For Quick Alerts
ALLOW NOTIFICATIONS  
For Daily Alerts

ಉಗುರು ತುಂಡಾಗುವಿಕೆಯನ್ನು ತಡೆಯಲು ಏಳು ಸಲಹೆಗಳು

By Arpitha Rao
|

ಮಹಿಳೆಯರಿಗೆ ಸುಂದರವಾದ ನೀಳ ಉಗುರುಗಳನ್ನು ಹೊಂದಬೇಕು ಎಂಬ ಇಚ್ಛೆ ಇರುತ್ತದೆ.ಉಗುರು ವೃತ್ತಾಕಾರವಾಗಿ ಅಥವಾ ಚೌಕಾಕಾರವಾಗಿ ಯಾವರೀತಿಯಲ್ಲಾದರೂ ಇರಲಿ ಅದನ್ನು ನೀಳವಾಗಿ ಬೆಳೆಸಿ ಸುಂದರವಾಗಿಸಬೇಕು ಎಂಬುದು ಮಹಿಳೆಯರ ಆಸೆ.

ಆದರೆ ಮನೆಕೆಲಸಗಳಲ್ಲಿ ತೊಡಗಿದಾಗ ಉದ್ದ ಉಗುರುಗಳನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸ.ಈ ಕೆಳಗೆ ಕೆಲವು ಪರೀಕ್ಷಿಸಿ ನೋಡಿದ ಸಲಹೆಗಳನ್ನು ನೀಡಲಾಗಿದೆ ಇದನ್ನು ಪಾಲಿಸುವುದರಿಂದ ಉಗುರುಗಳು ತುಂಡಾಗುವುದನ್ನು ತಡೆಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಣ್ಣಿನ ತುರಿಕೆಗೆ ಕೆಲವು ಮನೆಮದ್ದುಗಳು

7 tested tricks to avoid nail breakage

1.ಉಗುರು ಒಂದೇ ದಿಕ್ಕಿನಲ್ಲಿ ಬೆಳೆಯುತ್ತಿರಲಿ:
ಇದು ನಿಮ್ಮ ಉಗುರನ್ನು ಕಾಪಾಡಲು ಉತ್ತಮ ವಿಧಾನ.ಉಗುರನ್ನು ಒಂದೇ ರೀತಿಯಲ್ಲಿ ಬೆಳೆಸಿ.ನಿಮ್ಮ ಉಗುರನ್ನು ಎರಡು ದಿಕ್ಕಿನಲ್ಲಿ ಬೆಳೆಸಿದರೆ ಅದು ಹೆಚ್ಚು ಬಲವನ್ನು ಹೊಂದಿರುವುದಿಲ್ಲ ಆದ್ದರಿಂದ ಒಂದೇ ದಿಕ್ಕಿನಲ್ಲಿ ಬೆಳೆಯುವಂತೆ ಗಮನ ಹರಿಸಿ.ಇದು ನಿಮಗೆ ಕೇಳಲು ವಿಯರ್ಡ್ ಎನಿಸಬಹುದು ಆದರೆ ಈ ರೀತಿ ಉಗುರು ಬೆಳೆಸುವುದರಿಂದ ಉದ್ದವಾದ,ಆರೋಗ್ಯಯುತವಾದ ಉಗುರು ನಿಮ್ಮದಾಗುತ್ತದೆ.

2.ಉಗುರುಗಳಿಗೆ ಬಣ್ಣ ಹಚ್ಚಿ:
ಇದನ್ನು ಪರೀಕ್ಷಿಸಿ ಹೇಳಲಾಗುತ್ತಿದೆ.ನಿಮ್ಮ ಉಗುರಿಗೆ ನೈಲ್ ಪಾಲಿಶ್ ಅಥವಾ ಯಾವುದೇ ಬಣ್ಣ ಹಚ್ಚುವುದರಿಂದ ಉಗುರು ತುಂಡಾಗುವಿಕೆಯನ್ನು ತಡೆಯಬಹುದು.ನೀವು ಬಟ್ಟೆ ತೊಳೆಯುವಾಗ ಅಥವಾ ತಿಕ್ಕುವಾಗ ಆಗುವ ಹಾನಿಯನ್ನು ಇದು ತಪ್ಪಿಸುತ್ತದೆ.


3.ಒದ್ದೆ ಉಗುರಿನ ಬಗ್ಗೆ ಕಾಳಜಿ ಇರಲಿ:
ನಿಮ್ಮ ಉಗುರು ಒದ್ದೆ ಇರುವಾಗ ಕೆಲವು ಮನೆ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.ಒಣಗಿದ ಉಗುರಿಗಿಂತ ಒದ್ದೆ ಇರುವ ಉಗುರುಗಳು ಬೇಗ ಮುರಿದುಹೋಗುತ್ತವೆ ಅಥವಾ ಹಾನಿಗೆ ಒಳಗಾಗುತ್ತವೆ.

