For Quick Alerts
ALLOW NOTIFICATIONS  
For Daily Alerts

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಗರ್ಭಪಾತವಾಗುತ್ತದೆಯಾ?

By Hemanth P
|

ಕುಟುಂಬದಲ್ಲಿ ಹೊಸ ಸದಸ್ಯರನ್ನು ಎದುರುಗೊಳ್ಳಲು ತಯಾರಿ ನಡೆಸುತ್ತಿರುವ ಕಾರಣ ಗರ್ಭಧಾರಣೆಯು ಜೀವನದಲ್ಲಿ ತುಂಬಾ ಬದಲಾವಣೆಗಳಾಗುವ ಸಮಯ. ಗರ್ಭದಲ್ಲಿರುವ ಮಗುವಿನ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ದೈನಂದಿನ ಜೀವನದಲ್ಲಿ ಕೆಲವೊಂದು ಬದಲಾವಣೆ ಕೂಡ ಮಾಡಿಕೊಳ್ಳಬೇಕಾಗಿರುವ ಕಾರಣ ಇದು ಪ್ರಯಾಸದ ಸಮಯ ಕೂಡ.

ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳು

ಹಠಾತ್ ಆಗಿ ಗರ್ಭದಲ್ಲಿರುವ ಮಗು ನಿಮ್ಮ ಸಣ್ಣ ವಿಶ್ವದ ಆಕರ್ಷಣೆಯಾಗುತ್ತದೆ. ಗರ್ಭಿಣಿ ಮಹಿಳೆ ಎದುರಿಸುವಂತಹ ಅತ್ಯಂತ ಕೆಟ್ಟ ಅನುಭವವೆಂದರೆ ಅದು ಗರ್ಭಪಾತ. ನೀವು ತಕ್ಷಣ ಈ ಜೀವನದಿಂದ ದೂರ ಎಸೆದಂತೆ, ಅದು ಮಂಕಾಗಿ ಮತ್ತು ನಿಸ್ತೇಜವಾಗಿ ಕಾಣಲಾರಂಭಿಸುತ್ತದೆ. ಆರಂಭದ ಗರ್ಭಪಾತ ಮತ್ತು ಅಂತ್ಯದ ಗರ್ಭಪಾತ ಎನ್ನುವುದಿದೆ.

Does Playing Sports Cause A Miscarriage?

ಗರ್ಭಪಾತಕ್ಕೆ ಕೆಲವೊಂದು ಕಾರಣಗಳ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಅದರಲ್ಲಿ ಒಂದು ಕ್ರೀಡೆಯಲ್ಲಿ ತೊಡಗುವುದರಿಂದ ಗರ್ಭಪಾತವಾಗುತ್ತದೆಯಾ? ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಅಥವಾ ತುಂಬಾ ಕಡಿಮೆ ಸಂಪರ್ಕ ಹೊಂದಿರುವ ಯಾವುದೇ ಕ್ರೀಡೆಯನ್ನು ಗರ್ಭಧಾರಣೆ ವೇಳೆ ಸುರಕ್ಷಿತವಾಗಿ ಆಡಬಹುದು.

ಈಗ ಹುಟ್ಟುವ ಮತ್ತೊಂದು ಪ್ರಶ್ನೆಯೆಂದರೆ ಪರಸ್ಪರ ಸಂಪರ್ಕ ಸಾಧಿಸುವ ಕ್ರೀಡೆಗಳಿಂದ ಗರ್ಭಪಾತವಾಗುತ್ತದೆಯಾ? ಇಂತಹ ಸಂದರ್ಭದಲ್ಲಿ ಗರ್ಭಪಾತವಾಗುವ ಸಾಧ್ಯತೆ ತುಂಬಾ ಹೆಚ್ಚು ಮತ್ತು ಮಹಿಳೆಯರು ತಮ್ಮ ಗರ್ಭಧಾರಣೆ ಸಮಯದಲ್ಲಿ ಇಂತಹ ಕ್ರೀಡೆಗಳನ್ನು ಕಡೆಗಣಿಸಬೇಕು. ಗರ್ಭಿಣೆ ಮಹಿಳೆಯರು ಆಡುವಂತಹ ಕೆಲವೊಂದು ಕ್ರೀಡೆಗಳ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ನಾವು ಇಲ್ಲಿ ಚರ್ಚಿಸಿದ್ದೇವೆ.

