For Quick Alerts
ALLOW NOTIFICATIONS  
For Daily Alerts

ಬಾಳೆ ಎಲೆಯ ಮಹತ್ವ ಮತ್ತು ಉಪಯೋಗಗಳು

By Deepak M
|

ಬಾಳೆ ಮರ ಯಾರು ತಾನೇ ನೋಡಿಲ್ಲ. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

ಬಾಳೆ ಎಲೆಯು ಅಡುಗೆ ಮನೆಯಲ್ಲಿ ಬಳಸಲು ಅತ್ಯಂತ ಯೋಗ್ಯವಾದ ಸಾಧನವಾಗಿದೆ. ಇದು ಫುಡ್ ರಾಪರ್ ತರಹ ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ಇದು ಪ್ಲಾಸ್ಟಿಕ್ ರಾಪರ್, ಪರ್ಚ್‍ಮೆಂಟ್ ಪೇಪರ್ ಹಾಗು ಅಲ್ಯೂಮಿನಿಯಂ ಫಾಯಿಲ್ ರೀತಿಯಲ್ಲಿ ಒಣಗಿಸಲು, ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಕೆಯಾಗುತ್ತದೆ.

ಇನ್ನು ಬಾಳೆ ಎಲೆಯೆಂದರೆ ಅದು ಊಟದ ತಟ್ಟೆಗಿಂತ ಹೆಚ್ಚು. ಬಾಳೆ ಎಲೆಯನ್ನು ಮಡಿಚಿ ಆಹಾರ ಸಂಗ್ರಹಿಸುವ ಡಬ್ಬಿಯಂತೆ ಸಹ ಬಳಸಲಾಗುತ್ತದೆ. ಬಾಳೆ ಗಿಡದ ಎಲ್ಲಾ ಭಾಗಗಳು ಒಂದಲ್ಲ ಒಂದು ಬಗೆಯಲ್ಲಿ ಉಪಯೋಗಕ್ಕೆ ಬರುತ್ತವೆ.

ಇದರ ಕಾಂಡದ ಮಧ್ಯಭಾಗದಲ್ಲಿರುವ ಅಂಶವನ್ನು ಸಹ ಸೇವಿಸಲಾಗುತ್ತದೆ. ಇದರ ಹೂವನ್ನು ಬೇಯಿಸಿದ ತರಕಾರಿಯ ರೂಪದಲ್ಲಿ ತಿನ್ನುತ್ತಾರೆ. ಇನ್ನು ಭಾರತದ ಹಲವೆಡೆ ಬಾಳೆ ಎಲೆಗಳನ್ನು ಮತ್ತು ಕಾಂಡವನ್ನು ಪಶುಗಳಿಗೆ ಆಹಾರವಾಗಿ ಬಳಸುತ್ತಾರೆ. ಈ ಗಿಡದಿಂದ ದೊರೆಯುವ ನಾರನ್ನು ಬಳಸಿ ಹಗ್ಗಗಳು , ಕಾಲೊರೆಸುವ ಬಟ್ಟೆಗಳು, ಕೋರ್ಸ್ ಪೇಪರ್ ಮತ್ತು ಪೇಪರ್ ಪಲ್ಪ್ ತಯಾರಿಸಲಾಗುತ್ತದೆ.

ಆರೋಗ್ಯಕ್ಕೆ ಉತ್ತಮ

ಆರೋಗ್ಯಕ್ಕೆ ಉತ್ತಮ

ಬಾಳೆ ಎಲೆಯಲ್ಲಿ ಊಟವನ್ನು ತಿಂದರೆ ಅದು ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ. ಬಿಸಿಯಾದ ಆಹಾರವನ್ನು ಬಾಳೆ ಎಲೆಯ ಮೇಲೆ ಬಡಿಸಿದಾಗ ಆ ಎಲೆಯಲ್ಲಿರುವ ಪೋಷಕಾಂಶಗಳು ಆಹಾರದ ಜೊತೆಗೆ ಸೇರುವ ಮೂಲಕ ನಮ್ಮ ದೇಹಕ್ಕೆ ಆ ಪೋಷಕಾಂಶಗಳು ಸೇರುತ್ತವೆ.

