For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಪುರುಷರೇ ಹೀಗೆ ಸಿಂಗರಿಸಿಕೊಳ್ಳಿ

By Hemanth Amin
|

ಚಳಿಗಾಲ ಬಂತೆಂದರೆ ಅದು ಸವಾಲುಗಳ ಮೂಟೆಯನ್ನೆ ಹೊತ್ತುಕೊಂಡು ಬರುತ್ತದೆ. ಇದರಲ್ಲಿ ಒಂದು ಕೂದಲಿನ ಶೃಂಗಾರ. ಪುರುಷರು ಯಾವುದೇ ಜ್ಞಾನವಿಲ್ಲದಂತೆ ಎಲ್ಲಾ ಋತುವಿಗೂ ಒಂದೇ ರೀತಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಇತರ ಋತುಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲನ್ನು ಶೃಂಗರಿಸುವುದು ತುಂಬಾ ಭಿನ್ನವಾಗಿರುತ್ತದೆ. ಬೆಚ್ಚಗಿನ ಬಟ್ಟೆ ಮತ್ತು ಗ್ಲೌಸ್ ಗಳೊಂದಿಗೆ ಚಳಿಗಾಲದಲ್ಲಿ ಇತರ ಕೆಲವೊಂದು ವಿಷಯಗಳಿಗೂ ತಯಾರಾಗಿರಬೇಕು.

ಚಳಿಗಾಲದಲ್ಲಿ ಬೀಸುವ ಶೀತ ಹಾಗೂ ಒಣ ಹವೆಯಿಂದಾಗಿ ನಿಮ್ಮ ತ್ವಚೆ ಮತ್ತು ಕೂದಲನ್ನು ರಕ್ಷಿಸಿಕೊಳ್ಳಲು ಹಲವಾರು ರೀತಿಯ ಚಳಿಗಾಲದ ಆರೈಕೆಯ ಉತ್ಪನ್ನಗಳನ್ನು ಸಂಗ್ರಹಿಸಿಡಬೇಕಾಗುತ್ತದೆ. ಬೇಸಿಯಲ್ಲಿ ಬೇಕಾಗುವ ಮೊಶ್ಚಿರೈಸರ್ ಗಿಂತ ಚಳಿಗಾಲದಲ್ಲಿ ತ್ವಚೆ ಮತ್ತು ಕೂದಲಿಗೆ ಭಿನ್ನ ಮೊಶ್ಚಿರೈಸರ್ ಬೇಕಾಗುತ್ತದೆ. ಚಳಿಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲು ಕಡಿಮೆ ತೈಲವನ್ನು ಉತ್ಪತ್ತಿ ಮಾಡುವ ಪರಿಣಾಮ ಅದು ಒಣಗುತ್ತದೆ. ಇದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ತಲೆಹೊಟ್ಟು, ತುಟಿಗಳ ಚರ್ಮ ಎದ್ದುಬರುವುದು ಸಾಮಾನ್ಯ ಸಮಸ್ಯೆ ಮತ್ತು ನಿಮ್ಮ ಚರ್ಮವು ಒಣಗಿ ಬಿರುಕು ಬಿಡಬಹುದು.

Winter Grooming Rules For Men

ಚಳಿಗಾಲದಲ್ಲಿ ಶೃಂಗಾರ ಮಾಡಿಕೊಳ್ಳಲು ಹೆಚ್ಚಿನ ತೇವಾಂಶ ಬೇಕಾಗುತ್ತದೆ ಮತ್ತು ಇದಕ್ಕಾಗಿ ದೇಹದಲ್ಲಿ ನೀರಿನಾಂಶವನ್ನು ಉತ್ತಮ ಮಟ್ಟದಲ್ಲಿಡಬೇಕು. ಹೆಚ್ಚು ನೀರು ಸೇವನೆಯಿಂದ ಶೌಚಾಲಯಕ್ಕೆ ಹೋಗುವ ಕೆಲಸ ಹೆಚ್ಚಿದರೂ ಇದು ಅನಿವಾರ್ಯ. ಕೂದಲಿನಲ್ಲಿ ತೇವಾಂಶ ಉಳಿಸಿಕೊಳ್ಳಲು ಸ್ನಾನದ ಬಳಿಕ ತೇವಾಂಶ ಉಳಿಸಿಕೊಳ್ಳುವ ಒಳ್ಳೆಯ ಕಂಡೀಷನರ್ ಬಳಸಿ.

