteria and fungus infection on the scalp. It leads to itching as well as extreme formation of dried-out skin flakes on the scalp. lists out a few remedies to get rid of dandruff completely.
X
Desktop Bottom Promotion