For Quick Alerts
ALLOW NOTIFICATIONS  
For Daily Alerts

ಬಿರುಕುಬಿಟ್ಟ ಪಾದಗಳು: ಪುರುಷರಿಗೆ ಮನೆಮದ್ದುಗಳು

By manu
|

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ. ಪಾದಗಳಲ್ಲಿ ಬಿರುಕು ಕಾಣಿಸುವುದು ಪಾದಗಳ ಆರೈಕೆ ಮತ್ತು ನಿರ್ಮಲವಿಲ್ಲದ ಕಾರಣವೆಂದು ಹೆಚ್ಚಿನವರು ಪರಿಗಣಿಸಿದ್ದಾರೆ.

ಕಾಲಿನ ಸ್ನಾಯು ಸೆಳೆತಕ್ಕೆ ಮನೆಮದ್ದುಗಳು

Cracked Heels: Remedies For Men

ಆದಾಗ್ಯೂ ಕೆಲವೊಂದು ಇತರ ಪರಿಣಾಮ ನಿಮ್ಮ ಪಾದದ ಮೇಲಾಗಬಹುದು ಮತ್ತು ಇದು ಬಿರುಕು ಬಿಡಲು ಕಾರಣವಾಗಬಹುದು. ಕೆಲವೊಂದು ಪೌಷ್ಠಿಕಾಂಶಗಳ ಕೊರತೆಯಿಂದಲೂ ಪಾದ ಬಿರುಕು ಬಿಡಬಹುದು. ನಿಮ್ಮ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿದರೆ ಬಿರುಕು ಬಿಟ್ಟು ನೋವು ಉಂಟಾಗುವ ಅಪಾಯ ತಪ್ಪುತ್ತದೆ.

ಬಿರುಕುಬಿಟ್ಟು ಅತಿಯಾದ ನೋವು ಅನುಭವಿಸಿದ ಬಳಿಕ ಮದ್ದು ಮಾಡುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನೀವು ಪಾದದ ಬಿರುಕಿನಿಂದ ಈಗಾಗಲೇ ನೋವು ಅನುಭವಿಸುತ್ತಿದ್ದರೆ ಇದಕ್ಕೆ ಹಲವಾರು ರೀತಿಯ ಮನೆಮದ್ದುಗಳಿವೆ. ಒಮ್ಮೆ ನೀವು ಬಿರುಕುಬಿಟ್ಟ ಪಾದಗಳನ್ನು ಗುಣಪಡಿಸಿದರೆ ಮತ್ತೆ ಅದು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ನಿಮ್ಮ ದೇಹದ ತೂಕ ಹೊತ್ತುಕೊಳ್ಳಲು ನೆರವಾಗುವಂತೆ ಪಾದವು ದಪ್ಪ ಚರ್ಮ ಹೊಂದಿದೆ.

1. ಒರಟಾದ ಕಲ್ಲು:
ನಿಮ್ಮ ಪಾದವನ್ನು ಸುಮಾರು 15ರಿಂದ 20 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಇಟ್ಟರೆ ಚರ್ಮ ಮೆತ್ತಗಾಗುತ್ತದೆ. ನಿಮ್ಮ ಬಿರುಕುಬಿಟ್ಟ ಕಾಲಿನಲ್ಲಿ ಸತ್ತಿರುವ ಚರ್ಮವನ್ನು ತೆಗೆಯಲು ಅದನ್ನು ಒರಟಾದ ಕಲ್ಲಿಗೆ ಸರಿಯಾಗಿ ಉಜ್ಜಿ. ಪಾದಕ್ಕೆ ಒಳ್ಳೆಯ ಮೊಶ್ಚಿರೈಸರ್ ಕ್ರೀಮ್ ಹಚ್ಚಿ ಮತ್ತು ಅದನ್ನು ಪಾದ ಹೀರಿಕೊಳ್ಳುವ ತನಕ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಡಿ. ಪಾದವು ತೇವಾಂಶದಿಂದ ಇರಲು ರಾತ್ರಿಯಿಡಿ ಅಥವಾ ದಿನಪೂರ್ತಿ ಸಾಕ್ಸ್ ಧರಿಸಿ. ಒಂದು ವಾರ ತನಕ ಪ್ರತೀ ದಿನ ಹೀಗೆ ಮಾಡಿ ಮತ್ತು ವ್ಯತ್ಯಾಸ ಕಂಡುಕೊಳ್ಳಿ.