ಕೇವಲ ಮುಖ ಮತ್ತು ಕೂದಲಿಗೆ ಮೊಶ್ಚಿರೈಸರ್ ಗಳನ್ನು ಬಳಸಿದರೆ ಸಾಲದು, ದೇಹದ ಎಲ್ಲಾ ಭಾಗಗಳಿಗೂ ಮೊಶ್ಚಿರೈಸರ್ ಕ್ರೀಮ್ ಅಥವಾ ಲೋಷನ್ ಬಳಸಿ. ಇದರಿಂದ ಒಣ ತುರಿಕೆ ಮತ್ತು ನವೆ ಚರ್ಮ ಉಂಟಾಗುವುದನ್ನು ತಡೆಯಬಹುದು. ಚಳಿಗಾಲದಲ್ಲಿ ಕಡೆಗಣಿಸಬಾರದ ದೇಹದ ಮತ್ತೊಂದು ಭಾಗವೆಂದರೆ ಅದು ತುಟಿ.

ಪುರುಷರು ಶೃಂಗಾರಕ್ಕೆ ಚಳಿಗಾಲದಲ್ಲಿ ಪಾಲಿಸಬೇಕಾದ ಕೆಲವೊಂದು ನಿಯಮಗಳು

1. ಒಳ್ಳೆಯ ಗುಣಮಟ್ಟದ ಮೊಶ್ಚಿರೈಸರ್ ಕ್ರೀಮ್ ಅಥವಾ ಲೋಷನ್ ನಿಂದ ನಿಮ್ಮ ಮುಖವನ್ನು ಮೊಶ್ಚಿರೈಸ್ ಮಾಡಿ. ಕಡಿಮೆ ಅಡ್ಡ ಪರಿಣಾಮ ಬೀರಬಹುದಾದ ಜೈವಿಕ ಅಂಶ ಅಥವಾ ಸಂಪೂರ್ಣವಾಗಿ ಗಿಡಮೂಲಿಕೆಗಳಿಂದ ತಯಾರಿಸಿರುವಂತಹ ಉತ್ಪನ್ನಗಳನ್ನು ಆಯ್ಕೆ ಮಾಡಿ. ಚಳಿಗಾಲದಲ್ಲಿ ಒಣ ಗಾಳಿಯಿರುತ್ತದೆ. ಇದರಿಂದ ಈ ಋತುವಿನಲ್ಲಿ ಗಾಢವಾದ ಮೊಶ್ಚಿರೈಸರ್ ನ್ನು ಬಳಸಿ.

2. ಹವಾಮಾನ ಶೀತ ಮತ್ತು ಒಣವಾಗಿರುವ ಕಾರಣ ನಿಯಮಿತವಾಗಿ ಬಳಸುವ ಫೇಸ್ ವಾಶ್ ಗಿಂತ ಮೊಶ್ಚಿರೈಸರ್ ಇರುವ ಫೇಸ್ ವಾಶ್ ನ್ನು ಬಳಸಿ. ಒಳ್ಳೆಯ ಗುಣಮಟ್ಟದ ಮೊಶ್ಚಿರೈಸರ್ ಫೇಸ್ ವಾಶ್ ನಿಮ್ಮ ಚರ್ಮದ ರಂಧ್ರಗಳನ್ನು ಸ್ಚಚ್ಛಗೊಳಿಸಿ ಚರ್ಮ ಒಣಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಬಳಸುವ ಫೇಸ್ ವಾಶ್ ನಿಮ್ಮ ಮುಖದಲ್ಲಿರುವ ಮೊಶ್ಚಿರೈಸರ್ ನ್ನು ನಷ್ಟ ಮಾಡುತ್ತದೆ.

3. ನಿಮ್ಮ ನಿಯಮಿತ ಸೋಪ್ ನ್ನು ಬದಲಾಯಿಸಿ. ಕ್ರೀಮ್ ಬಾತಿಂಗ್ ಬಾರ್ ಅಥವಾ ಮೊಶ್ಚಿರೈಸಿಂಗ್ ಬಾಡಿ ವಾಶ್ ನ್ನು ಬಳಸಿ. ನಿಮ್ಮ ಮುಖ ಹೊಳೆಯುತ್ತಿರುವಾಗ ದೇಹದ ಇತರ ಭಾಗಗಳು ಒಣಗಿ ಬಿರುಕು ಬಿಟ್ಟಂತೆ ಆಗಬಾರದು. ಸಾಮಾನ್ಯವಾಗಿ ಬಳಸುವ ಸೋಪ್ ಗಳಿಗಿಂತ ಕ್ರೀಮ್ ಬಾರ್ ಗಳಿಂದ ನಿಮ್ಮ ಚರ್ಮದಲ್ಲಿ ತೇವಾಂಶ ಉಳಿದುಕೊಳ್ಳುತ್ತದೆ.