ಬಿಳಿ ಕೂದಲನ್ನು ನಿವಾರಿಸುತ್ತದೆ

ಬಿಳಿ ಕೂದಲನ್ನು ನಿವಾರಿಸುತ್ತದೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬಿಳಿ ಕೂದಲು ಬಂದಿರುವ ಯುವಕರು ಪ್ರತಿ ದಿನವು ಬಾಳೆ ಎಲೆಯಲ್ಲಿ ಊಟವನ್ನು ಸೇವಿಸುವ ಮೂಲಕ ತಮ್ಮ ನರೆತ ಕೂದಲನ್ನು ಕಪ್ಪಗೆ ಮಾಡಿಕೊಳ್ಳಬಹುದು.

ತ್ಚಚೆಗೆ ಉತ್ತಮ

ತ್ಚಚೆಗೆ ಉತ್ತಮ

ಬಾಳೆ ಎಲೆಯಲ್ಲಿ ಎಪಿಗ್ಯಾಲೊಕೇಟೆಚಿನ್ ಗ್ಯಾಲೆಟ್ ಎನ್ನುವ ಪಾಲಿಫೆನೊಲ್‍ಗಳು (EGCG) ಯಥೇಚ್ಛವಾಗಿ ಕಂಡು ಬರುತ್ತವೆ. ಫಾಲಿಫೆನಲ್‍ಗಳು ಪ್ರಕೃತಿ ದತ್ತವಾದ ಆಂಟ್ಟಿ ಆಕ್ಸಿಡೆಂಟ್‍ಗಳಾಗಿದ್ದು, ಇವು ಬಾಳೆ ಎಲೆಯಲ್ಲಿ ಕಂಡು ಬರುತ್ತವೆ. ಇದು ತ್ಚಚೆಗೆ ಉತ್ತಮ ಪೋಷಕಾಂಶವಾಗಿರುತ್ತದೆ.

ಸುಟ್ಟ ಗಾಯಗಳಿಗೆ

ಸುಟ್ಟ ಗಾಯಗಳಿಗೆ

ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.

ಮಕ್ಕಳ ತ್ವಚೆಗೆ ಪರಿಹಾರ

ಮಕ್ಕಳ ತ್ವಚೆಗೆ ಪರಿಹಾರ

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

ಅಧಿಕ ಪ್ರಮಾಣದ ವಿಟಮಿನ್-ಡಿ

ಅಧಿಕ ಪ್ರಮಾಣದ ವಿಟಮಿನ್-ಡಿ

ಆಗ ತಾನೆ ಜನಿಸಿದ ಮಕ್ಕಳನ್ನು ಶುಂಠಿ ಎಣ್ಣೆಯನ್ನು ಸವರಿರುವ ಬಾಳೆ ಎಲೆಯಿಂದ ಸುತ್ತಿ (ಒಂದು ಎಲೆ ಮೇಲೆ ಮತ್ತೊಂದು ಕೆಳಗೆ), ಬೆಳಗ್ಗೆ ಸೂರ್ಯನ ಕಿರಣಗಳಿಗೆ ಇಡುವುದರಿಂದ ಚರ್ಮ ರೋಗಗಳು ಮಗುವನ್ನು ಭಾದಿಸದಂತೆ ತಡೆಯಬಹುದು. ಹೀಗೆ ಮಾಡುವುದರಿಂದ ಅಧಿಕ ಪ್ರಮಾಣದ ವಿಟಮಿನ್-ಡಿ ಮಗುವಿಗೆ ದೊರೆಯುತ್ತದೆ.

ತ್ವಚೆಯ ಸಮಸ್ಯೆಗೆ

ತ್ವಚೆಯ ಸಮಸ್ಯೆಗೆ

ತ್ವಚೆಯ ಮೇಲೆ ಕಂಡು ಬರುವ ಸುಕ್ಕುಗಳು, ಸುಟ್ಟ ಗಾಯಗಳು ಮುಂತಾದ ಸಮಸ್ಯೆಗಳಿಗೆ ಬಾಳೆ ಎಲೆಗೆ ತೆಂಗಿನ ಎಣ್ಣೆಯನ್ನು ಸವರಿ, ಅದನ್ನು ಭಾದಿತ ಪ್ರದೇಶದಲ್ಲಿ ಇಡಿ. ಹೀಗೆ ಮಾಡುವುದರಿಂದ ತ್ವಚೆಯ ಸಮಸ್ಯೆಯು ಶೀಘ್ರ ಗುಣಮುಖವಾಗುತ್ತದೆ.