4.ನಿಯಮಿತವಾಗಿ ನಿಮ್ಮ ಉಗುರಿನ ಕಾಳಜಿ ವಹಿಸಿ:
ನಿಮ್ಮ ಮುಖ ಕೂದಲುಗಳನ್ನು ಹೇಗೆ ಕಂಡಿಷನರ್ ಬಳಸಿ ಕಾಳಜಿವಹಿಸುತ್ತೀರೋ ಹಾಗೆಯೇ ನಿಮ್ಮ ಉಗುರು ಒಣಗಿದಂತಾದಾಗ ಆಗಾಗ ಉಗುರಿಗೆ ಕ್ರೀಮ್ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ.ಇದರಿಂದ ತೇವಾಂಶ ಹೆಚ್ಚಾಗಿ ಉಗುರುಗಳು ಆರೋಗ್ಯಯುತವಾಗುತ್ತವೆ.

5.ಉತ್ತಮ ಗುಣಮಟ್ಟದ ನೈಲ್ ಕ್ಲಿಪ್ಪರ್ ಬಳಸಿ:
ಉಳಿದ ಉಗುರಿನ ಉತ್ಪನ್ನಗಳು ಅಧಿಕ ಬೆಲೆ ತೆತ್ತು ತೆಗೆದುಕೊಂಡರೂ ಸಾಕಷ್ಟು ಮಹಿಳೆಯರು ನೈಲ್ ಕಟ್ಟರ್ ಗೆ ಮಾತ್ರ ಕಡಿಮೆ ಬೆಲೆ ತೆತ್ತು ತೆಗೆದುಕೊಂಡರೆ ಸಾಕು ಎಂದು ಬಾವಿಸುತ್ತಾರೆ.ನೀವು ಒಳ್ಳೆಯ ಗುಣಮಟ್ಟದ ನೈಲ್ ಕಟ್ಟರ್ ತೆಗೆದುಕೊಂಡರೆ ನಿಮ್ಮ ಉಗುರು ಕತ್ತರಿಸಿದಾಗ ಒಳ್ಳೆಯ ಶೇಪ್ ಕೊಡಬಹುದು ತುಂಡು ತುಂಡಾಗುವಿಕೆಯನ್ನು ತಪ್ಪಿಸಬಹುದು.ಆದ್ದರಿಂದ ಒಳ್ಳೆಯ ಕ್ಲಿಪ್ಪರ್ ಅನ್ನು ತೆಗೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಪ್ಪೆಸುಲಿಯುವ ಬೆರಳುಗಳನ್ನು ತೊಡೆದುಹಾಕಲು:9 ಸಲಹೆಗಳು

6.ನೆನೆಸಿಡಿ :
ಸಾಕಷ್ಟು ಮಹಿಳೆಯರು ನೈಲ್ ಪಾಲಿಶ್ ಅನ್ನು ತೆಗೆಯಲು ಬಳಸುವ ರಿಮೂವರ್ ಗೆ ಹತ್ತಿಯನ್ನು ನೆನೆಸಿ ನಂತರ ಅದನ್ನು ಉಗುರಿಗೆ ಹಾಕಿ ಉಜ್ಜುತ್ತಾರೆ.ಆದರೆ ಅದನ್ನು ಉಜ್ಜುವುದರಿಂದ ಉಗುರು ಹಾನಿಗೊಳಗಾಗುತ್ತದೆ.ಅದಕ್ಕಾಗಿ ರಿಮೂವರ್ ಗೆ ಹತ್ತಿ ಅದ್ದಿ ಆ ಹತ್ತಿಯನ್ನು ನಿಮ್ಮ ಉಗುರಿನ ನೈಲ್ ಪಾಲಿಶ್ ನ ಮೇಲಿಡಿ ನಂತರ ಅದು ತಾನಾಗೇ ಬಣ್ಣ ಬಿಡುವುದನ್ನು ನೀವು ಗಮನಿಸಬಹುದು.


ಈ ಮೇಲೆ ಹೇಳಿರುವ ರೀತಿಯ ಸಲಹೆಗಳನ್ನು ಪಾಲಿಸಿ ಉರುಗನ್ನು ಸಾಕಷ್ಟು ಕಾಲ ಆರೋಗ್ಯಯುತವಾಗಿ ಬಾಳಿಕೆ ಬರುವಂತೆ ಮಾಡಿಕೊಳ್ಳಿ.

X
Desktop Bottom Promotion