ನಿಮ್ಮ ಮಗುವನ್ನೂ ನಿಮ್ಮ ಸಾಕುಪ್ರಾಣಿಯ ಸಂಗಾತಿಯಾಗಿಸಿ!

ಈಜು:
ಈಜನ್ನು ಇಷ್ಟಪಡುವ ಮಹಿಳೆಯರಿಗೆ ಈ ಕ್ರೀಡೆಯಿಂದ ಗರ್ಭಪಾತವಾಗುತ್ತದೆಯಾ ಎನ್ನುವುದಕ್ಕೆ ಇಲ್ಲ ಎನ್ನುವುದು ಉತ್ತರ. ಈ ಕ್ರೀಡೆಯನ್ನು ಗರ್ಭಧಾರಣೆ ವೇಳೆ ಸುರಕ್ಷಿತವಾಗಿ ಅನುಸರಿಸಬಹುದು. ಆದರೆ ಉಸಿರಾಟ ನಿಂತುಹೋಗುವ ಸಂದರ್ಭ ಎದುರಾಗದಂತೆ ತಡೆಯಬೇಕು.

ಹೊರಾಂಗಣ ಕ್ರೀಡೆಗಳು:
ಗರ್ಭಧಾರಣೆಯ ಹೊರತಾಗಿಯೂ ಹೆಚ್ಚಿನ ಮಹಿಳೆಯರು ಹೊರಾಂಗಣ ಕ್ರೀಡೆಗಳನ್ನು ಆನಂದಿಸುತ್ತಾರೆ. ಆದರೆ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಅತಿಯಾಗಬಾರದು. ಎಲ್ಲಾ ಕ್ರೀಡಾ ಪ್ರಿಯರಿಗೆ ಉತ್ತರವೆಂದರೆ ಕ್ರೀಡೆಯಿಂದ ಗರ್ಭಪಾತವಾಗಲ್ಲ.

ಜಾಗಿಂಗ್:
ಜಾಗಿಂಗ್ ಗರ್ಭಧಾರಣೆಗೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ನಿಮ್ಮ ವೈದ್ಯಕೀಯ ಪರಿಸ್ಥಿತಿ ಉತ್ತಮವಾಗಿದ್ದರೆ ನೀವು ಜಾಗಿಂಗ್ ಮಾಡಬಹುದು. ಮಿತವಾಗಿ ಇದನ್ನು ಮಾಡುವುದರಿಂದ ನಿಮಗೆ ಯಾವುದೇ ಸಮಸ್ಯೆಯಿಲ್ಲ ಮತ್ತು ಕ್ರೀಡೆಯಿಂದ ಗರ್ಭಧಾರಣೆಯಾಗುತ್ತದೆಯಾ ಎನ್ನುವುದಕ್ಕೆ ಇಲ್ಲ ಎನ್ನುವುದು ಉತ್ತರ.

ರಾಕೆಟ್ ಕ್ರೀಡೆ:
ಟೆನಿಸ್ ಮತ್ತು ಬ್ಯಾಡ್ಮಿಂಟನ್ ನಂತಹ ರಾಕೆಟ್ ಕ್ರೀಡೆಗಳಲ್ಲಿ ಕಡಿಮೆ ಸಂಪರ್ಕ ಹೊಂದಿರುವ ಕ್ರೀಡೆಗಳು. ಇದನ್ನು ಹೆಚ್ಚು ಶ್ರಮಬೀಳದಂತೆ ನಿಮಗೆ ಸಾಧ್ಯವಾದಷ್ಟು ದೀರ್ಘ ಕಾಲ ಆಡಬಹುದು. ರಾಕೆಟ್ ಕ್ರೀಡೆಯಿಂದ ಗರ್ಭಿಣಿ ಮಹಿಳೆಯರಿಗೆ ಯಾವುದೇ ಚಿಂತೆಯಿಲ್ಲ.