ಕನಸಿನಲ್ಲಿ ಬಾಳೆ ಎಲೆ ಬಂದರೆ

ಕನಸಿನಲ್ಲಿ ಬಾಳೆ ಎಲೆ ಬಂದರೆ

ಕನಸಿನಲ್ಲಿ ಬಾಳೆ ಬಂದರೆ ಹಣ, ಉಳಿತಾಯ, ಭ್ರೂಣ, ಸ್ಮಶಾನದಲ್ಲಿರುವ ಮನುಷ್ಯ, ಬಂಧಿಖಾನೆಯಲ್ಲಿರುವ ಬಂಧಿ, ಮುಚ್ಚಿದ ಪುಸ್ತಕ,ಗತ ಕಾಲದ ಸುದ್ದಿ, ಅಥವಾ ಇದು ಆಂತರಿಕ ಜ್ಞಾನವನ್ನು ಸಹ ಪ್ರತಿನಿಧಿಸುತ್ತದೆ. ಇದರ ಜೊತೆಗೆ ಬಾಳೆ ಎಂದರೆ ಬಟ್ಟೆ, ಪ್ರೇಮ, ಮಮತೆ, ಉದಾರವಾದ ವ್ಯಕ್ತಿ, ಏಕ ದೇವೋಪಾಸಕ ಅಥವಾ ಒಳ್ಳೆಯ ಮನುಷ್ಯನನ್ನು ಸಹ ಇದು ಸೂಚಿಸುತ್ತದೆ. ಹೀಗೆ ಬಾಳೆ ಕನಸಿನಲ್ಲಿ ಬಂದಾಗ ಅದರ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಅದರಲ್ಲು ಒಂದು ಬಾಳೆ ಮರವು ಕನಸು ಕಾಣುವಾತನ ಮನೆಯ ಒಳಗೆ ಬೆಳೆದಿರುವಂತಹ ಕನಸು ಬಂದರೆ, ಆತನಿಗೆ ತಪ್ಪದೆ ಪುತ್ರ ಸಂತಾನವಾಗುತ್ತದೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ಬಾಳೆ ಹಣ್ಣು ತಿಂದರೆ ವ್ಯವಹಾರದಲ್ಲಿ ಲಾಭ ಬರುತ್ತದೆ

ಕನಸಿನಲ್ಲಿ ಬಾಳೆ ಹಣ್ಣು ತಿಂದರೆ ವ್ಯವಹಾರದಲ್ಲಿ ಲಾಭ ಬರುತ್ತದೆ

ವ್ಯವಹಾರ ಮಾಡುವವರ ಕನಸಿನಲ್ಲಿ ಬಾಳೆ ಹಣ್ಣು ಬಂದರೆ ಅದು ಅವರಿಗೆ ಬರುವ ಲಾಭ ಮತ್ತು ಅವರು ಸಾಧಿಸಬೇಕೆಂದಿರುವ ಮಹತ್ವಾಕಾಂಕ್ಷೆ ಕೈಗೂಡುತ್ತದೆ ಎಂದರ್ಥ. ಅವರ ಬಹು ದಿನದ ಶ್ರಮ ಕೈಗೂಡುವ ಕಾಲ ಬಂದಿದೆ ಎಂದು ವಿಶ್ಲೇಷಣೆ ಮಾಡಬಹುದು. ಇನ್ನು ರೋಗಿಯೊಬ್ಬ ಆತನ ಕನಸಿನಲ್ಲಿ ಬಾಳೆ ಹಣ್ಣನ್ನು ಸೇವಿಸಿದರೆ, ಅದು ರೋಗದ ಉಲ್ಪಣ ಮತ್ತು ಸಾವಿನ ಸಂಕೇತವಾಗಿ ಪರಿಗಣಿಸಲಾಗುತ್ತದೆ.

English summary

Banana Leaf, significance and benefits

Banana TREE is a long and lengthy and is called a SACRED tree which has a long rib in the middle and as per Hindu culture people used to have food from Banana leaf.
X
Desktop Bottom Promotion