2. ಪಾದದ ಮಾಸ್ಕ್:
ದೊಡ್ಡ ಬೇಸಿನ್ ಅಥವಾ ಬಕೆಟ್ ತೆಗೆದುಕೊಳ್ಳಿ, ಅದರಲ್ಲಿ ನಿಮ್ಮ ಪಾದವು ಮುಳುಗುವಂತಿರಲಿ. ಅದಕ್ಕೆ ಉಪ್ಪು, ನಿಂಬೆರಸ, ಗ್ಲಿಸರಿನ್ ಮತ್ತು ರೋಸ್ ವಾಟರ್ ಹಾಕಿ. ಈ ನೀರಿನಲ್ಲಿ ಸುಮಾರು 15-20 ನಿಮಿಷ ತನಕ ಕಾಲನ್ನು ಹಾಗೆ ಇಡಿ. ನಿಮ್ಮ ಪಾದಗಳನ್ನು ಉಜ್ಜಲು ಒರಟಾದ ಕಲ್ಲು ಮತ್ತು ಪಾದದ ಸ್ಕ್ರಬರ್ ಬಳಸಿ. ಒಂದು ಸಣ್ಣ ಚಮಚ ಗ್ಲಿಸರಿನ್, ಒಂದು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ನಿಂಬೆರಸದ ಮಿಶ್ರಣವನ್ನು ಬಿರುಕುಬಿಟ್ಟ ಪಾದಗಳಿಗೆ ಹಚ್ಚಿ. ರಾತ್ರಿಯಿಡಿ ಹೀಗೆ ಇರಲಿ, ಬೆಳಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

3. ಜೇನಿನ ಮಿಶ್ರಣ:
ಜೇನು ನಿಮ್ಮ ಪಾದಕ್ಕೆ ಒಳ್ಳೆಯ ಮೊಶ್ಚಿರೈಸರ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. 2-3 ಚಮಚದಷ್ಟು ಅಕ್ಕಿ, ಕೆಲವು ಚಮಚ ಜೇನು ಮತ್ತು ಆ್ಯಪಲ್ ಸೀಡರ್ ವಿನೇಗರ್ ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ನಿಮ್ಮ ಪಾದಗಳು ತುಂಬಾ ಒಣ ಮತ್ತು ಬಿರುಕುಬಿಟ್ಟಿದ್ದರೆ ಒಂದು ಚಮಚ ಆಲಿವ್ ತೈಲ ಅಥವಾ ಸಿಹಿ ಬಾದಾಮಿ ತೈಲ ಹಾಕಿ. ಬಿಸಿ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ನೆನೆಸಿ ಮತ್ತು ಈ ಪೇಸ್ಟ್ ಹಾಕಿ ಬಿರುಕುಗಳನ್ನು ನಿಧಾನವಾಗಿ ಉಜ್ಜಿ, ಸತ್ತ ಚರ್ಮವನ್ನು ತೆಗೆಯಿರಿ.

ಪುರುಷರೇ, ಬೇಸಿಗೆಯಲ್ಲಿ ನಿಮ್ಮ ಕೂದಲಿನ ಬಗ್ಗೆ ಎಚ್ಚರ

4. ಜೇನು ಅಥವಾ ಆಲಿವ್ ಎಣ್ಣೆ:
ಪಾದದಲ್ಲಿ ಆರಂಭಿಕ ಹಂತದಲ್ಲಿ ಬಿರುಕಿನ ಸಮಸ್ಯೆಯಿದ್ದರೆ ನೇರವಾಗಿ ಜೇನು ಅಥವಾ ಆಲಿವ್ ಎಣ್ಣೆ ಹಚ್ಚಿ ಉಜ್ಜಬೇಕು. ರಾತ್ರಿ ಇದನ್ನು ಹಾಗೆ ಬಿಟ್ಟು ಬೆಳಿಗ್ಗೆ ತೊಳೆಯಬೇಕು. ಒಂದು ವಾರ ಪ್ರತೀದಿನ ಹೀಗೆ ಮಾಡಿದರೆ ಪಾದಗಳು ನೈಸರ್ಗಿಕವಾಗಿ ಮೃದು ಮತ್ತು ಬಿರುಕುಬಿಟ್ಟ ಪಾದಗಳು ಮೆದುವಾಗುತ್ತದೆ.

X
Desktop Bottom Promotion