ಸಂಪರ್ಕ ಕ್ರೀಡೆಗಳು:
ಸಂಪರ್ಕ ಕ್ರೀಡೆಗಳಿಂದ ಗರ್ಭಪಾತ ಉಂಟಾಗುತ್ತದೆಯಾ ಎನ್ನುವ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ಹೌದು. ನೀವು ಗರ್ಭಿಣಿಯಾಗಿದ್ದರೆ ಫುಟ್ಬಾಲ್, ಬಾಸ್ಕೆಟ್ ಬಾಲ್ ಮತ್ತು ಇಂತಹ ಸಂಪರ್ಕ ಸಾಧಿಸುವ ಕ್ರೀಡೆಯಿಂದ ದೂರ ಉಳಿಯಿರಿ. ಇಂದು ಗರ್ಭಿಣಿ ಮಹಿಳೆಯರಿಗೆ ತುಂಬಾ ಅಪಾಯ ಉಂಟುಮಾಡುತ್ತದೆ.

ಗರ್ಭಿಣಿಯರು ಮಾಡಬಾರದ 10 ಕಾರ್ಯಗಳು

ವೆಯ್ಟ್ ಲಿಫ್ಟಿಂಗ್:
ವೆಯ್ಟ್ ಲಿಫ್ಟಿಂಗ್ ಗರ್ಭಿಣಿ ಮಹಿಳೆಯರಿಗೆ ಮಿತಿಯ ಕ್ರೀಡೆ. ಈ ಕ್ರೀಡೆಯಿಂದ ಗರ್ಭಪಾತ ಉಂಟಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ ಹೌದು. ನೀವು ತುಂಬಾ ಭಾರ ಮತ್ತು ಹೆಚ್ಚಿನ ಒತ್ತಡ ಹಾಕಿದರೆ ಗರ್ಭಪಾತವಾಗಬಹುದು.

ಸಾಹಸ ಕ್ರೀಡೆಗಳು:
ಸಾಹಸ ಕ್ರೀಡೆಗಳಿಂದ ಗರ್ಭಪಾತವಾಗುತ್ತದೆಯಾ ಎಂಬ ಪ್ರಶ್ನೆಗೆ ಇರುವ ಉತ್ತರ ಹೌದು. ಸ್ಕೀಯಿಂಗ್, ಪ್ಯಾರಚೂಟಿಂಗ್, ಸ್ಕೂಬಾ ಡೈವಿಂಗ್ ಮತ್ತು ಮಾರ್ಷಲ್ ಆರ್ಟ್ಸ್ ನಂತಹ ಕ್ರೀಡೆಗಳು ಗರ್ಭಿಣಿ ಮಹಿಳೆಯರಿಗಲ್ಲ. ಗರ್ಭಧಾರಣೆ ಸಮಯದಲ್ಲಿ ಇದನ್ನು ಮಾಡಲೇಬಾರದು.

ಗರ್ಭಧಾರಣೆ ವಿಷಯಕ್ಕೆ ಬಂದರೆ ಯಾರು ಕೂಡ ಅಪಾಯ ಎದುರಿಸಲು ಸಿದ್ಧರಿರುವುದಿಲ್ಲ. ನೀವು ಯಾವುದೇ ರೀತಿಯ ಅಪಾಯಕಾರಿ ಕ್ರೀಡೆ ಪ್ರಯತ್ನಿಸುವ ಮೊದಲು ವೈದ್ಯಕೀಯವಾಗಿ ಫಿಟ್ ಇದ್ದೀರಾ ಎಂದು ಪರೀಕ್ಷಿಸಿ.

English summary

Does Playing Sports Cause A Miscarriage?

Miscarriage is the worst experience any pregnant woman can face. You suddenly feel ripped out of this life, which will appear grey and lifeless. There are early miscarriages and late miscarriages.
Story first published: Saturday, May 24, 2014, 16:01 [IST]
X
Desktop Bottom Promotion