4. ಮೊಶ್ಚಿರೈಸರ್ ಸ್ನಾನದೊಂದಿಗೆ ನೀವು ದೇಹದ ಚರ್ಮವನ್ನು ಆರೈಕೆ ಮಾಡಿದರೂ ಸ್ವಲ್ಪ ಮಟ್ಟಿನ ತೇವಾಂಶವು ನಷ್ಟವಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಮೊಶ್ಚಿರೈಸರ್ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಳ್ಳುವುದು ತುಂಬಾ ಮುಖ್ಯ. ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಬಲ್ಲ ಒಳ್ಳೆಯ ಗುಣಮಟ್ಟದ ಬಾಡಿ ಲೋಷನ್ ಬಳಸಿ.

5. ಯಾವಾಗಲೂ ಒಂದು ಲಿಪ್ ಮುಲಾಮ್ ನಿಮ್ಮ ಜತೆಗಿರಲಿ. ಇದು ತುಂಬಾ ಸಣ್ಣದು ಮತ್ತು ಉಪಯುಕ್ತ. ಹೊರಗಿನ ಹವಾಮಾನಕ್ಕೆ ನಿಮ್ಮ ತುಟಿ ತುಂಬಾ ಕೋಮಲ ಮತ್ತು ಸೂಕ್ಷ್ಮ. ಇದು ಒಣಗುತ್ತಿರುವಂತೆ ಮೊಶ್ಚಿರೈಸರ್ ಲಿಪ್ ಮುಲಾಮ್ ಹಚ್ಚಿ. ಪುರುಷರಿಗಾಗಿ ಕೈಯಲ್ಲಿ ತುಟಿಗೆ ಹಚ್ಚಬಹುದಾದ ಲಿಪ್ ಮುಲಾಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

6. ಚಳಿಗಾಲದಲ್ಲಿ ತಲೆಹೊಟ್ಟು ಹೆಚ್ಚುವ ಕಾರಣ ಆ್ಯಂಟಿ ಡ್ಯಾಂಡ್ರಪ್ ಕಂಡೀಷನರ್ ನ್ನು ಹಚ್ಚಬೇಕು. ನಿಮ್ಮ ನೆತ್ತಿ ಒಣಗಿ ಮತ್ತು ಚಕ್ಕೆ ಏಳಲು ಆರಂಭವಾದಂತೆ ತಲೆಹೊಟ್ಟು ತುಂಬಾ ವೇಗವಾಗಿ ನಿರ್ಮಾಣವಾಗುತ್ತದೆ. ಚಳಿಗಾಲದಲ್ಲಿ ನಿಮ್ಮ ನೆತ್ತಿನಲ್ಲಿ ತೇವಾಂಶ ಕಾಯ್ದುಕೊಂಡು, ಡ್ಯಾಂಡ್ರಪ್ ನಿಂದ ಮುಕ್ತಿ ನೀಡಲು ಆ್ಯಂಟಿ ಡ್ಯಾಂಡ್ರಪ್ ನ್ನು ಬಳಸಿ.

7. ಚಳಿಗಾಲದಲ್ಲಿ ಶೀತ ವಾತಾವರಣದಿಂದಾಗಿ ನೀರನ್ನು ಕಡಿಮೆ ಸೇವಿಸುವುದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ನೀರು ಸೇವಿಸುವುದರಿಂದ ನಿಮ್ಮ ಚರ್ಮ ಒಣಗಿ ಹೋಗುತ್ತದೆ. ಇದರಿಂದ ಡ್ಯಾಂಡ್ರಪ್, ಕೂದಲು ತುಂಡಾಗುವುದು, ಕೂದಲು ಉದುರುವುದು ಮತ್ತು ತೇವಾಂಶ ಕೊರೆತೆಯಿಂದ ಕೂದಲಿ ಇತರ ಸಮಸ್ಯೆಗಳು ಬರಬಹುದು.

English summary

Winter Grooming Rules For Men

Arrival of winter brings a new set of challenges in order to groom well even among men. Men can no longer stay ignorant and have a single yard stick for all seasons. There are so many changes in atmosphere during winter which makes grooming your skin and hair a lot different to that of other seasons.
Story first published: Friday, November 29, 2013, 16:01 [IST]
X
Desktop Bottom Promotion